Wednesday, September 12, 2012

ಯುವರಾಜನ ಆಗಮನ...ದಾರಿ ಬಿಡಿ....

ನಾನು ಮತ್ತೆ ಬಂದಿದ್ದೇನೆ... ಸಾವನ್ನೇ ಗೆದ್ದು ಬಂದಿದ್ದೇನೆ … ಟೀಮ್ ಇಂಡಿಯಾ ಕೈಬೀಸಿ ಕರೆದಿದೆ... ಚಾಂಪಿಯನ್‌ ಆಟಗಾರನ ರೀ ಎಂಟ್ರಿಯಾಗಿದೆ... .

ಹೀಗೆ ಹೇಳೋಕೊ ಧಮ್‌ ಇರಬೇಕು... ಆದ್ರೆ ಅದು ಎಲ್ರಿಗೂ ಸಾಧ್ಯವಿಲ್ಲ. ಅದಕ್ಕೆ ಎಂಟೆದೆ ಬೇಕು...ಅಂತಹ ಮಹಾ ಧೀರನೇ ನಮ್ಮ ಯುವರಾಜ್‌ ಸಿಂಗ್‌ .. ಅಸಾಧ್ಯ ಯಾವುದು ಅಂತ ಅಂದುಕೊಂಡಿದ್ರೂ ಅದನ್ನು ಸಾಧ್ಯ ಅಂತ ಸಾಬೀತುಪಡಿಸಿದ ಯುವರಾಜ...

ಹೌದು... ಯುವರಾಜ್‌ಸಿಂಗ್‌ ಮತ್ತೆ ಕ್ರಿಕೆಟ್‌ ಆಡ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಅದ್ರಲ್ಲೂ ಟೀಮ್ ಇಂಡಿಯಾದೊಳಗೆ ರಿ ಎಂಟ್ರಿ ಪಡೆಯುತ್ತಾರೆ ಎಂಬುದೇ ದೊಡ್ಡ ಕನಸಾಗಿತ್ತು. ಆದ್ರೆ ಯುವಿ ಸುಲಭವಾಗಿಯೇ ಕನಸನ್ನು ನನಾಸಾಗಿಸಿದ್ರು. ಪ್ರತಿಷ್ಠಿತ ಟ್ವೆಂಟಿ ಟ್ವೆಂಟಿ ವಿಶ್ವಕಪ್‌ ಟೂರ್ನಿಗೆ ಈಗ ಸನ್ನದ್ಧರಾಗಿದ್ದಾರೆ.

ನಿಜ, ಯುವಿ ಸಾವನ್ನ ಗೆದ್ದು ಬಂದಿದ್ದಾರೆ. ಯುವಿಯ ಆತ್ಮಸ್ಥೈರ್ಯದ ಮುಂದೆ ಮಹಾ ಮಾರಿ ಕ್ಯಾನ್ಸರ್‌ ರೋಗವೇ ತಲ್ಲಣಗೊಂಡಿದೆ. ಸುಮಾರು ಎಂಟು-ಒಂಬತ್ತು ತಿಂಗಳ ಹಿಂದೆ ಯುವರಾಜನ ಬದುಕಿಗೆ ಕ್ಯಾನ್ಸರ್ ಅನ್ನೋ ದಟ್ಟವಾದ ಕಾರ್ಮುಗಿಲು ಆವರಿಸಿಕೊಂಡಿತ್ತು. ಆಗ ಯುವಿಯ ಬದುಕು ಇಷ್ಟೇ ಅಂತ ಎಲ್ರೂ ಅಂದುಕೊಂಡಿದ್ರು.

ಆದ್ರೆ ಯುವಿ ಮನಸ್ಸು ಮಾತ್ರ ಹಾಗಿರಲಿಲ್ಲ. ಬದುಕು ಇಷ್ಟೆ ಅಲ್ಲ.. ಇನ್ನೂ ಇದೆ.. ತಾನು ಸಾಧಿಸಲು ಇನ್ನಷ್ಟಿದೆ ಅಂತ ಅಂದುಕೊಂಡಿದ್ರು. ಅದಕ್ಕೆ ತಕ್ಕಂತೆ ಕತ್ತಲಿನಲ್ಲೇ ಯುವರಾಜ ಬೆಳಕಿನ ಹೊಂಗಿರಣವನ್ನು ಹುಡುಕಲು ಮುಂದಾದ್ರು. ಅಂದು ದೇಶಕ್ಕಾಗಿ ಹೋರಾಡಿದ ಯುವಿ ತನ್ನ ಉಸಿರಿನ ಆಟಕ್ಕಾಗಿ ಹೋರಾಡಿದ್ರು. ಸದಾ ನಗು ನಗುತ್ತಾ ಗೆಳೆಯರ ಜತೆ ಹರಟೆ ಹೊಡೆಯುತ್ತಿದ್ದ ಯುವಿ, ಸುಮಾರು ನಾಲ್ಕೈದು ತಿಂಗಳುಗಳ ಕಾಲ ಪಟ್ಟ ಯಾತನೆ ಅಷ್ಟಿಷ್ಟಲ್ಲ.

ತನ್ನವರನ್ನೆಲ್ಲಾ ಬಿಟ್ಟು ದೂರದ ಬೊಸ್ಟನ್‌ನಲ್ಲಿ ಯುವರಾಜ್‌ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾಗ ಯುವಿ ಮತ್ತೆ ರಾಜನಂತೆ ಬರ್ತಾರೆ ಅಂತ ಗ್ಯಾರಂಟಿ ಇರಲಿಲ್ಲ. ಯಾಕಂದ್ರೆ ಯುವಿ ಹೋರಾಟ ನಡೆಸುತ್ತಿದ್ದದ್ದು ಎದುರಾಳಿ ತಂಡವನ್ನಲ್ಲ. ಬದಲಾಗಿ ಸಾವನ್ನ ಹೊತ್ತು ನಿಂತಿರುವ ಕ್ಯಾನ್ಸರ್‌ ರೋಗದ ವಿರುದ್ಧ...

ಮೈದಾನದಲ್ಲಿ ತನ್ನ ಬ್ಯಾಟಿಂಗ್‌ ಮೂಲಕ ಅಭಿಮಾನಿಗಳನ್ನ ರಂಜಿಸಿದ್ರು. ಅಷ್ಟೇ ಅಲ್ಲ, ಅಭಿಮಾನಿಗಳ ಮನ ತಣಿಸಿ ತಾನು ಖುಷಿಪಟ್ರು. ಇನ್ನೂ ಬೌಲರ್‌ಗಳಿಗಂತೂ ಯುವಿ ದುಸ್ವಪ್ನವಾಗಿದ್ರು. ಆದ್ರೆ ವಿಧಿಯಾಟ ನೋಡಿ... ಹೊರ ಜಗತ್ತಿನ ಪರಿವೇ ಇಲ್ಲದೇ ಆಸ್ಪತ್ರೆಯ ಕೊಠಡಿಯಲ್ಲಿ ಯುವಿ ಕಿಮೊಥೆರಪಿ ಚಿಕಿತ್ಸೆಗೆ ಪಡೆಯುತ್ತಿದ್ದಾಗ ಅನುಭವಿಸಿದ ನೋವು...ವೇದನೆ...ದುಃಖ ದುಮ್ಮಾನ ಅಷ್ಟಿಷ್ಟಲ್ಲ.

ಆದ್ರೆ, ಈ ಎಲ್ಲಾ ಕಷ್ಟಗಳು ಯುವಿಯ ಆತ್ಮವಿಶ್ವಾದದ ಮುಂದೆ ಮಂಕಾದವು. ಕೋಟಿ ಕೋಟಿ ಅಭಿಮಾನಿಗಳ ಹಾರೈಕೆ, ಒಡನಾಡಿಗಳ ಪ್ರೇರಣೆ, ಅಪ್ಪನ ಕಲಿಸಿದ ಕಿಚ್ಚು, ಅಮ್ಮನ ಪ್ರೀತಿ, ಕ್ಯಾನ್ಸರ್‌ ರೋಗದಿಂದ ಮುಕ್ತನಾಗಿರುವ ಸ್ಲೈಕ್ಲಿಂಗ್‌ ಪಟು ಆರ್ಮ್‌ಸ್ಟ್ರಾಂಗ್‌ ಅವ್ರ ಸ್ಪೂರ್ತಿಯಿಂದ ಯುವರಾಜ್‌ ಸಿಂಗ್ ಬಲುಬೇಗನೇ ಚೇತರಿಸಿಕೊಂಡ್ರು. ಜತೆಗೆ ಫೇಸ್‌ ಬುಕ್‌ ಮತ್ತು ಟ್ವಿಟರ್‌ನಲ್ಲಿ ತನ್ನ ಆರೋಗ್ಯದ ಬಗ್ಗೆ ಪ್ರತಿ ದಿನ ಅಭಿಮಾನಿಗಳಿಗೆ ತಿಳಿಸುತ್ತ ತನ್ನ ನೋವು –ಬೇಸರಗಳನ್ನು ಮರೆ ಮಾಚುತ್ತಿದ್ರು.

ಕೊನೆಗೂ ಆಸ್ಪತ್ರೆ ಎಂಬ ಪಂಜರದಿಂದ ಯುವಿ ಹೊರಬಂದ್ರು. ಆಗ ಯುವಿಗೆ ಹೊಸ ಬದುಕು ಶುರುವಾದಂತೆ ಭಾಸವಾಯ್ತು. ತವರಿನ ಕದ ಗೊತ್ತಿಲ್ಲದ ಹಾಗೇ ತೆರೆದುಕೊಂಡಿತ್ತು. ಚಿಕ್ಕ ಮಗು ನೆಲದ ಮೇಲೆ ಹಜ್ಜೆ ಯನ್ನಿಂಟಂತೆ ಹುಟ್ಟಿ ಬೆಳೆದ ನೆಲವನ್ನ ಸ್ಪರ್ಶಿಸಿದ್ರು. ಅಭಿಮಾನಿಗಳ ಅಭಿಮಾನದ ಹಾರೈಕೆಗೆ ಕೃತಜ್ಞತೆ ಸಲ್ಲಿಸಿದ್ರು. ತಾನು ನಂಬಿಕೊಂಡಿದ್ದ ಗುರೂಜಿಯ ದರ್ಶನ ಪಡೆದ್ರು.

ಹೀಗೆ, ಯುವರಾಜ್‌ ಸಿಂಗ್‌ ಕ್ಯಾನ್ಸರ್‌ ರೋಗದಿಂದ ಮುಕ್ತಿ ಪಡೆದು ಹೊಸ ಇನಿಂಗ್ಸ್‌ ಅನ್ನು ಆರಂಭಿಸಿದ್ದಾರೆ. ಆದ್ರೆ ಯುವಿ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದಾರೆ. ಅದೇನೆ ಇರಲಿ... ಇವತ್ತು ಯುವರಾಜ್‌ ಸಿಂಗ್‌ ನಮ್ಮ ಎದುರು ನಗು ನಗುತ್ತಾ ಇದ್ದಾರೆ. ಗೆಳೆಯರೊಂದಿದೆ ಹರಟೆ ಹೊಡೆಯುತ್ತಿದ್ದಾರೆ. ಎದುರಾಳಿ ತಂಡವನ್ನ ಚಿಂದಿ ಉಡಾಯಿಸಲು ಸನ್ನದ್ಧರಾಗುತ್ತಿದ್ದಾರೆ. ಅಭಿಮಾನಿಗಳನ್ನ ರಂಜಿಸಲು ರೆಡಿಯಾಗುತ್ತಿದ್ದಾರೆ.

ಆದ್ರೆ ಯುವರಾಜ್‌ ಸಿಂಗ್‌ ಈ ರೀತಿ ನಮ್ಮ ಕಣ್ಣದೆರು ಓಡಾಡ್ಕೊಂಡು ಇರೋದಕ್ಕೆ ಒಬ್ರೂ ಕಾರಣೀಕರ್ತರಿದ್ದಾರೆ. ಹಾಗಾದ್ರೆ ಯಾರು ಅವ್ರು. ಯುವರಾಜನ ಹಿಂದಿರುವ ಶಕ್ತಿ ಯಾವುದು… ಯುವರಾಜನ ಬದುಕಿಗೆ ಅರ್ಥ ಕಲ್ಪಿಸಿದ ದೇವತೆ ಯಾರು... ಯುವಿ ಯಶಸ್ಸಿನ ಹಿಂದಿನ ರೂವಾರಿ ಯಾರು.. ಹುಂ, ಇದಕ್ಕೆಲ್ಲಾ ಒಂದೇ ಉತ್ತರ ಅಮ್ಮಾ..

ಹೌದು, ಯುವಿಯ ಪ್ರತಿ ಹೆಜ್ಜೆಯಲ್ಲೂ ಕೈಹಿಡಿದವರು ಅಮ್ಮ ಶಬ್ನಮ್‌ ಸಿಂಗ್‌.. ..ಇವತ್ತು ಯುವರಾಜ್‌ ಸಿಂಗ್‌ ಕೋಟಿ ಕೋಟಿ ಅಭಿಮಾನಿಗಳ ನೆಚ್ಚಿನ ಹೀರೋ ಆಗಲು ಕಾರಣ ಈ ತಾಯಿ.. ಗಂಡ ಯೋಗರಾಜ್‌ ಸಿಂಗ್‌ ದೂರವಾದ್ರೂ ಮಗನ ಭವಿಷ್ಯವನ್ನ ರೂಪಿಸಿದ ಮಹಾನ್‌ ತಾಯಿ. ಅಷ್ಟೇ ಅಲ್ಲ, ಯುವಿ ಪಾಲಿಗೆ ಶಬ್ನಮ್‌ ಅಮ್ಮನು ಹೌದು, ಅಪ್ಪನೂ ಹೌದು.. ಅಕ್ಕನೂ ಹೌದು... ಅಷ್ಟೇ ಯಾಕೆ ಆತ್ಮೀಯ ಗೆಳೆಯ ಗೆಳತಿಯೂ ಹೌದು..

ಅಂದ ಹಾಗೇ, ಯುವಿಗೆ ಅಪ್ಪನ ಪ್ರೀತಿ ಸಿಗಲಿಲ್ಲ. ಮಮಕಾರವಂತೂ ಇಲ್ಲವೇ ಇಲ್ಲ. ಇದ್ರಿಂದ ಶಬ್ನಮ್‌ ಅಪ್ಪನ ಸ್ಥಾನದಲ್ಲಿ ನಿಂತು ಮಗನನ್ನ ಬೆಳೆಸಿದ್ರು. ಕ್ರಿಕೆಟ್‌ ಬದುಕಿನಲ್ಲಿ ಯುವಿ ಹಿನ್ನಡೆ ಅನುಭವಿಸಿದಾಗ ಅಮ್ಮ ಶಬ್ನಮ್‌ ಪ್ರೇರಣೆ ನೀಡಿದ್ರು. ತಪ್ಪು ಮಾಡಿದಾಗ ತಿದ್ದಿ ಮುನ್ನಡೆಸಿದ್ರು. ತನ್ನ ಮಗ ಸೆಲೆಬ್ರಿಟಿಯಾಗಿರುವುದರಿಂದ ಗಾಸಿಪ್‌ಗಳು ಸಹಜ ಎಂಬುದನ್ನ ಅರ್ಥ ಮಾಡ್ಕೊಂಡಿದ್ರು. ಅಷ್ಟರ ಮಟ್ಟಿಗೆ ಯುವರಾಜ್‌ ಸಿಂಗ್‌ ಅಮ್ಮ ಶಬ್ನಮ್‌ ಸಿಂಗ್‌ ಗ್ರೇಟ್‌ ಮದರ್‌.

ಆದ್ರೆ ಯುವರಾಜ್‌ ಸಿಂಗ್‌ನಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನ ಮೈಗೂಡಿಸಿರುವುದು ಅಪ್ಪ ಯೋಗರಾಜ್‌ಸಿಂಗ್‌.. ತನಗೆ ಆಗಿರುವ ಅವಮಾನಕ್ಕೆ ಮಗನ ಮೂಲಕ ಪ್ರತಿಕಾರ ತೀರಿಸಿಕೊಳ್ಳಲು ಯೋಗರಾಜ್‌ ಸಿಂಗ್‌ ಪಣ ತೊಟ್ರು. ಅದಕ್ಕೆ ತಕ್ಕಂತೆ ಮಗನಿಗೆ ಪ್ರೀತಿಯ ಬದಲು ಸೇಡಿನ ಕಿಚ್ಚು ಹುಟ್ಟಿಕೊಳ್ಳುವಂತೆ ಮಾಡಿದ್ರು. ಭಾರತ ತಂಡದಲ್ಲಿ ತನಗೆ ಆಗಿರುವ ಅವಮಾನವನ್ನ ಪ್ರತಿ ದಿನ ಹೇಳ್ತಾ ಯುವಿ ಮನಸ್ಸನ್ನ ಕ್ರಿಕೆಟ್‌ ಮೇಲೆ ಹೆಚ್ಚು ಆಸಕ್ತಿ ಮೂಡುವಂತೆ ಮಾಡಿದ್ರು.

ಇನ್ನು, ಎಳವೆಯಲ್ಲಿ ವಿವಿಧ ವಯೋಮಿತಿಯ ಪಂದ್ಯಗಳು ಸೇರಿದಂತೆ ರಣಜಿ ಪಂದ್ಯದ ವೇಳೆಯಲ್ಲೂ ಮಗನ ಆಟವನ್ನ ನೋಡಲು ಯೋಗರಾಜ್‌ ಬರ್ತಿದ್ರು. ಆದ್ರೆ ಯುವಿಗೆ ಅಲ್ಲಿಯೂ ಅಪ್ಪನ ಪ್ರೀತಿಯ ಹಾರೈಕೆ ಇರಲಿಲ್ಲ. ಬರೀ ಬೈಗುಳ ಅಷ್ಟೇ... ಅಲ್ಪ ಮೊತ್ತಕ್ಕೆ ಔಟಾದ್ರೆ ರೌದ್ರನರ್ತನವೇ ನಡೀತಾ ಇತ್ತು. ಇದು ಯುವರಾಜನಲ್ಲಿ ಹೋರಾಟದ ಮನೋಭಾವನೆಯನ್ನ ಬೆಳೆಯುವಂತೆ ಮಾಡಿತ್ತು. ಅಷ್ಟೇ ಅಲ್ಲ, ಛಲ, ಹಠಮಾರಿತನ, ಆಕ್ರಮಣಕಾರಿ ಪ್ರವೃತ್ತಿಯಿಂದ ಮಾತಿಗೆ ಮಾತು, ಏಟಿಗೆ ಎದುರೇಟು ನೀಡುವ ಗುಣ ಬೆಳೆಯುವಂತೆ ಮಾಡಿತ್ತು.

ಇದೆಲ್ಲದ್ರ ನಡುವೆ, ಯುವಿ ದೇವರನ್ನ ತುಂಬಾನೇ ನಂಬುತ್ತಾರೆ. ಕ್ರಿಕೆಟ್‌ನ ಬಿಡುವಿನ ವೇಳೆಯಲ್ಲಿ ದೇವಸ್ಥಾನಕ್ಕೂ ಭೇಟಿ ನೀಡ್ತಾರೆ. ಅದ್ರಲ್ಲೂ ಯುವಿ ಧಾರ್ಮಿಕ ಗುರೂಜಿಯೊಬ್ಬರ ಮೇಲೆ ತುಂಬಾನೇ ನಂಬಿಕೆಯನ್ನಿಟ್ಟಿದ್ದಾರೆ. ಪಂಜಾಬ್‌ನ ಪಟೇಗರ್‌ ಶಾಹೀಬ್‌ ಜಿಲ್ಲೆಯ ಹನ್ಸೆಲಿ ಗ್ರಾಮದ ಧಾರ್ಮಿಕ ಗುರು ಸಂತ ಅಜೀತ್‌ಸಿಂಗ್‌ ಯುವರಾಜ ಸಿಂಗ್‌ನ ಗುರು.

ವಿಶ್ವಕಪ್‌ನಲ್ಲಿ ಯುವಿ ಅದ್ಭುತ ಪ್ರದರ್ಶನ ನೀಡಲು ಈ ಗುರುವಿನ ಆರ್ಶಿವಾದವೇ ಕಾರಣ ಅನ್ನೋದು ಯುವಿ ಕುಟುಂಬದ ನಂಬಿಕೆ. ಹಾಗೇ ಕ್ಯಾನ್ಸರ್‌ ರೋಗದಿಂದ ಮುಕ್ತಿ ಹೊಂದಲು ಕೂಡ ಈ ಗುರುವೇ ಕಾರಣ. ಆದ್ರಿಂದಲೇ ಯುವಿ ಚಿಕಿತ್ಸೆಗೆ ಮುನ್ನ ಹಾಗೂ ನಂತ್ರ ಧಾರ್ಮಿಕ ಗುರುವನ್ನ ಭೇಟಿ ಮಾಡಿದ್ರು.

ಹೀಗೆ ಯುವಿ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದಾರೆ. ಅಪ್ಪ- ಅಮ್ಮನ ವಿರಸ ಯುವಿ ಮನಸನ್ನ ಘಾಸಿಗೊಳಿಸಿದ್ರೂ ಅದನ್ನ ಎಲ್ಲೂ ತೋರಿಸಿಕೊಂಡಿಲ್ಲ. ಬದುಕಿನ ಕಷ್ಟಗಳನ್ನ ನಗು ನಗುತ್ತಲೇ ಎದುರಿಸಿಕೊಂಡು ಮುನ್ನಡೆಯುತ್ತಿದ್ದಾರೆ.

ಯುವರಾಜ್‌ ಸಿಂಗ್ ಹುಟ್ಟು ಹೋರಾಟಗಾರ.. ಮಾತಿಗೆ ಮಾತು ಏಟಿಗೆ ಏಟು ಇದು ಯುವರಾಜನ ಸಿದ್ದಾಂತ ಕೂಡ ಹೌದು. ಅದ್ರಲ್ಲೂ 2007ರ ವಿಶ್ವಕಪ್‌ನಲ್ಲಿ ಬಾರಿಸಿದ ಆರು ಸಿಕ್ಸರ್‌ಗಳನ್ನ ಮರೆಯೋಕೆ ಆಗುತ್ತಾ...

ಒಂದು... ಎರಡು... ಮೂರು.. ನಾಲ್ಕು.. ಐದು... ಆರು..... ಅರೇ ಇದು ಬರೀ ಅಂಕೆ- ಸಂಖ್ಯೆಗಳಲ್ಲ.. ಕ್ರಿಕೆಟ್‌ ಪುಸ್ತಕದಲ್ಲಿ ಯುವರಾಜ್‌ ಸಿಂಗ್ ಬಾರಿಸಿದ ಸತತ ಆರು ಸಿಕ್ಸರ್‌ಗಳು... ಹೌದು, ಇದು 2007ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಯುವರಾಜ್‌ ಘರ್ಜಿಸಿದ ಪರಿ.. ಫ್ಲಿಂಟಾಫ್‌ ಮೇಲಿನ ಸಿಟ್ಟನ್ನ ಸ್ಟುವರ್ಟ್‌ ಬ್ರಾಡ್‌ ಮೇಲೆ ತೀರಿಸಿಕೊಂಡ ರೀತಿ...

ಈ ಬ್ಯಾಟಿಂಗ್‌ ನಲ್ಲಿ ಜೋಶ್‌ ಇತ್ತು. .. ಸೇಡಿನ ಮನೋಭಾವನೆ ಇತ್ತು... ಪ್ರತಿಕಾರವಿತ್ತು. ಏಟಿಗೆ ಏಟು ಮಾತಿಗೆ ಮಾತು ಅನ್ನೋ ಸಿದ್ಧಾಂತವಿತ್ತು. ಅಭಿಮಾನಿಗಳಿಗೆ ಮನ ತಣಿಸುವ ಮನರಂಜನೆ ಇತ್ತು. ಅಷ್ಟೊಂದು ಸೊಗಸು... ವೈಭವ ... ಆರ್ಭಟ ಈ ಬ್ಯಾಟಿಂಗ್‌ನಲ್ಲಿತ್ತು. ಆದ್ರೆ ಇಂಗ್ಲೆಂಡ್‌ನ ಪ್ರಮುಖ ವೇಗಿಯೊಬ್ಬನ ಆರು ಎಸೆತಗಳನ್ನ ಸಿಕ್ಸರ್‌ ಬಾರಿಸೋಕೆ ಧಮ್‌—ತಾಕತ್ತು ಇರಬೇಕು... ಅಂತಹ ಕೆಚ್ಚೆದೆ ಯುವರಾಜನಗಿತ್ತು...

ಅಂದ ಹಾಗೇ ಇದು ಪ್ರತಿಕಾರವಾಗಿತ್ತು. ಏಟಿಗೆ ಯಾವ ರೀತಿ ತಿರುಗೇಟು ನೀಡುತ್ತಾರೆ ಅನ್ನೋದಕ್ಕೆ ಇದು ನಿದರ್ಶನ ಅಷ್ಟೇ ಯಾಕಂದ್ರೆ, 2007ರ ಟಿ-ಟ್ವೆಂಟಿ ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್‌ ನ ಡಿಮಿಟ್ರಿ ಮಸ್ಕರೀನಸ್‌ ಯುವರಾಜ್‌ ಸಿಂಗ್‌ನ ಐದು ಎಸೆತಗಳನ್ನ ಸಿಕ್ಸರ್‌ಗಟ್ಟಿದ್ರು. ಆಗ ಇದೇ ಯುವಿ ಮೈದಾನದಲ್ಲಿ ಚಡಪಡಿಸುತ್ತಿದ್ರು.

ಇನ್ನು, ಯುವರಾಜ್‌ ಸಿಂಗ್‌ ತನ್ನಲ್ಲಿ ಪ್ರತಿಭೆ ಇದೆ ಎಂಬುದನ್ನ ಎಳವೆಯಲ್ಲೇ ತೋರಿಸಿಕೊಟ್ಟಿದ್ರು. 19 ವಯೋಮಿತಿ ವಿಶ್ವಕಪ್‌ ಟೂರ್ನಿ ಗೆದ್ದ ನಂತ್ರ ಯುವಿ ಟೀಮ್ಇಂಡಿಯಾದ ನಾಯಕ ಗಂಗೂಲಿಯ ಕಣ್ಣಿಗೆ ಬಿದ್ರು. ಯುವಿಯ ಹೋರಾಟದ ಗುಣವನ್ನ ದಾದಾ ಆಗಲೇ ಅರ್ಥ ಮಾಡ್ಕೊಂಡಿದ್ರು. ಹಾಗೇ ದಾದಾನ ನಂಬಿಕೆಯನ್ನ ಯುವಿ ಹುಸಿಗೊಳಿಸಲಿಲ್ಲ. ಕ್ರಿಕೆಟ್‌ನ ಕಾಶಿ ಲಾಡ್ರ್ಸ್‌ ಮೈದಾನದಲ್ಲಿ ನಾಯಕ ಶರ್ಟ್‌ ಬಿಚ್ಚಿ ಕುಣಿಯುವಂತೆ ಮಾಡಿದ್ದು ಇದೇ ಪಂಜಾಬ್‌ನ ರಣಧೀರ...

