Saturday, May 23, 2009

ಮನಸ್ಸನ್ನು ಕಾಡುವ ರಾಕ್ಷಸಿ









ನೀ ಗೆಳತಿಯೋ, ಪ್ರೇಯಸಿಯೂ ಒಂದೂ ಅರ್ಥವಾಗ್ತಾ ಇಲ್ಲ ... ನಿನ್ನ ಆ ಮುಗುಳು ನಗುವಿನಲ್ಲಿ ಸೂಜಿಗಲ್ಲಿನ ಸೆಳೆತವಿದೆ. ಆದ್ರೆ ಅದು ಕಪಟ ನಗುವೋ ಅಥವಾ ಪ್ರೀತಿ ವಿಶ್ವಾಸದ ನಗುವೋ ಅನ್ನೋ ತಳಮಳ ನನ್ನನ್ನು ಸದಾ ಕಾಡುತ್ತಿದೆ. ಮೊದಲೇ ಸಂಶಯದ ನೆರಳಿನಲ್ಲಿ ಬದುಕುವ ಈ ಸಮಾಜದಲ್ಲಿ ಅರ್ಥವಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟರೆ ಅಲ್ಲಿ ಸಿಗುವುದು ಬರೀ ಜಂಜಾಟದ ಬದುಕು ಮಾತ್ರ. ಇದು ಗೊತ್ತಿದ್ದೂ ನಿನ್ನ ನಗುವಿನ ಹಿಂದೆ ಬಿದ್ದ ನಾನು ಅನುಭವಿಸುತ್ತಿರುವ ಯಾತನೆ... ವೇದನೆ... ಹುಂ ಇದು ನಿನಗೆ ಹೆಂಗೆ ಗೊತ್ತಾಗಬೇಕು... ಇರಲಿ, ಪ್ರೀತಿಯ ಪಂಜರದಿಂದ ಹೊರಬಂದಿರುವ ನನಗೆ ಇದೆಲ್ಲ ಸಹಜ ಅನ್ನಿಸಿದ್ರೂ ನಿನ್ನ ನಗು ನನ್ನ ಮನಸ್ಸನ್ನು ರಾಕ್ಷಸಿಯಂತೆ ಕಾಡ್ತಾ ಇದೆ...ಆದರೂ ....

