ಕೆಲವೊಂದು ಸಲ ನಂಬಿಕೆ- ವಿಶ್ವಾಸಕ್ಕೆ ಅರ್ಥನೇ ಇರೋಲ್ಲ... ನಮ್ಮವರು ಅಂತ ಅಂದುಕೊಳ್ಳುವುದು ಭ್ರಮೆಯಾಗಿರುತ್ತೆ. ಅದ್ರಲ್ಲೂ ಆಪ್ತ ಸ್ನೇಹಿತರು ಮನಸ್ಸಿಗೆ ಚೂರು ನೋವು ಮಾಡಿದ್ರೂ ಆಗುವ ವೇದನೆ ಅಷ್ಟಿಷ್ಟಲ್ಲ. ಸ್ನೇಹಿತರು ಅಂದ ಮೇಲೆ ಕೋಳಿ ಜಗಳ ಸಹಜ. ಆದ್ರೆ ಅದು ಪದೇ ಪದೇ ರಿಪೀಟ್ ಆದಾಗ ಅಲ್ಲಿ ಮಾತು ಇರುವುದಿಲ್ಲ.. ಬರೀ ಮೌನವೇ ಉತ್ತರವಾಗಿರುತ್ತೆ. ಆಗ ಅಲ್ಲಿ ನೆನಪಾಗುವುದು ಫ್ಲಾಷ್ ಬ್ಯಾಕ್‌ಗಳು.
ಹೌದು, ಮನಸ್ಸಿಗೆ ತುಂಬಾ ಹತ್ತಿರವಾದವ್ರು ಸಡನ್ ಆಗಿ ದೂರವಾದಾಗ ಬೇಜಾರು ಆಗೋದು ಸಹಜ... ಸ್ನೇಹ, ಪ್ರೀತಿ, ನಂಬಿಕೆಗಳಿಗೆ ಬೆಲೆನೇ ಇಲ್ಲ ಅಂತ ಭಾಸವಾಗುತ್ತೆ. ಆಗ ಬರುತ್ತೆ ಸಿಟ್ಟು... ಮತ್ಸರ ..ದ್ವೇಷದ ಭಾವನೆಗಳು.. ಆಗ ಮನಸ್ಸು ಕಂಟ್ರೋಲ್‌ನಲ್ಲಿರುವುದಿಲ್ಲ. ಅಲೆಯಂತೆ ಮೂಡುವ ಚಿತ್ರ ವಿಚಿತ್ರ ಭಾವನೆಗಳು ಮನಸ್ಸನ್ನ ಮತ್ತಷ್ಟು ಘಾಸಿಗೊಳಿಸುತ್ತವೆ.
ಅಷ್ಟಕ್ಕೂ ನಾನ್ಯಾಕೆ ಇನ್ನೊಬ್ಬರನ್ನ ಅಷ್ಟೊಂದು ಹಚ್ಚಿಕೊಳ್ಳಬೇಕು... ಅವ್ರ ಜತೆ ಯಾಕೆ ಆತ್ಮೀಯತೆ.. ಸಲುಗೆಯಿಂದಿರ ಬೇಕು..ನನಗೂ ಅವ್ರಿಗೂ ಏನು ಸಂಬಂಧ.. ಅವ್ರಿಂದ ನನಗೆ ಏನು ಆಗಬೇಕು.. ನನ್ನಿಂದ ಅವ್ರಿಗೆ ಏನು ಆಗಬೇಕು...ಕೊನೆಗೆ ನಾನ್ಯಾರು ಹೀಗೆ ನಾನಾ ರೀತಿಯ ಪ್ರಶ್ನೆಗಳು ಮೂಡುತ್ತವೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾತ್ರ ಬರೀ ಶೂನ್ಯ.
ಯಾಕಂದ್ರೆ ಇದು ಕೇವಲ ನಮ್ಮ ಭ್ರಮೆಯಷ್ಟೇ... ನಮ್ಮನ್ನು ನಾವೇ ಕಲ್ಪಿಸಿಕೊಳ್ಳುವುದರಿಂದ ಮನಸ್ಸು ಕೂಡ ಚಂಚಲವಾಗುತ್ತೆ. ಹಾಗಂತ ಎಲ್ಲಾ ಘಟನೆಗಳು ಹಿಂಗೇ ಇರಬೇಕು ಅಂತ ಏನಿಲ್ಲ. ಅದರಲ್ಲೂ ನಮ್ಮನ್ನು ತುಂಬಾ ಅರ್ಥ ಮಾಡ್ಕೊಂಡವ್ರು.. ತುಂಬಾನೇ ಸನೀಹದಲ್ಲಿರುವವರ ಮೇಲೆ ನಾವು ತುಂಬಾನೇ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತೇವೆ. ಆದ್ರೆ ಆ ಭಾವನೆಗಳು ಅವ್ರಲ್ಲಿ ಇಲ್ಲ ಅಂತ ನಮ್ಮ ಮನಸ್ಸಿಗೆ ಗೊತ್ತಾದಾಗ ನಮ್ಮ ನಿರೀಕ್ಷೆಗಳು ಹುಸಿಯಾಗುತ್ತವೆ. ನಂಬಿಕೆ, ವಿಶ್ವಾಸ, ಪ್ರೀತಿ ಎಲ್ಲವೂ ವ್ಯರ್ಥ ಅಂತ ಅನ್ಸುತ್ತೆ. ವರ್ಷಗಳ ಒಡನಾಟಕ್ಕೆ ಅರ್ಥವಿಲ್ಲ.. ನೋವು- ನಲಿವುಗಳನ್ನ ಹಂಚಿಕೊಂಡ ಕ್ಷಣಗಳು ಬರೀ ಪ್ರಹಸನ ಅಂತ ಭಾಸವಾಗುತ್ತೆ.
ಬಹುಶಃ ಇದಕ್ಕೆ ಪೊಸಸಿವ್‌ನೆಸ್ ಕೂಡ ಕಾರಣವಾಗಿರಬಹುದು. ನಮ್ಮ ಸಂಬಂಧಗಳಿಗೆ ಚ್ಯುತಿಯಾಗುತ್ತೆ ಅನ್ನೋ ಭಯ...ನಮಗಿಂತ ಒಳ್ಳೆಯ ಹಿತೈಸಿಗಳು, ಸ್ನೇಹಿತರು ಸಿಗ್ತಾರೆ.. ಅವ್ರ ಜತೆ ಚೆನ್ನಾಗಿರುತ್ತಾರೆ ಅನ್ನೋ ಮತ್ಸರವಿರುತ್ತೆ. ಇದು ಸ್ವಾರ್ಥವಾದ್ರೂ, ಎಲ್ಲೋ ಒಂದು ಕಡೆ ನಮ್ಮತನವನ್ನ ಕಳೆದುಕೊಂಡ ಆತಂಕವಿರುತ್ತೆ. ಆಗ ಯಾರ ಸಹವಾಸನೂ ಬೇಡ.. ಅನ್ನೋ ಕೊರಗಿನಲ್ಲಿ ಒಂಟಿತನದ ಮೊರೆ ಹೋಗುತ್ತೇವೆ. ಮನಸ್ಸು ಮರ್ಕಟದಂತೆ ಒದ್ದಾಡುತ್ತಾ ಇರುತ್ತೆ.. ನನ್ನವರು ಯಾರು ಇಲ್ಲ.. ಯಾರಿಗೂ ಯಾರು ಇಲ್ಲ ಅಂತ ಭಾಸವಾಗುತ್ತೆ...
ಸನತ್ ರೈ
Sunday, December 26, 2010
Saturday, December 25, 2010
ಗಾಡ್ ಆಫ್ ಕ್ರಿಕೆಟ್
ಅದು 22 ವರ್ಷಗಳ ಸುದೀರ್ಘ ಪಯಣ... ಸುಮಾರು 32 ವರ್ಷಗಳಿಂದ ಕ್ರಿಕೆಟ್ಟೇ ತನ್ನ ಉಸಿರು ಅಂತ ಅಂದುಕೊಂಡವನ ಯಶೋಗಾಥೆ ... ಬರೆದ ದಾಖಲೆಗಳಿಗೆ... ದಾಖಲಿಸಿದ ರನ್‌ಗಳಿಗೆ... ಸಿಡಿಸಿದ ಶತಕಗಳಿಗೆ ಲೆಕ್ಕವಿದ್ರೂ ಸುರಿದ ಬೆವರಿನ ಹನಿಗಳಿಗೆ ಮಾತ್ರ ಲೆಕ್ಕವಿಲ್ಲ... ಯಾಕಂದ್ರೆ ಅಲ್ಲಿ ಸಾಧಿಸಬೇಕು ಅನ್ನೋ ಕನಸುಗಾರನ ಹಠಮಾರಿತನವಿದೆ.
ಹೌದು, ಈ ಸೂಪರ್ ಮ್ಯಾನ್‌ನ ವರ್ಣರಂಜಿತ ಕ್ರಿಕೆಟ್ ಬದುಕೇ ಒಂದು ಸುಂದರ ಕಾವ್ಯ. ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲ. ಎಲ್ಲವೂ ಫರ್ಫೆಕ್ಟ್...
ಮುಂಬೈನ ಶಿವಾಜಿ ಪಾರ್ಕ್ ಅಂಗಣದಲ್ಲಿ ಆಟವಾಡುತ್ತಾ ಬೆಳೆದ ಹುಡುಗ ಇಂದು ಕಿಂಗ್ ಆಫ್ ಕ್ರಿಕೆಟ್ .... ಅಭಿಮಾನಿ ದೇವ್ರುಗಳು ಪೂಜಿಸಿ ಆರಾಧಿಸುವ ಗಾಡ್ ಆಫ್ ಕ್ರಿಕೆಟ್.. ...ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಸಚಿನ್ ತೆಂಡುಲ್ಕರ್ ಸಂತನೂ ಹೌದು. 22 ಯಾರ್ಡ್‌ನ ಆಟದ ಮೋಡಿಗಾರನಿಗೆ ಬೆಂಕಿಯಂತೆ ಉಗುಳುವ ಎಸೆತವೂ ಒಂದೇ.. .. ಬುಗುರಿಯಂತೆ ತೇಲಿ ಬರುವ ಮ್ಯಾಜಿಕ್ ಎಸೆತವೂ ಒಂದೇ.. .. ಎಲ್ಲದಕ್ಕೂ ಸಚಿನ್ ಅವ್ರ ಮಾಂತ್ರಿಕ ಬ್ಯಾಟ್ ನಲ್ಲಿ ಉತ್ತರ ಇರುತ್ತೆ .