ಆದ್ರೆ, ಗಾಯ, ಕೆಟ್ಟಫಾರ್ಮ್‌ ಯುವರಾಜ್‌ ಸಿಂಗ್‌ಗೆ ಬೇತಾಳನಂತೆ ಕಾಡ್ತಾ ಇತ್ತು. ಜತೆಗೆ ತಂಡದಿಂದಲೂ ಸ್ವಲ್ಪ ದಿನ ಹೊರಗುಳಿದಿದ್ರು. ಇನ್ನೇನೂ ಕ್ರಿಕೆಟ್‌ ಬದುಕು ಮುಗಿಯಿತ್ತು ಅನ್ನುವಷ್ಟರಲ್ಲೇ ಸಿಕ್ಸರ್‌ ಕಿಂಗ್‌ ಫಿನಿಕ್ಸ್‌ ನಂತೆ ಮತ್ತೆ ಎದ್ದು ಬಂದ್ರು. 2011ರ ವಿಶ್ವಕಪ್‌ಗೂ ರೆಡಿಯಾದ್ರು.

ಇನ್ನೂ ವಿಶ್ವಕಪ್‌ಗೆ ಮುನ್ನವೇ ಗೆಲ್ಲುವುದು ನಾವೇ ಅಂತ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ರು. ಜತೆಗೆ ವಿಶೇಷ ವ್ಯಕ್ತಿಗಾಗಿ ವಿಶ್ವಕಪ್‌ ಗೆಲ್ಲಬೇಕು ಅಂತ ಬಹಿರಂಗವಾಗಿ ಹೇಳಿಕೆ ನೀಡಿದ್ರು. ಇದಕ್ಕೆ ತಕ್ಕಂತೆ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ರು.. ಬ್ಯಾಟಿಂಗ್‌ನಲ್ಲಿ ಘರ್ಜಿಸಿದ್ರೆ, ಬೌಲಿಂಗ್‌ನಲ್ಲಿ ಮ್ಯಾಜಿಕ್‌ ಮಾಡಿದ್ರು. ನೋಡ ನೋಡುತ್ತಲೇ 28 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವಕಪ್‌ ಗೆದ್ದಿತ್ತು. ಕೊಟ್ಟ ಮಾತಿನಂತೆ ಸಚಿನ್‌ ಮುಡಿಗೆ ವಿಶ್ವಕಪ್‌ ಗರಿ ಮುಡಿಸಿದ ಯುವಿ ಕೋಟಿ ಕೋಟಿ ಅಭಿಮಾನಿಗಳ ಕಣ್ಮನಿಯಾದ್ರು. ಮೈದಾನದಲ್ಲಿ ಯುವಿ, ಚಿಕ್ಕ ಮಗುವಿನಂತೆ ಗೆಲುವಿನ ಖುಷಿಯನ್ನ ಹಂಚಿಕೊಂಡ ಕ್ಷಣ ಈಗಲೂ ಕಣ್ಣಮುಂದೆ ಹಾದು ಹೋಗುತ್ತೆ. .

ಆದ್ರೆ ಈ ಗೆಲುವಿನ ಹಿಂದೆ ನೋವಿತ್ತು. ನೋವಿನ ಹಿಂದೆ ಗೆಲುವಿನ ಹಂಬಲವಿತ್ತು... .... ದಣಿವಿತ್ತು.... ಆಯಾಸವಿತ್ತು.... ಆದ್ರೂ ಅದು ಯಾರಿಗೂ ಗೊತ್ತಿರಲಿಲ್ಲ. ಮೈದಾನದಲ್ಲೇ ಯುವಿ ಸುಸ್ತಾಗುತ್ತಿದ್ರು.. ಕೆಮ್ಮುತ್ತಿದ್ರು. ವಾಂತಿ ಮಾಡ್ತಾ ಇದ್ರು. ಅಷ್ಟೇ ಯಾಕೆ ಉಸಿರಾಡಲು ಕೂಡ ಕಷ್ಟ ಪಡುತ್ತಿದ್ರು. ಇಷ್ಟೆಲ್ಲಾ ನೋವು ವೇದನೆ ಇದ್ರೂ ಯುವಿಗೆ ವಿಶ್ವಕಪ್‌ ಗೆದ್ದ ಸಮಾಧಾನ ನೆಮ್ಮದಿ ವೃತ್ತಿ ಬದುಕನ್ನ ಸಾರ್ಥಕಗೊಳಿಸುವಂತೆ ಮಾಡಿತ್ತು.

ಇದೀಗ ಟಿ-ಟ್ವೆಂಟಿ ವಿಶ್ವಕಪ್‌ ದೂರದಿಂದಲೇ ಹೊಳೆಯುತ್ತಿದೆ. ಅದನ್ನ ಪಡೆಯಲು ಯುವಿ ಮನಸ್ಸು ಹಾತುರೆಯುತ್ತಿದೆ.

ಆಲ್‌ ದಿ ಬೆಸ್ಟ್‌ ಯುವಿ...

ಸನತ್ ರೈ

Tuesday, August 14, 2012

ಸಚಿನ್‌ vs ಧ್ಯಾನ್‌ಚಾಂದ್‌

ಹೌದು, ಧ್ಯಾನ್‌ ಚಾಂದ್‌ ಆಟವನ್ನ ನೋಡುವುದೇ ಚಂದ...ಅಂಗಣದಲ್ಲಿ ಮ್ಯಾಜಿಕ್‌ ಮಾಡುತ್ತಿದ್ದ ಧ್ಯಾನ್‌ಚಾಂದ್‌ ಎದುರಾಳಿ ಆಟಗಾರರನ್ನೇ ಬೆರಗುಗೊಳಿಸುತ್ತಿದ್ರು. ಅಂತಹ ಮಾಂತ್ರಿಕ ಶಕ್ತಿ ಧ್ಯಾನ್‌ ಚಾಂದ್‌ಗಿತ್ತು... ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ ಮನ್‌ ರನ್‌ ದಾಖಲಿಸುವ ಹಾಗೇ ಧ್ಯಾನ್‌ ಚಾಂದ್‌ ಹಾಕಿಯಲ್ಲಿ ಸಲೀಸಾಗಿ ಗೋಲು ದಾಖಲಿಸುತ್ತಿದ್ರು. ಇನ್ನು, ಸಚಿನ್‌ ತೆಂಡುಲ್ಕರ್‌.. ಹೇಳಬೇಕಾದ ಅಗತ್ಯವೇ ಇಲ್ಲ.. ಎಲ್ರಿಗೂ ಗೊತ್ತಿರುವ ಚಿರಪರಿಚಿತ ಹೆಸರು.. ಸೂಜಿಗಲ್ಲಿನಂತೆ ಆಕರ್ಷಿಸುವ ಸಚಿನ್ ಬ್ಯಾಟಿಂಗ್‌ ವಿಶ್ವ ಕ್ರಿಕೆಟನ್ನ ಚಕಿತಗೊಳಿಸಿದೆ. ಸುಮಾರು 23 ವರ್ಷಗಳಿಂದ ಕ್ರಿಕೆಟ್‌ ಜಗತ್ತನ್ನ ಆಳುತ್ತಿರುವ ತೆಂಡುಲ್ಕರ್‌ ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆ... ಜಂಟಲ್‌ ಮ್ಯಾನ್‌ ಗೇಮ್‌ನ ಜಂಟಲ್‌ಮ್ಯಾನ್‌ ಆಟಗಾರನೂ ಹೌದು. ನಿಜ, ಸಚಿನ್‌ ಸಾಧನೆಗೆ ಬಹುತೇಕ ಪ್ರಶಸ್ತಿಗಳು ಅವ್ರ ಹೆಸರಿನಲ್ಲಿ ಅಂಟಿಕೊಂಡಿವೆ. ಆದ್ರೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಗರಿ ಮಾತ್ರ ಇನ್ನೂ ಸೇರಿಕೊಂಡಿಲ್ಲ. ಇದಕ್ಕಾಗಿ ಕೆಲವೊಂದು ಅಡಚಣೆಗಳಿದ್ದವು. ಅದು ಈಗ ನಿವಾರಣೆಯಾಗಿದೆ. ಅಲ್ಲದೆ, ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಅನ್ನೊ ಕೂಗು ಜೋರಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯ ನೀತಿ ನಿಯಮಗಳನ್ನ ಬದಲಾವಣೆ ಮಾಡಲು ಸಮ್ಮತಿ ಕೂಡ ನೀಡಿದೆ. … ಇದ್ರ ಬೆನ್ನಲ್ಲೇ ಸಚಿನ್‌ ಗೆ ಭಾರತ ರತ್ನ ಪ್ರಶಸ್ತಿ ಇಷ್ಟು ಬೇಗ ನೀಡಬಾರದು ಅಂತ ಅಪಸ್ವರದ ಮಾತುಗಳು ಕೇಳಿಬರ್ತಿವೆ. ಸಚಿನ್‌ಗಿಂತ ಮೊದಲು ಧ್ಯಾನ್‌ ಚಾಂದ್‌ಗೆ ಭಾರತ ರತ್ನ ನೀಡಬೇಕು.. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತ್ರದ ದಿನಗಳಲ್ಲಿ ಧ್ಯಾನ್‌ ಚಾಂದ್‌‌ ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್‌ ಪ್ರತಿಭೆ ಇಂದು ನಮ್ಮ ಜತೆ ಇಲ್ಲದಿದ್ರೂ ಅವ್ರ ಆಟದ ನೆನಪು, ಮಾಡಿರುವ ಸಾಧನೆಗಳನ್ನ ಇತಿಹಾಸ ಪುಟಗಳು ಸಾರಿ ಸಾರಿ ಹೇಳ್ತಾವೆ. ಹಾಗಂತ ಸಚಿನ್‌ಗಿಂತ ಧ್ಯಾನ್‌ಚಾಂದ್‌ ಶ್ರೇಷ್ಠ,.. ಧ್ಯಾನ್‌ಚಾಂದ್‌ಗಿಂತ ಸಚಿನ್‌ ಶ್ರೇಷ್ಠ ಅನ್ನೋದು ಚರ್ಚೆಯ ವಿಷ್ಯವಲ್ಲ. ಸಚಿನ್‌ಗೆ ಇನ್ನೂ 38ರ ಹರೆಯ... ಕ್ರಿಕೆಟ್‌ನಲ್ಲಿ ಸಚಿನ್‌ ಸಾಧಿಸಲು ಇನ್ನೂ ಬೇಕಾದಷ್ಟಿದೆ. ಈ ನಿಟ್ಟಿನಲ್ಲಿ ಧ್ಯಾನ್‌ಚಾಂದ್‌ ನಂತ್ರ ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬಹುದು ಎಂಬುದು ಕೆಲವು ಕ್ರೀಡಾಭಿಮಾನಿಗಳ ವಾದ.. ಆದ್ರೂ ಮತ್ತೆ ಕೆಲವರು ಸಚಿನ್‌ಗೆ ಭಾರತ ರತ್ನನೀಡಬೇಕು ಅನ್ನೋ ಮಾತನ್ನ ಹೇಳುತ್ತಾರೆ. ಇನ್ನೊಂದೆಡೆ, ಭಾರತದಲ್ಲಿ ಸಚಿನ್‌ಗೆ ಇರುವಷ್ಟು ನೇಮ್‌ - ಫೇಮ್‌ ಧ್ಯಾನ್‌ಚಾಂದ್‌ಗೆ ಖಂಡಿತಾ ಇಲ್ಲ.. ಇದು ನಮ್ಮ ದುರಂತವೋ ಏನೋ.. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ... ಎಂಟು ಬಾರಿ ಒಲಿಂಪಿಕ್‌ ಗೆದ್ದಿರುವ ಹೆಗ್ಗಳಿಕೆ.. ವಿಪರ್ಯಾಸ ಅಂದ್ರೆ ಇಂತಹ ಕ್ರೀಡೆ ಭಾರತದಲ್ಲಿ ಇಂದು ನಶಿಸಿ ಹೋಗ್ತಾ ಇದೆ. ಕಿಂಗ್ ಆಗಿದ್ದ ಭಾರತೀಯ ಹಾಕಿ ಇದೀಗ ಒಲಿಂಪಿಕ್ಸ್‌ ನಲ್ಲಿ ಅರ್ಹತೆ ಪಡೆಯಲು ಪರದಾಡುತ್ತಿದೆ. … ಅಂದ ಹಾಗೇ, ಧ್ಯಾನ್‌ಚಾಂದ್‌ ನಮಗೆಲ್ಲಾ ನೆನಪಾಗೊದು ಆಗಸ್ಟ್‌ 29 ರಂದು ಮಾತ್ರ. ಯಾಕಂದ್ರೆ ಅವತ್ತು ಧ್ಯಾನ್ ಚಾಂದ್‌ ಅವ್ರ ಹುಟ್ಟುಹಬ್ಬ.. ಆ ದಿನವನ್ನ ರಾಷ್ಟ್ರೀಯ ಕ್ರೀಡಾ ದಿನ ಅಂತ ಭಾರತದಲ್ಲಿ ಆಚರಿಸಲಾಗುತ್ತೆ.. ಆದ್ರೆ ಹೆಚ್ಚಿನವರಿಗೆ ಧ್ಯಾನ್‌ಚಾಂದ್‌ ಯಾರು ಅಂತಲೇ ಗೊತ್ತಿಲ್ಲ.. ಕೇವಲ ಹಾಕಿ ಆಡುವವರಿಗೆ ಮಾತ್ರ ಧ್ಯಾನ್‌ಚಾಂದ್‌ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಇದಕ್ಕಾಗಿ ನಾವು ಇಲ್ಲಿ ಯಾರನ್ನ ದೂಷಣೆ ಮಾಡುವಂತಿಲ್ಲ..ಯಾಕಂದ್ರೆ ನಮ್ಮ ವ್ಯವಸ್ಥೆಯೇ ಅಂತಹ ಮಟ್ಟದಲ್ಲಿದೆ. ಆದ್ರೂ ಒಂದು ದಿನವಾದ್ರೂ ಭಾರತೀಯ ಹಾಕಿ ದೇವ್ರನ್ನ ನೆನಪಿಸಿಕೊಳ್ಳುತ್ತೇವೆ ಅನ್ನೋದಷ್ಟೇ ಸಮಾಧಾನ.. ಆದ್ರೆ ಕ್ರಿಕೆಟ್‌ ದೇವ್ರು ಹಾಗಲ್ಲ.. ಪ್ರತಿಯೊಬ್ಬರಿಗೂ ಗೊತ್ತು... ಯಾಕಂದ್ರೆ ಸಚಿನ್‌ ಮಾಡಿರುವ ಮೋಡಿಯೇ ಅಂತಹುದ್ದು. ಜತೆಗೆ ಸಚಿನ್‌ ಸಾಧನೆಗೆ ಕಮರ್ಷಿಯಲ್‌ ಟಚ್‌ ಕೂಡ ಸಿಕ್ತ್‌.. ಗ್ಲಾಮರ್‌ - ಸೆಲೆಬ್ರಿಟಿ, ಕಮರ್ಷಿಯಲ್‌, ಹೀಗೆ ಎಲ್ಲವೂ ಸಚಿನ್ ಆಟಕ್ಕೆ ಮೆರಗನ್ನ ನೀಡಿತ್ತು. ಆದ್ರೆ ಧ್ಯಾನ್‌ಚಾಂದ್‌ ಈ ಎಲ್ಲ ಅವಕಾಶಗಳಿಂದಲೂ ಮರಿಚೀಕೆಯಾಗಿಬಿಟ್ರು... ಒಟ್ಟಿನಲ್ಲಿ ಭಾರತ ರತ್ನ ಯಾರಿಗೆ ನೀಡಬೇಕು ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸಚಿನ್‌ಗೆ ಮೊದಲು ನೀಡಿದ್ರೆ, ಧ್ಯಾನ್‌ಚಾಂದ್‌ಗೆ ಅವಮಾನ ಮಾಡಿದಂತಾಗುತ್ತೆ.. ಅದೇ ಧ್ಯಾನ್‌ಚಾಂದ್‌ಗೆ ನೀಡಿದ್ರೆ ಸಚಿನ್‌ ಅಭಿಮಾನಿಗಳಿಗೆ ಬೇಸರವಾಗುತ್ತೆ. ಇದ್ರಿಂದ ಪ್ರಶಸ್ತಿಗೆ ಆಯ್ಕೆಮಾಡುವಾಗ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತೆ. ಅದೇನೇ ಇರಲಿ...ಧ್ಯಾನ್‌ಚಾಂದ್‌ ಮತ್ತು ಸಚಿನ್ ತೆಂಡುಲ್ಕರ್‌ ಭಾರತೀಯ ಕ್ರೀಡಾಲೋಕದ ಅನರ್ಘ್ಯ ರತ್ನಗಳು... ಕ್ರೀಡಾ ಜಗತ್ತಿನಲ್ಲಿ ಇವರಿಬ್ರು ಎಲ್ಲವನ್ನೂ ಪ್ರೂವ್‌ ಮಾಡಿದ್ದಾರೆ... ಇನ್ನೂ ಯಾರಿಗೂ ಪ್ರೂವ್‌ ಮಾಡುವಂತಹ ಅಗತ್ಯವೂ ಇಲ್ಲ...ಭಾರತ ರತ್ನ ಪ್ರಶಸ್ತಿ ಇವ್ರ ಸಾಧನೆಗೆ ಹೆಮ್ಮೆ ಗೌರವ ಮೂಡಿಸುತ್ತೆ.. ಸನತ್ ರೈ ಸ್ಪೋಟ್ರ್ಸ್‌ ಬ್ಯೂರೋ ಸಮಯ ನ್ಯೂಸ್‌

ಹೀರೋ ಟು ಝಿರೊ...