Tuesday, May 19, 2009

rangiriyalli sannu

ಗುಹೆಯ ಒಳಗೆ ಸನತ್


ಮಂದಿರದ ಹೊರಗೆ ಸನ್ನು
ಜೀವನವೂಂದು ಪಯಣ .. ಹಿರಿಯರ ಈ ಮಾತು ಅಕ್ಷರಶಃ ಸತ್ಯ. ಪಯಣಕ್ಕೆ ನೆಪ ಯಾವುದೇ ಇರಲಿ ... ಅವಕಾಶ ಸಿಕ್ಕಾಗ ಅಳೆದು ತೂಗಿ ಅನುಭವಿಸುವುದರಲ್ಲಿದೇ ಸುಖ . ಆಸಕ್ತಿಗೆ ಮೀರಿದ ಅಭ್ಯಾಸವಿಲ್ಲ ... ಅನುಭವಕ್ಕೆ ಮೀರಿದ ಪಾಠವಿಲ್ಲ... ಹೀಗೆ ಅನುಭವ ಪಾಠ ಬಯಸಿ ಶ್ರೀಲಂಕಾದಲ್ಲಿ ನಾಲ್ಕು ಹೆಜ್ಜೆ ಸವೆಸಿದಾಗ ನಿಜಕ್ಕೂ ತುಂಬಿ ಕೊಳ್ಳುತ್ತೆ ನೆನಪಿನ ಬುತ್ತಿ.
ಕೊಲಂಬೋದ ನೀಲಾ ಹಾದಿ ನಮ್ಮನ್ನು ಶಾಂತಿಯಾ ತಾಣವೊಂದಕ್ಕೆ ಕರೆದೊಯುತ್ತೆ. ಶಾಂತಿ ಅಂದಾಗ ಶ್ರೀಲಂಕಾದಲ್ಲಿ ಶಾಂತಿ ...? ಎಂದು ಹುಬ್ಬೆರಿಸುವವರು ಇದ್ದಾರೆ. ಅದು ಸಾಮಾನ್ಯವೇ ಬಿಡಿ. ತ್ರೇತಾ ಯುಗದಲ್ಲಿ ರಾಮಾ -ರಾವಣರ ಕಾಳಾಗ, ಬಳಿಕ ಸಿಂಹಳಿಯ ಮನೆತನಗಳ ಒಳಜಗಳ, ಬ್ರಿಟಿಷರ ದಬ್ಬಾಳಿಕೆ ಸ್ವಾತಂತ್ರ್ಯ ಹೋರಾಟ .. ಪ್ರಸಕ್ತ ಎಲಟಿಟಿಇ -ಸಿಂಹಳಿಯರ ಕದನ ಹೀಗೆ ಇಲ್ಲಿ ರಕ್ತ ಅವ್ಯಾಹತವಾಗಿ ಹರಿಯುತ್ತಲೇ ಇದೆ. ಆದ್ರೆ ಇದೆ ದ್ವೀಪ ರಾಷ್ಟ್ರದಲ್ಲಿ ಒಂದೊಮ್ಮೆ ಗೌತಮ ಬುದ್ದ ಶಾಂತಿ ಮಂತ್ರ ಬಿತ್ತಿದ್ದ ಅನ್ನೋದನ್ನು ನಾವು ಯಾಕೋ ಮರೆತು ಬಿಟ್ಟಿದ್ದೇವೆ. ಹೀಗೆ ಆತನನ್ನು ನೆನಪಿಸಿಕೊಂಡು ನಾವು ಹೋಗಿದ್ದು ರಂಗಿರಿಯ ಗೋಲ್ಡನ್ ಟೆಂಪಲ್ ಗೆ ... ಕೊಲಂಬೊದಿಂದ ೧೫೦ ಕೀ ಲೋ ಮೀಟರ್ ದೂರದಲ್ಲಿರುವ ಚಿಕ್ಕ ಪಟ್ಟಣವೇ ದಂಬುಲ. ಇದು ಪ್ರಕೃತಿಯ ರಮ್ಯ ತಾಣವೂ ಹೌದು. ಈ ರಂಗಿರಿ ಬೆಟ್ಟ ದಂಬುಲಕ್ಕೆ ಮುಕುಟದಂತಿದೆ .
ಕ್ರಿಕೆಟ್ ವರದಿ ಮಾಡುವ ಬಿಜಿನಲ್ಲೂ ನನ್ನನ್ನು ಇಲ್ಲಿನ ಪ್ರವಾಸಿ ತಾಣಗಳು ಕೈ ಬೀಸಿ ಕರೆಯದೆ ಇರಲ್ಲಿಲ್ಲ. ಅದರಲ್ಲಿ ಮುಖ್ಯವಾಗಿ ಈ ರಂಗಿರಿ ಬೆಟ್ಟ . ಇಲ್ಲಿ ಕುತುಹಲದ ಜೊತೆ ಜೊತೆಗೆ ೧೬೦ ಮೀಟರ್ ಎತ್ತರ ಏರುವ ಸವಾಲು ನಮ್ಮ ಮುಂದಿತ್ತು. ಆದರೂ ಪ್ರತಿ ಮೆಟ್ಟಿಲ ಮೇಲು ಹೆಜ್ಜೆ ಯುರುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೆಜ್ಜೆ ಇಡಲು ಶುರು ಮಾಡಿದೆವು.. ಅಯೋಯೋ ಪಾದ ಪುರಾಣ ... ಅಸೆಗೆನೋ ಸರಿ ಅಂದಿದಾಯಿತು ... ಆದ್ರೆ ಹತ್ತಿಪ್ಪತ್ತು ಮೆಟ್ಟಿಲು ಏರುತಿದ್ದಂಥೆ ಮಂಡಿ ಯಾಕೋ ಮನಸ್ಸಿನ ಮಾತು ಕೆಳ್ತಿಲ್ಲ ಅನಿಸಿತು ..