ಜೀನಿಯಸ್ ಆಟಗಾರನ ಆಟಕ್ಕೆ ಮನ ಸೋಲದವ್ರು ಯಾರು ಇಲ್ಲ... ತೆಂಡುಲ್ಕರ್ ಕ್ರೀಸ್‌ಗಿಳಿದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.. ದಾಖಲಿಸುವ ಪ್ರತಿ ರನ್‌ಗೂ ಅಭಿಮಾನದ ಕರಡಾತನವಿರುತ್ತೆ. ಇನ್ನೂ ಸಚಿನ್ ಬ್ಯಾಟ್‌ನಿಂದ ಸಿಡಿದ ಚೆಂಡು ಬುಲೆಟ್‌ನಂತೆ ಬೌಂಡ್ರಿ ಗೆರೆ ದಾಟುವುದನ್ನ ನೋಡುವುದೇ ಕಣ್ಣಿಗೆ ಹಬ್ಬ. ಅಷ್ಟೇ ಯಾಕೆ ವಾಮನಮೂರ್ತಿ ಬಾರಿಸುವ ಸಿಕ್ಸರ್ ಕೂಡ ಅಷ್ಟೇ ರೋಮಾಂಚನಗೊಳಿಸುತ್ತೆ. ಅಂತಹ ಅದ್ಭುತ ಶಕ್ತಿ ಸಚಿನ್ ಬ್ಯಾಟಿಂಗ್‌ನಲ್ಲಿದೆ.
ನಿಜಕ್ಕೂ ಕೋಟಿ ಕೋಟಿ ಭಾರತೀಯರ ಮನ ಸಚಿನ್‌ಗಾಗಿ ಮಿಡಿಯುತ್ತಿದೆ. ಪ್ರತಿ ಪಂದ್ಯದಲ್ಲೂ ಸಚಿನ್ ಶತಕ ದಾಖಲಿಸಬೇಕು ಅನ್ನೋ ಹಂಬಲವಿರುತ್ತೆ.. ಹೆಲ್ಮೆಟ್ ತೆಗೆದು, ಆಕಾಶವನ್ನು ದಿಟ್ಟಿಸಿ ನೋಡಿದ ಬಳಿಕ ಅಭಿಮಾನಿಗಳತ್ತ ಬ್ಯಾಟ್ ಬೀಸುವ ಆ ಮಹೋನ್ನತ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.
ಅದು ಸಚಿನ್‌ಗೂ ಗೊತ್ತು. ಆದ್ರೆ ಅದು ಎಲ್ಲ ಪಂದ್ಯಗಳಲ್ಲಿ ಆಗುವುದಿಲ್ಲ. ಆದ್ರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಐವತ್ತು ಬಾರಿ ಸಚಿನ್ ಅಭಿಮಾನಿಗಳ ಮನವನ್ನ ತಣಿಸಿರುವುದು ಮಾತ್ರ ನಿಜಕ್ಕೂ ಗ್ರೇಟ್.
ಅಷ್ಟಕ್ಕೂ ಸಚಿನ್ ಇನ್ನೂ ಕಲಿಯುವ ಮತ್ತು ಕಲಿಯುತ್ತಿರುವ ಕ್ರಿಕೆಟಿಗ. ಪಂದ್ಯದಿಂದ ಪಂದ್ಯಕ್ಕೆ ಪಕ್ವಗೊಳ್ಳುತ್ತಿರುವ ಆಟಗಾರ. ಯಶಸ್ಸಿನ ಉತ್ತುಂಗದಲ್ಲಿದ್ರೂ ಮಗುವಿನಂತಹ ಮುಗ್ದತೆ ಅವ್ರ ಮುಖದಲ್ಲಿ ಕಾಣಬಹುದು. ಎಷ್ಟೇ ಟೀಕೆ ಬಂದ್ರೂ ಮೌನವಾಗಿಯೇ ಉತ್ತರ ನೀಡುವ ಸೈಲೆಂಟ್ ಕಿಲ್ಲರ್. ಏನೇ ಆದ್ರೂ, ಸಚಿನ್ ತೆಂಡುಲ್ಕರ್ ಅವ್ರದ್ದು ಬತ್ತದ ದಾಹ... ಕ್ರಿಕೆಟ್ ಜಗತ್ತಿನ ಅನರ್ಘ್ಯ ರತ್ನಕ್ಕೆ ಸಲಾಂ.

Thursday, December 2, 2010
ಇದು ಕಥೆಯಲ್ಲ... ರಾಜ್ಯ ಕ್ರೀಡಾರಂಗದ ವ್ಯಥೆ
ಅಯ್ಯೋ ದೇವ್ರೆ.. ಇದು ಕಥೆಯಲ್ಲ.. ವ್ಯಥೆ.. ನಮ್ಮ ರಾಜ್ಯ ಕ್ರೀಡಾಪಟುಗಳ ವೇದನೆ. ಆದ್ರೆ, ಡಿ ನೋಟಿಫಿಕೇಷನ್, ಕೆಐಎಡಿಬಿ.. ಗಣಿ ಧೂಳ್.. ಆ ಡೀಲ್, ಈ ಡೀಲ್ ಅಂತ ನೂರಾರು ಸೈಟ್ ಗಳನ್ನ ನುಂಗಿ ಹಾಕಿರುವ ನಮ್ಮ ರಾಜಕಾರಣಿಗಳಿಗೆ ನಮ್ ಕ್ರೀಡಾ ಪಟುಗಳ ನೋವು ಹೆಂಗೆ ಅರ್ಥವಾಗಬೇಕು.
ಅಷ್ಟಕ್ಕೂ ಇದು ಏಷ್ಯನ್ ಕಂಚಿನ ವಿಜೇತೆ ಪ್ರಮೀಳಾ ಅಯ್ಯಪ್ಪ ಒಬ್ರ ನೋವಿನ ಕೂಗಲ್ಲ. ಇವ್ರೊಂದಿಗೆ ಸಾಕಷ್ಟು ರಾಜ್ಯದ ಕ್ರೀಡಾಪಟುಗಳಿದ್ದಾರೆ. ಹೆಸರಿಗೆ ಕ್ರೀಡಾ ಹಾಸ್ಟೆಲ್‌ಗಳಿದ್ರೂ ಅಲ್ಲಿ ಮಾರ್ಗದರ್ಶನದ ಕೊರತೆ ಇದೆ. ಸೂಕ್ತ ತರಬೇತುದಾರರಿಲ್ಲದೆ ಅರಳುವ ಪ್ರತಿಭೆಗಳು ಕಮರಿ ಹೋಗ್ತಾ ಇವೆ. ಅಷ್ಟೊಂದು ಶೋಚನೀಯ ಸ್ಥಿತಿಯಲ್ಲಿದೆ ಕರ್ನಾಟಕದ ಕ್ರೀಡಾರಂಗ.
ಕ್ರೀಡಾ ಅಭಿವೃದ್ದಿಗೆ ಕ್ರೀಡಾ ಇಲಾಖೆ ಇದ್ರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಗೆದ್ದಾಗ ಮಾತ್ರ ಬೆನ್ನು ತಟ್ಟುವ ರಾಜ್ಯ ಒಲಿಂಪಿಕ್ ಸಂಸ್ಥೆ ಏನೂ ಮಾಡ್ತಿದೆ ಎಂಬುದು ಅಧಿಕಾರದ ದಾಹ ಹಿಡಿದವರಿಗೆ ಗೊತ್ತು. ಅಷ್ಟೇ ಅಲ್ಲ, ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಯೊಂದು ವಿಭಾಗದ ಕ್ರೀಡಾಸಂಸ್ಥೆಗಳಿವೆ. ಆದ್ರೆ ಆ ಸಂಸ್ಥೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಆ ಪರಮತ್ಮಾನಿಗೆ ಮಾತ್ರ ಗೊತ್ತು.
ಇನ್ನು, ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಕ್ರೀಡಾರಂಗಕ್ಕೆ ಸೂಕ್ತ ಪ್ರೋತ್ಸಾಹವೇ ಸಿಗ್ತಾ ಇಲ್ಲ. ವರ್ಷಕ್ಕೊಂದು ರಾಜ್ಯ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ರಾಜ್ಯ ಒಲಿಂಪಿಕ್ ಪ್ರಶಸ್ತಿ ಬಿಟ್ರೆ ಕ್ರೀಡಾಪಟುಗಳ ಸಾಧನೆಯನ್ನು ಕೇಳುವವರೇ ಇಲ್ಲ. ಅಷ್ಟಕ್ಕೂ ನಮ್ಮ ರಾಜ್ಯದಲ್ಲಿ ಕ್ರೀಡಾ ಪಾಲಿಸಿಯನ್ನ ಜಾರಿಗೊಳಿಸಬೇಕು ಎಂಬ ಹಲವು ವರ್ಷಗಳ ಕೂಗು ಇನ್ನೂ ಪ್ರತಿ ಧ್ವನಿಸುತ್ತಲೇಇದೆ.