ಇದು ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದಿನ ಫ್ಲಾಷ್‌ ಬ್ಯಾಕ್‌.. ಅದು ಮ್ಯಾಚ್‌ ಫಿಕ್ಸಿಂಗ್‌ ಅನ್ನೋ ಪೆಡಂಭೂತ ಭಾರತ ಕ್ರಿಕೆಟ್‌ ತಂಡವನ್ನ ಆವರಿಸಿಕೊಂಡ ಸಮಯ...ತಂಡದಲ್ಲಿ ಸ್ಟಾರ್‌ ಆಟಗಾರರಿದ್ರೂ ಗೆಲ್ಲುವ ಪಂದ್ಯದಲ್ಲಿ ಸೋಲುತ್ತಿದ್ರು. ಸೋಲುವ ಪಂದ್ಯದಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸುತ್ತಿದ್ರು. ಆಗಲೇ ಸಚಿನ್ ತೆಂಡುಲ್ಕರ್‌ಗೆ ನಾಯಕತ್ವದ ಸಹವಾಸನೇ ಸಾಕು ಅನ್ಸಿದ್ದು. ಸಾಲು ಸೋಲುಗಳಿಂದ ಕಂಗೆಟ್ಟ ಕಾರಣ ಮಾಸ್ಟರ್‌ ಬ್ಲ್ಯಾಸ್ಟರ್‌ನ ಆಟದ ಝಲಕ್‌ ಕೂಡ ಮಾಯವಾಗಿತ್ತು. ಜತೆಗೆ ತಂಡದಿಂದ ಸಾಂಘಿಕ ಆಟ ಕೂಡ ಹೊರಬರ್ತಿರಲಿಲ್ಲ. ಇದ್ರಿಂದ ಸಚಿನ್‌ ತೆಂಡುಲ್ಕರ್‌ ಬೇಸೆತ್ತು ನಾಯಕನ ಪಟ್ಟದಿಂದ ಕೆಳಗಿಳಿದ್ರು. ಇನ್ನೇನೂ ತಂಡಕ್ಕೊಬ್ಬ ಹೊಸ ನಾಯಕ ಬೇಕು... ಅದು ಯುವ ಆಟಗಾರನಾಗಬೇಕು. ಹಾಗಂತ ಆಯ್ಕೆ ಸಮಿತಿ ಯೋಚನೆ ಮಾಡ್ತಾ ಇರೋವಾಗ್ಲೆ ತಟ್ಟನೇ ಹೊಳೆದ ಹೆಸರು ಸೌರವ್‌ ಗಂಗೂಲಿ. ಅರೇ, ಸೌರವ್‌ ಗಂಗೂಲಿನಾ.. ಅಂತ ಅನೇಕರು ಹುಬ್ಬೇರಿಸಿದ್ರು. ಯಾಕಂದ್ರೆ ಗಂಗೂಲಿ ಮುಂಗೋಪಿ... ಅದಕ್ಕಿಂತಲೂ ಹೆಚ್ಚಾಗಿ ಅಹಂಕಾರಿ...ಆದ್ರಿಂದ ಸೌರವ್‌ ಹೇಗೆ ತಂಡವನ್ನ ಮುನ್ನಡೆಸುತ್ತಾರೆ ಅನ್ನೋ ಟೀಕೆಗಳು ಆಗ ಕೇಳಿಬಂದಿದ್ದವು. ಆದ್ರೆ ಆಯ್ಕೆ ಸಮಿತಿಗೆ ಅಂತಹ ವ್ಯಕ್ತಿಯೇ ಬೇಕಿತ್ತು. ಅವ್ಯವಸ್ಥೆಯ ಅಗರವಾಗಿದ್ದ ತಂಡವನ್ನ ಸರಿಯಾಗಿ ಮುನ್ನಡೆಸಲು ಗಂಗೂಲಿಯೇ ಬೆಸ್ಟ್ ಅಂತ ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಅಲ್ಲಿಂದ ಶುರುವಾಗಿದ್ದು ಗಂಗೂಲಿಯ ಪರ್ವ.. ಭಾರತ ಕ್ರಿಕೆಟ್‌ ತಂಡದ ಬದಲು ಟೀಮ್ ಇಂಡಿಯಾ ಅನ್ನೋ ಹೆಸರಿನೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಕಾಳಗ ನಡೆಸಲು ಕೊಲ್ಕತ್ತಾದ ಮಹಾರಾಜ ಮುಂದಾದ್ರು. ಅಷ್ಟೇ ಅಲ್ಲ, ಆಯ್ಕೆ ಸಮಿತಿಯ ಮುಂದೆ ಧ್ವನಿ ಎತ್ತಿ ಮಾತನಾಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ರು. ಇದ್ರಿಂದಾಗಿಯೇ ಸೆಹ್ವಾಗ್‌, ಯುವರಾಜ್‌ ಸಿಂಗ್, ಜಹೀರ್‌ಖಾನ್‌, ಹರ್ಭಜನ್‌ ಸಿಂಗ್‌ನಂತಹ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ಇಂದು ಮಿಂಚು ಹರಿಸಲು ಸಾಧ್ಯವಾಯ್ತು. ಈ ನಡುವೆ, ಗಂಗೂಲಿಯ ನಾಯಕತ್ವಕ್ಕೆ ವಿದೇಶಿ ಕೋಚ್‌ ಜಾನ್‌ ರೈಟ್‌ನ ಮಾರ್ಗದರ್ಶನವೂ ಸಿಕ್ಕಿತ್ತು. ಹೀಗೆ ಹೊಸ ಆಯಾಮ ಪಡೆದುಕೊಂಡ ಟೀಮ್ ಇಂಡಿಯಾ ನಿಧಾನವಾಗಿಯೇ ಗೆಲುವಿನ ನಗೆ ಬೀರಲು ಶುರು ಮಾಡಿತ್ತು. ಅದ್ರಲ್ಲೂ ವಿದೇಶಿ ನೆಲದಲ್ಲಿ ಮರಿಚೀಕೆಯಾಗಿದ್ದ ಗೆಲುವು ಗಂಗೂಲಿ ನಾಯಕತ್ವದಲ್ಲೇ ಒಲಿದು ಬಂತು. ಇನ್ನೊಂದೆಡೆ, ವಿಶ್ವಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದ ಆಸ್ಟ್ರೇಲಿಯನ್ನರು ವಿಶ್ವ ಕ್ರಿಕೆಟ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡುತ್ತಿದ್ರು. ಆಗ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿ ಗರ್ವ ಭಂಗ ಮಾಡಿದ್ದು ಇದೇ ಕೊಲ್ಕತ್ತಾದ ಮಹಾರಾಜ ಎಂಬುದನ್ನ ಮರೆಯುವ ಹಾಗಿಲ್ಲ. ಇನ್ನು, ದಾದಾನ ಆಕ್ರಮಣಕಾರಿ ಪ್ರವೃತ್ತಿಯೇ ಗೆಲುವಿನ ಸೂತ್ರವಾಗಿತ್ತು. ಅದ್ರಲ್ಲೂ ಇಂಗ್ಲೆಂಡ್‌ ವಿರುದ್ಧ 2002ರಲ್ಲಿ ನಡೆದ ನ್ಯಾಟ್‌ ವೆಸ್ಟ್‌ ಸರಣಿಯಲ್ಲಿ ಲಾಡ್ಸ್‌ ನ ಬಾಲ್ಕನಿ ಮೇಲೆ ಗಂಗೂಲಿ ಶರ್ಟ್‌ ಬಿಚ್ಚಿ ಕುಣಿದು ಸಂಭ್ರಮಿಸಿದ ಕ್ಷಣವನ್ನ ಇವತ್ತಿಗೂ ಮರೆಯೋಕೆ ಆಗೊಲ್ಲ. . ಹಾಗೇ, 2003ರ ವಿಶ್ವಕಪ್‌ನಲ್ಲೂ ಗಂಗೂಲಿ ತಂಡವನ್ನ ಮುನ್ನಡೆಸಿದ ರೀತಿ ಅದ್ಭುತವಾಗಿತ್ತು. ತಂಡದಲ್ಲಿ ಏಳು ಬ್ಯಾಟ್ಸ್‌ ಮನ್‌ ಗಳು ಇರಲೇಬೇಕು ಅನ್ನೋ ಕಾರಣಕ್ಕೆ ದ್ರಾವಿಡ್‌ಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನ ನೀಡಿದ್ರು. ಜತೆಗೆ ತಂಡ ಗೆಲುವಿನ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದ್ರೂ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದ್ರೂ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಗಂಗೂಲಿ ಎವರ್‌ಗ್ರೀನ್ ಹೀರೋ. . ನಂತ್ರ ಮಹಾರಾಜನ ಆಟ ಮಂಕಾಗಿ ಹೋಯ್ತು... ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬಂದವು. ಇದಕ್ಕೆ ತಕ್ಕಂತೆ ಕೋಚ್‌ ಜಾನ್‌ ರೈಟ್‌ ಅವಧಿ ಕೂಡ ಮುಗಿದಿತ್ತು. ಬಳಿಕ ಗ್ರೇಗ್‌‌ ಚಾಪೆಲ್‌ ತಂಡದ ತರಬೇತುದಾನಾದ್ರು. ಆದ್ರೆ ಗಂಗೂಲಿ ಮತ್ತು ಚಾಪೆಲ್‌ಗೆ ಅದ್ಯಾಕೋ ಕೂಡಿ ಬರ್ತಿರಲಿಲ್ಲ. ಇದೇ ವೇಳೆ ಗಂಗೂಲಿಗೆ ಫಾರ್ಮ್‌ ಕೂಡ ಕೈಕೊಟ್ಟಿತ್ತು. ಇದ್ರಿಂದ ನಾಯಕತ್ವದದಿಂದ ದಾದಾ ಅನಿವಾರ್ಯವಾಗಿ ಕೆಳಗಿಳಿಯಬೇಕಾಯ್ತು. ಅಷ್ಟೇ ಅಲ್ಲ, ತಂಡಕ್ಕೆ ಬಂದು ಹೋಗುವ ಅತಿಥಿ ಆಟಗಾರನಾಗಬೇಕಾಯ್ತು. ಆದ್ರೂ ಗಂಗೂಲಿಗೆ ಇನ್ನೂ ಆಡಬೇಕು ಅನ್ನೋ ಹಂಬಲವಿತ್ತು. ಕೊನೆಗೆ ಫಾರ್ಮ್‌ ಕಂಡುಕೊಂಡು ತಂಡದೊಳಗೆ ರಿ ಎಂಟ್ರಿಯಾದ್ರೂ ಮತ್ತೆ ನಾಯಕನಾಗುವ ಅವಕಾಶ ಮಾತ್ರ ಸಿಗಲೇ ಇಲ್ಲ. ಕೊನೆಗೂ ದಾದಾ ನಿರಾಸೆಯಿಂದಲೇ ಕ್ರಿಕೆಟ್‌ ಬದುಕಿಗೆ ಗುಡ್‌ ಬೈ ಹೇಳಿದ್ರು. ಕ್ಯಾಪ್ಟನ್‌ ಸೌರವ್‌ ಗಂಗೂಲಿ ಮೂಲೆಗುಂಪು ಅದಾಗ ರಾಹುಲ್‌ ದ್ರಾವಿಡ್‌ ಟೀಮ್ ಇಂಡಿಯಾದ ಸಾರಥಿಯಾದ್ರು. ಆದ್ರೆ ದ್ರಾವಿಡ್‌ ಖುಷಿ ಪಡುವ ಹಾಗಿರಲಿಲ್ಲ. ಯಾಕಂದ್ರೆ ಟೀಮ್ ಇಂಡಿಯಾ ಯಜಮಾನನ ಸಿಂಹಾಸನ ಮುಳ್ಳಿನ ಸಿಂಹಾಸನ ಅನ್ನೋದು ದ್ರಾವಿಡ್‌ಗೆ ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ. ಆದ್ರೂ ದ್ರಾವಿಡ್‌ ಚಾಲೆಂಜ್‌ ಆಗಿಯೇ ಸ್ವೀಕರಿಸಿದ್ರು. ದುರಾದೃಷ್ಟ ಅಂದ್ರೆ ಅದೇ ಟೈಮ್‌ನಲ್ಲಿ ಟೀಮ್ಇಂಡಿಯಾದ ಹಿರಿಯ ಆಟಗಾರರು ಗಾಯ ಮತ್ತು ಕೆಟ್ಟ ಫಾರ್ಮ್‌ನಿಂದಾಗಿ ಕಂಗೆಟ್ಟಿದ್ರು. ತೆಂಡುಲ್ಕರ್‌ ಟೆನಿಸ್‌ ಎಲ್ಬೊ ನೋವಿನಿಂದ ಬಳಲುತ್ತಿದ್ರು. ಈ ನಡುವೆ ತಂಡದೊಳಗೆ ಯುವ ಆಟಗಾರರ ಆಗಮನವೂ ಆಯ್ತು. ಮತ್ತೊಂದೆಡೆ, ಹಿರಿಯ ಆಟಗಾರರನ್ನ ಮನೆಗೆ ಕಳುಹಿಸಬೇಕು ಅಂತ ಪಣತೊಟ್ಟಿದ್ದ ಕೋಚ್‌ ಗ್ರೆಗ್‌ ಚಾಪೆಲ್‌ ದ್ವಂದ ನೀತಿಯನ್ನ ಅನುಸರಿಸಿದ್ರು. ಆದ್ರೆ, ದ್ರಾವಿಡ್ ಕಂಗೆಡಲಿಲ್ಲ. ರೈನಾ, ಧೋನಿ, ಯುವರಾಜ್‌ಸಿಂಗ್‌ ನಂತಹ ಆಟಗಾರರು ಬ್ಯಾಟಿಂಗ್‌ನಲ್ಲಿ ಪ್ರಬುದ್ಧತೆ ತೋರಿಸಿದ್ರು.ಜತೆಗೆ ಇರ್ಪಾನ್‌ ಪಠಾಣ್‌, ಆರ್‌. ಪಿ.ಸಿಂಗ್‌, ಹರ್ಭಜನ್‌ ಸಿಂಗ್ ಬೌಲಿಂಗ್‌ನಲ್ಲಿ ಮೋಡಿ ಮಾಡಿದ್ರು. ಇದ್ರಿಂದ ದ್ರಾವಿಡ್‌ ನಾಯಕತ್ವದಲ್ಲೂ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿತ್ತು. ಇನ್ನೊಂದೆಡೆ, ಕೋಚ್‌ ಗ್ರೇಗ್‌ ಚಾಪೆಲ್‌ ಉಪಟಳದಿಂದ ದ್ರಾವಿಡ್‌ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೆಡ್‌ ಮಾಸ್ಟರ್‌ನ ರೀತಿಯಲ್ಲಿ ವರ್ತಿಸುತ್ತಿದ್ದ ಚಾಪೆಲ್‌ ಹೇಳಿದ್ದಕ್ಕೆಲ್ಲಾ ದ್ರಾವಿಡ್‌ ತಲೆಯಾಡಿಸುತ್ತಿದ್ರು. ತಂಡದಲ್ಲಿ ಉಸಿರು ಕಟ್ಟುವ ವಾತಾವರಣವಿದ್ರೂ ರಾಹುಲ್‌ ಎಲ್ಲವನ್ನ ಸಹಿಸಿಕೊಂಡಿದ್ರು. ಹಾಗೇ, ಕೂಲ್‌ ಆಗಿಯೇ ವಿದೇಶಿ ನೆಲದಲ್ಲಿ ಕೆಲವೊಂದು ಸರಣಿ ಗೆದ್ದು ಇತಿಹಾಸ ಬರೆಯುವಂತೆ ಮಾಡಿದ್ರು. ಇನ್ನು, ದ್ರಾವಿಡ್‌ ನಾಯಕತ್ವಕ್ಕೆ ಸವಾಲು ಆಗಿದ್ದು 2007ರ ಕೆರೆಬಿಯನ್‌ ವಿಶ್ವಕಪ್‌. ವಿಶ್ವಕಪ್‌ ಗೆಲ್ಲಬೇಕು ಎಂಬುದು ಪ್ರತಿ ಆಟಗಾರನ ಕನಸು ಅಂದ ಮೇಲೆ ತನ್ನ ನಾಯಕತ್ವದಲ್ಲೇ ವಿಶ್ವಕಪ್‌ ಗೆಲ್ಲಬೇಕು ಅಂತ ದ್ರಾವಿಡ್ ಸಹ ಅಂದುಕೊಂಡಿದ್ರು. ಅಲ್ಲದೆ ಇದಕ್ಕಾಗಿ ತುಂಬಾನೇ ಪ್ಲಾನ್‌ ಕೂಡ ಮಾಡ್ಕೊಂಡಿದ್ರು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಮಾಡ್ಕೊಂಡು ಪ್ರಯೋಗಕ್ಕೆ ಮುಂದಾದ್ರು. ಸಚಿನ್ ತೆಂಡುಲ್ಕರ್ ತಂಡದ ಟ್ರಂಪ್‌ ಕಾರ್ಡ್‌ ಬ್ಯಾಟ್ಸ್‌ ಮನ್‌. ಇದ್ರಿಂದ ಸಚಿನ್ ಇನಿಂಗ್ಸ್‌ ಆರಂಭಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂಬುದು ಗುರು ಚಾಪೆಲ್‌ನ ಕಟ್ಟಾಜ್ಞೆಯಾಗಿತ್ತು. ಇದನ್ನ ಸಚಿನ್ ಒಪ್ಪಿಕೊಳ್ಳದಿದ್ರೂ ದ್ರಾವಿಡ್‌ ಮಾತಿಗೆ ಬೆಲೆ ನೀಡಲೇಬೇಕಾಯ್ತು. ಆದ್ರೆ ಕೆರೆಬಿಯನ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಬಾಂಗ್ಲಾ ದೇಶ ವಿರುದ್ಧ ಸೋತು ಅವಮಾನ ಅನುಭವಿಸಿತ್ತು. ಅಷ್ಟೇ ಅಲ್ಲ, ವಿಶ್ವಕಪ್‌ ಟೂರ್ನಿಯ ಲೀಗ್‌ನಿಂದ ಹೊರನಡೆದು ಮುಖಭಂಗಕ್ಕೀಡಾಯ್ತು. ಅಷ್ಟೇ ಸಾಕಿತ್ತು. ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಿತ್ತ ನೆತ್ತಿಗೇರಿತ್ತು. ಕ್ರಿಕೆಟಿಗರನ್ನ ದೇವ್ರಂತೆ ಆರಾಧಿಸಿದ ಅಭಿಮಾನಿಗಳು ಕ್ರಿಕೆಟಿಗರುಗಳ ಪೋಸ್ಟರ್‌ಗಳನ್ನ ಬಿಕ್ಷುಕರಂತೆ ಬಿಂಬಿಸಿದ್ರು. ಮತ್ತೊಂದೆಡೆ, ಸೋಲಿನ ಅವಮಾನದಿಂದ ಬೇಸೆತ್ತ ದ್ರಾವಿಡ್‌ ನಾಯಕತ್ವವನ್ನ ತ್ಯಜಿಸಿದ್ರು. ತಂಡದ ಹೀನಾಯ ಸ್ಥಿತಿಗೆ ಕಾರಣರಾಗಿದ್ದ ಕೋಚ್‌ ಗ್ರೇಗ್‌ ಚಾಪೆಲ್‌ಸಹ ಮನೆ ದಾರಿ ಹಿಡಿದ್ರು. ಇದ್ರೊಂದಿಗೆ ಟೀಮ್ ಇಂಡಿಯಾದಲ್ಲಿ ದ್ರಾವಿಡ್‌ ಅಧ್ಯಾಯ ಸಹ ಇತಿಹಾಸ ಪುಟ ಸೇರಿಕೊಂಡಿತ್ತು. ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ರಾಹುಲ್‌ ಏಕದಿನ ಪಂದ್ಯದಿಂದ ದೂರವೇ ಉಳಿದ್ರು. ಹಾಗೇ ಕಳೆದ ವರ್ಷ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಇದೀಗ ಟೆಸ್ಟ್‌ ಕ್ರಿಕೆಟ್‌ಗೂ ವಿದಾಯ ಹೇಳುವ ಸೂಚನೆ ನೀಡಿದ್ದಾರೆ. ಏನೇ ಆಗ್ಲಿ, ದ್ರಾವಿಡ್‌ ನಾಯಕನಾಗಿ ಗಂಗೂಲಿಯಂತೆ ವಿಜೃಂಬಿಸದಿದ್ರೂ ಅನೇಕ ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ರು. ಈ ನಡುವೆ, ಚುಟುಕು ಕ್ರಿಕೆಟ್‌ಗೆ ಆಯಾಮ ಸಿಕ್ಕ ಬೆನ್ನಲ್ಲೇ ದ್ರಾವಿಡ್‌ ಹಿರಿಯ ಆಟಗಾರರನ್ನ ಆಡದಂತೆ ತಡೆಹಿಡಿದ್ರು. ಟ್ವೆಂಟಿ ಟ್ವೆಂಟಿ ಯುವಕರ ಆಟ.. ಹಿರಿಯ ಆಟಗಾರರು ಆಡುವುದಿಲ್ಲ ಅನ್ನೋ ಹೇಳಿಕೆ ನೀಡಿ ಕೆಲವು ಹಿರಿಯ ಆಟಗಾರರಿಗೆ ನಿರಾಸೆಯನ್ನುಂಟು ಮಾಡಿದ್ರು. ಆದ್ರೂ ಕಳೆದ ವರ್ಷ ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಟಿ-ಟ್ವೆಂಟಿ ಪಂದ್ಯವನ್ನ ಆಡಿದ ರಾಹುಲ್‌ ಹ್ಯಾಟ್ರಿಕ್‌ ಸಿಕ್ಸರ್‌ ಬಾರಿಸಿ ತನ್ನ ಸಾಮರ್ಥ್ಯವನ್ನ ಪ್ರದರ್ಶಿಸಿ ಚುಟುಕು ಕ್ರಿಕೆಟ್‌ಗೂ ವಿದಾಯ ಹೇಳಿದ್ರು. . ಅದೇನೇ ಇರಲಿ.. ದ್ರಾವಿಡ್‌ಗೆ ಭವಿಷ್ಯದ ಟೀಮ್ ಇಂಡಿಯಾ ಬಗ್ಗೆ ದೂರದೃಷ್ಟಿ ಇತ್ತು. ಯುವ ಆಟಗಾರನಿಗೆ ನಾಯಕತ್ವ ವಹಿಸಬೇಕು ಅನ್ನೋದು ದ್ರಾವಿಡ್‌ನ ಆಸೆಯಾಗಿತ್ತು. ಮೊದಲೇ ಯುವ ನಾಯಕನ ಹುಡುಕಾಟದಲ್ಲಿದ್ದ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಸಚಿನ್ ಜತೆ ಸೇರ್ಕೊಂಡು ಹೊಸ ನಾಯಕನ ಹೆಸರನ್ನ ಸೂಚಿಸಿದ್ರು. ಒಟ್ಟಿನಲ್ಲಿ, ದ್ರಾವಿಡ್‌ ವಿಶ್ವದ ಶ್ರೇಷ್ಠ ಆಟಗಾರನಾಗಿದ್ರೂ ನಾಯಕನಾಗಿ ಆರಕ್ಕೆರಳಿಲ್ಲ .ಮೂರಕ್ಕಿಳಿಯಲಿಲ್ಲ. ಕೆರೆಬಿಯನ್‌ ವಿಶ್ವಕಪ್‌ ಟೂರ್ನಿಯ ಸೋಲನ್ನ ಟೀಮ್ ಇಂಡಿಯಾಗೆ ಅರಗಿಸಿಕೊಳ್ಳಲು ಸಾಧ್ಯನೇ ಇರಲಿಲ್ಲ. ಅಷ್ಟೇ ಅಲ್ಲ, ದೊಡ್ಡಣ್ಣ ಬಿಸಿಸಿಐ ಕೂಡ ಗರಂ ಆಗಿಬಿಟ್ಟಿತ್ತು. ಹೇಗಾದ್ರೂ ಸರಿ ಕಳೆದು ಹೋದ ಮರ್ಯಾದೆಯನ್ನ ಮತ್ತೆ ಪಡೆಯಬೇಕು ಎಂಬುದು ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಗುರಿಯಾಗಿತ್ತು. ಇದಕ್ಕಾಗಿಯೇ ಚೊಚ್ಚಲ ಟ್ವೆಂಟಿ ಟ್ವೆಂಟಿ ಟೂರ್ನಿಗೆ ಟೀಮ್ ಇಂಡಿಯಾದ ಸಾರಥಿಯಾಗಿ ಮಹೇಂದ್ರ ಸಿಂಗ್‌ ಧೋನಿಯನ್ನ ಆಯ್ಕೆ ಮಾಡಲಾಯ್ತು. ಆಗ ಎಲ್ರೂ ಅಚ್ಚರಿಗೊಂಡಿದ್ರು. ಸೆಹ್ವಾಗ್‌, ಯುವರಾಜ್‌ ಬದಲು ಧೋನಿಯ ಆಯ್ಕೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದ್ರೆ ದ್ರಾವಿಡ್‌ ಮತ್ತು ಸಚಿನ್‌ಗೆ ಧೋನಿಯ ಎಬಿಲಿಟಿ ಏನು ಎಂಬುದು ಚೆನ್ನಾಗಿಯೇ ಗೊತ್ತಿತ್ತು. ಇದ್ರಿಂದ ಯಾರು ಕೂಡ ದೂಸ್ರಾ ಮಾತು ಆಡಲಿಲ್ಲ. ಆದ್ರೂ ಚೊಚ್ಚಲ ಟ್ವೆಂಟಿ ಟ್ವೆಂಟಿಗೆ ತರಬೇತುದಾರನಿಲ್ಲದೆ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿತ್ತು. ಮ್ಯಾನೇಜರ್‌ ಲಾಲ್‌ ಚಂದ್‌ ರಜಪೂತ್‌ ಧೋನಿಗೆ ಪಾತ್ರಧಾರಿಯಾದ್ರು. ಟೂರ್ನಿಯಲ್ಲಿ ನೋಡ ನೋಡುತ್ತಲೇ ಟೀಮ್ ಇಂಡಿಯಾ ಅಚ್ಚರಿಯ ಫಲಿತಾಂಶವನ್ನ ನೀಡಿತ್ತು. ಅಷ್ಟೇ ಅಲ್ಲ, ಫೈನಲ್‌ನಲ್ಲಿ ಬದ್ಧ ವೈರಿ ಪಾಕ್‌ ತಂಡವನ್ನ ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಟ್ವೆಂಟಿ ಟ್ವೆಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಷ್ಟೇ ಸಾಕಿತ್ತು... ಧೋನಿಯ ನಾಯಕತ್ವದ ಬಗ್ಗೆ ಪ್ರಶಂಸೆಗಳ ಸುರಿಮಳೆ...ಪ್ರತಿಷ್ಠಿತ ಟೂರ್ನಿಯಲ್ಲಿ ತಂಡವನ್ನ ಧೋನಿ ಮುನ್ನಡೆಸಿದ ರೀತಿ ಕೂಡ ಅದ್ಭುತವಾಗಿತ್ತು. ಅದ್ರಲ್ಲೂ ಫೈನಲ್‌ ಪಂದ್ಯದ ಫೈನಲ್‌ ಓವರ್‌ನಲ್ಲಿ ಗ್ಯಾಂಬಲ್‌ ಮಾಡಿದ ಧೋನಿಯ ಧೈರ್ಯ ಕ್ರಿಕೆಟ್‌ ಪಂಡಿತರನ್ನೇ ಚಕಿತಗೊಳಿಸಿತ್ತು. ಜೋಗಿಂದರ್‌ ಶರ್ಮಾನ ಮೇಲಿಟ್ಟ ನಂಬಿಕೆಯೇ ಧೋನಿಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ನಂತ್ರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಮಾಹಿಯ ಮಹಿಮೆ. ಟ್ವೆಂಟಿ ಟ್ವೆಂಟಿ ವಿಶ್ವಕಪ್‌ ಗೆದ್ದ ನಂತ್ರ ಧೋನಿ ಏಕದಿನ ತಂಡದ ನಾಯಕನಾದ್ರು. ಆರಂಭದಲ್ಲಿ ಧೋನಿ ಎಡವಿದ್ರೂ ನಿಧಾನವಾಗಿಯೇ ಗೆಲುವಿನ ಹಾದಿಯಲ್ಲಿ ತಂಡವನ್ನ ಮುನ್ನಡೆಸಿದ್ರು. ವಿದೇಶಿ ನೆಲದಲ್ಲೂ ಧೋನಿ ಮ್ಯಾಜಿಕ್‌ ಮಾಡಿದ್ರು. ಮರೀಚಿಕೆಯಾಗಿದ್ದ ಗೆಲುವುಗಳು ಟೀಮ್ ಇಂಡಿಯಾಗೆ ಒಲಿದು ಬಂದವು. ಇನ್ನೊಂದೆಡೆ, ನಾಯಕತ್ವದಲ್ಲಿ ಪ್ರಬುದ್ಧತೆ ಸಾಧಿಸಿದ ಧೋನಿ ಕೂಲ್‌ ಕ್ಯಾಪ್ಟನ್‌ ಅಂತಲೇ ಬಿಂಬಿತವಾದ್ರು. ಸದಾ ಮಂದಹಾಸ ದಿಂದಲೇ ಮೋಡಿ ಮಾಡುವ ಧೋನಿ ಎದುರಾಳಿ ತಂಡಗಳ ವೀಕ್‌ನೆಸ್‌ಗಳನ್ನ ಬೇಗನೇ ಅರ್ಥಮಾಡಿಕೊಳ್ಳುತ್ತಿದ್ರು. ಅಷ್ಟೇ ಅಲ್ಲ, ಗೇಮ್‌ ಪ್ಲಾನ್‌ಗಳನ್ನ ಚೆಂಜ್‌ ಮಾಡ್ಕೊಂಡು ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗುವ ಸೂಚನೆ ನೀಡಿದ್ರು. ಅಷ್ಟರಲ್ಲೇ ಟೆಸ್ಟ್‌ ಕ್ಯಾಪ್ಟನ್‌ ಆಗಿದ್ದ ಅನಿಲ್‌ ಕುಂಬ್ಳೆ ಕೂಡ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ರು. ಇದ್ರಿಂದ ಧೋನಿ ಟೆಸ್ಟ್‌ ತಂಡದ ಸಾರಥಿಯಾದ್ರು. ಅಲ್ಲಿಂದ ಶುರುವಾಯ್ತು ಧೋನಿಯ ನಸೀಬು. ಸಾಲು ಸಾಲು ಗೆಲುವುಗಳು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿತ್ತು. ಅಷ್ಟೇ ಅಲ್ಲ, ಟೆಸ್ಟ್‌ ಸರಣಿಗಳಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಂತೆ ಮೆರೆದಾಡಿತ್ತು. ಜತೆಗೆ ಟೆಸ್ಟ್‌ ಚಾಂಪಿಯನ್‌ ಎಂಬ ಹೆಗ್ಗಳಿಕೆಗೂ ಪಾತ್ರವಾಯ್ತು. ಆದ್ರೂ ಟ್ವೆಂಟಿ ಟ್ವೆಂಟಿ ವಿಶ್ವಕಪ್‌, ಏಷ್ಯಾಕಪ್ ಸೇರಿದಂತೆಕೆಲವೊಂದು ಪ್ರತಿಷ್ಠಿತ ಟೂರ್ನಿಗಳಲ್ಲಿ ಧೋನಿ ಪಡೆ ನಿರಾಸೆ ಅನುಭವಿಸಿದ್ದು ಉಂಟು. ಆದ್ರೆ ಈ ಸೋಲುಗಳನ್ನ ಸಾಲುಸಾಲುಗೆಲುವುಗಳು ಮರೆಮಾಚುವಂತೆ ಮಾಡಿದ್ದವು. ಇದ್ರಿಂದ ಧೋನಿಯ ನಾಯಕತ್ವಕ್ಕೆ ಅಷ್ಟೊಂದು ಎಫೆಕ್ಟ್‌ ಆಗಲಿಲ್ಲ. ಈ ನಡುವೆ, ಧೋನಿಯ ನಾಯಕತ್ವಕ್ಕೆ ಗುರು ಗ್ಯಾರಿ ಕಸ್ಟರ್ನ್‌ ಮಾರ್ಗದರ್ಶನ ನೀಡಿದ್ರು. ಕೋಚ್‌ ಅನ್ನೋ ಅಹಂ ಬಿಟ್ಟು ಗೆಳೆಯನಂತೆ ಟೀಮ್ ಇಂಡಿಯಾ ಆಟಗಾರರ ತಪ್ಪುಗಳನ್ನ ಗ್ಯಾರಿ ಸರಿಪಡಿಸಿದ್ರು. ಪಬ್ಲಿಸಿಟಿಯಿಂದ ದೂರವೇ ಉಳಿದುಕೊಂಡ ಗ್ಯಾರಿ ಕಸ್ಟರ್ನ್‌ ಟೀಮ್ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸಿದ್ರು. ಸೋತಾಗ ಕುಗ್ಗದೆ, ಗೆದ್ದಾಗ ಬೀಗದೆ ಕೂಲ್‌ ಆಗಿಯೇ ಹ್ಯಾಂಡಲ್‌ ಮಾಡ್ತಾ ಇದ್ದ ಧೋನಿ 2011ರ ವಿಶ್ವಕಪ್‌ ಮೇಲೆ ಚಿತ್ತವನ್ನಿಟ್ಟಿದ್ರು. ಇದಕ್ಕೆಪೂರಕವಾಗಿಯೇ ಗುರು ಗ್ಯಾರಿ ಮಾಸ್ಟರ್‌ ಪ್ಲಾನ್‌ ಕೂಡ ಮಾಡ್ಕೊಂಡ್ರು. ಕೋಟಿ ಕೋಟಿ ಭಾರತೀಯ ಕನಸನ್ನ ಸಾಕಾರಗೊಳಿಸಲು ಟೀಮ್ ಇಂಡಿಯಾ ಕೂಡ ಪಣತೊಟ್ಟಿತ್ತು. ವಿಶ್ವಕಪ್‌ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಧೋನಿ ಹುಡುಗರು ಸಾಧಾರಣ ಮಟ್ಟದ ಪ್ರದರ್ಶನ ನೀಡಿದ್ರು. ಆದ್ರೆ ನಾಕೌಟ್‌ ಹಂತದಲ್ಲಿ ಅದ್ಭುತ ಆಟವನ್ನಾಡಿ ಫೈನಲ್‌ಗೂ ಎಂಟ್ರಿಯಾಯ್ತು. ಫೈನಲ್‌ನಲ್ಲಿ ಲಂಕಾ ವಿರುದ್ಧ ಸೋಲಿನ ಭೀತಿಗೆ ಸಿಲುಕಿದಾಗ ಎಮ್‌.ಎಸ್‌. ಧೋನಿ ನಾಯಕನ ಆಟವನ್ನಾಡಿದ್ರು. ತನ್ನ ಅದ್ಭುತ ಬ್ಯಾಟಿಂಗ್‌ನಿಂದ ಲಂಕಾ ಕೈಯಿಂದ ಗೆಲುವನ್ನ ಕಸಿದುಕೊಂಡ ಧೋನಿ ಭಾರತೀಯರ ಹೀರೋ ಅದ್ರು. ವಿಶ್ವ ಕ್ರಿಕೆಟ್‌ನ ಗ್ರೇಟ್‌ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ರು. 28 ವರ್ಷಗಳ ವರ್ಷಗಳಿಂದ ಮರೀಚಿಕೆಯಾಗಿದ್ದ ವಿಶ್ವಕಪ್‌ ಟ್ರೋಫಿಯನ್ನ ಭಾರತಾಂಭೆಗೆ ಅರ್ಪಿಸಿದ್ರು. ಆದ್ರೆ ವಿಶ್ವಕಪ್‌ ಗೆದ್ದ ನಂತ್ರ ಎಲ್ಲವೂ ಧೋನಿ ಅಂದುಕೊಂಡಂತೆ ಆಗ್ತಾ ಇಲ್ಲ. ತವರಿನಲ್ಲಿ ಆರ್ಭಟಿಸಿದ್ರೂ ವಿದೇಶಿ ನೆಲದಲ್ಲಿ ಮಂಕಾಗಿದ್ದಾರೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ವಿರುದ್ಧ ವೈಟ್‌ ವಾಶ್‌ ಮಾಡ್ಕೊಂಡಿರುವುದು ಧೋನಿಯ ನಾಯಕತ್ವಕ್ಕೆ ಕಪ್ಪುಚುಕ್ಕೆಯಾಗಿದೆ. ಇದೀಗ ಧೋನಿಯ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರ್ತಿದೆ. ಆದ್ರೆ ಧೋನಿಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಅಭಯ ಇದೆ. ಇದ್ರಿಂದ ಸದ್ಯಕ್ಕಂತೂ ಧೋನಿ ನಾಯಕತ್ವದಿಂದ ಕೆಳಗಿಳಿಯುವುದಿಲ್ಲ. ಒಂದು ವೇಳೆ,ಸಾಲು ಸಾಲು ಸೋಲುಗಳು ಮತ್ತೆ ಆವರಿಸಿಕೊಂಡ್ರೆ ಸ್ವತಃ ಧೋನಿಯೇ ನಾಯಕತ್ವ ತ್ಯಜಿಸುತ್ತಾರೆ ಎಂಬದುರಲ್ಲಿ ಸಂದೇಹವೇ ಇಲ್ಲ. ಏನೇ ಆದ್ರೂ ಭಾರತೀಯ ಕ್ರಿಕೆಟ್‌ ಇತಿಹಾಸವೇ ಅಂತಹುದ್ದು. ನಾಯಕನಾಗಿ ಮೆರೆದಾಡಿದವ್ರು ಕೊನೆಗೆ ಮೂಲೆಗುಂಪಾಗಿ ತೆರೆಮರೆಗೆ ಸೇರಿದ್ದಾರೆ. ಇದಕ್ಕೆ ಗಂಗೂಲಿ ಮತ್ತು ದ್ರಾವಿಡ್‌ ಜಸ್ಟ್‌ ಎಕ್ಸಾಂಪಲ್‌ ಅಷ್ಟೇ. ಮುಂದಿನ ದಿನಗಳಲ್ಲಿ ಧೋನಿ ಈ ಲೀಸ್ಟ್‌ಗೆ ಸೇರ್ಪಡೆಯಾಗುತ್ತಾರಾ ಅನ್ನೋದು ಸದ್ಯಕ್ಕಿರುವ ಕುತೂಹಲ. ಸನತ್ ರೈ ಸ್ಪೋಟ್ರ್ಸ್‌ ಬ್ಯೂರೋ ಸಮಯ ನ್ಯೂಸ್‌ .