ಆಗಲೇ ನಮಗೆ ಪುವ್ರವಜರ ದರ್ಶನವಾಯಿತು . ಅದೇ ಕೋತಿಗಳು ಸ್ವಾಮಿ... ಕೋತಿಗಳು ಅಂದು ಮೇಲೇ ಚೆಸ್ತ್ತೆಗಳು ಇದ್ದೆ ಇರುತ್ತವೆ... ದೊಡ್ಡ ದಂಡು ದೊಡ್ಡ ಕಿಟಲೆ ... ಹೆಜ್ಜೆಯ ಆಯಾಸ ಮರೆಸುವ ಕಿಟಲೆ ನಿಜಕ್ಕೂ ಸಾಂದರ್ಬಿಕವಗಿತ್ತು. ಹಾಗೆ ನಾಯಿ ಮರಿ ಮತ್ತು ಆಡಿನ ನಡುವಿನ ಕುಸ್ತ್ತಿಯಾತ ಸಹ ಮಸ್ತಾಗಿತ್ತು. ಹೀಗೆ ೧೬೦ ಮೀಟರ್ ಎತ್ತರವಿರುವ ರಂಗಿರಿ ಬೆಟ್ಟದ ನೆಟ್ಟಿಗೆ ಬಂದಾಗ ಅಲ್ಲಿನ ಪ್ರಕೃತಿಯ ರಮ್ಯ ತಾಣ ಎಲ್ಲ ಸುಸ್ಥನ್ನು ಮರೆಸುತೆ. ಹಾಗೆ ಮತ್ತೆ ಮುಂದೆ ಸಾಗಿದ್ದು ಬುದ್ದನ ವಿಗ್ರಹಗಲಿರುವ ಗುಹೆಯ ಬಳಿ... ೫ ಗುಹೆಗಳ ಒಳಗಿದೆ ಶಾಂತ ವಾದನ ಗೌತಮ ಬುದ್ದನ ೧೫೩ ವಿಗ್ರಹಗಳು ೫೩ ಮೀಟರ್ ಉದ್ದ , ೭ ಅಡಿ ಎತ್ತರವಿರುವ ಈ ಗುಹೆಯಲ್ಲಿ ನಾನಾ ಭಂಗಿಯ ಬುದ್ದನ ವಿಗ್ರಹ ಭಕ್ತಿ ಭಾವದ ರಸಧಾರೆ ಹರಿಸುತೆ. ಸಾವಿರಾರು ವರ್ಷಗಳ ಇತಿಹಾಸವನ್ನು ಮತ್ತೆ ಮತ್ತೆ ನೆನಪಿಸುತೆ .ಈ ವಿಗ್ರಹಗಳನ್ನು ಕ್ರಿಸ್ತ ಪೂರ್ವದಲ್ಲಿ ಅನುರಾಧಪುರ ರಾಜಮನೆತನದ ರಾಜ ವೋಲೋಗ ಬಹು ಕಟ್ಟಿಸಿದ್ದ ಅನ್ನೋದನ್ನು ಇತಿಹಾಸ ಪುಟಗಳು ಹೇಳುತ್ತವೆ . ಇನ್ನು ಮೊದಲ ಗುಹೆಯಲ್ಲಿ ಶಾಂತ ಚಿತ್ತನಗಿರುವ ೧೪ ಮೀಟರ್ ಉದ್ದವಿರುವ ಬುದ್ದನ ವಿಗ್ರಹವನ್ನು ನೋಡಬಹುದು. ಹಾಗೆ ಎರಡನೇ ಗುಹೆಯಲ್ಲಿ ೫೬ ವಿಗ್ರಹ ನೋಡಬಹುದು .. ಇದರಲ್ಲಿ ೧೪ ನಿಂತ ಭಂಗಿಉಯಲ್ಲಿ ಇದ್ರೆ ೪೦ ವಿಗ್ರಹಗಳು ಧ್ಯಾನದ ಭಂಗಿಯಲ್ಲಿವೆ.. ಇನ್ನು ೩ನೇ ಗುಹೆಯಲ್ಲಿ ಸಾಕಸ್ತು ವರ್ಣ ಚಿತ್ರಗಳನ್ನು ನೋಡಬಹುದಾಗಿದೆ .. ಹಾಗೆ ಮತ್ತು ೫ನೆ ಗುಹೆಗಳಲ್ಲಿ ಕೇವಲ ಬುದ್ದನ ಮೂರ್ತಿಗಳನ್ನು ಮಾತ್ರ ನೋಡಬಹುದು. ಇದರಲ್ಲಿ ವಿಶೇಷತೆ ಇಲ್ಲದಿದ್ರು ಆಗಿನ ರಾಜರುಗಳು ಬುದ್ದನ ಸಿದ್ಧಾಂತಗಳನ್ನು ಒಪ್ಪಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಿರುವುದು ನಿಜಕ್ಕೂ ಅಚ್ಚರಿಯಾಗುತ್ತೆ. ಒಂದಂತು ನಿಜ... ಲಂಕಾ ಪಾಲಿಗೆ ಇದು ಅಮೂಲ್ಯ ಆಸ್ತಿ . ಈ ಅಪೂರ್ವ ವಿಗ್ರಹಗಳನ್ನು ಸಕಲ ರೀತಿ ಇಂದಲೂ ಕಾಪಾಡಿಕೊಂಡು ಬಂದಿರುವ ಲಂಕ ಪ್ರವಾಸ ಇಲಾಖೆ ಶ್ಲಾಘಾನಿಯವೇ ಸರಿ . ಆದ್ರೆ ಪ್ರವಾಸಿಗರಿಗೆ ಸೂಕ್ತವಾದ ಸೌಲಭ್ಯ ಒದಗಿಸಿಕೊಡಲು ಇಲಾಖೆ ಎಡವಿದೆ ಅನೋ ಟೀಕೆ ಇದೆ. ಏನೇ ಅದ್ರು ಸಾವಿರಾರು ವರ್ಷಗಳ ಈ ವಿಗ್ರಹಗಳು ಸಾವಿರಾರು ವರ್ಷ ಬಾಳಲಿ ... ನೋಡುಗರನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯಲಿ ಎಂದು ಮನ ಬಯಸುತ್ತೆ.. draft 5/18/09 by sanathkumarrai Delete
Edit View HENGANTA MARILI 5/15/09 by sanathkumarrai Delete
Edit View MUSSANJEYA GELEYA SANNU 4/22/09 by sanathkumarrai Delete