ಈಗಾಗಲೇ ಹರಿಯಾಣ, ಜಾರ್ಕಂಡ್, ಆಂಧ್ರ ಪ್ರದೇಶ, ಗುಜರಾತ್, ತಮಿಳುನಾಡು, ಕೇರಳ ಪಂಜಾಬ್ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ರಾಜ ಮರ್ಯಾದೆ ಇದೆ. ಜತೆಗೆ ಕ್ರೀಡಾ ಪ್ರತಿಭೆಗಳನ್ನ ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆ. ಮತ್ತೊಂದೆಡೆ, ಪದಕ ಗೆದ್ದ ಕ್ರೀಡಾಪಟುಗಳಿಗೆ ಬಂಪರ್‌ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡ್ತಾ ಇದೆ.
ಆದ್ರೆ ನಮ್ಮಲ್ಲಿ ಕೇವಲ ಆಶ್ವಾಸನೆಗಳು ಮಾತ್ರ ಕೇಳಿಬರ್ತಿವೆ. ಇಲ್ಲಿ ನಿಜವಾದ ಸಾಧಕರಿಗೆ ಬೆಲೆ ಇಲ್ಲ. ಕಷ್ಟ ಪಟ್ಟು ಯಶ ಸಾಧಿಸಿದವರ ಬದುಕು ಆತಂತ್ರ ಸ್ಥಿತಿಯಲ್ಲಿದೆ. ರೆಸಾರ್ಟ್ನಲ್ಲಿ ಕೂತ್ಕೊಂಡು ರಾಜಕೀಯ ಲೆಕ್ಕಾಚಾರ ಹಾಕುತ್ತಿರುವ ಜನ ನಾಯಕರು ಕ್ರೀಡಾಭಿವೃದ್ದಿಯತ್ತ ಸ್ವಲ್ಪ ಯೋಚನೆ ಮಾಡಿದ್ರೆ ಕರುನಾಡಿಗೆ ಇನ್ನಷ್ಟು ಪದಕ ಗೆಲ್ಲುವ ಕ್ರೀಡಾಪಟುಗಳ ಉದಯವಾಗಬಹುದು.

ಕರಾವಳಿಯ ಚಿನ್ನದ ಚಿಗರೆ
ಕರಾವಳಿ ಹುಡುಗಿಯ ಮನೆಯಲ್ಲಿ ಹಬ್ಬದ ಸಂಭ್ಗ್ರಮ....ವರ್ಷದ ಬಳಿಕ ತವರಿಗೆ ಬಂದ ಖುಷಿ... ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ನಗೆ ಬೀರಿ ಜಗತ್ತಿನಾದ್ಯಂತ ಮನೆಮಾತಾದ ಅಶ್ವಿನಿ ಅಕ್ಕುಂಜೆಯನ್ನು ಇಡೀ ಊರಿಗೆ ಊರೇ ಆರತಿ ಎತ್ತಿ ಬರಮಾಡಿಕೊಂಡಿತ್ತು.
ತನ್ನ ಅಮೋಘ ಸಾಧನೆಯೊಂದಿಗೆ ಅಶ್ವಿನಿ ಅಕ್ಕುಂಜೆ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ತಮ್ಮೂರಿನ ಹುಡುಗಿಗೆ ಅಭಿನಂದನೆ ಸಲ್ಲಿಸಿದ್ರು. ಮನೆ ಮಗಳಿಗೆ ಸನ್ಮಾನ ಮಾಡಿದ್ರು. ತವರಿನ ಸ್ವಾಗತ, ಅಭಿಮಾನಕ್ಕೆ ಅಶ್ವಿನಿ ಭಾವುಕರಾದ್ರು.
ಬದುಕಿನಲ್ಲಿ ಅಂದುಕೊಂಡಿದ್ದನ್ನ ಸಾಧಿಸಬೇಕು ಎಂಬ ಹಠಕ್ಕೆ ಬಿದ್ದ ಅಶ್ವಿನಿ ಮನೆಯವರಿಂದ ದೂರ ಉಳಿದ್ರು. ಮನೆಯಲ್ಲಿ ಬಡತನವಿದ್ರೂ ಅಕ್ಕುಂಜೆಯ ಪ್ರತಿಭೆಯಲ್ಲಿ ಬಡತನವಿರಲಿಲ್ಲ. ಕಠಿಣ ಶ್ರಮ, ಬದ್ಧತೆಯ ಮೂಲಕ ಯಶಸ್ಸು ಸಾಧಿಸಿದ್ರು. ಹಾಗಂತ ತವರಿನ ಒಡನಾಟ, ತಾನು ಹುಟ್ಟಿ ಬೆಳೆದ ಊರನ್ನು ಈಕೆ ಮರೆತಿಲ್ಲ.. ಅಲ್ಲಿನ ಬದುಕಿನ ತುಣುಕುಗಳು ಇನ್ನೂ ಅಶ್ವಿನಿಯ ಮನದಲ್ಲಿ ಸಿಹಿ ನೆನಪುಗಳಾಗಿ ಉಳಿದಿವೆ.
ಈ ನಡುವೆ ಆಶ್ವಿನಿ ಹಳೆಯ ದಿನಗಳಿಗೆ ಜಾರಿಕೊಂಡ್ರು... ಅಣ್ಣ, ಅಕ್ಕನ ಜತೆ ಓಡಾಡಿದ ಕ್ಷಣಗಳನ್ನ ನೆನಪಿಸಿಕೊಂಡ್ರು. ಅಜ್ಜನ ಜತೆಗಿನ ತರ್ಲೆಗಳು, ತನ್ನ ಕ್ರೀಡಾಬದುಕಿಗೆ ಅಪ್ಪ- ಅಮ್ಮ ನೀಡಿದ ಪ್ರೋತ್ಸಾಹ... ಬಡತನದ ಬೇಗೆಯಲ್ಲಿ ಅಮ್ಮ ಕೈ ಬಳೆಯನ್ನೇ ಅಡವಿಟ್ಟ ಕ್ಷಣಗಳು ಹೀಗೆ ತನ್ನ ಬದುಕಿನ ಕಷ್ಟದ ದಿನಗಳು ಒಂದು ಕ್ಷಣ ಕಣ್ಮುಂದೆ ಹಾದು ಹೋದವು. ಆದ್ರೆ ಈಗ ಅಶ್ವಿನಿಯ ಮುಖದಲ್ಲಿ ನೋವಿಲ್ಲ. ಜೀವನದಲ್ಲಿ ಯಶ ಸಾಧಿಸಿದ ಖುಷಿ ಇದೆ. ಹಾಗಂತ ತನ್ನ ಕಷ್ಟದ ದಿನಗಳನ್ನ ಮಾತ್ರ ಇನ್ನೂ ಮರೆತಿಲ್ಲ.
ಅಷ್ಟೇ ಅಲ್ಲ, ತಾನು ಓಡಾಡಿದ... ಅಭ್ಯಾಸ ಮಾಡುತ್ತಿದ್ದ ದಾರಿಯಲ್ಲೇ ಮತ್ತೆ ಓಡಾಡಿದ್ರು. ತನ್ನ ತಂದೆಯ ಜತೆ ಬಜಾಜ್ ಎಮ್‌ಐಟಿಯಲ್ಲಿ ಸವಾರಿ ಮಾಡಿ ಖುಷಿ ಪಟ್ರು,,. ಗದ್ದೆ, ತೋಟಗಳಲ್ಲಿ ಹಾದಿ ಮದ್ಯೆ ಸರ್ಕಸ್ ಮಾಡ್ತಾ ಎಂಜಾಯ್ ಮಾಡಿದ್ರು.. ಗೆಲುವಿನ ಉತ್ತುಂಗಕ್ಕೆ ಏರಿದ್ರೂ ತನ್ನ ನೆಲದ ಮಣ್ಣಿನ ಸೊಗಸನ್ನು ಆಸ್ವಾದಿಸೋ ಮುಗ್ಧ ಮನಸ್ಸಿನ ಭಾವವನ್ನು ವ್ಯಕ್ತಪಡಿಸಿದ್ರು..
ಹಾಗೇ ಅಶ್ವಿನಿ ದೇವರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ತನ್ನ ಸಾಧನೆಗೆಲ್ಲಾ ದೇವ್ರ ಆಶೀರ್ವಾದವೇ ಕಾರಣ ಅಂತಾರೆ ಅಶ್ವಿನಿ. ಮುಖ್ಯವಾಗಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಶ್ವಿನಿಯವರನ್ನ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಇದೇ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರರು ಅಶ್ವಿನಿಗೆ ಚಿನ್ನದ ಹಾರ ಹಾಕಿ ಸನ್ಮಾನಿಸಿದ್ರು..
ಹೀಗೆ ಬಡತನದ ಹರ್ಡಲ್ಸ್ ದಾಟಿ ಚಿನ್ನ ಗೆದ್ದ ಹೆಮ್ಮೆಯ ಗ್ರಾಮೀಣ ಪ್ರತಿಭೆಗೆ ತನ್ನ ನೆಲದಲ್ಲಿ ಸಂದ ಗೌರವ ಇದು.. ಒಟ್ಟಿನಲ್ಲಿ ಕಲ್ಲು-ಮುಳ್ಳಿನ ಹಾದಿಯಲ್ಲಿ ಗೆಲುವಿನ ರುಚಿ ಕಂಡ ಅಶ್ವಿನಿ ಇನ್ನೂ ಎತ್ತರ ಎತ್ತರಕ್ಕೆ ಗೆಲುವಿನ ಉತ್ತುಂಗಕ್ಕೇರ್ಲಿ.. ಒಲಿಂಪಿಕ್ಸ್ ನಲ್ಲೂ ಪದಕ ಗೆದ್ದು ಬಾ ಮಗಳೆ ಅಂತ ಅಭಿಮಾನಿಗಳು ಹಾರೈಸಿದ್ರು. .