ಕಮರಿದ ಚಿನ್ನದ ಹುಡುಗಿಯರ ಕನಸುಗಳು....

ಲಂಡನ್‌ ಒಲಿಂಪಿಕ್ಸ್‌ ಹತ್ತಿರವಾಗುತ್ತಿದೆ. ಆದ್ರೆ ನಮ್ಮ ಮುಂದೆ ಈಗ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅದೇ ಎಲ್ಲಿದ್ದಾರೆ ನಮ್ಮ ಚಿನ್ನದ ಹುಡುಗಿಯರು.. ? ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಚಿನ್ನದ ಆಸೆ ಮೂಡಿಸಿದ ಗೋಲ್ಡನ್‌ ಗಲ್ರ್ಸ್‌ ಈಗ ಸುದ್ದಿಯಲ್ಲೇ ಇಲ್ಲ... ಒಲಿಂಪಿಕ್ಸ್‌ ಪದಕ ಗೆಲ್ಲುವ ಕನಸುಗಳೆಲ್ಲಾ ಕಮರಿ ಹೋಗಿದೆ. ಯಾರದ್ದೋ ಮಾತು ಕೇಳ್ಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಪದಕ –ಹೆಸರು, ದುಡ್ಡಿನ ಆಸೆಗೋಸ್ಕರ ಉದ್ದೀಪನ ದ್ರವ್ಯ ಸೇವಿಸಿ ತಮ್ಮ ಹೆಸರಿಗೆ ತಾವಾಗೇ ಮಸಿ ಬಳಿದುಕೊಂಡಿದ್ದಾರೆ. ಹೌದು, 2010ರ ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಏಷ್ಯನ್‌ ಗೇಮ್ಸ್‌ ನಲ್ಲಿ ಭಾರತದ ಮಹಿಳಾ ರಿಲೆ ತಂಡ ಇತಿಹಾಸ ನಿರ್ಮಿಸಿತ್ತು. ಯಾರು ನಿರೀಕ್ಷಿಸದ ರೀತಿಯಲ್ಲಿ ಚಿನ್ನ ಗೆದ್ದಾಗ ಎಲ್ರೂ ಅಚ್ಚರಿಪಟ್ರು. ಮತ್ತೆ ಕೆಲವರು ಈ ಹುಡುಗಿಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ, ಒಲಿಂಪಿಕ್ಸ್‌ ಎಂಬ ಮಹಾ ಕ್ರೀಡಾ ಜಾತ್ರೆಯಲ್ಲಿ ಭಾರತದ ಮಹಿಳೆಯರು ಪದಕ ಗೆಲ್ಲುವ ಸಾಮರ್ಥ್ಯಹೊಂದಿದ್ದಾರೆ ಅಂತ ಖುಷಿಪಟ್ರು. ಇನ್ನು ಕೆಲವರು ಈ ಹುಡುಗಿಯರ ಸಾಧನೆಯ ಬಗ್ಗೆ ಅನುಮಾನ ಪಟ್ರು. ಈ ನಡುವೆ, ಚಿನ್ನ ಗೆದ್ದ ಖುಷಿಯಲ್ಲಿ ಕೋಟಿ ಕೋಟಿ ಭಾರತೀಯರು ಹೆಮ್ಮೆಪಟ್ರು. ಯಾರೊ ಕೆಲವರು ಮತ್ಸರದಿಂದ ಚಿನ್ನದ ಹುಡುಗಿಯರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ ಎಂದು ಹೇಳ್ಕೊಂಡು ಸುಮ್ಮನಾದ್ರು. ಮತ್ತೊಂದೆಡೆ, ಚಿನ್ನದ ಹುಡುಗಿಯರ ಸಾಧನೆಗೆ ಸನ್ಮಾನ –ನಗದು ಬಹುಮಾನಗಳು ಹರಿದುಬಂದವು. ಹಲವು ವರ್ಷಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು ಅಂತ ಈ ಹುಡುಗಿಯರು ಸಂಭ್ರಮಪಟ್ಟರು. ಜತೆಗೆ ಚಿನ್ನದ ಹುಡುಗಿಯರ ಹಸ್ತಾಕ್ಷರಕ್ಕೂ ಅಭಿಮಾನಿಗಳು ಮುಗಿಬಿದ್ರು. ಆದ್ರೆ ಈ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಚಿನ್ನದ ಹುಡುಗಿಯರು ಉದ್ದೀಪನ ದ್ರವ್ಯ ಸೇವನೆ ಮಾಡಿದ್ದಾರೆ ಅನ್ನೋ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಸ್ಟಾರ್ ಅಥ್ಲೀಟ್‌ಗಳಾದ ಅಶ್ವಿನಿ ಅಕ್ಕುಂಜೆ, ಸಿನಿ ಜೋಸ್‌, ಮನ್‌ದೀಪ್‌ಕೌರ್‌, ಮನ್‌ ಜಿತ್ ಕೌರ್‌ ಸೇರಿದಂತೆ ಜೌನಾ ಮರ್ಮ್‌, ಟೀನಾ ಮೇರಿ, ಪ್ರಿಯಾಂಕಾ ಪನ್ವಾರ್‌ ಉದ್ದೀಪನಾ ದ್ರವ್ಯ ಸೇವನಾ ಪರೀಕ್ಷೆಯಲ್ಲಿ ಫೇಲ್ ಅದ್ರು. ಅಚ್ಚರಿಯಂದ್ರೆ ಏಳು ಅಥ್ಲೀಟ್‌ಗಳು ಒಂದೇ ಕೋಚ್‌ನ ಗರಡಿನಲ್ಲಿ ಪಳಗಿದ್ರು. ಜತೆಗೆ ಎಲ್ರೂ ಕೂಡ 400 ಮೀಟರ್‌ ಓಟದಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ರು. ಹಾಗಾದ್ರೆ ಇವ್ರಿಗೆ ಉದ್ದೀಪನಾ ದ್ರವ್ಯ ಸೇವನೆಗೆ ಪ್ರೇರಣೆ ನೀಡಿರುವುದು ಯಾರು... ? ಕೋಚ್‌ ಮಾತು ಕೇಳಿ ಬಲಿಪಶುಗಳಾದ್ರಾ ? ಅಷ್ಟಕ್ಕೂ ಇವ್ರೆಲ್ಲಾ ಡಿಗ್ರಿ ಪಡೆದುಕೊಂಡವರಲ್ಲ.. ಹಾಗೇ ವೇಗ ಹೆಚ್ಚಿಸಿಕೊಳ್ಳಲು ಯಾವ ಔಷಧಿ ಸೇವಿಸಬೇಕು ಅನ್ನೋ ಸಾಮಾನ್ಯ ಜ್ಞಾನ ಕೂಡ ಇವರಿಗಿಲ್ಲ. ಹಾಗಿದ್ರೂ ಇವ್ರಿಗೆಲ್ಲಾ ಈ ಔಷಧಿಗಳು ಹೇಗೆ ಸಿಕ್ಕಿದ್ದವು.. ? ಯಾವುದಕ್ಕೂ ಉತ್ತರವಿಲ್ಲ. ಯಾಕಂದ್ರೆ ಉತ್ತರ ನೀಡಬೇಕಾದವ್ರು ಭ್ರಷ್ಟಚಾರದ ಆರೋಪ ಹೊತ್ತು ಜೈಲ್‌ ಸೇರಿಕೊಂಡಿದ್ರು. ಇನ್ನೊಂದೆಡೆ, ತಾವು ಅಮಾಯಕರು.. ತಾವು ಯಾವುದೇ ಉದ್ದೀಪನಾ ಔಷಧಿ ಸೇವಿಸಿಲ್ಲ ಅಂತ ಈ ಚಿನ್ನದ ಹುಡುಗಿಯರು ಕಣ್ಣೀರಿಟ್ರು. ಒಂದು ವೇಳೆ ಇವ್ರು ಹೇಳುವುದು ನಿಜವಾಗಿದ್ರೆ, ಎ ಮತ್ತು ಬಿ ಸ್ಯಾಂಪಲ್‌ ಟೆಸ್ಟ್‌ ಗಳಲ್ಲಿ ಯಾಕೆ ಫೇಲ್‌ ಆದ್ರು ? ಭಾರತೀಯ ಕ್ರೀಡಾ ಪ್ರಾಧಿಕಾರ ಗೊತ್ತಿದ್ದು ಯಾಕೆ ಮೌನ ವಹಿಸಿತ್ತು...ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಯಾಕೆ ಉತ್ತರ ನೀಡ್ತಾ ಇಲ್ಲ. ಇದನ್ನೆಲ್ಲಾ ಗಮನಿಸಿದಾಗ ಇದ್ರ ಹಿಂದೆ ದೊಡ್ಡವರ ಕೈವಾಡ ಇರೋದು ಸ್ಪಷ್ಟ. ಅದೇನೇ ಇರಲಿ... ಇವತ್ತು ಈ ಚಿನ್ನದ ಹುಡುಗಿಯರು ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಿಲ್ಲ. ವರ್ಷಗಳಿಂದ ಕಷ್ಟಪಟ್ಟ ಶ್ರಮ ಎಲ್ಲಾ ವ್ಯರ್ಥವಾಗಿದೆ. ಬಡತನದ ಬೇಗೆಯಲ್ಲಿ ಅರಳುತ್ತಿದ್ದ ಈ ಏಳು ಅಥ್ಲೀಟ್‌ಗಳ ಬದುಕು ಅಯೋಮಯವಾಗಿದೆ. ಈಗಾಗಲೇ ನಿಷೇಧದಿಂದ ಹೊರಬಂದ ನಂತ್ರ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸವನ್ನ ಈ ಅಥ್ಲೀಟ್‌ಗಳು ವ್ಯಕ್ತಪಡಿಸುತ್ತಾರೆ. ಆದ್ರೆ ಅವೆಲ್ಲಾ ಆಗು ಹೋಗುವ ಸಂಗತಿಗಳಲ್ಲ.. ಯಾಕಂದ್ರೆ, ಈ ಹಿಂದೆ ಇಂತಹುದ್ದೇ ಆರೋಪ ಹೊತ್ತುಕೊಂಡ ಅಥ್ಲೀಟ್‌ಗಳು ಮೂಲೆ ಗುಂಪಾಗಿಬಿಟ್ಟಿದ್ದಾರೆ. ಇದ್ರಿಂದ ಈ ಏಳು ಅಥ್ಲೀಟ್‌ಗಳು ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡ್ತಾರೆ ಎಂಬುದರಲ್ಲಿ ನಂಬಿಕೆ ಇಲ್ಲ. ಏನೇ ಆದ್ರೂ ಈ ಅಥ್ಲೀಟ್‌ಗಳ ಬಗ್ಗೆ ಅನುಕಂಪ ಇದೆ. ಆದ್ರೆ ಗೊತ್ತಿದ್ದು ತಪ್ಪು ಮಾಡಿರೋದಕ್ಕೆ ಕ್ಷಮೆ ಇಲ್ಲ. ಆದ್ರೂ ಈ ಚಿನ್ನದ ಹುಡುಗಿಯರ ಓಟ ಇವತ್ತಿಗೂ ಕಣ್ಣ ಮುಂದೆ ಒಂದು ಕ್ಷಣಹಾದು ಹೋಗುತ್ತೆ.. ಚಿನ್ನದ ಪದಕ್ಕಾಗಿ ಚಿರತೆಯಂತೆ ಓಡುತ್ತಿದ್ದ ಈ ಗೋಲ್ಡನ್‌ ಗಲ್ರ್ಸ್‌ ಈಗ ನೆನಪು ಅಷ್ಟೇ..ಯಾಕಂದ್ರೆ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಓಡುವ ಅವಕಾಶವನ್ನೇ ಕಳೆದುಕೊಂಡಿದ್ದರೆ. ಎಂಥಾ ದುರಂತ ಅಲ್ವಾ.. ಸನತ್ ರೈ ಸ್ಪೋಟ್ರ್ಸ್‌ ಬ್ಯೂರೋ ಸಮಯ ನ್ಯೂಸ್‌

ಲೈಟ್ನಿಂಗ್‌ ಸ್ಟಾರ್‌ ಉಸೇನ್‌ ಬೋಲ್ಟ್‌...

ವಿಶ್ವ ಅಥ್ಲೆಟಿಕ್ ರಂಗದ ಸುನಾಮಿ... ಚಿರತೆಯನ್ನ ನಾಚಿಸುವಂತಹ ಓಟ... ಗಂಟೆಗೆ 37 ಕಿಲೋ ಮೀಟರ್‌ ವೇಗದಲ್ಲಿ ಓಡುವ ಮಾನವ... ಅಭಿಮಾನಿಗಳ ಪಾಲಿನ ನೆಚ್ಚಿನ ಲೈಟ್ನಿಂಗ್‌ ಸ್ಟಾರ್‌.. ಶರವೇಗದ ಸರದಾರ... ಉಸೇನ್‌ ಸೇಂಟ್‌ ಲಿಯೋ ಬೋಲ್ಟ್‌... ಹೌದು, ಉಸೇನ್‌ ಬೋಲ್ಟ್‌ ಓಟವೇ ಅಂತಹುದ್ದು. ಒಂದು ಕ್ಷಣ ಇಡೀ ಜಗತ್ತನ್ನೇ ತನ್ನತ್ತ ಸೆಳೆಯುವ ಮಾಂತ್ರಿಕತೆ ಇದೆ. ಅಷ್ಟೇ ಅಲ್ಲ, ಉಸೇನ್‌ ಓಡ್ತಾರೆ ಅಂದ್ರೆ ಕ್ರೀಡಾಂಗಣವೇ ಭರ್ತಿಯಾಗುತ್ತೆ. ಜತೆಗೆ ಉಸೇನ್‌... ಉಸೇನ್‌… ಉಸೇನ್‌ ಅನ್ನೋ ಕೂಗು ಪ್ರತಿಧ್ವನಿಯಾಗಿ ಕೇಳಿ ಬರುತ್ತೆ. ಯಾಕಂದ್ರೆ, ಬೋಲ್ಟ್‌, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗುರಿ ತಲುಪುವ ಮಾನವ ರಾಕೆಟ್‌. ಈ ರಾಕೆಟ್‌ ಮಾನವನ ಓಟವನ್ನ ಕಣ್ಣು ತುಂಬಿಕೊಳ್ಳಬೇಕು ಅನ್ನೋ ತುಡಿತ ಕ್ರೀಡಾಭಿಮಾನಿಗಳಲ್ಲಿರುತ್ತೆ. ಹಾಗೇ, ಉಸೇನ್‌ ಬೋಲ್ಟ್‌ ಕೂಡ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುತ್ತಾರೆ. ಇನ್ನು, ಅಭಿಮಾನಿಗಳತ್ತ ಬಿಲ್ಲು ಬಿಡುವ ಶೈಲಿಯಲ್ಲಿ ಗೆಲುವಿನ ಸಂಭ್ರಮವನ್ನ ಹಂಚಿಕೊಳ್ಳುವ ಬೋಲ್ಟ್‌ ಸ್ಟೈಲ್ಲೇ ಒಂಥರಾ ಡಿಫರೆಂಟ್‌. ಅಂದ ಹಾಗೇ ಉಸೇನ್‌ ಬೋಲ್ಟ್‌ ಜಗತ್ತಿನ ವೇಗದೂತನಾಗುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಜಮೈಕಾದ ಟ್ರೆಲ್ವಾನಾ ಪಟ್ಟಣದ ಹುಡುಗ ಉಸೇನ್‌ ಬೋಲ್ಟ್‌. ಅಪ್ಪ ವೆಲ್ಲೆಸ್ಲಿ ಬೋಲ್ಟ್‌, ಅಮ್ಮ ಜೆನ್ನಿಫರ್‌‌ ಬೋಲ್ಟ್‌.. ದಿನಸಿ ಅಂಗಡಿಯನ್ನಿಟ್ಟು ಕೊಂಡು ಸಂಸಾರ ಸಾಗಿಸುತ್ತಿದ್ರು. ಅಣ್ಣ –ತಂಗಿಯ ಜತೆ ಬೆಳೆದ ಹುಡುಗ ಉಸೇನ್‌ ಬೋಲ್ಟ್‌ ಗೆ ಕ್ರಿಕೆಟ್‌ ಅಂದ್ರೆ ಪಂಚ ಪ್ರಾಣ. ಅದ್ರಲ್ಲೂ ಪಾಕಿಸ್ಥಾನ ತಂಡದ ಅಭಿಮಾನಿಯಾಗಿದ್ದ ಉಸೇನ್‌ಗೆ ವಕಾರ್‌ ಯೂನಸ್ ಅವ್ರ ಪಕ್ಕಾ ಅಭಿಮಾನಿ. . ಹೀಗೆ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಬೋಲ್ಟ್‌ ಅಂಗಣದಲ್ಲಿ ಮಿಂಚಿನಂತೆ ಓಡುತ್ತಿದ್ರು. ಇದನ್ನ ಗಮನಿಸಿದ ಕ್ರಿಕೆಟ್‌ ಕೋಚ್‌ ಟ್ರ್ಯಾಕ್‌ ಆಂಡ್‌ ಫಿಲ್ಡ್‌ ನತ್ತ ಗಮನಹರಿಸುವಂತೆ ಸಲಹೆ ನೀಡಿದ್ರು. ಇದ್ರಿಂದ ಶಾಲಾ ಕ್ರೀಡಾಕೂಟಗಳಲ್ಲಿ ಬೋಲ್ಟ್‌ ವೇಗದ ಓಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ರು. ಆದ್ರೆ ಬೋಲ್ಟ್‌ ಗೆ ಇದು ಇಷ್ಟವಿರಲಿಲ್ಲ. ಅಪ್ಪ- ಅಮ್ಮನ ಒತ್ತಾಯಕ್ಕಾಗಿ ಓಡುತ್ತಿದ್ರು. ಆದ್ರೂ ಜಮೈಕಾದಲ್ಲಿ 200 ಮೀಟರ್‌ಮತ್ತು 400 ಮೀಟರ್‌ ಓಟಗಳಲ್ಲಿ ಮಿಂಚು ಹರಿಸಿದ ಬೋಲ್ಟ್‌ 2001ರಲ್ಲಿ ವಿಶ್ವ ಯೂತ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ರು. ಆದ್ರೆ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಬೋಲ್ಟ್‌, 2002ರ ವಿಶ್ವ ಯೂತ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಬೀಗಿದ್ರು. ನಂತ್ರ ಹಿಂತಿರುಗಿ ನೋಡಲೇ ಇಲ್ಲ. ಉಸೇನ್‌ ಓಟಕ್ಕೆ ಮನಸೋತ ಪ್ರತಿಷ್ಠಿತ ಪ್ಯೂಮಾ ಕಂಪೆನಿ ಪ್ರಾಯೋಜಕತ್ವ ಕೂಡ ನೀಡಿತ್ತು. 17ರ ಹರೆಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲೇ ಸುದ್ದಿ ಮಾಡಿದ ಉಸೇನ್‌, ಅಥೆನ್ಸ್‌ ಒಲಿಂಪಿಕ್ಸ್‌ನ ವೇಗದೂತನಾಗುತ್ತಾರೆ ಅಂತಲೇ ಭವಿಷ್ಯ ನುಡಿಯಲಾಗಿತ್ತು. ಆದ್ರೆ ಯಶಸ್ಸಿನ ಆಮಲು ಬೋಲ್ಟ್ ಅವ್ರನ್ನ ಅಡ್ಡ ದಾರಿ ಹಿಡಿಯುವಂತೆ ಮಾಡಿತ್ತು. ಪಾರ್ಟಿ, ಡಾನ್ಸ್‌, ಶೋಕಿ ಜೀವನ ಸಾಗಿಸುತ್ತಿದ್ದ ಬೋಲ್ಟ್‌ ಗಾಯದ ಸಮಸ್ಯೆಗೂ ತುತ್ತಾದ್ರು. ಇದ್ರಿಂದ ಅಥೆನ್ಸ್‌ ಒಲಿಂಪಿಕ್ಸ್‌ ನಲ್ಲಿ ಗಾಯದಿಂದ ಚೇತರಿಸಿಕೊಳ್ಳದೇ ಕಣಕ್ಕಿಳಿದ್ರು. ಪರಿಣಾಮ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ರು. ಇದು ಬೋಲ್ಟ್‌ ಅವ್ರನ್ನ ಘಾಸಿಗೊಳಿಸುವಂತೆ ಮಾಡಿತ್ತು. ಸೋಲು ಒಪ್ಪಿಕೊಳ್ಳಲು ರೆಡಿ ಇಲ್ಲದ ಉಸೇನ್‌ ಬದುಕಿನಲ್ಲಿ ಸಾಕಷ್ಟು ಬದಲಾದ್ರು. ಅಥ್ಲೆಟಿಕ್ಸ್‌ ತನ್ನ ಉಸಿರು ಅಂತ ನಂಬಿಕೊಂಡ್ರು. ನೂರು ಮತ್ತು 200 ಮೀಟರ್ ಓಟಗಳಲ್ಲಿ ತ್ರಿವಿಕ್ರಮನಾಗಬೇಕು ಅಂತ ಪಣತೊಟ್ರು. ಅದಕ್ಕಾಗಿ ಫಿಟ್ಜ್‌ ಕೊಲೆಮನ್‌ ಗರಡಿಯಲ್ಲಿ ಪಳಗಿದ್ರು. ಸುಸ್ತಾಗುವಷ್ಟು ಅಭ್ಯಾಸ ನಡೆಸುತ್ತಿದ್ದ ಬೋಲ್ಟ್‌ ತನ್ನ ವೇಗವನ್ನ ಹೆಚ್ಚಿಸಿಕೊಂಡ್ರು. ಸ್ವಿಮ್ಮಿಂಗ್ ಫೂಲ್‌ನಲ್ಲಿ ಓಡ್ಕೊಂಡು, .ಸೊಂಟಕ್ಕೆ ಟಯರ್‌ ಕಟ್ಕೊಂಡು ಅಭ್ಯಾಸ ನಡೆಸುತ್ತಿದ್ದ ಬೋಲ್ಟ್‌ ಜಿಮ್‌ನಲ್ಲೂ ಬೆವರಿಳಿಸಿದ್ರು. ಹೀಗೆ ಕಠಿಣ ಅಭ್ಯಾಸ ಮಾಡ್ಕೊಂಡು ಮಹತ್ವದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಬೀಜಿಂಗ್‌ ಒಲಿಂಪಿಕ್ಸ್‌ ಗೆ ರೆಡಿಯಾದ್ರು. ನಂತ್ರ ನಡೆದದ್ದು ಬರೀ ಇತಿಹಾಸ.. ಬೀಜಿಂಗ್‌ ಒಲಿಂಪಿಕ್ಸ್‌ ನ ನೂರು ಮತ್ತು 200 ಮೀಟರ್‌ ಓಟಗಗಳಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದು ಇತಿಹಾಸ ಬರೆದ್ರು. ಬಳಿಕ, ಬೋಲ್ಟ್‌ ಅವ್ರ ಜವಾಬ್ದಾರಿ ಹೆಚ್ಚಾಯ್ತು. ಪ್ರತಿಯೊಂದು ಕ್ರೀಡಾಕೂಟದ ಕೂಡ ಪ್ರತಿಷ್ಠೆಯ ಕಣವಾಗಿತ್ತು. ಅದ್ರಲ್ಲೂ 2009ರ ಬರ್ಲಿನ್‌ ಕ್ರೀಡಾಕೂಟದಲ್ಲಿ ಉಸೇನ್‌ ಬೋಲ್ಟ್‌ ನೂರು ಮೀಟರ್‌ ಓಟವನ್ನ9.58 ಸೆಕೆಂಡ್‌ಹಾಗೂ 200 ಮೀಟರ್‌ ಓಟವನ್ನ 19.19 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಿದ್ರು. ಹೀಗೆ 2011ರ ತನಕ ಉಸೇನ್‌ ಬೋಲ್ಟ್‌ ಸೋಲಿಲ್ಲದ ಸರದಾರನಂತೆ ಮೆರೆದಾಡಿದ್ರು. ಮತ್ತೊಂದೆಡೆ, ಉಸೇನ್‌ ಬೋಲ್ಟ್‌ ಲಂಡನ್‌ ಒಲಿಂಪಿಕ್ಸ್‌ ಮೇಲೂ ಚಿತ್ತವನ್ನಿಟ್ಟಿದ್ರು. ಒಡನಾಡಿ ಯೊಹಾನ್‌ ಬ್ಲೇಕ್‌ ಜತೆ ಅಭ್ಯಾಸ ಕೂಡ ನಡೆಸುತ್ತಿದ್ರು. ಇನ್ನೇನೂ ಲಂಡನ್‌ ಒಲಿಂಪಿಕ್‌ ಸನೀಹವಾಗುತ್ತಿದ್ದಂತೆ ಬೋಲ್ಟ್‌ ಆಘಾತ ಅನುಭವಿಸಿದ್ರು. ಡಿಯಾಗೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ ನೂರು ಮೀಟರ್‌ ಓಟದಲ್ಲಿ ಬೋಲ್ಟ್‌ ಫೌಲ್‌ ಸ್ಟಾರ್ಟ್‌ ಮಾಡಿದ್ರು. ಪರಿಣಾಮ ಸ್ಪರ್ಧೆಯಿಂದಲೇ ಬೋಲ್ಟ್‌ ಹೊರಬಿದ್ರು. ಇದ್ರಿಂದ ಹತಾಶನಾದ ಉಸೇನ್‌ ಬೋಲ್ಟ್‌ 15 ನಿಮಿಷಗಳ ಕಾಲ ಎಲ್ಲಿದ್ರೂ ಎಂಬುದು ಯಾರಿಗೂ ಗೊತ್ತೇ ಆಗಲಿಲ್ಲ. ಅಷ್ಟೇ ಅಲ್ಲ, ತನ್ನ ಒಡನಾಡಿ, ಗೆಳೆಯ ಯೋಹಾನ್‌ ಬ್ಲೇಕ್‌ ಚಿನ್ನ ಗೆದ್ರೂ ಅದನ್ನ ಬೋಲ್ಟ್‌ ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ಯೋಹಾನ್‌ ಅವ್ರನ್ನ ಚುಡಾಯಿಸಿಕೊಂಡು ತನ್ನ ನೋವನ್ನ ಮರೆಯುವಂತೆ ಮಾಡ್ತಾ ಇದ್ರು. ಮತ್ತೊಂದೆಡೆ, 200 ಮೀಟರ್‌ ಓಟದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ರೂ ನೂರು ಮೀಟರ್‌ ಓಟದ ಸೋಲು ಮಾತ್ರ ಅವ್ರನ್ನ ಕಾಡುತ್ತಲೇ ಇತ್ತು. ಒಟ್ಟಿನಲ್ಲಿ ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಉಸೇನ್‌ ಬೋಲ್ಟ್‌ ಸುಲಭವಾಗಿ ಚಿನ್ನ ಗೆಲ್ಲುವುದಿಲ್ಲ ಅಂತ ಅಂದುಕೊಂಡವರಿಗೆಲ್ಲಾ ಈಗ ಉತ್ತರ ನೀಡಿದ್ದಾರೆ. 100 ಮೀಟರ್‌ ಓಟದಲ್ಲಿ ಜಿದ್ದಾಜಿದ್ದಿನ ಪೈಪೋಟಿಯ ನಡುವೆ ಚಿನ್ನ ಗೆದ್ರೆ, 200 ಮೀಟರ್‌ ಓಟ ಹಾಗೂ 400 ಇಂಟ್‌ 100 ಮೀಟರ್‌ ರಿಲೆನಲ್ಲಿ ಸುಲಭವಾಗಿ ಮೊದಲ ಸ್ಥಾನ ಪಡೆದು ಒಲಿಂಪಿಕ್ಸ್‌ ನಲ್ಲಿ ದಾಖಲೆಯನ್ನೇ ಬರೆದ್ರು. ಸತತ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಆರು ಚಿನ್ನ ಗೆದ್ದ ಮೊದಲ ಅಥ್ಲೀಟ್‌ ಅನ್ನೋ ಹೆಗ್ಗಳಿಕೆ ಉಸೇನ್‌ ಬೋಲ್ಟ್‌ ಅವ್ರದ್ದು. ಅದೇನೇ ಇರಲಿ... ಉಸೇನ್‌ ಬೋಲ್ಟ್‌ ಮತ್ತು ಅವ್ರ ಸಾಧನೆಯನ್ನ ಯಾರಿಗೂ ಹೊಲಿಕೆ ಮಾಡಲು ಸಾಧ್ಯವಿಲ್ಲ. ಜಮೈಕಾದ ಬಡ ಕುಟುಂಬದ ಹುಡುಗನೊಬ್ಬ ಶರವೇಗದ ಸರದಾರನಾದ ರಿಯಲ್‌ ಸ್ಟೋರಿ ಯುವ ಅಥ್ಲೀಟ್‌ಗಳಿಗೆ ದಾರಿದೀಪ. ಯಶಸ್ಸಿನ ಆಮಲಿನಿಂದ ಅಡ್ಡದಾರಿ ಹಿಡಿದ್ರೂ ಅದ್ರಿಂದ ಬುದ್ದಿ ಕಲಿತುಕೊಂಡಿರುವ ಉಸೇನ್‌ ಬೋಲ್ಟ್‌ ಯಶಸ್ಸಿನ ಶಿಖರವೇರಿದ್ದಾರೆ. ಈಗ ಏನಿದ್ರೂ ಉಸೇನ್‌ ಬೋಲ್ಟ್‌ ಗೆ ಉಸೇನ್‌ ಬೋಲ್ಟೇ ಪ್ರತಿಸ್ಪರ್ಧಿ. ಸನತ್ ರೈ ಸ್ಪೋಟ್ರ್ಸ್‌ ಬ್ಯೂರೋ ಸಮಯ ನ್ಯೂಸ್‌