1 – 3 of 3

Publish SelectedDelete Selected

Friday, May 15, 2009

HENGANTA MARILI

ಪದೇ ಪದೇ ನೆನಪಾಗುವ ಆ ಮುಸ್ಸಂಜೆಯ ಕ್ಷಣಗಳನ್ನು ಮರಿಬೇಕು ಅಂದ್ರೂ ಮರೆಯೋಕೆ ಆಗ್ತಾ ಇಲ್ಲ. ಕಡಲ ಕಿನಾರೆಯ ಮರಳಿನ ಮೇಲೆ ಮೌನವಾಗಿ ನಡೆದಾಡಿದ ಆ ಕ್ಷಣಗಳು ಮತ್ತೆ ಮತ್ತೆ ನೆನಪಾಗುತ್ತಿದೆ ಕಣೆ ....ಹುಚ್ಚು ಪ್ರೀತಿಯನ್ನು ಮರೆತು ಬದುಕು ಕಟ್ಟಿಕೊಂಡರು ನಿನ್ನನಂತು ಮರೆತರು ಮರೆಯೋಕೆ ಆಗ್ತಾ ಇಲ್ಲ. ಸ್ನೇಹ... ಪ್ರೀತಿಗೆ ತಿರುಗಿ ಅದು ಮುಂಗಾರು ಮಳೆಯಂತೆ ಅಂತ್ಯಗೊಳ್ಳುತ್ತೆ ಅಂತ ನೀನು ಅಂದುಕೊಂಡಿರಲಿಲ್ಲ .... ನಾನು ಅಂದುಕೊಂಡಿರಲಿಲ್ಲ ....ಇರಲಿ ಬದುಕು ಜಟಕಾ ಬಂಡಿ ಅಂತಾರಲ್ಲ ಹಂಗೆ ... ಕಳೆದು ಹೋದ ದಿನಗಳ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಹಾಗಂತ ಗೊತ್ತಿದ್ರು ನಿನ್ನ ಆ ನಗುಮುಖ ನನ್ನ ಮನಸ್ಸನ್ನು ಮತ್ತೆ ಕಾಡುತ್ತಿದೆ...