ಸಿಎಂ ಸಾಹೇಬ್ರೇ … ಸ್ವಲ್ಪ ಕೇಳ್ತೀರಾ...1
ಸಿಎಂ ಸಾಹೇಬ್ರೇ, ಈ ರಾಜ್ಯದ ಕ್ರೀಡಾ ಸಚಿವರು ಯಾರು..? ಅವ್ರು ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಏಷ್ಯನ್ ಗೇಮ್ಸ್‌ನಲ್ಲಿ ರಾಜ್ಯದ ನಾಲ್ಕು ಕ್ರೀಡಾಪಟುಗಳು ಚಿನ್ನ ಹಾಗೂ ಒಬ್ರು ಕಂಚಿನ ಪದಕ ಗೆದ್ದಿದ್ದಾರೆ. ಇದು ಕ್ರೀಡಾ ಸಚಿವರಿಗೆ ಗೊತ್ತಾ..? ಆಟ್‌ಲೀಸ್ಟ್ ನಿಮಗಾದ್ರೂ ಗೊತ್ತಾ..? ಗೊತ್ತಿದ್ರೂ ನಿಮಗೆಲ್ಲಿದೆ ಟೈಮ್..? ಭೂ ಹಗರಣ, ಆ ಹಗರಣ.., ಈ ಹಗರಣ ಅಂತ ರಾಜಕೀಯ ದೊಂಬರಾಟದಲ್ಲಿ ಎಲ್ಲವನ್ನ ಮರೆತಂತಿದೆ. ಯಾಕ್ ಸಾರ್..? ನಮ್ಮ ಕ್ರೀಡಾಪಟುಗಳ ಮೇಲೆ ಅಷ್ಟೊಂದು ನಿರ್ಲಕ್ಷ್ಯ..?
ಆದ್ರೂ, ನೆನಪಿಟ್ಟುಕೊಳ್ಳಿ... ನಮ್ಮ ರಾಜ್ಯದ ಕ್ರೀಡಾಪಟುಗಳು ಗೆದ್ದಿದ್ದು ಅಂತಿಂಥ ಚಿನ್ನವಲ್ಲ. ಏಷ್ಯನ್ ಕ್ರೀಡಾಮೇಳದ ಪದಕಗಳು... ಅಲ್ಲಿ ಪದಕ ಗೆದ್ದಿರುವುದು, ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದಂಗೆ ಅಲ್ಲ. ದುಡ್ಡು ಚೆಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕಾಗಿ ಕಚ್ಚಾಟ ನಡೆಸಬಹುದು. ಒಂದಿಷ್ಟು ದುಡ್ಡುಮಾಡಬಹುದು. ಆದ್ರೆ ಇಲ್ಲಿ ಹಾಗಲ್ಲ...ಇಲ್ಲಿ ಕಠಿಣ ಶ್ರಮಕಷ್ಟೇ ಬೆಲೆ. ಜೀವದ ಹಂಗನ್ನೇ ಮರೆತು ಅಖಾಡಕ್ಕೆ ಧುಮುಕಿ ಪದಕ ಗೆಲ್ಲುವುದು ಎಷ್ಟು ಕಷ್ಟ ಅಂತ ಅದನ್ನು ಸಾಧಿಸಿದವರಿಗೆ ಮಾತ್ರ ಗೊತ್ತು.
ಆದ್ರೂ ನಮ್ಮ ಕ್ರೀಡಾಪಟುಗಳ ಮೇಲೆ ನಿಮಗೆ ಸ್ವಲ್ಪನೂ ಹೆಮ್ಮೆ ಇಲ್ವಾ..? ನಮ್ಮವರು ಚಿನ್ನ ಗೆದ್ದಿದ್ದಾರೆ.. ರಾಜ್ಯಕ್ಕೆ ಹೆಸರು ತಂದಿದ್ದಾರೆ. ಅವ್ರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ವಾ..? ಇದಕ್ಕಾಗಿ ನಿಮ್ಮಲ್ಲಿ ಒಂದೈದು ನಿಮಿಷವೂ ಪುರುಸೊತ್ತೂ ಇಲ್ವಾ..?
ಬಿಡಿ ಸಾರ್, ನೀವು ತುಂಬಾನೇ ಬಿಝಿ...ಇವ್ರೆಲ್ಲಾ ಪದಕ ಗೆದ್ರೆ ನಿಮಗೇನಾಗಬೇಕಿದೆ.... ನಿಮಗೆ ಅಧಿಕಾರ ಮುಖ್ಯ... ಪಕ್ಷ ಮುಖ್ಯ... ಕುಟುಂಬ ಮುಖ್ಯ.. ಅಷ್ಟಕ್ಕೂ ಯಾರದೋ ಮನೆಯ ಹುಡುಗ-ಹುಡುಗಿಯರು ಕ್ರೀಡಾಲೋಕದಲ್ಲಿ ಸಾಧನೆ ಮಾಡಿದ್ರೆ ನಿಮಗೇನು ಲಾಭ ಇಲ್ಲಾ ಅಲ್ವಾ ಸಾರ್...
ತಪ್ಪು ತಿಳ್ಕೊಬೇಡಿ.. ನಿಮ್ಮ ಬಾಯಿ ಯಾವಾಗ್ಲೂ ಅಭಿವೃದ್ದಿಯ ಮಂತ್ರ ಪಠಿಸುತ್ತಲೇ ಇರ್ತದೆ. ಅದಕ್ಕಾಗಿಯೇ ಈ ಮಾತುಗಳು... ಆದ್ರೆ ನಮ್ಮ ರಾಜ್ಯದ ಕ್ರೀಡಾ ರಂಗ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ನಿಮಗೆ ಗೊತ್ತಿದೆಯೋ ಇಲ್ವೋ.. ಬಜೆಜ್‌ನಲ್ಲಿ ಕೋಟಿ ಕೋಟಿ ಹಣವನ್ನ ಬೇರೆ ಬೇರೆ ಕ್ಷೇತ್ರಗಳಿಗೆ ಮೀಸಲಿಡುತ್ತೀರಿ. ಮಠಗಳಿಗೆ ಅದೆಷ್ಟೋ ಹಣ ಹಂಚಿದ್ದೀರಿ. ಆದ್ರೆ ಕ್ರೀಡೆಗೆ ಎಷ್ಟು ಕೊಟ್ಟಿದ್ದೀರಾ..? ಹಾಗಂತ ಹಿಂದಿನ ಸರ್ಕಾರ ಎಷ್ಟು ಕೊಟ್ಟಿದೆ ಅಂತ ಕೇಳೋಕೆ ಹೋಗ್ಬೇಡಿ...ನೀವೇನೂ ಮಾಡಿದ್ದೀರಾ..ಅಂತ ನೋಡಿ. ರಾಜ್ಯದ ಕ್ರೀಡಾಂಗಣಗಳು... ಕ್ರೀಡಾ ಇಲಾಖೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನ ನೀವೇ ಖುದ್ದಾಗಿ ಭೇಟಿ ಮಾಡಿದ್ರೆ ಗೊತ್ತಾಗುತ್ತೆ...
ಅಷ್ಟಕ್ಕೂ ಏಷ್ಯನ್‌ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರಲ್ಲ.. ಅವ್ರೆಲ್ಲಾ ಶ್ರೀಮಂತರಲ್ಲ. ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆಗಳು. ಅವ್ರ ಯಶಸ್ಸಿನ ಹಿಂದೆ ಹೆತ್ತವರ ಬೆವರಿನ ಹನಿ ಇದೆ. ಆದ್ರೂ ನೀವೂ ದೊಡ್ಡವರು. ಪದಕ ಗೆದ್ದವರ ಸಾಧನೆ-ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕಿತ್ತು. ಅದು ಬಿಡಿ, ಬೆನ್ನಾದ್ರೂ ತಟ್ಟುವ ದೊಡ್ಡತನವನ್ನ ತೋರಲಿಲ್ಲ.
ಹಾಗಂತ ಪದಕ ಗೆದ್ದವರು ನಿಮ್ಮ ಶಾಸಕರಂತೆ ಬೇಡಿಕೆಯನ್ನಿಟ್ಟಿಲ್ಲಾ. ಬದುಕು ಸಾಗಿಸಲು ಕೆಲಸ ಅಷ್ಟೇ.. ಇನ್ನು ‘ಜಿ’ ಕೆಟಗೆರಿ ಸೈಟ್ ಅಂತೂ ಕೇಳಲೇ ಇಲ್ಲಾ ಬಿಡಿ ಸಾರ್... ಇದನ್ನೂ ನಿಮಗೆ ಕೊಡೋಕೆ ಆಗದಿದ್ರೆ ನಮ್ಮ ಕ್ರೀಡಾಪಟುಗಳು ಬೇರೆ ರಾಜ್ಯಕ್ಕೆ ವಲಸೆ ಹೋಗುವುದನ್ನ ತಪ್ಪಿಸೋಕೆ ಆಗೋಲ್ಲ. ಆದ್ರೂ ನೀವು ಹಂಗೆಲ್ಲಾ ಮಾಡೋಕೆ ಬಿಡಬೇಡಿ ಸಾರ್... ರೆಸಾರ್ಟ್ ರಾಜಕೀಯ... ಅಪರೇಷನ್ ಎಮ್‌ಎಲ್‌ಎ... ಅದೆನೇನೋ ಮಾಡ್ತಾರಲ್ಲ... ಅದಕ್ಕೆಲ್ಲಾ ಕಡಿವಾಣ ಹಾಕಿ ನಮ್ಮ ಕ್ರೀಡಾಪಟುಗಳಿಗೆ ದಯವಿಟ್ಟು ಪ್ರೋತ್ಸಾಹ ಕೊಡಿ ಸಾರ್.