Tuesday, March 13, 2012

ಹೊಸ ಲುಕ್‌... ಹೊಸ ಗೆಟಪ್‌....

ಸಚಿನ್ 99ನೇ ಶತಕ ದಾಖಲಿಸಿ ಒಂದು ವರ್ಷ ಕಳೆದಿದೆ. 2011ರ ಮಾರ್ಚ್‌ 12ರಂದು ದಕ್ಷಿಣ ಆಫ್ರಿಕಾ ವಿರುದ್ಧ 111 ರನ್‌ ದಾಖಲಿಸಿದ ನಂತ್ರ ಸಚಿನ್ ಆಗಸವನ್ನ ದಿಟ್ಟಿಸಿ ನೋಡಿಲ್ಲ. ಅಭಿಮಾನಿಗಳತ್ತ ಬ್ಯಾಟ್‌ ಬೀಸಿ ಶತಕದ ಸಂಭ್ರಮವನ್ನ ಆಚರಿಸಿಕೊಂಡಿಲ್ಲ. ಮಹಾ ಶತಕವಂತೂ ಮರೀಚಿಕೆಯಾಗಿಬಿಟ್ಟಿದೆ. ಕ್ರಿಕೆಟ್‌ ಅಭಿಮಾನಿಗಳು ಹಾಗೂ ಕ್ರಿಕೆಟ್‌ ಪಂಡಿತರು ಮಾಡುವ ಟೀಕೆಗಳು ಅಷ್ಟಿಷ್ಟಲ್ಲ. ಇದ್ರಿಂದ ಸಚಿನ್‌ ಕೂಡ ಬೇಸೆತ್ತು ಹೋಗಿದ್ದಾರೆ.
ಹೌದು, 99 ಶತಕ ದಾಖಲಿಸಿರುವ ಸಚಿನ್‌ಗೆ ಒಂದು ಶತಕ ದಾಖಲಿಸಲು ಸಾಧ್ಯವಿಲ್ವಾ.. 23 ವರ್ಷಗಳ ಅನುಭವ ಎಲ್ಲಿಗೆ ಹೋಯ್ತು... ಮಾಸ್ಟರ್‌ ಅಷ್ಟೊಂದು ಟೆನ್ಷನ್‌ ಆಗಿಬಿಟ್ಟಿದ್ದಾರಾ... ಸಚಿನ್‌ಗೇ ಏನಾಗಿದೆ... ವಯಸ್ಸು ಅಡ್ಡಿಯಾಗುತ್ತಿದೆಯಾ...ಫಿಟ್‌ ನೆಸ್‌ ಇಲ್ವಾ.. ಬ್ಯಾಟಿಂಗ್ ಶಕ್ತಿಯನ್ನ ಕಳೆದುಕೊಂಡಿದ್ದಾರಾ... . ಛೇ...ಛೇ.. ಕ್ರಿಕೆಟ್‌ ಮಾಸ್ಟರ್‌ಗೆ ಹಿಂಗೆಲ್ಲಾ ಆಗುತ್ತಾ... ನಂಬುವುದು ತುಸು ಕಷ್ಟ...
ಅದೇನೇ ಇರಲಿ... ಸಚಿನ್ ಶತಕಕ್ಕಾಗಿ 12 ತಿಂಗಳ ಅಜ್ಞಾತವಾಸ ಮುಗಿಸಿದ್ದಾರೆ. 366ನೇ ದಿನ ಮೀರ್‌ಪುರ್‌ನಲ್ಲಿ ಸಚಿನ್ ತೆಂಡುಲ್ಕರ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶತಕದ ಗ್ರಹಣದಿಂದ ಹೊರಬರಲು ವಾಮನಮೂರ್ತಿ ತನ್ನ ಹೇರ್‌ಸ್ಟೈಲ್‌ ಅನ್ನೇ ಚೇಂಚ್‌ ಮಾಡ್ಕೊಂಡಿದ್ದಾರೆ. ಹೌದು, ತಲೆ ಕೂದಲಿಗೆ ಕಲರ್‌ ಹಾಕೊಂಡು, ಹಿಂದುಗಡೆ ಚಿಕ್ಕ ಜುಟ್ಟು ಹಾಕೊಂಡ ಮಾಸ್ಟರ್‌ ಡಿಫರೆಂಟ್‌ ಲುಕ್‌ನಲ್ಲಿದ್ರು. .
ಆದ್ರೂ, ಸಚಿನ್ ಶತಕದ ಗ್ರಹಣದಿಂದ ಹೊರಬರಲಿಲ್ಲ. ಹೊಸ ಗೆಟಪ್‌ನಲ್ಲಿ ಅಂಗಣಕ್ಕಿಳಿದ್ರೂ ಸಚಿನ್‌ ಮಾತ್ರ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ರು. ಅಷ್ಟೇ ಅಲ್ಲ, ಸಚಿನ್‌ ಬ್ಯಾಟಿಂಗ್‌ ವೈಖರಿಯಲ್ಲಿ ಈ ಹಿಂದಿನಂತೆ ಗತ್ತು ಇರಲಿಲ್ಲ.. ಧಮ್ಮ್‌ ಇರಲಿಲ್ಲ.. ಯಾಕೋ ಅಳುಕಿನಿಂದಲೇ ಬ್ಯಾಟ್‌ ಮಾಡಿದಂತಿತ್ತು. ಜತೆಗೆ ಫುಲ್‌ಟಾಸ್‌ ಎಸೆತಕ್ಕೆ ಔಟಾದ ರೀತಿ ಕೂಡ ಅಚ್ಚರಿಯೂ ಆಗುತ್ತಿದೆ.
ಇನ್ನು, ಸಚಿನ್‌ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ ಅಂತ ತುಂಬಾನೇ ರೋಸಿ ಹೋಗಿದ್ದಾರೆ. ಯಾವಾಗಲೂ ಔಟ್‌ ಅದ ತಕ್ಷಣ ಅಂಪೈರ್‌ ತೀರ್ಮಾನಕ್ಕೂ ಕಾಯದೇ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ರು. ಆದ್ರೆ ಮಿರ್‌ಪುರ್‌ನಲ್ಲಿ ಸಚಿನ್ ಹಾಗೇ ಮಾಡಲಿಲ್ಲ. ಲಕ್ಮಲ್‌ ಅವ್ರ ಎಸೆತದಲ್ಲಿ ಜಯವರ್ಧನೆ ಕ್ಯಾಚ್‌ ಹಿಡಿದಾಗ ಸಚಿನ್‌ಗೆ ಯಾಕೋ ಅನುಮಾನ ಬಂದುಬಿಟ್ಟಿತ್ತು. ಇದ್ರಿಂದ ಮಾಸ್ಟರ್‌ ಥರ್ಡ್‌ ಅಂಪೈರ್‌ಗೆ ಮನವಿ ಸಲ್ಲಿಸಿದ್ರು. ಆದ್ರೂ ಏನೂ ಪ್ರಯೋಜನವಾಗಲಿಲ್ಲ. ಸಚಿನ್ ನಿರಾಸೆಯಿಂದಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು..
ಇದ್ರಿಂದಲೇ ತಿಳಿಯುತ್ತೆ...ಸಚಿನ್ ಒತ್ತಡಕ್ಕೆ ಸಿಲುಕಿದ್ದಾರೆ. ನೂರನೇ ಶತಕ ಅವ್ರನ್ನ ಬೆಂಬಿಡದೇ ಕಾಡುತ್ತಿದೆ. ಹೇಗಾದ್ರೂ ಮಾಡಿ ಶತಕ ದಾಖಲಿಸಿ ಎಲ್ಲಾ ಒತ್ತಡಗಳಿಂದ ಹೊರಬರಬೇಕು ಅನ್ನೋ ಹಂಬಲದಲ್ಲಿದ್ದಾರೆ. ಆದ್ರೆ ಯಾಕೋ ಕಾಲ ಕೂಡಿ ಬರ್ತಿಲ್ಲ. ಒಟ್ಟಾರೆ, ಸಚಿನ್‌ ಬಗ್ಗೆ ಏನು ಬೇಕಾದ್ರೂ ಮಾತಾಡಬಹುದು... ಶತಕ ಸಿಡಿಸಿಲ್ಲ. ಆಡಲು ಆಗುತ್ತಿಲ್ಲ...ಆಡಿದ್ದು ಸಾಕು... ವಿದಾಯ ಹೇಳಬೇಕು... ಹೀಗೆ ಮಾತನಾಡೋರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಆದ್ರೆ ತಾನು ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನ ಸಚಿನ್‌ ಡಿಸೈಡ್‌ ಮಾಡ್ತಾರೆ.. ಅಲ್ಲಿಯ ತನಕ ಕಾಯಲೇಬೇಕು... ಯಾಕಂದ್ರೆ ಇದು ದೇವ್ರ ಆಟ..
ಸನತ್‌ ರೈ

Saturday, February 25, 2012

ಮಾಸ್‌ ಡಾರ್ಲಿಂಗ್‌ ಗೆ ಏನಾಗೈತೆ...

ಡಾರ್ಲಿಂಗ್‌... ಯಾಕೀ ಈ ಮೌನ... ಏನ್‌ ಬೇಜಾರ್ ಆಗಿದ್ಯೋ ... ಸೆಂಚೂರಿ ಮೇಲೆ ಸೆಂಚೂರಿ ಹೊಡೆಯೋಕೆ ಆಗ್ತಾ ಇಲ್ಲ ಅಂತನಾ ... ಅದಕ್ಕೆನಂತೆ... ನಿಂಗೇ ಸೆಂಚೂರಿ ಬಾರಿಸೋದು ಅಷ್ಟೊಂದು ತ್ರಾಸ್‌ ಆಗೈತೆನೋ.. ಮತ್ತೆ ಅದ್ಹೆಂಗೇ 99 ಸೆಂಚೂರಿ ಹೋಡಿದಿ ನೀ...ಈಗ ಒಂದೇ ಒಂದು ಸೆಂಚೂರಿಗೆ ಹತ್ತು ಹನ್ನೊಂದು ತಿಂಗಳು ಕಾಯಿಸಿದ್ದೀ ನೋಡು... ನಂಗೂ ತುಂಬಾನೇ ಬೇಜಾರ್‌ ಆಗೈತೆ...
ಅಲ್ಲ ಬ್ರದರ್‌.. ನಿಂಗೆ ಅಷ್ಟೊಂದು ಪ್ರೆಶರ್‌ ಇದ್ಯೇನಾ . ಜತೆಗೆ ನರ್ವಸ್‌ ಬೇರೆ ಆಗ್ತಿದ್ದೀಯಾ... ಯಾಕ್‌ ಯಾಕೆ...ಹೀಗೆ.. ಅದನ್ನೆಲ್ಲಾ ತಡ್ಕೊಳ್ಳೋಕೆ ಆಗ್ತಾ ಇಲ್ವೇನೋ..ತುಂಬಾ ಚೆನ್ನಾಗಿ ಆಡ್ತಾ ಇರ್ತಿ... ಸಡನ್‌ ಆಗಿ ವಿಕೆಟ್‌ ಒಪ್ಪಿಸ್ತಾ ಇದ್ದೀಯಲ್ಲಾ.. ಏನಾಗೈತೆ ನಿಂಗೆ....
ಬಿಡು ಮಾಸ್ಟರ್‌... ನಿಂಗೆ ಇದೆಲ್ಲಾ ಹೊಸ್ದಾ . ಆರು ವರ್ಷಗಳ ಫ್ಲಾಷ್‌ ಬ್ಯಾಕ್‌ ಸ್ವಲ್ಪ ನೆನಪಿಸ್ಕೊ... ಹಿಂಗೆ ಒಂದು ಸೆಂಚೂರಿ ಹೊಡೆಯೊಕೆ ಎಷ್ಟೆಲ್ಲಾ ಕಷ್ಟ ಪಟ್ಟೆ... ಲಾಸ್ಟ್‌ ಗೂ ಹಠ ಬಿಟ್ಟಿಲ್ಲ ನೋಡು...ಆದ್ರೂ ನಿಂಗೆ ಸೆಂಚೂರಿ ಹೊಡೆಯೊಕೆ ಅಗಿಲ್ಲ. ಇನ್ನು ಆಗಲ್ಲ ಅಂತ ಕೊನೆಗೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿ ಗ್ರಹಚಾರಕ್ಕೆಲ್ಲಾ ಪರಿಹಾರ ಮಾಡ್ಕೊಂಡೆಯಲ್ಲ.. ಆಮೇಲೆ ಏನೂ ಗುರು.. ಸೆಂಚೂರಿ ಮೇಲೆ ಸೆಂಚುರಿ ಹೊಡಿದಿ.. ದಾಖಲೆ ಮೇಲೆ ದಾಖಲೆ ಬರೆದಿ... ಹಂಗೆ ಈ ಸಲನೂ ಒಂದು ಸಾರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡೋ..ಪ್ಲೀಸ್‌... ..
ನಿಂಗೆ ಯಾಕೆ ಇದನ್ನೆಲ್ಲಾ ಹೇಳ್ತಾ ಇದ್ದೀನಿ ಅಂದ್ರ ನಿನ್ನ ಬಗ್ಗೆ ಚಿಲ್ರೆಗಳೆಲ್ಲಾ ಬಾಯಿಗೆ ಬಂದಂತೆ ಮಾತಾಡ್ತಾರೆ. ಅದನ್ನೆಲ್ಲಾ ಕೇಳಿ ನನ್‌ ಹೃದಯಕ್ಕೆ ಚೂರಿ ಹಾಕಿದಂಗೆ ಆಗೈತೆ ಮಾಸ್ಟರ್‌... ಅಲ್ಲ.. ನಿನ್ನ ಸಾಮರ್ಥ್ಯದ ಬಗ್ಗೆ ಗೊತ್ತಿದ್ದು ಗೊತ್ತಿದ್ದೂ ಮಾತಡ್ತಾರೆ. ನಿಂಗೆ ವನ್‌ ಡೇ ಮ್ಯಾಚ್‌ ಆಡುವ ತಾಕತ್ತು ಈಗ ಇಲ್ಲಂತೆ.. ಇದಕ್ಕೆ ನಗಬೇಕೊ ಆಳಬೇಕೊ ಅಂತ ಗೊತ್ತಾಗ್ತಾ ಇಲ್ಲ...ಅವ್ರಿಗೇನೂ ಗೊತ್ತು.. ನೀನು ವಾಮನ ಮೂರ್ತಿಯಾದ್ರೂ ಬಲ ಭೀಮ ಅಂತ. . ಏನೋ ನಾಲ್ಕೈದು ಮ್ಯಾಚ್‌ಗಳಲ್ಲಿ ಫೆಲ್ಯೂರ್‌ ಅದೆ ಅಂತ ಹಿಂಗೆ ಎಲ್ಲಾ ಟೀಕೆ ಮಾಡೋದು ಸರೀನಾ ದೇವ್ರೂ...
ಇನ್ನು ಆ ಕ್ಯಾಪ್ಟನ್‌ ಧೋನಿಗೆ ಏನಾಗೈತೆ... ಅದೇನೋ ರೋಟೇಷನ್‌ ಪಾಲಿಸಿ ಅಂತೆ.. ಯಂಗ್‌ಸ್ಟಾರ್ಸ್‌ಗೆ ಚಾನ್ಸ್‌ ಕೋಡೋಕೆ ಅಂತ ನಿನ್ನ ಮೇಲೆನೇ ಸವಾರಿ ಮಾಡ್ತಾನಾ .. ಅವ ಕ್ಯಾಪ್ಟನ್‌ ಆಗೋಕೆ ನೀನೇ ಕಾರಣ ಅಂತ ಗೊತ್ತಿದ್ರೂ ಅಷ್ಟು ಬೇಗ ಮರೆತು ಬಿಟ್ನಾ... ವಸಿ ಬುದ್ದಿ ಹೇಳೋಕೆ ಆಗೊಲ್ವಾ ನಿಂಗೆ... ನೀನೇನೋ ಮೈನ್‌ ಟೂರ್ನಿ ಅಂತ ವನ್‌ ಡೇ ಮ್ಯಾಚ್‌ ಆಡ್ತಾ ಇದ್ದೀ...ಆದ್ರೆ ಎಲ್ರೂ ಅಂದುಕೊಂಡಿದ್ದಾರೆ ನೀ ಸೆಂಚೂರಿಗೋಸ್ಕರ ಆಡ್ತಾ ಇದ್ದೀ ಅಂತ...ಒಂದು ವೇಳೆ ಆಡಿದ್ರೂ ತಪ್ಪೇನು...
ಮತ್ತೆ ನಮ್‌ ಮಾಜಿ ಕ್ರಿಕೆಟಿಗರು ನೀ ವಿದಾಯ ಹೇಳಬೇಕು ಅಂತಾರೆ... ಆದ್ರೆ ಅವ್ರ ಹಿಸ್ಟ್ರಿ ನಮಗೇನೂ ಗೊತ್ತಿಲ್ವಾ . ಫಾರ್ಮ್‌ನಲ್ಲಿ ಇಲ್ಲದಿದ್ರೂ ಅವ್ರೆಲ್ಲಾ ಆಡಬೇಕು ಅಂತಿದ್ರು. ದಾಖಲೆ ಬರೆಯೋಕೆ ಅಂತ ಟೀಮ್‌ನಲ್ಲಿದ್ರು... ಅವಾಗ ಎಲ್ಲಾ ಯಂಗ್‌ ಸ್ಟಾರ್ಸ್‌ಗೆ ಚಾನ್ಸ್‌ ಕೊಡಬೇಕು ಅಂತ ನೆನಪಿಗೆ ಬಂದಿರಲಿಲ್ವಾ.. ಎಲ್ಲಾ ಎಲ್ಲ ಅಷ್ಟೇ ಮಾಸ್ಟರ್‌.. ಅವರವರ ಭಾವಕ್ಕೆ ಅವರವರ ತಾಳಕ್ಕೆ.. ಕುಣಿತಾರೆ..
ಬಾಸ್‌ ನೀ ಏನ್‌ ಟೆನ್ಷನ್ ಮಾಡ್ಕೊಬೇಡ... ನಿಂಗೆ ನಿನ್ನ ಮೇಲೆ ನಂಬಿಕೆ ಇದೆಯಲ್ವಾ ಅಷ್ಟು ಸಾಕು...ನೀ ಯಾರತ್ರನೂ ಕೇಳ್ಕೊಂಡು ಕ್ರಿಕೆಟ್‌ ಆಡೋಕೆ ಬಂದಿಲ್ಲ... ಕಷ್ಟಪಟ್ಟೆ...ಇಷ್ಟನೂ ಪಟ್ಟೇ... ದಾಖಲೆ ಮೇಲೆ ದಾಖಲೆ ಬರೆದೆ.. ಪ್ರೀತಿಯಿಂದ ಆಡ್ತಾ ಇದ್ದಿ... ಆದ್ರೆ ಅಭಿಮಾನಿಗಳು ಬೈಯ್ತಾರೆ ಅಂತ ಬೇಜಾರ್‌ ಮಾಡ್ಕೊಬೇಡ... ಯಾಕಂದ್ರೆ ನಿನ್ನ ಆಟಕ್ಕೆ ಮನಸೋತ ಅಭಿಮಾನಿಗಳು ನಿಂಗೆ ದೇವ್ರು ಅಂತ ಕರೆದ್ರು. ಈಗ ಅವ್ರ ನಿರೀಕ್ಷೆಗೆ ತಕ್ಕ ಆಟ ನಿನ್ನಿಂದ ಬರ್ತಿಲ್ಲ. ಅದಕ್ಕಾಗಿ ಸಿಟ್ಟು ಮಾಡ್ಕೊಂಡ್ರೂ ಅವರಿಗೂ ನಿನ್‌ ಮೇಲೆ ಪ್ರೀತಿ ಇದೆ ಕಣೋ...
ಸಚಿನ್‌ ಇವತ್ತು ನೀ ಸೆಂಚೂರಿ ಹೋಡಿತಿ ಅನ್ನೋ ನಂಬಿಕೆ, ನಿರೀಕ್ಷೆ ಇದೆ. ಮಿಸ್‌ ಮಾಡ್ಕೊಬೇಡ... ನನ್ನಂತೆ ಕೋಟಿ ಕೋಟಿ ಕಂಗಳು ನಿನ್ನ ಮಹಾ ಶತಕಕ್ಕಾಗಿ ಕಾಯ್ತ ಇದ್ದಾರೆ.. ಕ್ರಿಕೆಟ್‌ ದೇವ್ರ ಮುಕುಟಕ್ಕೆ ಶತಕಗಳ ಶತಕದ ಗರಿ ಸೇರುತ್ತೆ ಅನ್ನೋ ಆಶಾಭಾವನೆಯೊಂದಿಗೆ.... ಇಂತಿ ನಿನ್ನ ಅಭಿಮಾನಿ...
ಸನತ್ ರೈ

Friday, February 24, 2012

ಪವರ್‌ ಕೀ ಬಾತ್‌ ಹೈ

ಇದು ಕಾಲ್ಪನಿಕ ಸ್ಟೋರಿಯಲ್ಲ.. ಬದಲಾಗಿ ನಮ್ಮ ಕಣ್ಣೆದುರೇ ನಡೆಯುತ್ತಿರುವ ಸತ್ಯ ಸಂಗತಿಗಳು... ಹೌದು, ಇದು ಪಕ್ಕಾ ಅಧಿಕಾರದ ದಾಹ... ಇದಕ್ಕಾಗಿ ಹಾವು-ಮುಂಗೂಸಿನಂತೆ ಕಚ್ಚಾಟ ನಡೆಸುತ್ತಾರೆ. ಅಷ್ಟೇ ಯಾಕೆ ಒಡನಾಡಿಗಳೇ ಶತ್ರುಗಳಾಗಿದ್ದಾರೆ. ಜತೆ ಜತೆಯಾಗಿ, ನಗು ನಗುತ್ತಾ ಸಂಭ್ರಮವನ್ನ ಹಂಚಿಕೊಂಡವರು ಇಂದು ನಾನೊಂದು ತೀರಾ ನೀನೊಂದು ತೀರಾ ಆಗಿಬಿಟ್ಟಿದ್ದಾರೆ.

ಕ್ರಿಕೆಟ್‌ನಲ್ಲೂ ಕಿರಿಕಿರಿ... ರಾಜಕೀಯದಲ್ಲೂ ಪಿರಿಪಿರಿ
ಸಬ್ಜೆಕ್ಟ್‌ ಒಂದೇ... ಅಖಾಢ ಬೇರೆ ಬೇರೆ
ಅಲ್ಲಿ ಧೋನಿ - ಸೆಹ್ವಾಗ್‌ ಫೈಟಿಂಗ್‌
ಇಲ್ಲಿ ಬಿಎಸ್‌ವೈ- ಡಿವಿಎಸ್‌ ಕೋಲ್ಡ್‌ ವಾರ್‌
ಅಧಿಕಾರಕ್ಕಾಗಿ ನಡೆಯುತ್ತಿದೆ ಶೀತಲ ಸಮರ

ಎ ಪವರ್‌ ಕೀ ಬಾತ್‌ ಹೈ

ನೋ ಡೌಟ್‌.. ಇದು ಪವರ್‌ ಕೀ ಬಾತ್‌ ಹೇ ... ಹೌದು, ಸೇಮ್‌ ಟೂ ಸೇಮ್‌.. ಆದ್ರೆ, ಇಲ್ಲಿ ಸಬ್ಜೆಕ್ಟ್‌ ಒಂದೇ.. ಅಖಾಢ ಮಾತ್ರ ಬೇರೆ ಬೇರೆ.. ರಾಜ್ಯ ಬಿಜೆಪಿಯಲ್ಲಿ ಮತ್ತು ಟೀಮ್ ಇಂಡಿಯಾದಲ್ಲಿ ನಡೆಯುತ್ತಿರುವುದು ಅಧಿಕಾರದ ಶೀತಲ ಸಮರ.
ಆಸ್ಟ್ರೇಲಿಯಾದಲ್ಲಿ ಧೋನಿ ಮತ್ತು ಸೆಹ್ವಾಗ್‌ ಫೈಟಿಂಗ್‌ ಮಾಡುತ್ತಿದ್ರೆ, ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡರ ನಡುವಿನ ಕೋಲ್ಡ್‌ ವಾರ್‌ ಈಗ ಹಾಟ್‌ ಹಾಟ್‌ ಆಗಿದೆ.

ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ ಹಾಗೇ ಟೀಮ್ ಇಂಡಿಯಾದ ಆಂತರಿಕ ಕಲಹ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ. ಇದ್ರಿಂದ ಕಂಗೆಟ್ಟಿರುವ ಬಿಸಿಸಿಐ ಮತ್ತು ಬಿಜೆಪಿ ಹೈಕಮಾಂಡ್‌ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.

ಕಚ್ಚಾಡಿದ್ದು ಸಾಕು..... ಆಟ ಆಡಿ...
ಬೀದಿ ಜಗಳ ಮಾಡಬೇಡಿ... ಉತ್ತಮಆಡಳಿತ ನಡೆಸಿ

ಕಚ್ಚಾಡಿದ್ದು ಸಾಕು... ಆಟ ಆಡಿ…. ಅಂತ ಟೀಮ್ ಇಂಡಿಯಾಗೆ ಬಿಸಿಸಿಐ ಕಟ್ಟಾಜ್ಞೆ ಮಾಡಿದ್ರೆ, ಬೀದಿ ಜಗಳ ಮಾಡಬೇಡಿ... ಉತ್ತಮ ಆಡಳಿತ ನಡೆಸಿ ಅಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಜೆಪಿ ಹೈಕಮಾಂಡ್‌ ಆದೇಶ ಮಾಡಿದೆ. ಆದ್ರೆ ಬಿಸಿಸಿಐನ ಮಾತಿಗೆ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕ ಕಿಮ್ಮತ್ತಿನ ಬೆಲೆಯನ್ನೂ ನೀಡಲಿಲ್ಲ. ಹಾಗೇ ಬಿಜೆಪಿ ಹೈಕಮಾಂಡ್‌ ಆದೇಶಕ್ಕೆ ಯಡಿಯೂರಪ್ಪನವರು ಮುನಿಸಿಕೊಂಡ್ರೆ, ಸದಾನಂದ ಗೌಡರ ಮುಖದಲ್ಲಿರುವ ನಗು ಮಾಯವಾಗಿದೆ.

ಶುಕ್ರವಾರ ಮುಹೂರ್ತ ಫಿಕ್ಸ್‌...

ಈ ನಡುವೆ, ಟೀಮ್ ಇಂಡಿಯಾ ಕಿರಿಕಿರಿ ಮತ್ತು ರಾಜಕೀಯ ಪಿರಿಪಿರಿಗೆ ಇತಿಶ್ರೀ ಹಾಡಲು ಶುಕ್ರವಾರವೇ ಮುಹೂರ್ತ ಫಿಕ್ಸ್‌ ಆಗಿತ್ತು. ಅದ್ರಲ್ಲೂ ಬಿಸಿಸಿಐ ದಣಿಗಳು ಟೀಮ್ ಇಂಡಿಯಾದ ಹಿರಿಯ ಆಟಗಾರರ ಜತೆ ಮಾತುಕತೆ ನಡೆಸಿದ್ರು. ಅಲ್ಲದೆ, ಶುಕ್ರವಾರ ಧೋನಿ ಮತ್ತು ಸೆಹ್ವಾಗ್‌ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದ್ರೆ ಸೆಹ್ವಾಗ್‌ ಮತ್ತು ಧೋನಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ತಂಡದ ಮ್ಯಾನೇಜರ್‌ ಮೀಡಿಯೇಟರ್‌ ಆಗಿ ಕಾಣಿಸಿಕೊಂಡ್ರು.

ತಂಡದಲ್ಲಿ ಒಡಕಿಲ್ಲ.. ಭಿನ್ನಾಭಿಪ್ರಾಯವಿದೆ

ಟೀಮ್ ಇಂಡಿಯಾದಲ್ಲಿ ಒಡಕಿಲ್ಲ.. ಆದ್ರೆ ಧೋನಿ ಮತ್ತು ಸೆಹ್ವಾಗ್‌ ನಡುವೆ ಭಿನ್ನಾಭಿಪ್ರಾಯವಿದೆ. ಇದು ಸದ್ಯದಲ್ಲೇ ಬಗೆಹರಿಯಲಿದೆ. ತಂಡ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಅಂತ ಟೀಮ್ ಇಂಡಿಯಾದ ಟೀಮ್ ಮ್ಯಾನೇಜರ್‌ ಹಾರಿಕೆಯ ಉತ್ತರ ನೀಡಿ ವಿವಾದದಿಂದ ಜಾರಿಕೊಂಡ್ರು.

ಅಡ್ಡಗೋಡೆಯ ಮೇಲೆ ದೀಪ

ಇನ್ನು, ರಾಜಕೀಯ ಪಿರಿಪಿರಿಯನ್ನ ಬಗೆ ಹರಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮೆಂದ್ರ ಪ್ರಧಾನ್‌ ರಾಜ್ಯ ಬಿಜೆಪಿ ಶಾಸಕರ ಜತೆ ಚರ್ಚೆ ನಡೆಸಿದ್ರು. ಆದ್ರೆ ಪ್ರಯೋಜನವೇನೂ ಆಗಿಲ್ಲ. ಬಿಜೆಪಿ ವರಿಷ್ಠರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ರು. ಇದ್ರಿಂದ ಸಮಸ್ಯೆ ಈಗ ಮತ್ತಷ್ಟು ಉಲ್ಬಣಿಸಿದೆ.

ಒಗ್ಗಟ್ಟಿನ ಬಲ ಪ್ರದರ್ಶನ

ಅಷ್ಟೇ ಅಲ್ಲ, ಈ ಹಿಂದಿನ ರಾಜಕೀಯ ನಿದರ್ಶನಗಳು ಸಹ ಧೋನಿ ನಾಯಕತ್ವದ ಟೀಮ್ ಇಂಡಿಯಾಗೆ ಹೋಲುತ್ತವೆ. 2009ರಲ್ಲೂ ಧೋನಿ ನಾಯಕತ್ವದ ಮೇಲೆ ವೀರೇಂದ್ರ ಸೆಹ್ವಾಗ್‌ ಅಪಸ್ವರ ಎತ್ತಿದ್ರು. ಆಗ ನಾವೆಲ್ಲರೂ ಒಂದೇ.. ಏನೇ ಆದ್ರೂ ಒಗ್ಗಟ್ಟಿನಿಂದ ಇದ್ದೇವೆ ಅಂತ ಸುದ್ದಿಗೋಷ್ಠಿಯಲ್ಲಿ ಧೋನಿ ಆಟಗಾರರನ್ನ ಪರೇಡು ನಡೆಸಿದ್ರು.

ಹಾಗೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರ ಜತೆ ಸಾಕಷ್ಟು ಬಾರಿ ಹೈಕಮಾಂಡ್‌ ಮತ್ತು ಮಾಧ್ಯಮದ ಎದುರು ಶಕ್ತಿ ಪ್ರದರ್ಶಿಸಿದ್ರು. ಆದ್ರೆ, ಬಿಎಸ್‌ವೈ ಮತ್ತು ಡಿವಿಎಸ್‌ ನಡುವೆ ಇದ್ದಂತಹ ಆತ್ಮೀಯತೆ ಧೋನಿ ಮತ್ತು ಸೆಹ್ವಾಗ್‌ ನಡುವೆ ಇರಲಿಲ್ಲ. ಆದ್ರೂ ಮೈದಾನದಲ್ಲಿ ಮಾತ್ರ ಇದನ್ನೆಲ್ಲಾ ತೋರಿಸುತ್ತಿರಲಿಲ್ಲ.

ನಾನೊಂದು ತೀರಾ... ನೀನೊಂದು ತೀರಾ...

ಆದ್ರೆ ಸಮಯ ಹೇಗೆ ಬದಲಾಗುತ್ತೆ ನೋಡಿ... ಹಮ್‌ ಸಾಥ್‌ ಸಾಥ್‌ ಹೇ ಅಂತಿದ್ದ ಬಿಎಸ್‌ವೈ ಮತ್ತು ಡಿವಿಎಸ್‌ ಈಗ ಒಬ್ಬರ ಮುಖ ಒಬ್ರು ನೋಡ್ತಾ ಇಲ್ಲ. ಹಾಗೇ ಮೈದಾನದಲ್ಲಿ ಜತೆಯಾಗಿ ಹೋರಾಡುತ್ತಿದ್ದ ಸೆಹ್ವಾಗ್‌ ಮತ್ತು ಧೋನಿ ನಾನೊಂದು ತೀರಾ ನೀನೊಂದು ತೀರಾ ಆಗಿಬಿಟ್ಟಿದ್ದಾರೆ.
ಒಟ್ಟಿನಲ್ಲಿ ಇದು ಮನೆಯೊಂದು ಮೂರು ಬಾಗಿಲು ಎಂಬ ಕಥೆಯಂತಾಗಿದೆ. ಎಷ್ಟೇ ಸಮಾಧಾನಪಡಿಸಿದ್ರೂ ಒಡೆದ ಕನ್ನಡಿಯನ್ನ ಮತ್ತೆ ಜೋಡಿಸಿದ ಹಾಗಾಗುತ್ತೆ. ಒಂದು ಸಣ್ಣ ಮಾತಿನ ಇರಿತದಿಂದ ಒಗ್ಗಟ್ಟೇ ಕಾಣದಂತಾಗಿದೆ. ಅಧಿಕಾರ ಹೆಂಗೆಲ್ಲಾ ಆಟ ಆಡಿಸುತ್ತೆ ಅಲ್ವಾ...

ಸನತ್ ರೈ

Sunday, February 19, 2012

ಕ್ರಿಕೆಟ್‌ ಜಗತ್ತಿನ ಬುದ್ಧ..

ವಿಶ್ವ ಕ್ರಿಕೆಟ್‌ನ ಕಲಾತ್ಮಕ ಆಟಗಾರ... ಕ್ರಿಕೆಟ್‌ ಜಗತ್ತಿನ ಬುದ್ಧ.. ಟೀಮ್ ಇಂಡಿಯಾದ ಗ್ರೇಟ್‌ ವಾಲ್‌... ಹುಟ್ಟಿದ್ದು ಮಹಾರಾಷ್ಟ್ರದಲ್ಲಿ... ಬದುಕನ್ನ ರೂಪಿಸಿಕೊಂಡಿರುವುದು ಬೆಂಗಳೂರಿನಲ್ಲಿ... ಹೌದು, ನಮ್ಮೂರಿನ ಹೆಮ್ಮೆಯ ಕ್ರಿಕೆಟಿಗನಿಗೆ ಇಂದು 39ನೇ ಹುಟ್ಟು ಹಬ್ಬದ ಸಂಭ್ರಮ...
ಸುಮಾರು 30 ವರ್ಷಗಳ ಹಿಂದೆ. ಬೆಂಗಳೂರಿನ ಇಂದಿರಾ ನಗರದ ಹುಡುಗ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾವುದೇ ಕ್ರೀಡೆಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದಿರುವ ದ್ರಾವಿಡ್‌ ಅದೇಗೇ ಕ್ರಿಕೆಟ್‌ ಮೇಲೆ ಆಸಕ್ತಿ ಬೆಳೆಯಿತ್ತೊ ಗೊತ್ತಿಲ್ಲ. ಮೊದ ಮೊದಲು ಹಾಕಿ ಆಡುತ್ತಿದ್ದ ದ್ರಾವಿಡ್ ಬಳಿಕ ಕ್ರಿಕೆಟ್‌ ಆಟವನ್ನ ಆಗಾಧವಾಗಿ ಪ್ರೀತಿಸಿದ್ರು .ಇಂದಿರಾ ನಗರದಿಂದ ಚಿನ್ನಸ್ವಾಮಿ ಕ್ರೀಡಾಂಣ, ಚಿನ್ನಸ್ವಾಮಿಯಿಂದ ಸೇಂಟ್‌ ಜೊಸೇಫ್‌ ಕಾಲೇಜ್‌ ಹೀಗೆ ಬಿಟಿಎಸ್‌ ಬಸ್‌ನಲ್ಲೇ ಓಡಾಡುತ್ತಿದ್ದ ದ್ರಾವಿಡ್‌ ಅದ್ಭುತ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಎಂಥವರನ್ನ ಬೆರಗುಗೊಳಿಸುತ್ತೆ.
ಹಾಗಂತ ರಾಹುಲ್‌ ದ್ರಾವಿಡ್‌ಗೆ ಭಾರತ ತಂಡದ ಬಾಗಿಲು ಅಷ್ಟೊಂದು ಸುಲಭವಾಗಿ ತೆರೆದಿರಲಿಲ್ಲ. ದೇಶಿ ಪಂದ್ಯಗಳಲ್ಲಿ ರನ್‌ಗಳ ಮಳೆ ಸುರಿಸಿದ್ರು. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸಪಟ್ರು. ಕೊನೆಗೂ ಜಾಮಿಯ ಬಹುದಿನಗಳ ಕನಸು ನನಸಾಯ್ತು. ಅದೂ 1996 ಜೂನ್‌ 20 ರಂದು. ಕ್ರಿಕೆಟ್‌ನ ಐತಿಹಾಸಿಕ ಮೈದಾನ ಲಾಡ್ರ್ಸ್‌ ನಲ್ಲಿ ರಾಹುಲ್‌ ದ್ರಾವಿಡ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ರು. ಮೊದಲ ಪಂದ್ಯದಲ್ಲೇ ಕೇವಲ ಐದು ರನ್‌ಗಳಿಂದ ಶತಕ ವಂಚಿತರಾದ್ರು. ನಂತ್ರ ವಿಶ್ವ ಕ್ರಿಕೆಟ್‌ನಲ್ಲಿ ಶುರುವಾಗಿದ್ದು ದ್ರಾವಿಡ್‌ ಪರ್ವ.
ಅಂದ ಹಾಗೇ, ಮುಳ್ಳಿನ ಹಾದಿಯಲ್ಲಿ ನಡೆದ ದ್ರಾವಿಡ್‌ ವಿಶ್ವ ಕ್ರಿಕೆಟ್‌ನಲ್ಲಿ ಹೂವಿನಂತೆ ಅರಳಿದ್ರು. ಆದ್ರೆ ಅದ್ರ ಹಿಂದಿನ ಪರಿಶ್ರಮ ದ್ರಾವಿಡ್‌ಗೆ ಮಾತ್ರ ಗೊತ್ತು.. ಯಾಕಂದ್ರೆ, ದ್ರಾವಿಡ್‌ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಮತ್ತು ಕನಸನ್ನ ಕಟ್ಟಿಕೊಂಡಿದ್ರು. ಹಾಗೇ ಅದನ್ನ ಸಾಕಾರಗೊಳಿಸಲು ಸುರಿಸಿದ ಬೆವರಿನ ಹನಿಗಳ ಜತೆಗೆ ಬದ್ಧತೆ, ಏಕಾಗ್ರತೆ, ಶಿಸ್ತು ಜ್ಯಾಮಿಯನ್ನ ಮಹಾನ್‌ ಗೋಡೆ ಯಂತೆ ಬಿಂಬಿಸಿದವು. ಅಷ್ಟೇ ಅಲ್ಲ, ಗ್ರೇಟ್‌ ಇಂಡಿಯನ್‌ ವಾಲ್‌ ಅಂತಲೂ ಕ್ರಿಕೆಟ್‌ ಜಗತ್ತಿನಲ್ಲೇ ಚಿರಪರಿಚಿತರಾದ್ರು.. ಫ್ಲೋ
ತಾಳ್ಮೆಯ ಪ್ರತೀಕದಂತಿದ್ದ ದ್ರಾವಿಡ್‌ ಬೌಲರ್‌ಗಳನ್ನ ಮನ ಬಂದಂತೆ ಕಾಡುತ್ತಿದ್ರು. ಭಾರತ ತಂಡವನ್ನ ಸೋಲಿನಿಂದಲೂ ಬಚಾವ್‌ ಮಾಡ್ತಾ ಇದ್ರು. ಹಾಗೇ ನಿಧಾನಗತಿಯಾಗಿ ಬ್ಯಾಟಿಂಗ್‌ ಮಾಡುತ್ತಿದ್ರೂ ತಂಡದ ರೋಚಕ ಗೆಲುವಿಗೂ ಕಾರಣರಾಗುತ್ತಿದ್ರು. ಅದ್ರಲ್ಲೂ 2001ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಕೊಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಆಡಿದ ಪರಿಯನ್ನ ಯಾವತ್ತೂ ಮರೆಯೋಕೆ ಆಗೋಲ್ಲ. ಲಕ್ಷ್ಮಣ್‌ ಜತೆಗೂಡಿ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ದ್ರಾವಿಡ್‌ ರ ಬ್ಯಾಟಿಂಗ್‌ ವೈಖರಿ ಇಂದಿಗೂ ಸವಿ ಸವಿ ನೆನಪಾಗಿಯೇ ಉಳಿದಿದೆ.
ಹೌದು, ರಾಕೆಟ್‌ ವೇಗದ ಎಸೆತಗಳು ದ್ರಾವಿಡ್‌ ಬ್ಯಾಟ್‌ ಮುಂದೆ ಠುಸ್ಸು ಪಟಾಕಿಗಳಾಗುತ್ತವೆ. ಜತೆಗೆ ಬುಗುರಿಯಂತೆ ತಿರುಗುವ ಎಸೆತಗಳೂ ನಿಸ್ತೇಜವಾಗುತ್ತವೆ.. ಅಂತಹ ಮಾಂತ್ರಿಕತೆ ರಾಹುಲ್‌ ದ್ರಾವಿಡ್‌ರ ಬ್ಯಾಟಿಂಗ್‌ನಲ್ಲಿದೆ. ದ್ರಾವಿಡ್‌ ದಾಖಲಿಸುವ ಪ್ರತಿ ರನ್‌ಗಳಲ್ಲೂ ಒಂದೊಂದು ರೀತಿಯ ಕಲಾತ್ಮಕತೆ ಇದೆ. ಕ್ರಿಕೆಟ್‌ನ ಎಲ್ಲಾ ತಾಂತ್ರಿಕತೆ ಗಳನ್ನ ಮೈಗೂಡಿಸಿಕೊಂಡಿರುವ ರಾಹುಲ್‌, ಬ್ಯಾಟಿಂಗ್‌ ವೈಭವವನ್ನ ವರ್ಣಿಸುವುದು ತುಸು ಕಷ್ಟ. ಅಷ್ಟೇ ಅಲ್ಲ, ದ್ರಾವಿಡ್‌ ಅವ್ರ ಬ್ಯಾಟಿಂಗ್‌ ಶೈಲಿ ಯುವ ಆಟಗಾರರಿಗೆ ಕಲಾ ಶಾಲೆಯೇ ಸರಿ.
ಈಗಾಗಲೇ ಮಿಸ್ಟರ್‌‌ ಫರ್ಫೆಕ್ಟ್‌, ಮಿಸ್ಟರ್‌ ಡಿಪೆಂಡೆಬಲ್‌... ಅನ್ನೋ ಬಿರುದುಗಳು ಈ ಬೆಂಗಳೂರಿನ ಹುಡುಗನ ಹೆಸರಿನ ಮುಂದೆ ಅಂಟಿಕೊಂಡಿವೆ. ತಂಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುವ ದ್ರಾವಿಡ್‌ ಪಕ್ಕಾ ಟೀಮ್ ಪ್ಲೇಯರ್‌ ಅನ್ನೋದನ್ನ ಸಾಬೀತು ಪಡಿಸಿದ್ರು. ಮೇಸ್ತ್ರಿ ಇಟ್ಟಿಗೆಗಳನ್ನ ಜೋಡಿಸಿ ಗೋಡೆ ಕಟ್ಟುವ ಹಾಗೇ ರಾಹುಲ್‌ ಟೀಮ್ ಇಂಡಿಯಾದ ಮೇಸ್ತ್ರಿಯಾಗಿ ಎದುರಾಳಿ ತಂಡಗಳಿಗೆ ತಡೆ ಗೋಡೆಯಾದ್ರು.
ಸರಿ ಸುಮಾರು 15 ವರ್ಷಗಳ ಹಿಂದೆ ಟೀಮ್ ಇಂಡಿಯಾದೊಳಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ಆಗಿ ಎಂಟ್ರಿಕೊಟ್ಟ ಜ್ಯಾಮಿ, ಯಾವುದೇ ಕ್ರಮಾಂಕದಲ್ಲೂ ಆಡಲು ಸೈ ಎನಿಸಿಕೊಂಡಿದ್ರು.. ಇನ್ನು, ತಂಡದ ಇನಿಂಗ್ಸನ್ನೂ ಆರಂಭಿಸಿರುವ ದ್ರಾವಿಡ್‌, ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ್ರು. ಜತೆಗೆ ಪಾರ್ಟ್‌ ಟೈಮ್‌ ಬೌಲಿಂಗ್‌ ಕೂಡ ಮಾಡ್ತಾ ಇದ್ರು. ಫೀಲ್ಡಿಂಗ್‌ನಲ್ಲಂತೂ ದ್ರಾವಿಡ್‌ ಫರ್ಫಾಮೆನ್ಸ್‌ ಸೂಪರ್‌.
ಅಂದ ಹಾಗೇ, ಆರಂಭದ ದಿನಗಳಲ್ಲಿ ದ್ರಾವಿಡ್‌ ಕೇವಲ ಟೆಸ್ಟ್‌ ಕ್ರಿಕೆಟಿಗ ಅನ್ನೋ ಹಣೆಪಟ್ಟಿಯನ್ನು ಪಡೆದಿದ್ರು. ಏಕದಿನ ಪಂದ್ಯಗಳಿಗೆ ಬಂದು ಹೋಗುತ್ತಿದ್ದ ರಾಹುಲ್‌ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ರು. ಆದ್ರೆ 1999ರ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ದ್ರಾವಿಡ್‌ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನೇ ನೀಡಿದ್ರು. ನಂತ್ರ ಹಿಂತಿರುಗಿ ನೋಡಿದ್ದೇ ಇಲ್ಲ..
ಆದ್ರೆ 2007ರ ವಿಶ್ವಕಪ್‌ ದ್ರಾವಿಡ್‌ ಏಕದಿನ ಕ್ರಿಕೆಟ್‌ ಬದುಕಿಗೆ ಸುನಾಮಿಯಂತೆ ಅಪ್ಪಳಿಸಿತ್ತು. ಆಟಗಾರರ ನಡುವಿನ ಗೊಂದಲ ... ಕೋಚ್‌ ಗ್ರೆಗ್‌ ಚಾಪೆಲ್‌ ದ್ವಂದ ನೀತಿಯಿಂದ ಕೆರೆಬಿಯನ್‌ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿತ್ತು. ಇದ್ರಿಂದ ತೀರಾ ನೊಂದ ಜಾಮಿ, ತಂಡದ ನಾಯಕತ್ವವನ್ನ ತ್ಯಜಿಸಬೇಕಾಯ್ತು. ಜತೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕಳಪೆ ಫಾರ್ಮ್‌ ದ್ರಾವಿಡ್‌ರನ್ನ ಏಕದಿನ ಕ್ರಿಕೆಟ್‌ನಿಂದ ದೂರ ಉಳಿಯುವಂತೆ ಮಾಡಿತ್ತು. ನಂತ್ರ ಏಕದಿನ ಪಂದ್ಯಗಳಲ್ಲಿ ಯುವ ಆಟಗಾರರ ದರ್ಬಾರಿನ ಮುಂದೆ ಜಾಮಿಯ ಕಲಾತ್ಮಕ ಆಟ ಮಸುಕಾಗಿಬಿಟ್ಟಿತ್ತು. ಇದ್ರಿಂದ 2011ರಲ್ಲಿ ಇಂಗ್ಲೆಂಡ್‌ ವಿರುದ್ಧದ ಕೊನೆಯ ಪಂದ್ಯವನ್ನ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರು.
ಈಗಾಗಲೇ ರಾಹುಲ್‌ ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಟೆಸ್ಟ್‌ ಪಂದ್ಯವನ್ನ ಮಾತ್ರ ಆಡ್ತಾ ಇದ್ದಾರೆ. ಇದ್ರಿಂದ ಜಾಮಿ ತನ್ನ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ಯಾವಾಗ ವಿದಾಯ ಹೇಳ್ತಾರೆ ಅಂತ ಹೇಳೋಕೆ ಆಗಲ್ಲ. ಆದ್ರೂ ರಾಹುಲ್‌ಗೆ ಆಡುವ ಸಾಮರ್ಥ್ಯ ಇನ್ನೂ ಇದೆ. ಹಾಗಂತ ಇದಕ್ಕೆ ಬಿಸಿಸಿಐ ಎಷ್ಟರ ಮಟ್ಟಿಗೆ ಸ್ಪಂದಿಸುತ್ತೆ ಅನ್ನೋದು ಮುಖ್ಯವಾಗಿರುತ್ತೆ.
ನಿಜ, ರಾಹುಲ್‌ ದ್ರಾವಿಡ್‌ ರದ್ದು ವರ್ಣರಂಜಿತ ಕ್ರಿಕೆಟ್‌ ಬದುಕು. ಕ್ರಿಕೆಟ್‌ ಮೇಲಿನ ಆಗಾಧವಾದ ಪ್ರೀತಿ ಜಾಮಿಯನ್ನು ಉತ್ತುಂಗಕ್ಕೇರಿಸಿದೆ. ಕಲ್ಮಶವಿಲ್ಲದ ವ್ಯಕ್ತಿತ್ವ ದ್ರಾವಿಡ್‌ ಹೆಸರನ್ನ ಇನ್ನಷ್ಟು ಮೆರಗುಗೊಳಿಸಿದೆ. ಆದ್ರೆ ದ್ರಾವಿಡ್‌, ಎಷ್ಟೇ ಸಾಧನೆ, ಯಶಸ್ಸು, ದಾಖಲೆ ಮಾಡಿದ್ರೂ ಟೀಮ್ ಇಂಡಿಯಾದ ಸವಿ ಸವಿ ನೆನಪಿನ ಸಂಭ್ರಮದಲ್ಲಿರಲಿಲ್ಲ. 15 ವರ್ಷ ಟೀಮ್ ಇಂಡಿಯಾದಲ್ಲಿ ಆಡಿದ್ರೂ 2011ರ ವಿಶ್ವಕಪ್‌ ಗೆದ್ದ ತಂಡದಲ್ಲಿ ತಾನಿಲ್ಲ ಅನ್ನೋ ಬೇಸರ, ನಿರಾಸೆ, ನೋವು ದ್ರಾವಿಡ್‌ರನ್ನ ಸದಾ ಕಾಡುತ್ತಲೇ ಇರುತ್ತೆ.
ಇನ್ನು, ಕ್ಲಾಸ್‌... ಕಮೀಟ್‌ಮೆಂಟ್‌ ಆಂಡ್‌ ಕನ್ಷಿಸ್ಟೆನ್ಸಿ ಈ ಮೂರು ಪದಗಳು ದ್ರಾವಿಡ್‌ ಗೆ ಅನ್ವರ್ಥನಾಮ.. ಯಾಕಂದ್ರೆ ಕ್ರಿಕೆಟ್‌ನ ಎಲ್ಲಾ ಪಾಠಗಳನ್ನ ರಾಹುಲ್‌ ದ್ರಾವಿಡ್‌ ಅವ್ರ ಬ್ಯಾಟಿಂಗ್‌ ಮತ್ತು ವ್ಯಕ್ತಿತ್ವದಲ್ಲಿ ಕಾಣಬಹುದು. ದ್ರಾವಿಡ್‌ ಬ್ಯಾಟ್‌ನಿಂದ ಚಿಮ್ಮುವ ಚೆಂಡು ನೂಲಿನಿಂದ ಗೆರೆ ಎಳೆಯುವಂತೆ ಬೌಂಡರಿ ಗೆರೆ ದಾಟುತ್ತೆ. ಆಗ ಎದುರಾಳಿ ತಂಡದ ಆಟಗಾರರಿಗೆ ದ್ರಾವಿಡ್‌ ರ ಬ್ಯಾಟಿಂಗ್‌ ಕಲಾತ್ಮಕತೆಯನ್ನ ಕಣ್ಣುತುಂಬಿಕೊಳ್ಳುವ ಬಯಕೆ ಬಂದ್ರೂ ಅಚ್ಚರಿ ಏನಿಲ್ಲ.
ಈ ನಡುವೆ, ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಕ್ರಿಕೆಟ್‌ ಯುವಕರ ಆಟ ಅಂತ ದೂರ ಸರಿದ್ರು. ಆದ್ರೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚು ಹರಿಸಿದ ದ್ರಾವಿಡ್‌ ಟ್ವೆಂಟಿ ಟ್ವೆಂಟಿ ಪಂದ್ಯ ಕೇವಲ ಹೊಡಿ ಬಡಿ ಆಟವಲ್ಲ. ಅನುಭವ ಮತ್ತು ತಾಂತ್ರಿಕತೆಯೂ ಬೇಕಾಗುತ್ತೆ ಎಂಬುದನ್ನ ಸಾಬೀತುಪಡಿಸಿದ್ರು. ಅಷ್ಟೇ ಅಲ್ಲ, ಕಳೆದ ವರ್ಷ, ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಹಾಗೂ ಕೊನೆಯ ಟ್ವೆಂಟಿ ಟ್ವೆಂಟಿ ಪಂದ್ಯವನ್ನೂ ಆಡಿ ಚುಟುಕು ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ರು. ಸದ್ಯ ಐಪಿಎಲ್‌ ಆಡುತ್ತಿರುವ ರಾಹುಲ್‌ ರಾಜಸ್ಥಾನರಾಯಲ್ಸ್‌ ತಂಡದ ನಾಯಕನಾಗಿದ್ದಾರೆ.
ಏನೇ ಆದ್ರೂ ರಾಹುಲ್‌ ದ್ರಾವಿಡ್ ಟೀಮ್ ಇಂಡಿಯಾದ ಟೆಸ್ಟ್‌ ತಂಡಕ್ಕೆ ಇವತ್ತಿಗೂ ಅಪತ್ಭಾಂದವ. ಈಗಾಗಲೇ ಕ್ರಿಕೆಟ್‌ ಬದುಕಿನ ಮುಸ್ಸಂಜೆಯಲ್ಲಿರುವಾಗಲೂ ದ್ರಾವಿಡ್‌ರ ರನ್‌ ದಾಹ ಬತ್ತಿಲ್ಲ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ದಿ ಗ್ರೇಟ್‌ ವಾಲ್‌. ಹಾಗೇ ವಿಂಡೀಸ್‌ ವಿರುದ್ಧ ಗಮನ ಸೆಳೆಯುವಂತಹಪ್ರದರ್ಶನ ನೀಡಿದ್ರು. ಆದ್ರೆ ಯಾಕೋ ಆಸ್ಟ್ರೇಲಿಯಾ ಸರಣಿಯಲ್ಲಿ ಮಾತ್ರ ದ್ರಾವಿಡ್‌ ಆಟ ಅಂದುಕೊಂಡಂತೆ ನಡೆಯುತ್ತಿಲ್ಲ. ಆದ್ರೂ ದ್ರಾವಿಡ್‌ ತಪ್ಪುಗಳನ್ನ ಸರಿಪಡಿಸಿಕೊಂಡು ರನ್‌ ದಾಖಲಿಸುವುದರಲ್ಲಿ ಅನುಮಾನನೇ ಇಲ್ಲ.
ಮತ್ತೊಂದೆಡೆ, ದ್ರಾವಿಡ್‌ ಅನೇಕ ದಾಖಲೆಗಳನ್ನ ಸೃಷ್ಠಿಸಿದ್ದಾರೆ. ಈಗಾಗಲೇ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್‌ ಪೂರೈಸಿದ ಹೆಗ್ಗಳಿಕೆ ದ್ರಾವಿಡ್‌ ಅವ್ರದ್ದು. ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ವಿಶ್ವದ ನಾಲ್ಕನೇ ಆಟಗಾರ ಹಾಗೂ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ವಿಶ್ವದ ಎರಡನೇ ಆಟಗಾರನೂ ಹೌದು. ಜತೆಗೆ ಗರಿಷ್ಠ ಕ್ಯಾಚ್‌ ಹಿಡಿದ ಹಿರಿಮೆ ಸಹ ದ್ರಾವಿಡ್‌ಗೆ ಸಲ್ಲುತ್ತೆ.
ಏನೇ ಆದ್ರೂ. ಕಳೆದ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ದ್ರಾವಿಡ್‌ ಹೆಸರಿಗೆ ಎಲ್ಲೂ ಕಪ್ಪುಚುಕ್ಕೆ ಅಂಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ರಾಹುಲ್‌ ದ್ರಾವಿಡ್‌ ಫರ್ಪೆಕ್ಟ್‌. ತನ್ನ 39ರ ಹರೆಯದಲ್ಲೂ ಕ್ಲಾಸ್‌ಗೂ ಸೈ, ಮಾಸ್‌ಗೂ ಜೈ ಅನ್ನೋ ದ್ರಾವಿಡ್‌ ರಂತಹ ಆಟಗಾರನನ್ನು ವಿಶ್ವ ಕ್ರಿಕೆಟ್‌ಗೆ ಕೊಡುಗೆಯಾಗಿ ನೀಡಿದ ಹೆಮ್ಮೆ ಕರ್ನಾಟಕದ್ದು. ಎನಿ ವೇ ಹ್ಯಾಪಿ ಬರ್ತ್‌ ಡೇ ಜಾಮಿ.
ಸನತ್ ರೈ