ವಂದನೆಗಳು

Wednesday, November 17, 2010
ಪಟೇಲರ ಮುಸಿ ಮುಸಿ ನಗು
ಕೆಎಸ್‌ಸಿಎ ಸರ್ವಾಧಿಕಾರಿಯಾಗಿದ್ದ ಬ್ರಿಜೇಶ್ ಪಟೇಲ್ ಈ ಬಾರಿಯ ಕೆಎಸ್‌ಸಿಎ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಆದ್ರೆ, ಚುನಾವಣಾ ಅಖಾಡದಲ್ಲಿ ಶಕುನಿ ಥರಾ ಪಟೇಲರು ದಾಳ ಉದುರಿಸಿದ್ದಾರೆ. ಜಾಣ್ಮೆಯಿಂದ ಅನಿಲ್ ಕುಂಬ್ಳೆ ಬಣವನ್ನ ತಮ್ಮತ್ತ ಸೆಳೆದುಕೊಂಡ ಬ್ರಿಜೇಶ್ ಪಟೇಲ್ ಮಹಾರಾಜ ಬಣಕ್ಕೆ ಸಡ್ಡು ಹೊಡೆಯುವ ಪ್ಲಾನ್ ಮಾಡ್ಕೊಂಡಿದ್ರು. ಬಹಿರಂಗವಾಗಿ ಅನಿಲ್‌ಕುಂಬ್ಳೆ ಬಳಗಕ್ಕೆ ನೋವಿನಿಂದಲೇ ಬೆಂಬಲ ವ್ಯಕ್ತ ಪಡಿಸಿದ್ದ ಪಟೇಲರು ಮುಸಿಮುಸಿ ನಗುತ್ತಿದ್ರು. ಅದ್ರಲ್ಲೂ ತಮ್ಮ ಬಣದ ಬೆಂಬಲಿಗರನ್ನ ಕುಂಬ್ಳೆ ಬಳಗಕ್ಕೆ ಸೇರಿಸಿಕೊಂಡ ಪಟೇಲರು ಕೆಎಸ್‌ಸಿಎ ಆಡಳಿತದಲ್ಲಿ ಸುಲಭವಾಗಿ ಮೂಗು ತೂರಿಸುವ ಲೆಕ್ಕಾಚಾರ ಹಾಕಿಕೊಂಡಿದ್ರು. ಆದ್ರೆ ಪಟೇಲರ ಗೇಮ್ ಪ್ಲಾನ್ ಇದೀಗ ವರ್ಕ್ ಔಟ್ ಆಗುತ್ತಿಲ್ಲ. ಬ್ರಿಜೇಶ್ ಪಟೇಲ್ ಅಂದುಕೊಂಡಷ್ಟು ಸುಲಭವಾಗಿ ಕುಂಬ್ಳೆ ಬಳಗ ಮಣೆ ಹಾಕ್ತಾ ಇಲ್ಲ. ಇದ್ರಿಂದ ಪಟೇಲ್ ಬೆಂಬಲಿಗರು ಸಹ ಕುಂಬ್ಳೆ ಬಣಕ್ಕೆ ಸರ್ಪೋರ್ಟ್ ಮಾಡ್ತಾ ಇಲ್ಲ ಅನ್ನೋ ಹೊಸ ಸುದ್ದಿ ಕೆಎಸ್‌ಸಿಎ ಚಾವಡಿಯಿಂದ ಹೊರಬಿದ್ದಿದೆ.
ಹಾಗೇ ನೋಡಿದ್ರೆ ,ಮಹಾರಾಜ ಮತ್ತು ಕುಂಬ್ಳೆ ಬಳಗದ ಉದ್ದೇಶ ಒಂದೇ ಆಗಿತ್ತು. ಕೆಎಸ್‌ಸಿಎ ಆಡಳಿತ ಚುಕ್ಕಾಣಿಯಿಂದ ಬ್ರಿಜೇಶ್‌ಪಟೇಲ್ ಕೆಳಗಿಳಿಯಬೇಕು. ಇದಕ್ಕಾಗಿ ಮಹಾರಾಜ ಬಣ ಕಳೆದ ಚುನಾವಣೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದ್ರೂ ಅದೂ ಸಂಪೂರ್ಣವಾಗಿ ಸಫಲವಾಗಲಿಲ್ಲ. ಆದ್ರೆ ಈ ಬಾರಿ ಶ್ರೀನಾಥ್ ಮತ್ತು ಕುಂಬ್ಳೆ ಬಳಗದ ಎಂಟ್ರಿಯಿಂದ ಬ್ರಿಜೇಶ್‌ಪಟೇಲ್ ಕೆಎಸ್‌ಸಿಎ ಚಾವಡಿಯಿಂದ ಅನಿವಾರ್ಯವಾಗಿ ಹೊರನಡೆಯುವ ತೀರ್ಮಾನ ತೆಗೆದುಕೊಂಡ್ರು.
ಆದ್ರೂ ಪಟೇಲರು ಸುಮ್ಮನೆ ಕೂತಿಲ್ಲ. ಮಹಾರಾಜ ಮತ್ತು ಅನಿಲ್ ಬಣದ ಸಂಬಂಧವನ್ನು ಚಾಣಕ್ಯ ತಂತ್ರದಿಂದ ಹದಗೆಡುವಂತೆ ಮಾಡಿದ್ರು. ಈ ಹಿಂದೆ ಮಹಾರಾಜ ಬಣ ಮತ್ತು ಕುಂಬ್ಳೆ ಬಳಗ ಜತೆಯಾಗಿಯೇ ಚುನಾವಣಾ ಕಣಕ್ಕೆ ಧುಮುಕುವ ಪ್ಲಾನ್ ಮಾಡ್ಕೊಂಡಿತ್ತು. ಆದ್ರೆ ಕ್ರಿಕೆಟರ್‌ಗಳೇ ಕೆಎಸ್‌ಸಿಎ ಆಡಳಿತ ನಡೆಸಬೇಕು ಎಂಬ ಪಟೇಲರ ಹೊಸ ರಾಗ ಯಾಕೋ ಜಂಬೋ ಬಳಗದ ಕಿವಿಯನ್ನ ಇಂಪು ಮಾಡಿತ್ತು. ಪರಿಣಾಮ, ಕುಂಬ್ಳೆ ಬಳಗ ಪಟೇಲರ ಮಾತಿಗೆ ಕುಣಿದು ಮಹಾರಾಜ ಬಣವನ್ನ ಎದುರು ಹಾಕೊಂಡು ಈಗ ಚುನಾವಣಾ ಕಣಕ್ಕೆ ಧುಮುಕಿದೆ.
ಹಾಗೇ ಕುಂಬ್ಳೆ ಬಣಕ್ಕೆ ತಿರುಗೇಟು ನೀಡಲು ಮಹಾರಾಜ ಬಣ ಕೂಡ ರಣತಂತ್ರಗಳನ್ನ ರೂಪಿಸಿಕೊಂಡಿದೆ. ಡಾ. ಕೃಷ್ಣಮೂರ್ತಿ, ದೊರೈಸ್ವಾಮಿ, ಕಸ್ತೂರಿ ರಂಗನ್, ಮೊದಲಾದವರ ಬೆಂಬಲ ಪಡೆದಿರುವ ಮಹಾರಾಜರು ಅನಿಲ್‌ಬಳಗಕ್ಕೆ ಕ್ರೀಡಾ ಮನೋಭಾವದ ಸ್ಪರ್ಧೆಯನ್ನ ಒಡ್ಡಲು ಸಿದ್ಧತೆಗಳನ್ನ ಮಾಡ್ಕೊಂಡಿದ್ದಾರೆ .
ಒಟ್ಟಿನಲ್ಲಿ ಪಟೇಲರ ಕುಮ್ಮಕ್ಕಿನಿಂದ ಕೆಎಸ್‌ಸಿಎ ಚುನಾವಣೆ ನಡೆಯುತ್ತಿದೆ. ಹಾಗಂತ ಇನ್ನೂ ಕಾಲ ಮಿಂಚಿಲ್ಲ, ರಾಜ್ಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಎಲ್ಲವನ್ನ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುವ ಚಿನ್ನದಂತಹ ಅವಕಾಶ ಅನಿಲ್ ಬಳಗಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆ ಮಾತ್ರ ಜಂಬೋ ಕೈಯಲ್ಲಿದೆ.

ಕ್ರಿಕೆಟ್ ಪಿಚ್ ಎಂಬ ಗರ್ಲ್ ಫ್ರೆಂಡ್
ಕ್ರಿಕೆಟ್ ಪಿಚ್ ಒಂದೇ... ಗರ್ಲ್ ಫ್ರೆಂಡ್ ಒಂದೇ... ಯಾಕಂದ್ರೆ ಪ್ರೇಯಸಿಯ ವರ್ತನೆ ಮತ್ತು ಕ್ರಿಕೆಟ್ ಪಿಚ್ ನ ಮರ್ಮವನ್ನ ತಿಳಿದುಕೊಳ್ಳುವುದು ತುಂಬಾನೇ ಕಷ್ಟ. ಯಾವಾಗ ಹೆಂಗೆ ತಿರುಗಿ ಬೀಳುತ್ತೆ ಅನ್ನೋದು ಅನುಭವಿಸಿದವರಿಗೆ ಮಾತ್ರ ಗೊತ್ತು. (change over ಆಗಿದೆ)
ಇದೀಗ ಇಂತಹುದೇ ಅನುಭವ ಟೀಮ್ ಇಂಡಿಯಾ ಆಟಗಾರರಿಗೆ ಆಗಿದೆ. ನ್ಯೂಜಿಲೆಂಡ್ ವಿರುದ್ಧ ಅಹಮದಾಬಾದ್ ಮತ್ತು ಹೈದ್ರಬಾದ್ ಟೆಸ್ಟ್ ಪಂದ್ಯಗಳಲ್ಲಿ ಧೋನಿ ಹುಡುಗರಿಗೆ ತವರಿನ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ವೆಟ್ಟೋರಿ ಪಡೆಯನ್ನ ಕಟ್ಟಿಹಾಕಲು ಟೀಮ್ ಇಂಡಿಯಾ ಬೌಲರ್‌ಗಳು ಹರಸಾಹಸ ಮಾಡಿದ್ರೂ ಪ್ರಯೋಜನವೇನೂ ಆಗಲಿಲ್ಲ.