ಸ್ಟೈಲ್ಲೇ ಬೇರೆ.. ಲುಕ್ಕೇ ಬೇರೆ...

ಮಹೇಂದ್ರ ಸಿಂಗ್ ಧೋನಿ...ರಾಂಚಿ ರಾಂಬೋ.. ಹೆಸರಿಗೆ ತಕ್ಕಂತೆ ಧೋನಿ ವಿಭಿನ್ನ ಹವ್ಯಾಸವನ್ನ ಹೊಂದಿದ್ದಾರೆ. ಹೌದು, ಧೋನಿಯ ಸ್ಟೈಲ್ಲೇ ಬೇರೆ.. ಲುಕ್ಕೇ ಬೇರೆ... ಎಲ್ಲವೂ ಡಿಫರೆಂಟ್‌.. ಅದಕ್ಕಾಗಿಯೇ ಎಮ್‌. ಎಸ್‌. ಧೋನಿ ಎಲ್ರಿಗೂ ಇಷ್ಟ..
ಧೋನಿಗೆ ಬೈಕ್ ಅಂದ್ರೆ ಪಂಚ ಪ್ರಾಣ.. ಹೊಸ ಬೈಕ್ ಗಳ ಮೇಲೆ ಜಾಲಿ ರೈಡ್ ಮಾಡೋದು ಅಂದ್ರೆ ಏನೋ ಒಂಥರಾ ಖುಷಿ. ಹಾಗೇ, ಬೈಕ್ ಗಳ ಸಂಗ್ರಹದಲ್ಲೂ ಮಾಹಿ ಒಂದು ಹೆಜ್ಜೆ ಮುಂದು. ಈಗಾಗಲೇ ಈ ಕೂಲ್ ಕ್ಯಾಪ್ಟನ್ ಮನೆಯಲ್ಲಿ 40 ಕ್ಕೂ ಹೆಚ್ಚು ಬೈಕ್ ಗಳು ಸಾಲಾಗಿ ನಿಂತಿವೆ. ಇದ್ರಲ್ಲಿ ಯಮಹಾ, ಟಿವಿಎಸ್‌, ಹಾರ್ಲಿ ಡೇವಿಡ್ಸ್ನ್ ಬೈಕ್‌ಗಳು ಕೂಡ ಸೇರಿಕೊಂಡಿವೆ.
ಬಿಡುವಿನ ವೇಳೆಯಲ್ಲಿ ಬೈಕ್ ಏರಿ ನೂರಾರು ಕಿಲೋ ಮೀಟರ್ ಸವಾರಿ ನಡೆಸುವುದು ಧೋನಿಯ ಹಾಬಿ. ವಿದೇಶಿ ಪ್ರವಾಸದ ವೇಳೆ ಬೈಕ್‌ಗಳ ಬಿಡಿ ಭಾಗಗಳನ್ನ ಪರ್ಚೆಸ್‌ ಮಾಡಿ ತನ್ನ ಬೈಕ್‌ಗಳನ್ನ ಶೃಂಗಾರ ಕೂಡ ಮಾಡ್ತಾರೆ. ಅಷ್ಟೇ ಅಲ್ಲ, ಪಂದ್ಯಗಳಲ್ಲಿ ಬಹುಮಾನವಾಗಿ ಯಾರೇ ಬೈಕ್‌ ಗೆದ್ರೂ ಅದನ್ನು ಮೊದಲು ಓಡಿಸುವುದು ಧೋನಿಯೇ...
ಇನ್ನು, ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಹೆಚ್ಚು ಗಮನ ಸೆಳೆದದ್ದು ತನ್ನ ಉದ್ದನೆಯ ಕೂದಲಿನಿಂದ. ಧೋನಿಯ ಹೇರ್‌ ಸ್ಟೈಲ್‌ಗೆ ಯುವತಿಯರು ಕ್ಲೀನ್‌ ಬೌಲ್ಡಾದ್ರೆ, ಯುವಕರು ಧೋನಿಯ ಹೇರ್‌ ಸ್ಟೈಲ್‌ ಅನ್ನೇ ಅನುಕರಣೆ ಮಾಡಿದ್ರು. ಅಷ್ಟೇ ಯಾಕೆ, ಪಾಕ್‌ನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಶ್ರರಫ್‌ ಕೂಡ ಧೋನಿಯ ಹೇರ್‌ ಸ್ಟೈಲ್‌ಗೆ ಕಾಂಪ್ಲಿಮೆಂಟರಿ ನೀಡಿದ್ರು.
ಆದ್ರೆ ಧೋನಿಗೆ ಈ ಉದ್ದ ಕೂದಲು ಯಾಕೋ ಬೋರ್‌ ಹೊಡಿಸಿತ್ತು ಅನ್ಸುತ್ತೆ. ಅದ್ರಲ್ಲೂ ಟ್ವೆಂಟಿ ಟ್ವೆಂಟಿ ವಿಶ್ವಕಪ್‌ ಗೆದ್ದ ನಂತ್ರ ಧೋನಿ ತನ್ನ ಕೂದಲಿಗೆ ಕತ್ತರಿ ಹಾಕಿದ್ರು. ಟ್ರಿಮ್‌ ಮಾಡ್ಕೊಂಡ ಧೋನಿ ಮದುವೆಯ ಸಮಯದಲ್ಲೂ ಕೂದಲಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೂ ಆಗಾಗ ಮಾಹಿ ತನ್ನ ಹೇರ್ ಸ್ಟೈಲ್‌ ಅನ್ನು ಚೆಂಚ್‌ ಮಾಡ್ತಾನೇ ಇರ್ತಾರೆ.
ಇನ್ನೊಂದೆಡೆ, ಧೋನಿಗೆ ದೇವ್ರ ಮೇಲೆ ಅಪಾರ ಭಕ್ತಿ. ಹಾಗೇ ದೇವಿಯ ಆರಾಧಕರು ಹೌದು. ಬಿಡುವಿನ ವೇಳೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗೆಲ್ಲಾ ಎಲ್ಲಾ ಭೇಟಿ ನೀಡ್ತಾರೆ.
ಆಟದಿಂದಲೇ ಜನಪ್ರಿಯತೆಯ ಉತ್ತುಂಗಕ್ಕೇರಿದ ಎಮ್‌. ಎಸ್‌.ಧೋನಿ ಜಾಹಿರಾತು ಪ್ರಪಂಚದ ಕಣ್ಮಣಿ. ಪೆಪ್ಸಿ, ಏರ್ ಸೆಲ್, ರಿಲಯಾನ್ಸ್, ಬೂಸ್ಟ್ , ವಿಡಿಯೋಕಾನ್, ಟಿವಿಎಸ್‌ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳಿಗೆ ಈ ಕೂಲ್ ಕ್ಯಾಪ್ಟನ್ ಬ್ರಾಂಡ್ ಅಂಬಾಸಿಡರ್. ಹಾಗೇ ಟಿವಿಎಸ್‌ ಜಾಹಿರಾತಿನಲ್ಲಿ ಧೋನಿ ಪತ್ನಿ ಸಾಕ್ಷಿ ಜತೆ ಕೂಡ ಕಾಣಿಸಿಕೊಂಡ್ರು. .
ಹೀಗೆ ಬಿಂದಾಸ್‌ ಆಗಿರುವ ಧೋನಿ ನಟನೆಯಲ್ಲೂ ಮುಂದಿದ್ದಾರೆ. ಹಾಗೇ ಸ್ಟೇಜ್‌ನಲ್ಲಿ ಡಾನ್ಸ್‌ ಮಾಡಿ ಮಿಂಚು ಹರಿಸ್ತಾರೆ. ಮುಖ್ಯವಾಗಿ ಕಿಂಗ್‌ ಖಾನ್‌ ಶಾರೂಕ್‌ ಖಾನ್‌ ಜತೆ ಧೋನಿ ಹೆಜ್ಜೆ ಹಾಕಿರೋದನ್ನ ಯಾವತ್ತಾದ್ರೂ ಮರೆಯೋಕೆ ಆಗುತ್ತಾ...
ಮತ್ತೊಂದೆಡೆ, ಧೋನಿ ಸಾಹಸ ಕ್ರೀಡೆಗಳನ್ನ ಇಷ್ಟಪಡುತ್ತಾರೆ. ಕುದುರೆ ಸವಾರಿ ಮಾಡ್ತಾರೆ. ಮಿಲಿಟರಿ ಕ್ಯಾಂಪ್‌ಗೆ ಭೇಟಿ ನೀಡ್ತಾರೆ. ಸೈನಿಕರನ್ನ ಭೇಟಿ ಮಾಡಿ ಅವ್ರ ಜತೆ ಕಾಲ ಕಳೆಯುತ್ತಾರೆ. ಜತೆಗೆ ತನ್ನ ನೆಚ್ಚಿನ ಅಭಿಮಾನಿಯ ಮನೆಗೆ ಹೋಗಿ ಅಡುಗೆ ಮಾಡಿ, ಗಲ್ಲಿ ಕ್ರಿಕೆಟ್‌ ಕೂಡ ಆಡ್ತಾರೆ.
ಇನ್ನು, ಧೋನಿಯ ಲೈಫೇ ಕಲರ್‌ಫುಲ್‌.. ಸೆಲೆಬ್ರಿಟಿ ಹಾಗೂ ಟೀಮ್ ಇಂಡಿಯಾದ ನಾಯಕನಾಗಿರುವುದರಿಂದ ಸಹಜವಾಗಿಯೇ ಚಿತ್ರರಂಗದ ನಂಟು ಇದ್ದೇ ಇರುತ್ತೆ. ಇದ್ರಿಂದ ಧೋನಿಯ ಹೆಸ್ರು ಹಲವು ನಟಿಯರ ಜತೆ ಕೇಳಿಬಂತು. ದೀಪಿಕಾ ಪಡುಕೋಣೆ, ಲಕ್ಷ್ಮಿ ರೈ, ಆಸಿನ್‌ ಮೊದಲಾದವರ ಹೆಸರುಗಳು ರಾಂಚಿ ರಾಂಬೋನ ಹೆಸರಿನ ಮುಂದೆ ಅಂಟಿಕೊಂಡಿದ್ದವು. ಅಷ್ಟರಲ್ಲೇ ಧೋನಿ ಸಾಕ್ಷಿಯ ಕೈ ಹಿಡಿದು ಎಲ್ಲಾ ಗಾಸಿಪ್‌ಗಳಿಗೂ ತೆರೆ ಎಳೆದ್ರು.
ಸಾಕ್ಷಿ ಜೊತೆ ಸಪ್ತಪದಿ ತುಳಿದ ಬಳಿಕ ಧೋನಿಯ ಬದುಕು ಇನ್ನಷ್ಟು ಹಸನಾಯ್ತು. ಐಪಿಎಲ್‌, ಚಾಂಪಿಯನ್ಸ್‌ ಲೀಗ್‌, ವಿಶ್ವಕಪ್‌ ಗೆಲುವಿನ ಖುಷಿಯಲ್ಲಿ ತೇಲಾಡಿದ್ರು. ಜತೆಗೆ ಹೊಸ ಬಂಗಲೆ , ಹೊಸ ಕಾರು, , ಫಾರ್ಮ್ ಹೌಸ್‌.. ಪ್ರೀತಿಯ ಮಡದಿ.. ಕುಟುಂಬ ದವರ ಪ್ರೇರಣೆ... ಅಭಿಮಾನಿಗಳ ಸ್ಪೂರ್ತಿ ಇನ್ನೇನೂ ಬೇಕು. ಹಾಗಂತ ಧೋನಿಯ ಲೈಫ್ ಸ್ಟೈಲ್‌ ಇಷ್ಟೇನಾ ಅಂತ ಹೇಳುವ ಹಾಗಿಲ್ಲ.
ಭವ್ಯ ಎನ್

ಡಾಕ್ಟರ್‌ ಮಹೇಂದ್ರ ಸಿಂಗ್‌ ಧೋನಿ...

ಡಾಕ್ಟರ್‌ ಮಹೇಂದ್ರ ಸಿಂಗ್‌ ಧೋನಿ... ಹಾಗಂತ ಅಚ್ಚರಿಪಡಬೇಡಿ.. ಯಾಕಂದ್ರೆ ಧೋನಿ ವೈದ್ಯನಲ್ಲ...ಹಾಗೇ ಸಂಶೋಧನೆ ಮಾಡಿ ಪದವಿ ಸಹ ಪಡ್ಕೊಂಡಿಲ್ಲ ಅಷ್ಟೇ ಯಾಕೆ ಡಿಗ್ರಿ ಕೂಡ ಕಂಪ್ಲೀಟ್‌ ಮಾಡಿಲ್ಲ. ಹೀಗಿದ್ರೂ ಧೋನಿ ಹೆಸರಿನ ಹಿಂದೆ ಡಾಕ್ಟರ್‌ ಅನ್ನೋ ಬಿರುದು ಕಂಗೋಳಿಸುತ್ತಿದೆ.
ಹೌದು, ಇಂಗ್ಲೆಂಡ್‌ನ ಡಿ ಮೊಂಟ್‌ ಫೋರ್ಟ್‌ ಯೂನಿವರ್ಸಿಟಿ ಧೋನಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. ಆದ್ರೆ ಇದು ಪಬ್ಲಿಸಿಟಿ ಸ್ಟಂಟ್‌ ಅಲ್ಲ. ಬದಲಾಗಿ ಧೋನಿಯ ಕ್ಯಾಪ್ಟನ್ಸಿ ಮತ್ತು ಎಬಿಲಿಟಿಗೆ ಸಂದ ಗೌರವ.
ಅಂದ ಹಾಗೇ, ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ತನ್ನದೇ ಅದ ಚಾರ್ಮ್‌ ಅನ್ನು ಬೆಳೆಸಿಕೊಂಡಿದ್ದಾರೆ. ಪಂದ್ಯ ಸೋಲಲಿ.. ಗೆಲ್ಲಲಿ... ತಾಳ್ಮೆಯನ್ನ ಕಳೆದುಕೊಳ್ಳುವುದಿಲ್ಲ. ಇದಕ್ಕಾಗಿಯೇ ಕೂಲ್‌ ಕ್ಯಾಪ್ಟನ್‌ ಅಂತಲೂ ಬಿಂಬಿತವಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುವುದಿಲ್ಲ. ಅದ್ರಲ್ಲೂ ಎದುರಾಳಿ ತಂಡದ ವೀಕ್‌ನೆಸ್‌ಗಳನ್ನ ಬಲು ಬೇಗನೇ ಅರ್ಥಮಾಡಿಕೊಳ್ಳುವ ಮಾಹಿ, ಗ್ಯಾಂಬಲ್‌ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಕೂಡ ಹೌದು.
ಧೋನಿ ತಂಡವನ್ನ ಮುನ್ನಡೆಸುವ ಪರಿಯೇ ಡಿಫರೆಂಟ್‌.. ವಿಕೆಟ್‌ ಕೀಪಿಂಗ್ ಜವಾಬ್ದಾರಿಯ ಜತೆಗೆ ಅಂಗಣದಲ್ಲಿ ಪ್ರಯೋಗ ಕೂಡ ನಡೆಸ್ತಾರೆ. ಇದ್ರಿಂದ ಎದುರಾಳಿ ತಂಡಕ್ಕೆ ಮಾಹಿಯ ಗೇಮ್‌ ಪ್ಲಾನ್‌ಗಳನ್ನ ಅರ್ಥ ಮಾಡ್ಕೊಳ್ಳುವುದು ತುಸು ಕಷ್ಟ. ಹಾಗೇ, ಧೋನಿ ಸಹ ಆಟಗಾರರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಳ್ಳುತ್ತಾರೆ. ಇದ್ರಿಂದ ಆಟಗಾರರು ಕೂಡ ನಾಯಕನ ನಂಬಿಕೆಯನ್ನ ಹುಸಿಗೊಳಿಸಬಾರದು ಅನ್ನೋ ರೀತಿಯಲ್ಲೇ ಹೋರಾಟ ನಡೆಸ್ತಾರೆ. ಇದುವೇ ಧೋನಿಯ ಗೆಲುವಿನ ಸೂತ್ರ.
ಇನ್ನು, 2011ರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯವನ್ನಂತೂ ಮರೆಯೋಕೆ ಸಾಧ್ಯವಿಲ್ಲ. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ನಾಯಕನ ಆಟವನ್ನಾಡಿದ ಧೋನಿಯ ಬ್ಯಾಟಿಂಗ್‌ ವೈಖರಿಗೆ ಸಲಾಂ ಅನ್ನಲೇಬೇಕು. ಸೋಲಿನ ಆತಂಕಕ್ಕೆ ಸಿಲುಕಿದ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಲ್ಲದೆ ಗೆಲುವಿನ ರನ್‌ಗಾಗಿ ಸಿಕ್ಸರ್‌ ಬಾರಿಸಿ ಚೆಂಡನ್ನ ದಿಟ್ಟಿಸಿ ನೋಡುತ್ತಿದ್ದ ಧೋನಿಯ ಆ ಕಣ್ಣುಗಳು... ಬ್ಯಾಟ್‌ ಅನ್ನು ಗದೆಯಂತೆ ತಿರುಗಿಸಿಕೊಂಡು ಸಂಭ್ರಮಿಸಿದ ರೀತಿ.
ಅಬ್ಬಾ...ಎಂಥ ಅದ್ಭುತ ಆಟ... ಎಂಥ ಬ್ಯಾಟಿಂಗ್‌ ವೈಖರಿ... ನಾಯಕ ಅಂದ್ರೆ ಹಿಂಗಿರಬೇಕು ಅಂತ ಕ್ರಿಕೆಟ್‌ ಪಂಡಿತರ ಜತೆ ಅಭಿಮಾನಿಗಳು ಉದ್ಗರಿಸಿದ್ರು.
ನಿಜ, ಧೋನಿ ನಾಯಕನಾದ ಮೇಲೆ ತುಂಬಾನೇ ಬದಲಾದ್ರು. ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಸಾಧಿಸಿದ್ರು. ಜತೆಗೆ ಮೈದಾನ ಮತ್ತು ಮೈದಾನದ ಹೊರಗಡೆ ನಾಯಕನ ಘನತೆಯನ್ನ ಕಾಯ್ದುಕೊಂಡ್ರು. ಕಿರಿಯ ಆಟಗಾರರ ಮೇಲಿನ ಪ್ರೀತಿ ಮತ್ತು ಹಿರಿಯ ಆಟಗಾರರಿಗೆ ನೀಡುವ ಗೌರವದಿಂದ ಟೀಮ್ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿದ್ರು.
ಇನ್ನೊಂದೆಡೆ, ತನ್ನ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆ ಇಲ್ಲದಿದ್ರೂ ಅಬ್ಬರದ ಬ್ಯಾಟಿಂಗ್‌ ಮೂಲಕ ಮಿಂಚು ಹರಿಸಿದ್ರು. ಅದ್ರಲ್ಲೂ ಧೋನಿಯ ಹೆಲಿಕಾಪ್ಟರ್‌ ಶಾಟ್‌ ಕ್ರಿಕೆಟ್‌ ಪ್ರಿಯರ ಮನ ಗೆದ್ದಿತ್ತು.
ಈ ನಡುವೆ, ಧೋನಿಯ ನಾಯಕತ್ವದ ಬಗ್ಗೆ ಸಂಶೋಧನೆ ಕೂಡ ನಡೆಯಿತ್ತು. ಮುಖ್ಯವಾಗಿ ಧೋನಿಯ ಬ್ರೈನ್‌ ಹೇಗೆಲ್ಲಾ ವರ್ಕ್‌ ಆಗುತ್ತೆ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸಲು ಮುಂದಾದ್ರು. ಅಷ್ಟರ ಮಟ್ಟಿಗೆ ಧೋನಿಯ ಲೀಡರ್‌ಶಿಪ್‌ ಕ್ವಾಲಿಟಿ ಫೇಮಸ್ .
ಆದ್ರೆ ಈಗ ಧೋನಿಗೆ ಏನಾಗಿದೆ. ಮಾಹಿಯ ಮಹಿಮೆ ಯಾಕೆ ಮಂಕಾಗಿದೆ. ಕೂಲ್‌ ಕ್ಯಾಪ್ಟನ್‌ಗೆ ಅದೃಷ್ಟ ಕೈಕೊಟ್ಟಿತ್ತಾ.. ಧೋನಿಯ ಅದೃಷ್ಟದಿಂದಲೇ ಟೀಮ್ ಇಂಡಿಯಾ ಶ್ರೇಷ್ಠ ತಂಡವಾಗಿ ಹೊರಹೊಮ್ಮಿರುವುದಾ... ಈ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರವಿಲ್ಲ.
ಯಾಕಂದ್ರೆ ಕಾಲಚಕ್ರ... ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಜಗದ ನಿಯಮ ಕೂಡ ಹೌದು. ಯಶಸ್ಸಿನ ಉತ್ತುಂಗಕ್ಕೇರಿದ ಧೋನಿ ಸದ್ಯ ಹಿನ್ನಡೆ ಅನುಭವಿಸಿರಬಹುದು. ಹಾಗಂತ ಈಗ ಧೋನಿಯ ನಾಯಕತ್ವವನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಜಸ್ಟ್‌ ಬ್ಯಾಡ್‌ ಟೈಮ್‌ ಅಷ್ಟೇ. ಏನೇ ಆದ್ರೂ, ಧೋನಿ ಮುಂದಿನ ದಿನಗಳಲ್ಲಿ ಮತ್ತೆ ತಂಡವನ್ನ ಗೆಲುವಿನತ್ತ ಕೊಂಡೋಯ್ಯುತ್ತಾರೆ ಅನ್ನೋ ನಂಬಿಕೆ ಇದೆ. ಆಲ್‌ ದಿ ಬೆಸ್ಟ್‌ ಮಾಹಿ..
ಸನತ್‌ ರೈ