ಅದ್ರಲ್ಲೂ ಟೀಮ್ ಇಂಡಿಯಾಗೆ ತವರಿನಲ್ಲಿ ಸ್ಪಿನ್ನರ್ ಗಳೇ ಟ್ರಂಪ್ ಕಾರ್ಡ್. ಆದ್ರೆ ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜ್ಹಾ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕಬಳಿಸಲು ವಿಫಲರಾದ್ರು. ಪ್ರಮುಖ ಆಫ್ ಸ್ಪಿನ್ನರ್ ಹರ್ಭಜನ್ 305 ರನ್ ನೀಡಿ ಆರು ವಿಕೆಟ್‌ಪಡೆದ್ರೆ, ಪ್ರಗ್ಯಾನ್ ಓಜ್ಹಾ 324 ರನ್ ನೀಡಿ ಕಬಳಿಸಿದ್ದು ಕೇವಲ ಏಳು ವಿಕೆಟ್ ಮಾತ್ರ.
ಆದ್ರೆ ಈ ಹಿಂದೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧ ಕಾನ್ಪುರ, ನಾಗ್ಪುರ ಮತ್ತು ಮುಂಬೈ ಟೆಸ್ಟ್ ಪಂದ್ಯಗಳ ಗೆಲುವಿನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಿದ್ರು. ಮುಖ್ಯವಾಗಿ ಹರ್ಭಜನ್ ಸಿಂಗ್ ಎದುರಾಳಿ ತಂಡಗಳಿಗೆ ಕಂಟಕವಾಗಿ ಪರಿಣಮಿಸಿದ್ರು. (change over ಆಗಿದೆ)
ಹಾಗಾದ್ರೆ, ನ್ಯೂಜಿಲೆಂಡ್ ವಿರುದ್ಧ ಆಗಿದ್ದಾದ್ರೂ ಏನು ? . ಕೆಲವು ದಿನಗಳ ಹಿಂದೆಯಷ್ಟೇ ಬಲಿಷ್ಠ ಆಸ್ಟ್ರೇಲಿಯನ್ನರಿಗೆ ಮುಖಭಂಗ ಮಾಡಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಯಾಕೆ ಸಾಧ್ಯವಾಗಲಿಲ್ಲ. ಆಗೀನ ಪಿಚ್‌ಗೂ ಈಗೀನ ಪಿಚ್‌ಗೂ ವ್ಯತ್ಯಾಸವಿದೆಯೇ.. ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತವೆ.
ಇನ್ನೊಂದೆಡೆ, ಟೀಮ್ ಇಂಡಿಯಾ ನಾಯಕ ಎಮ್.ಎಸ್. ಧೋನಿ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತವರಿನ ತಂಡಕ್ಕೆ ನೆರವಾಗುವ ಪಿಚ್ ಅನ್ನು ತಯಾರಿಸಿಲ್ಲ ಅಂತ ಖಡಕ್ ಆಗಿ ಹೇಳಿದ್ದಾರೆ. ಇಂತಹ ಪಿಚ್‌ಗಳಲ್ಲಿ ಫಲಿತಾಂಶವನ್ನ ಐದು ದಿನಗಳಲ್ಲಿ ನಿರೀಕ್ಷೆ ಮಾಡುವಂತಿಲ್ಲ. ಕನಿಷ್ಠ ಹತ್ತು ದಿನಗಳಾದ್ರೂ ಬೇಕು ಅನ್ನೋದು ಧೋನಿಯ ನೇರ ಆರೋಪವಾಗಿತ್ತು. ಇದು ನಿಜ ಕೂಡ.ಸತ್ವವೇ ಇಲ್ಲದಪಿಚ್‌ನಲ್ಲಿ ಬೌಲರ್‌ಗಳು ಬಳಲಿ ಬೆಂಡಾದ್ರೆ, ಬ್ಯಾಟ್ಸ್ ಮನ್‌ಗಳು ಮಾತ್ರ ರನ್‌ಮಳೆಯನ್ನೇ ಸುರಿಸಿದ್ರು.
ಹಾಗಾದ್ರೆ, ಬಿಸಿಸಿಐ ಏನು ಮಾಡುತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆ ಪಡೆದಿರುವ ಬಿಸಿಸಿಐ ಗುಣಮಟ್ಟದ ಪಿಚ್‌ಗಳನ್ನ ಯಾಕೆ ನಿರ್ಮಾಣ ಮಾಡುತ್ತಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ಬಹುತೇಕ ಕ್ರಿಕೆಟ್ ಮಂಡಳಿಗಳು ತಮಗೆ ಬೇಕಾದ ಹಾಗೇ ಪಿಚ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿವೆ.ಆದ್ರೆ ಬಿಸಿಸಿಐ ಮಾತ್ರ ಇದ್ರ ಬಗ್ಗೆ ಅಷ್ಟೊಂದು ಗಮನ ಹರಿಸಿಲ್ಲ.
ಕೇವಲ ದುಡ್ಡು ಮತ್ತು ಪ್ರತಿಷ್ಟೆಗೋಸ್ಕರ ಒದ್ದಾಟ ಮಾಡುತ್ತಿರುವ ಬಿಸಿಸಿಐ ದಣಿಗಳು ಟೀಮ್ ಇಂಡಿಯಾ ಆಟಗಾರರ ಬಗ್ಗೆ ಮಾತ್ರ ತಲೆನೇ ಕೆಡಿಸಿಕೊಂಡಿಲ್ಲ. ಯಾಕಂದ್ರೆ ಬಿಸಿಸಿಐಗೆಆಟಗಾರರ ಹಿತಕ್ಕಿಂತ ದುಡ್ಡೇ ಮುಖ್ಯವಾಗಿದೆ.

ಸಚಿನ್ ಅವ್ರ 22ನೇ ಅವತಾರ
1989 ನವೆಂಬರ್ 15 .. ಮರೆತರೂ ಮರೆಯಲಾಗದ ದಿನ. ಮತ್ತೆ ಮತ್ತೆ ನೆನಪಿಗೆ ಬರುವ ದಿನ.. ಯಾಕಂದ್ರೆ, ಅದು, ಕ್ರಿಕೆಟ್ ಯೂನಿವರ್ಸಿಟಿಗೆ ಮುನ್ನುಡಿ ಬರೆದ ದಿನ. ಕರಾಚಿಯಲ್ಲಿ ನಡೆದ ಇಂಡೋ-ಪಾಕ್ ಟೆಸ್ಟ್ ಪಂದ್ಯದಲ್ಲಿ 16ರ ಹರೆಯದ ಶಾಲಾ ಬಾಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದಿನ.
ಹೌದು, ಮುಂದಿನ ದಿನಗಳಲ್ಲಿ ನಡೆದದ್ದು ಇತಿಹಾಸ. ಪಂದ್ಯದಿಂದ ಪಂದ್ಯಕ್ಕೆ ಮಾಗಿದ ಹುಡುಗ, ವಿಶ್ವ ಕ್ರಿಕೆಟ್‌ನ ಚಕ್ರವರ್ತಿಯಾಗಿದ್ದು ವರ್ಣಿಸಲಸದಳ. ಇಂತಹ ಮಹೋನ್ನತ ಸಾಧಕನ ಹೆಸ್ರು ಸಚಿನ್ ರಮೇಶ್ ತೆಂಡುಲ್ಕರ್.
ಅಂದ ಹಾಗೇ, ಇದು ತಪ್ತ ಮನಸ್ಸಿನ ತಪಸ್ಸಿನ ಫಲ. ಹಾಗಂತ ಇದು ಕಥೆಯಲ್ಲ. ತನ್ನ ಬದುಕು, ಉಸಿರು ಎಲ್ಲವೂ ಕ್ರಿಕೆಟ್ ಅಂತ ನಂಬಿಕೊಂಡವನ ಯಶೋಗಾಥೆ
ಕಳೆದ 21 ವರ್ಷಗಳಿಂದ ವಿಶ್ವ ಕ್ರಿಕೆಟನ್ನ ಆಳುತ್ತಿರುವ ಸಚಿನ್ ಅವ್ರದ್ದು ಬತ್ತದ ದಾಹ. ವಯಸ್ಸು ಕೇವಲ 37.. ಆದ್ರೂ ಆಟದ ಧಮ್ ಕಮ್ಮಿಯಾಗಿಲ್ಲ. ಹಾಗೇ, ಹುಡುಗರನ್ನ ನಾಚಿಸುವಂತಹ ಫಿಟ್‌ನೆಸ್.. ಇನ್ನೂ ಕಲಿಯುವ ಹಂಬಲ.. ಅದಕ್ಕಿಂತಲೂ ಹೆಚ್ಚಾಗಿ ಕ್ರಿಕೆಟ್ ಮೇಲಿನ ಪ್ರೀತಿ, ಬದ್ಧತೆ, ಏಕಾಗ್ರತೆ .. ಇದು, ಸಚಿನ್ ಯಶಸ್ಸಿನ ಹಿಂದಿನ ಮಂತ್ರ. ಹಾಗೇ ತನ್ನಬದುಕಿನಲ್ಲಿ ರೂಢಿಸಿಕೊಂಡು ಬಂದಿರುವ ತತ್ವಸಿದ್ಧಾಂತವೂ ಹೌದು.
ಕಳೆದ ಎರಡು ದಶಕಗಳಿಂದ ಸಚಿನ್ ಆಡಿದ ಮತ್ತು ಆಡುತ್ತಿರುವ ಪರಿ ಎಂಥವರನ್ನ ಬೆರಗುಗೊಳಿಸುತ್ತೆ. ಸಚಿನ್ ಗಳಿಸುವ ಪ್ರತಿಯೊಂದು ರನ್‌ನಲ್ಲೂ ಹೊಸತನವಿರುತ್ತೆ. ಕ್ರಿಕೆಟ್ ಕಲಿಯುವ ಚಿಣ್ಣರಿಗೆ ಸಚಿನ್ ಪಾಠಶಾಲೆಯಾದ್ರೆ, ಯುವ ಆಟಗಾರರಿಗೆ ಫ್ರೊಫೆ ಸರ್. ಅಷ್ಟರ ಮಟ್ಟಿಗೆ ಸಚಿನ್ ಕ್ರಿಕೆಟ್‌ನ ಪರಿಪೂರ್ಣ ಕಲಾವಿದರಾಗಿದ್ದಾರೆ.
ಇನ್ನು, ಸಚಿನ್ ಅವ್ರ ಬ್ಯಾಟಿಂಗ್ ವೈಖರಿ, ಆಡುವ ತಾಕತ್ತು, ಪಂದ್ಯಕ್ಕೆ ಮುನ್ನ ನಡೆಸುವ ತಯಾರಿ, ಸಹ ಆಟಗಾರರಿಗೆ ನೀಡುವ ಮಾರ್ಗದರ್ಶನ ಹೀಗೆ ಸಚಿನ್ ಅವ್ರ ನಡೆ, ನುಡಿಗಳಿಂದ ಅವ್ರು ಜೀನಿಯಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಬಹುಶಃ ಸಚಿನ್ ಬರೆಯದ ದಾಖಲೆಗಳಿಲ್ಲ. ಆಡುವ ಪ್ರತಿ ಪಂದ್ಯವೂ ಒಂದೊಂದು ದಾಖಲೆಗಳ ಅಧ್ಯಾಯವಾಗಿರುತ್ತೆ .ಅದು ಏಕದಿನ ಪಂದ್ಯವೇ ಆಗಿರಲಿ, ಟೆಸ್ಟ್ ಪಂದ್ಯವೇ ಆಗಿರಲಿ.. ಅಥವಾ ಚುಟುಕು ಕ್ರಿಕೆಟ್ಟೆ ಆಗಿರಲಿ.. ಅಲ್ಲಿ ಸಚಿನ್ ಇದ್ರೆನೇ ಅಂದ... ಅವ್ರ ಆಟವನ್ನ ನೋಡೋದೆ ಚೆಂದ. ಯಾಕಂದ್ರೆ ಸಚಿನ್ ಅಭಿಮಾನಿಗಳ ಪಾಲಿಗೆ ಯಾವತ್ತಿಗೂ ಕ್ಲಾಸ್ ಆಂಡ್ ಮಾಸ್ ಹೀರೋ.
ಒಟ್ಟಿನಲ್ಲಿ ಕ್ರಿಕೆಟ್ ದೇವ್ರು 22ನೇ ಅವತಾರಕ್ಕೆ ಕಾಲೀಡುತ್ತಿದ್ದಾರೆ. ಆದ್ರೆ ಈ ಅವತಾರದಲ್ಲಿ ಸಚಿನ್ ಮುಂದೆ ಸಾಕಷ್ಟು ಸವಾಲುಗಳಿವೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅರ್ಧಶತಕಗಳ ಶತಕದ ಸಾಧನೆ, ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆಲ್ಲೋದು, 2011ರ ವಿಶ್ವಕಪ್ ಅನ್ನು ಭಾರತಾಂಬೆಗೆ ಅರ್ಪಿಸೋದು ಸಚಿನ್ ಅವ್ರ ಪ್ರಮುಖ ಮನೋಭಿಲಾಷೆ. ಏನೇ ಆದ್ರೂ ಕ್ರಿಕೆಟ್ ದೇವ್ರು ಅಭಿಮಾನಿ ದೇವರುಗಳ ಆಸೆಯನ್ನು ಈಡೇರಿಸುತ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.

Thursday, August 19, 2010
ಕನಸುಗಾರನ ಕನಸು...
ಸಚಿನ್ ರಮೇಶ್ ತೆಂಡುಲ್ಕರ್...ಕನಸುಗಾರ...ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ...ಮುಂಬೈನ ಶಿವಾಜಿ ಪಾರ್ಕ್ ಅಂಗಣದಲ್ಲಿ ಸುಸ್ತಾಗುವಷ್ಟು ಅಭ್ಯಾಸ ಮಾಡುತ್ತಿದ್ದ ಹುಡುಗ.. ಬಹುಶಃ ಪಕ್ಕದಲ್ಲೇ ನೆಲಯೂರಿದ್ದ ವಿಘ್ನೇಶನೂ ಈ ಹುಡುಗನ ಪರಿಶ್ರಮಕ್ಕೆ ತಥಾಸ್ತು ಅಂದಿದ್ದ. ಗುರು ರಮಕಾಂತ್ ಅಚ್ರೆಕರ್ ಗರಡಿಯಲ್ಲಿ ಪಳಗಿದ ಈ ಚೊಟುದ್ದ ಹುಡುಗ ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆಯಾಗಿದ್ದು ಒಂದು ರೋಚಕ ಅಧ್ಯಾಯ...
ಹೌದು, ಮೀಸೆ ಚಿಗುರುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ರಣಕಹಳೆ ಮೊಳಗಿದ ವಾಮನಮೂರ್ತಿ. ಮಾರಕ ಪಾಕ್ ಬೌಲರ್‌ಗಳಿಂದ ಮುಖಕ್ಕೆ ಏಟು ಮಾಡ್ಕೊಂಡ್ರೂ ಎದೆಗುಂದದ ವೀರ ಸೇನಾನಿ. . ರಕ್ತದ ಹನಿಗಳು ನೆಲಕ್ಕುರುಳಿದ್ರೂ ಅಂಜದ ಗಂಡು. ಕ್ರಿಕೆಟ್ ಆಟವನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಹಠವಾದಿ. ತನ್ನ ಮಾಸ್ಟರ್ ಬ್ಲಾಸ್ಟರ್ ಆಟದಿಂದ ಅಭಿಮಾನಿಗಳನ್ನ ರಂಜಿಸುವ ಕಲಾಕಾರ. ರನ್‌ಗಳನ್ನ ಗುಡ್ಡೆ ಹಾಕಿದ ದಾಖಲೆವೀರ...
ಆದ್ರೂ , ಸಚಿನ್ ದಾಹ ಮಾತ್ರ ನೀಗಿಲ್ಲ. ಅದು ತಪ್ತ ಮನಸ್ಸಿನ ತಪ್ಪಸ್ಸಿನಂತೆ... ಸದಾ ಮಿಡಿಯುತ್ತಿರುವ ತುಮುಲ. ಇಂತಹ ಮನೋಭಾವನೆ ಸಚಿನ್‌ಗಿರಲು ಮಾತ್ರ ಸಾಧ್ಯ. ಯಾಕಂದ್ರೆ ಅಲ್ಲಿ ಮಾತಿಲ್ಲ.. ಬ್ಯಾಟ್ ಮೌನವಾಗಿಯೇ ಉತ್ತರ ನೀಡುತ್ತೆ. ಹಾಗೇ, ಅಹಂ ಇಲ್ಲ. ಬದ್ಧತೆ ಇದೆ. ಗಡಿಬಿಡಿ ಇಲ್ಲ.... ಏಕಾಗ್ರತೆ ಇದೆ. ಕ್ರಿಕೆಟ್ ಅಂದ್ರೆ ಇಷ್ಟೇನಾ ಅನ್ನೋ ಅಸಡ್ಡೆ ಇಲ್ಲ... ಕಲಿಯುವುದಕ್ಕೆ ಇನ್ನೂ ಇದೆ ಅನ್ನೋ ಪರಿಶ್ರಮವಿದೆ. ಇದು ಜೀನಿಯಸ್ ಆಟಗಾರನ ಸ್ಪೆಷಾಲಿಟಿ.
ಕಳೆದ 21 ವರ್ಷಗಳಿಂದ ಸಚಿನ್ ಕ್ರಿಕೆಟ್ ಜಗತ್ತನ್ನ ಆಳುತ್ತಿದ್ದಾರೆ. ಸುಮಾರು 75ಕ್ಕೂ ಅಧಿಕ ದಾಖಲೆಗಳು ಸದ್ದಿಲ್ಲದೆ ಸಚಿನ್ ಹೆಸರಿನಲ್ಲಿ ಅಂಟಿಕೊಂಡಿವೆ. ಅಲ್ಲದೆ, ಐದು ವಿಶ್ವಕಪ್ ಆಡಿದ ಹೆಗ್ಗಳಿಕೆಯೂ ತೆಂಡುಲ್ಕರ್‌ಗಿದೆ. ಈ ಬಗ್ಗೆ ಸಚಿನ್‌ಗೂ ಹೆಮ್ಮೆ ಇದೆ. ಅದಕ್ಕಾಗಿ ಸಚಿನ್ ಅದೃಷ್ಟವಂತ ಅಂತಲೂ ಹೇಳಿಕೊಳ್ಳುತ್ತಾರೆ. ಹಾಗಂತ ಸಾಧನೆ, ದಾಖಲೆ, ರನ್‌ಗಳು ಸುಮ್ಮನೆ ಹರಿದುಬಂದಿಲ್ಲ. ಪ್ರತಿಯೊಂದರ ಹಿಂದೆಯೂ ಶ್ರಮವಿದೆ. ಜತೆಗೆ ಇದಕ್ಕೆಲ್ಲಾ ಕಾರಣ ಸರ್ವಶಕ್ತನಾದ ದೇವರು ಅನ್ನಲು ಕ್ರಿಕೆಟ್ ದೇವರು ಮರೆಯುವುದಿಲ್ಲ.
ಇಷ್ಟೆಲ್ಲಾ ಆದ್ರೂ ಸಚಿನ್ ಮನಸ್ಸು ಮಾತ್ರ ಕೊರಗ್ತಾನೇ ಇದೆ. ತನ್ನ ಕ್ರಿಕೆಟ್ ಬದುಕಿನಲ್ಲಿ ವಿಶ್ವಕಪ್ ಗೆಲ್ಲಲು ಆಗಿಲ್ಲ ಅನ್ನೋ ನೋವು ಅವ್ರನ್ನ ಕಾಡ್ತಾ ಇದೆ. ಆ ನೋವನ್ನ ಮರೆ ಮಾಚಲು ಸಚಿನ್ ಈಗೀನಿಂದಲೇ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ. ತವರಿನಲ್ಲಿ ಅದೂ ಕೂಡ ಮುಂಬೈನಲ್ಲಿ 2011ರ ವಿಶ್ವಕಪ್ ಗೆಲ್ಲುವುದು ಈ ಕನಸುಗಾರನ ಕನಸು. ಒಂದು ವೇಳೆ ಆ ಕನಸು ನನಸಾದ್ರೆ ಕ್ರಿಕೆಟ್ ದೇವ್ರ ವರ್ಣರಂಜಿತ ಬದುಕಿಗೆ ಸಾರ್ಥಕತೆಯ ಅಭಿಷೇಕವಾಗುತ್ತೆ...

ಥ್ಯಾಂಕ್ ಯೂ ಮುರಳಿ...
ಇದು ಅರ್ಥಪೂರ್ಣ ವಿದಾಯ… ಬಹುಶಃ ಇಂತಹ ಭಾಗ್ಯ ಎಲ್ಲಾ ಕ್ರಿಕೆಟಿಗರಿಗೆ ಸಿಗಲ್ಲ. 18 ವರ್ಷಗಳ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ಒಂಚೂರು ದಕ್ಕೆಯಾಗಂತೆ ಮುರಳಿ ಗುಡ್ ಬೈ ಹೇಳಿದ್ರು. ಹೌದು, ಗಾಲೆ ಟೆಸ್ಟ್‌ನಲ್ಲಿ ಮುರಳಿ ಅಂದುಕೊಂಡಿದ್ದನ್ನ ಸಾಧಿಸಿದ್ರು. ಕಟ್ಟ ಕಡೆಯ ಪಂದ್ಯದಲ್ಲಿ ಕಟ್ಟ ಕಡೆಯ ವಿಕೆಟ್ ಪಡೆದು ತನ್ನ ಮ್ಯಾಜಿಕ್ ಕೈಗಳಿಗೆ ವಿಶ್ರಾಂತಿ ನೀಡಿದ್ರು.
133ನೇ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಎಂಟು ವಿಕೆಟ್‌ಗಳನ್ನ ಕಬಳಿಸಿದ ಮುರಳಿ ತನ್ನ ವಿಕೆಟ್ ಬೇಟೆಯನ್ನು ಭರ್ತಿ 800 ಕ್ಕೇರಿಸಿಕೊಂಡ್ರು. ಮತ್ತೊಂದೆಡೆ, ಈ ಮಹನ್ನೊನ್ನತ ಕ್ರಿಕೆಟಿಗನ ಕೊನೆಯ ಪಂದ್ಯವನ್ನ ಸಂಗಕ್ಕರ ಹುಡುಗರು ಅವಿಸ್ಮರಣೀಯವಾಗಿಸಿದ್ರು. ನಂ.1 ತಂಡದ ವಿರುದ್ಧ ಗೆಲುವು ಸಾಧಿಸಿ ತನ್ನ ಹಿರಿಯಣ್ಣನಿಗೆ ಸಂಗಕ್ಕರ ಹುಡುಗರು ಅರ್ಥಪೂರ್ಣ ವಿದಾಯವನ್ನೇ ಹೇಳಿದ್ರು.
ಅಂದ ಹಾಗೇ ಈ ಸ್ಮೈಲಿಂಗ್ ಕಿಲ್ಲರ್‌ನ ಪ್ರತಿಯೊಂದು ಎಸೆತವೂ ಭಿನ್ನ ವಿಭಿನ್ನ. ಬ್ಯಾಟ್ಸ್ ಮನ್ ಸ್ವಲ್ಪ ಯಾಮಾರಿದ್ರೂ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಮುರಳಿಯ ಮ್ಯಾಜಿಕ್ ಕೈಯಿಂದ ಗಾಳಿಯಲ್ಲಿ ಬುಗುರಿಯಂತೆ ತೇಲಿ ಬರುವ ಚೆಂಡನ್ನ ಬ್ಯಾಟ್ಸ್ ಮನ್ ಅರ್ಥಮಾಡಿಕೊಳ್ಳದಿದ್ರೆ ವಿಕೆಟ್ ಕಳೆದುಕೊಳ್ಳುವುದು ಗ್ಯಾರೆಂಟಿ.
ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಮುರಳಿಯ ದಾಖಲೆ ಮುಂದೊಂದು ದಿನ ಅಳಿಸಿ ಹೋಗುತ್ತೆ ಅನ್ನೋದು ಕನಸಿನ ಮಾತೇ ಸರಿ. ಯಾಕಂದ್ರೆ ಮುರಳಿ ಯಾರು ಏರದಷ್ಟು ದೊಡ್ಡ ಬೆಟ್ಟವನ್ನ ಹತ್ತಿದ್ದಾರೆ. ಆದ್ರೆ, ಮುರಳಿ ಇಷ್ಟೆಲ್ಲಾ ಸಾಧನೆ ಮಾಡ್ತಿನಿ ಅಂತ ಕನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.
ಇನ್ನು, ಮುರಳಿ ಭಾವುಕ ಜೀವಿ. ವಿದಾಯದ ನೋವು ಅವ್ರಲ್ಲಿದ್ರೂ ಅದನ್ನ ತೋರಿಸಿಕೊಳ್ತಿಲ್ಲ. ನಗು ನಗುತ್ತಲೇ ಮಾತನಾಡುವುದು ಮುರಳಿಯ ಸ್ವಭಾವ. ಬಹುಶಃ ಇದೇ ನಗು ಅವ್ರ ಯಶಸ್ವಿನ ಗುಟ್ಟು ಕೂಡ ಹೌದು. ಕ್ರಿಕೆಟ್ ಬದುಕಿನಲ್ಲಿ ಅದೆಷ್ಟೋ ಯಶಸ್ಸು ಸಾಧಿಸಿದ್ರೂ, ವಿವಾದ, ಅವಮಾನ ಮುರಳಿಯ ಬದುಕನ್ನ ಸಾಕಷ್ಟು ಘಾಸಿಗೊಳಿಸಿದೆ. ಆದ್ರೂ ನಗು ನಗುತ್ತಲೇ ಎಲ್ಲದಕ್ಕೂಉತ್ತರ ಕೊಟ್ರು ಮುರಳೀಧರನ್. ಕೊನೆಗೆ ಟೀಕೆ, ಅವಮಾನ ಮಾಡಿದವ್ರೆ ಮುರಳೀಯ ಸಾಧನೆಗೆ ದಂಗಾಬಿಟ್ರು.
ಇನ್ನು, ಮುರಳಿಯ ಸಾಧನೆಯ ಬಗ್ಗೆ ಸಿಂಹಳಿಯರಿಗೆ ಹೆಮ್ಮೆ ಇದೆ. ಅದಕ್ಕೆ ಕೊನೆಯ ಪಂದ್ಯವೇ ಸಾಕ್ಷಿ. ಗಾಲೆ ಮೈದಾನದಲ್ಲಿ ಎಲ್ಲೂ ನೋಡಿದ್ರೂ ಅಲ್ಲಿ ಬರೀ ಮುರಳಿಯ ಕಟೌಟ್‌ಗಳು ರಾರಾಜಿಸ್ತಾ ಇದ್ದವು.
ಮ್ಯಾಜಿಶಿಯನ್ ಮುರಳಿ, ವನ್ ಆಂಡ್ ಒನ್ಲಿ ಮುರಳಿ, ಗ್ರೇಟೆಸ್ಟ್ ಬೌಲರ್.. ಸ್ಪಿನ್ ಜಾದೂಗಾರ... ಥ್ಯಾಂಕ್ ಯು ಮುರಳಿ, ಗುಡ್ ಬೈ ಮುರಳಿ ಹೀಗೆ ಅಂಗಣದ ಮೂಲೆ ಮೂಲೆಯಲ್ಲೂ ಬರೀ ಮುರಳಿಯದ್ದೇ ಧ್ಯಾನ.
ಇಷ್ಟೆಲ್ಲಾ ಯಶಸ್ಸು, ಜನಪ್ರಿಯತೆ, ಸಾಧನೆ ಮಾಡಿದ್ರೂ ಮುರಳಿಗೆ ಅಹಂವಿಲ್ಲ. ಎಲ್ಲರ ಜತೆ ನಗುನಗುತ್ತಲೇ ಬೆರೆಯುತ್ತಾರೆ. ಡ್ರೇಸಿಂಗ್ ರೂಮ್‌ನಲ್ಲಂತೂ ಕಾಮಿಡಿ ಮಾಡ್ಕೊಂಡು ಎಂಜಾಯ್ ಮಾಡ್ತಾರೆ. ಇಂತಹ ಮುರಳಿ ಈಗ ಲಂಕಾ ಡ್ರೆಸಿಂಗ್ ರೂಮ್‌ನಿಂದ ಹೊರಬಂದಿದ್ದಾರೆ.
ಇನ್ನು, ಮುರಳಿ ದೇವ್ರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಮುರಳಿಗೆ ದೇವ್ರು ಎಲ್ಲವನ್ನೂ ಕೊಟ್ಟಿದ್ದಾನಂತೆ. ಆದ್ದರಿಂದ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿರುವುದು ಸ್ವಲ್ಪನೂ ಬೇಜಾರಿಲ್ಲ. ಯಾಕಂದ್ರೆ ಅವ್ರು ಏನು ಸಾಧಿಸಬೇಕು ಅದನ್ನು ಸಾಧಿಸಿದ್ದಾರೆ..
ಮತ್ತೊಂದೆಡೆ, ಅಭಿಮಾನಿಗಳು ಮುರಳಿ ವಿದಾಯಹೇಳಬೇಕು ಅಂತ ಹೇಳ್ತಾ ಇಲ್ಲ. ಮುರಳಿ ಇನ್ನೂ ಆಡಬೇಕು ಅಂತಿದ್ದಾರೆ. ಆದ್ರೂ ಮುರಳಿ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಥ್ಯಾಂಕ್ ಯೂ ಮುರಳಿ... ಯು ಆರ್ ಜೀನಿಯಸ್....

Subscribe to:
Posts (Atom)