Saturday, February 18, 2012

ಮೈ ಡಿಯರ್ ಸಿಸ್ಟರ್ಸ್ ಅಂಡ್ ಬ್ರದರ್ಸ್

ಸೆಪ್ಟೆಂಬರ್ 11, 1893..
ಚಿಕಾಗೋದಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಮಟ್ಟದ ಸಭೆ.. ಗದ್ದಲ ತುಂಬಿದ್ದ ಆವರಣದಲ್ಲಿ ಇದ್ದಕ್ಕಿದ್ದಂತೆ ಕಂಚಿನ ಕಂಠವೊಂದರ ಪ್ರತಿಧ್ವನಿ. ಇದ್ದಕ್ಕಿದ್ದಂತೆ ಇಡೀ ಸಭಾಂಗಣವೇ ನಿಶ್ಯಬ್ದ.
ವೇದಿಕೆ ಮೇಲೆ ನಿಂತಿದ್ರು ಆ ಆಜಾನುಬಾಹು, ಮೈ ಡಿಯರ್ ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ ಅಂತ ತನ್ನ ಭಾಷಣ ಶುರುಮಾಡಿದ್ದೇ ತಡ ನೆರೆದಿದ್ದ 7 ಸಾವಿರ ಮಂದಿ ಶಿಲೆಗಳಂತೆ ನಿಂತುಬಿಟ್ರು.. ಹಾಗಿತ್ತು ಆ ಆಜಾನುಬಾಹು ಆಡಿದ ಶೈಲಿ.. ಇಡೀ ಜಗತ್ತನ್ನೇ ಮೋಡಿ ಮಾಡಿದ್ದ 3 ನಿಮಿಷಗಳ ಭಾಷಣ ಇತಿಹಾಸವಾಗಿ ಬದಲಾಗಿತ್ತು.
ಆ ಮಹಾನ್ ಮಾನವನೇ ಸ್ವಾಮಿ ವಿವೇಕಾನಂದರು... ಈ ದೈವೀಪುರುಷ ಬದುಕಿದ್ದು ಕೆಲವೇ ವರ್ಷಗಳಾಗಿದ್ರೂ, ತಮ್ಮ ಆದರ್ಶಗಳಿಂದಲೇ ವಿಶ್ವಮಾನವಾಗಿ ಪ್ರಜ್ವಲಿಸಿದ್ರು. ಜನವರಿ 12, 1863ರಲ್ಲಿ ಕೊಲ್ಕತ್ತಾದಲ್ಲಿ ಹುಟ್ಟಿದ್ದ ನರೇಂದ್ರ ನಂತ್ರ ವಿವೇಕಾನಂದರಾಗಿ ಬದಲಾಗಿದ್ದು ಒಂದು ರೋಚಕ ಅಧ್ಯಾಯ.
ವಿವೇಕಾನಂದರು ಅಂದ್ರೆ ಯುವಕರಿಗೆ ಏನೋ ಒಂದು ರೀತಿ ಸ್ಫೂರ್ತಿ.. ಯಾಕಂದ್ರೆ ಅವರ ದೇಶಪ್ರೇಮ, ತಾಯ್ನಾಡ ಮೇಲಿನ ಮಮತೆ, ಸಾಮಾಜಿಕ ಕಾಳಜಿ ಎಲ್ಲವೂ ಅನುಕರಣೀಯ. ಒಬ್ಬ ಮಹಾಮಾನವಾಗಿ, ಭಾರತಾಂಬೆಯ ಸುಪುತ್ರನಾಗಿರುವ ವಿವೇಕಾನಂದರ ಜನ್ಮದಿನವನ್ನ ರಾಷ್ಟ್ರೀಯ ಯುವ ದಿನವನ್ನಾಗಿ ಭಾರತ ಸರ್ಕಾರ 1984ರಲ್ಲಿ ಘೋಷಿಸಿತು. ಹೀಗಾಗಿ ಜನವರಿ 12 ಯುವಕರಿಗೆ ಮಹತ್ವದ ದಿನ.
ಮಾನವತಾವಾದ, ಶಿಕ್ಷಣಕ್ಕೆ ಹೊಸ ಅರ್ಥಕೊಟ್ಟಿದ್ದು ವಿವೇಕಾನಂದರು. ಧರ್ಮ ಅನ್ನೋದು ಕೇವಲ ತಾಯ್ನಾಡಿನ ಪ್ರತಿನಿಧಿಯಾಗಿರಬೇಕು. ನವ ಭಾರತದ ಜ್ಯೋತಿ ಪ್ರಜ್ವಲಿಸಬೇಕಾದ್ರೆ ಯುವಶಕ್ತಿಯ ಬೆವರಿನ ಎಣ್ಣೆ ಹರಿಯಲೇ ಬೇಕು ಅನ್ನೋದನ್ನ ಸಾರಿದ ಮಹಾತ್ಮ ವಿವೇಕಾನಂದರು.
ಯುವಶಕ್ತಿ ಮೇಲೇ ವಿವೇಕಾನಂದರಿಗೆ ಅಪಾರ ನಂಬಿಕೆ. ದೇಶ ಬದಲಾಗಬೇಕು ಅಂದ್ರೆ ಯುವಶಕ್ತಿ ವ್ಯರ್ಥವಾಗದೆ ಒಂದಾಗಿ ದುಡಿಬೇಕು. ಇದ್ರಿಂದಲೇ ಸಾಮಾಜಿಕ ಕ್ರಾಂತಿ ಸಾಧ್ಯ ಅಂತ ವಿವೇಕರು ಹೇಳಿದ್ರು. ಯುವ ರಕ್ತದ ಮೇಲೆ ಅದೆಷ್ಟು ನಂಬಿಕೆ ಅಂದ್ರೆ, ನನಗೆ ಮಹತ್ವಾಂಕ್ಷೆ ಇರುವ 100 ಯುವಕರನ್ನು ಕೊಡಿ, ಹೊಸ ಭಾರತ ಕಟ್ಟುತ್ತೇನೆ ಅಂತ ವಿವೇಕರು ಎದೆಯುಬ್ಬಿಸಿ ಹೇಳಿದ್ರು.
ಆದ್ರೆ ವಿವೇಕಾನಂದರು ಕಂಡಿದ್ದ ನವ್ಯಭಾರತದ ಕನಸು ನನಸಾಗಬಹುದಾ.. ಈ ಪ್ರಶ್ನೆ ಎದುರಾದ್ರೆ ಲೆಕ್ಕವಿಲ್ಲದಷ್ಟು ಜಿಜ್ಞಾಸೆಗಳು ಎದುರಾಗುತ್ತವೆ.. ಆ ಮಹಾಪುರುಷನ ಆಶಯವೇನು..ಹೇಗಿದೆ ಈಗಿನ ಸಮಾಜ.. ಹೇಗಿದ್ದೇವೆ ನಾವು ನೀವುಗಳು.. ಎಲ್ಲಿ ಹೋಯ್ತು ವಿವೇಕಾನಂದರ ಕಲ್ಪನೆಯ ಯುವ ಸಮಾಜ.. ವಿವೇಕಾನಂದರ ಕಲ್ಪನೆಯ ನೇತಾರರಾದ ನಾವು ನೀವುಗಳೇ ಇದಕ್ಕೆ ಉತ್ತರಿಸಬೇಕು..

ಪ್ರಶಾಂತ್‌ಬಿ.ಆರ್‌.

ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು...-1

(ಸ್ವಗತ
ಅಮ್ಮಂಗೆ ಆ ಡಾಕ್ಟ್ರು ಹೇಳಿದ್ ಮಾತ್ರೆ ತಗೊಂಡ್ಬೇಕು.. ಮನೆಗೆ ಸ್ಪಲ್ಪ ಸಾಮಾನ್ ತೊಗೋಂಡು ಹೋಗ್ಬೇಕು.. ಆದ್ರೆ .. ಛೇ.. ಏನ್ಮಾಡ್ಲಿ.. ( ಬಾಟಲಿ ಒದೆಯೋ ಶಾಟ್ )
ನಾನೂ ಆಗ್ಲೇ ಚೆನ್ನಾಗಿ ಓದಿದ್ರೆ.. ಒಂದು ಗೌರ್ಮೆಂಟ್ ಕೆಲ್ನಾ ಸಿಕ್ತಿದ್ರೆ.. ಕೈ ತುಂಬಾ ಸಂಬ್ಳ, ತಿರುಗೋಕೆ ಕಾರು, ಮಜ್ವಾಗಿರ್ತಿತ್ತು. ಆದ್ರೆ ಏನ್ಮಾಡೋದು ಅಣೆಬರನೇ ಸರಿ ಇಲ್ಲಾ ಅನ್ಸುತ್ತೆ..
ಇಲ್ಲ.. ಈ ಥರ ಸುಮ್ನೆ ಕೂತ್ರೆ ಅಮ್ಮಂಗೆ ಔಷ್ದಿ ಬರಲ್ಲ. . ಮನೆಗೆ ಅಕ್ಕಿ ಬೇಳೆ ಬರಲ್ಲ.. ಇಲ್ಲ ನಾನು ಏನಾದ್ರೂ ಮಾಡ್ಬೇಕು.. ಏನಾದ್ರೂ ಕೆಲ್ಸ ಮಾಡಬೇಕು.. ಚೆನ್ನಾಗಿ ದುಡಿಬೇಕು.. ಹಾ...////
ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು

ಹೆತ್ತೊಡಲಿಗೆ ನೆರವಾಗಬೇಕು, ಹಸಿದ ಹೊಟ್ಟೆ ಹೊರೆಯಬೇಕು.. ಖಾಯಿಲೆ ಕಸಾಲೆಗಳನ್ನು ನಿಭಾಯಿಸುತ್ತಾ ನಂಬಿದವರಿಗೆ ಆಸರೆಯಾಗಬೇಕು.. ಆದ್ರೆ ಇದಕ್ಕೊಂದು ಕೆಲಸ ಬೇಕು. . ಆದ್ರೆ ಇದಕ್ಕೆ ಬೇಕಾದ ವಿದ್ಯೆಯೂ ಇಲ್ಲ, ನಮ್ಮನ್ನ ಹೇಳುವವರು ಕೇಳುವವರಿಲ್ಲ.. ಇದು ಈಗಿನ ಅದೆಷ್ಟೋ ಯುವ ಮನಸ್ಸುಗಳ ಕೊರಗು..

ಯಾವುದೋ ಕಾರಣಕ್ಕೆ ಓದೋದಿಕ್ಕೆ ಸಾಧ್ಯವಾಗೋದಿಲ್ಲ. . ಉತ್ತಮ ಬದುಕು ಕಾಣಲು ಮನೆಯಲ್ಲಿ ಪೂರಕ ವಾತಾವರಣವಿಲ್ಲ. ಇದಿಷ್ಟಕ್ಕೆ ಅರಳಬೇಕಾದ ಮನಸ್ಸುಗಳು ಮುದುಡುತ್ತವೆ.. ತಾನು ಯಾವುದಕ್ಕೂ ಸುಖವಿಲ್ಲ, ತಾನು ಯಾರಿಗೂ ಬೇಕಾಗಿಲ್ಲ. ತಾನಿಂದ ಏನೂ ಆಗಬೇಕಿಲ್ಲ ಅನ್ನೋ ಮನೋಭಾವನೆಯಲ್ಲೇ ತಮ್ಮ ಯವ್ವನವನ್ನ ಕಳೆದವರು ಅದೆಷ್ಟೋ ಮಂದಿ.. ಇನ್ನು ಕೆಲವರಿಗೆ ತಾವು ಓದಿಲ್ಲ, ಒಳ್ಳೇ ಕೆಲಸ ಸಿಕ್ಕೋದಿಲ್ಲ ಅಂತ ಬೇಸರ. ಮತ್ತೆ ಕೆಲವರು ನಾನು ಹಾಗಾಗಿದ್ರೆ, ಹೀಗಾಗಿದ್ರೆ ಅನ್ನೋ ಕಲ್ಪನೆಗಳಲ್ಲೇ ಮುಳುಗಿ ರಸ್ತೆಗಳಲ್ಲಿ, ಪಾರ್ಕ್ ಗಳಲ್ಲಿ ಅಂಡಲೆದಾಡಿ ಕೊನೆಗೆ ನಿದ್ದೆಯಲ್ಲೇ ತಮ್ಮ ಆಯಸ್ಸು ಮುಗಿಸುವವರಿಗೇನೂ ಕಮ್ಮಿ ಇಲ್ಲ..

ಹೌದು, ಭವಿಷ್ಯವನ್ನ ಬದಲಾಯಿಸಲು ಸಾಧ್ಯವಿಲ್ಲ. ಆದ್ರೆ ಹವ್ಯಾಸವನ್ನ ಬದಲಾಯಿಸಬಹುದು.. ಹವ್ಯಾಸ ಬದಲಾದ್ರೆ ಭವಿಷ್ಯ ಕೂಡ ಬದಲಾಗುತ್ತೆ. ಇದಕ್ಕೆ ಅನ್ನೋದು ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಅಂತ. ಆದ್ರೆ ಇಂದಿನ ಯುವ ಜನಾಂಗ ಇದ್ರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೇಗೋ ಜೀವನ ಸಾಗಿಸಿದ್ರೆ ಸಾಕು.. ಬೇರೆಯವರ ಸಮಸ್ಯೆಗಳನ್ನ ಕಟ್ಟಿಕೊಂಡು ನಮಗೆ ಏನಾಗಬೇಕು ಅನ್ನೋ ಸ್ವಾರ್ಥ ಬುದ್ದಿಯೇ ಜಾಸ್ತಿಯಾಗುತ್ತಿದೆ.

ಒಂದಂತೂ ನಿಜ, ಇಂದಿನ ಯುವ ಸಮುದಾಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡ್ತಾ ಇದೆ. ಯಾರು ಯಾರಿಗೂ ಬುದ್ಧಿ ಹೇಳುವ ಹಾಗಿಲ್ಲ. ಎಲ್ರೂ ತಪ್ಪಿತಸ್ಥರೇ. ಇದ್ರಿಂದ ಸಮಾಜ ಉದ್ದಾರವಾಗುತ್ತೆ ಅನ್ನೋದು ಮುರ್ಖತನವೇ ಸರಿ. ಸ್ವಾಮಿ ವಿವೇಕಾನಂದ – ಗಾಂಧೀಜಿಯವರ ತತ್ವ ಸಿದ್ಧಾಂತಗಳು ನಮ್ಮ ಯುವ ಜನತೆಗೆ ಬೇಕಾಗಿಲ್ಲ. ಬದಲಾಗಿ ಸಿನಿಮಾ ತಾರೆಯರು, ಕ್ರಿಕೆಟಿಗರು ಯುವ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಹಾಗಂತ ಇದು ತಪ್ಪು ಅಂತಲೂ ಹೇಳುವ ಹಾಗಿಲ್ಲ. ಆದ್ರೆ ಅತೀಯಾದ ಅಭಿಮಾನ ಕೊನೆಗೆ ಮುಳುವಾಗುತ್ತೆ. ಸ್ವಾರ್ಥ ಸಮಾಜದಲ್ಲಿ ನಮ್ಮನ್ನು ನಾವೇ ಮರೆತುಬಿಡುತ್ತೇವೆ.

ಅಂದ ಹಾಗೇ, ಸಮಾಜ ನಂಬಿಕೆ ಮೇಲೆ ನಿಂತಿದೆ ಆದ್ರೆ ಅಲ್ಲಿ ನಂಬಿಕೆಯೇ ಇಲ್ಲ ಅಂದ ಮೇಲೆ ಯಾವುದನ್ನ ನಿರೀಕ್ಷೆ ಮಾಡುವಂತಿಲ್ಲ. ವೈರಾಗ್ಯ, ಮತ್ಸರ, ಕಲಹದಿಂದಾಗಿ ಸಮಾಜದಲ್ಲಿ ವಿದ್ವಂಸಕ ಘಟನೆಗಳು ನಡೀತಾ ಇರ್ತಾವೆ. ಇನ್ನೊಂದೆಡೆ ರಾಜಕೀಯ ಮತ್ತು ರಾಜಕಾರಣಿಗಳ ಸ್ವಾರ್ಥದಿಂದಲೂ ಯುವ ಜನಾಂಗ ಅಲ್ಲೋಲಕಲ್ಲೋಲವಾಗುತ್ತಿದೆ.

ಇನ್ನು, ಸ್ವತಂತ್ರವಾಗಿ ಬದುಕುವ ಹಕ್ಕು ನಮ್ಮಗಿದ್ರೂ ನೆಮ್ಮದಿ ಇಲ್ಲ.. ಭದ್ರತೆನೂ ಇಲ್ಲ. ನೆರಳು ಕೂಡ ಇಲ್ಲ. ಒಗ್ಗಟ್ಟಂತೂ ಇಲ್ಲವೇ ಇಲ್ಲ. ಕೆಲಸ ಮುಗಿದ ಮೇಲೆ ಅವನ್ಯಾರೋ, ನಾನ್ಯಾರೋ ಅನ್ನೋ ಪರಿಸ್ಥಿತಿ ಇದೆ. ಪರಸ್ಪರ ಅಪನಂಬಿಕೆಯಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಇದ್ರಿಂದ ನಾವು ಹೊರಬ ರಬೇಕು... ಸಮಾಜಕ್ಕೆ ಬೇಲಿಯ ಹಾಗೇ ಭದ್ರತೆ ನೀಡಬೇಕು.. ಮರಗಳ ಹಾಗೇ ನೆರಳು ನೀಡಬೇಕು..ಸಾಲಕ್ಕಿಗಳಂತೆ ಒಗ್ಗಟ್ಟಿನಿಂದಿರಬೇಕು..ಆಗ ಸಮೃದ್ಧ ಸಮಾಜವನ್ನ ಕಟ್ಟಬಹುದು. ಆದ್ರೆ ಇದಕ್ಕೆಲ್ಲಾ ನಾವು ಮನಸ್ಸು ಮಾಡಬೇಕು ಅಷ್ಟೇ..
ನಿಜ, ಕಾಲೇಜು ಶಿಕ್ಷಣದ ಜೊತೆ ಜೀವನ ಶಿಕ್ಷಣ ನೀಡಬೇಕು..ಕಾಲೇಜಿನಲ್ಲಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮಾದರಿಗಳಾಗಬೇಕು..ಸಿರಿವಂತ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಕೂಡ ಬಡ ರೈತನ ಮಕ್ಕಳ ಜೊತೆ ಮುಕ್ತವಾಗಿ ಬೆರೆಯುವಂತಾಗಬೇಕು.ಸಮಾಜದ ಮೇಲು ಕೀಳು ಹೊಡೆದಟ್ಟಿ ಸಾಮರಸ್ಯದ ಬೀಜ ನೆಡಬೇಕು. ಆಗ ಮಾತ್ರ ಯುವಕ ಯುವತಿಯರ ಕಣ್ಣಲ್ಲಿ ಸ್ಪಷ್ಟ ಗುರಿ ಮೂಡುತ್ತೆ.

ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಮೈಗೂಡಿಸಿಕೊಂಡಾಗ ವಿವೇಕಾನಂದರು ಯುವಕರ ಮೇಲಿಟ್ಟ ವಿಶ್ವಾಸಕ್ಕೆ ಅರ್ಥ ಬರುತ್ತೆ. ಗಾಂಧೀಜಿಯ ರಾಮ ರಾಜ್ಯದ ಕನಸು ನನಸಾಗುತ್ತೆ. ಆದ್ರೂ ಇವೆಲ್ಲಾ ಆಗುತ್ತಾ.. ಆಗುತ್ತೆ. ಬದಲಾಗುವುದಾದ್ರೆ ಈ ಲೋಕ, ನೀ ಬದಲಾದ್ರೆ, ಸರಿಯಾಗೋದು ಈ ಸಮಾಜ, ನೀ ಮೊದಲಾದ್ರೆ...ಬನ್ನಿ ಬದಲಾಗೋಣ..
ಕೆಟ್ಟದ್ದನ್ನು ಕೇಳಬೇಡ.. ಕೆಟ್ಟದ್ದನ್ನ ನೋಡಬೇಡ... ಕೆಟ್ಟದ್ದನ್ನ ನುಡಿಯಬೇಡ....

ಸನತ್ ರೈ

ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು...

ಬದುಕಿನ ಬಗ್ಗೆ ನಿಖರವಾದ ಗುರಿಯನ್ನ ಹೊಂದಿರಬೇಕು. ಜೀವನದಲ್ಲಿ ನಾನು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇನೆ ಅನ್ನೋ ಪರಿಜ್ಞಾನವನ್ನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತೆ. ದೇಶ ಪ್ರೇಮವೂ ಬೆಳೆಯುತ್ತೆ..
ಆದ್ರೆ, ಎತ್ತ ಸಾಗುತ್ತಿದೆ ನಮ್ಮ ಯುವ ಸಮುದಾಯ. ಈ ಪ್ರಶ್ನೆಗೆ ನಿರ್ಧಿಷ್ಟವಾದ ಉತ್ತರ ಮಾತ್ರ ಸಿಗಲ್ಲ. ಯಾಕಂದ್ರೆ ಇವತ್ತಿನ ಯುವ ಜನತೆಗೆ ಬದುಕು ಅನ್ನೋದು ದಿಕ್ಸೂಚಿ ಇಲ್ಲದ ಹಡಗಿನಂತಾಗಿದೆ. ಜಸ್ಟ್‌ ಲೈಫ್‌ ಅನ್ನು ಎಂಜಾಯ್‌ ಮಾಡಬೇಕು ಅಷ್ಟೇ.ಮೋಜು, ಮಸ್ತಿ ಅಂತ ಬಿಂದಾಸ್‌ ಲೈಫ್‌ಗೆ ಒಗ್ಗಿಕೊಂಡಿರುವ ಯುವ ಸಮುದಾಯ ಹಾದಿ ತಪ್ಪುತ್ತಿದೆ.
ಹೌದು, ಸಿರಿತನದ ಆಮಲಿನಲ್ಲಿ ಎಲ್ಲವನ್ನ ಮರೆಯುತ್ತಾರೆ. ದುಡ್ಡಿಗಾಗಿ ಕೊಲೆ ಮಾಡುವುದಕ್ಕೂ ಹೇಸುವುದಿಲ್ಲ. ಅಣ್ಣ –ತಮ್ಮ, ಅಕ್ಕ- ತಂಗಿ, ಅಪ್ಪ-ಅಮ್ಮ, ಸ್ನೇಹ ಅನ್ನೋ ಸಂಬಂಧಗಳು ಕಿಮ್ಮತ್ತು ಕಳೆದುಕೊಳ್ತಾ ಇವೆ. ಹೆಸರು, ಪ್ರತಿಷ್ಠೆ, ದುಡ್ಡಿಗೋಸ್ಕರ ರಕ್ತ ಹರಿಸುತ್ತಾರೆ . ಪರಿಣಾಮ ಪ್ರತಿ ದಿನ ನೂರಾರು ಯುವಕ, ಯುವತಿಯರು ಅಪರಾಧಿಗಳಾಗುತ್ತಿದ್ದಾರೆ. ಬದುಕಿನಲ್ಲಿ ಕಟ್ಟಿಕೊಂಡ ಸುಂದರ ಕನಸುಗಳಿಗೆ ತಾವಾಗಿಯೇ ಕೊಳ್ಳಿ ಇಟ್ಟುಕೊಳ್ಳುತ್ತಾರೆ.
ಅಷ್ಟೇ ಅಲ್ಲ, ಗೊತ್ತು ಗೊತ್ತಿದ್ರೂ ನಮ್ಮ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದು ಎಷ್ಟರ ಮಟ್ಟಿಗೆ ಅಂದ್ರೆ ಶಾಲಾ - ಕಾಲೇಜ್‌ ಮಟ್ಟದಲ್ಲೇ ಡ್ರಗ್‌ ಮಾಫಿಯಾದ ಸುಳಿಯಲ್ಲಿ ಸಿಲುಕಿಕೊಳ್ತಾರೆ. ಸಿಗರೇಟ್‌, ಗುಟ್ಕಾ, ಆಫೀಮ್‌, ಗಾಂಜಾ, ಬ್ರೌನ್‌ ಶುಗರ್‌ ಮೊದಲಾದ ಚಟಕ್ಕೆ ಬಿದ್ದು ನರಳಾಡ್ತಾರೆ. ಹಾಗೇ ಡ್ರಿಂಗ್ಸ್‌, ರೇವಾ ಪಾರ್ಟಿ, ರೈನ್‌ ಡಾನ್ಸ್‌ ಅಂತ ಕುಣಿದು ಕುಪ್ಪಳಿಸುತ್ತಾರೆ. ಅಂಬಿಗನಿಲ್ಲದ ದೋಣಿಯಂತೆ ಜೀವನ ಸಾಗಿಸುತ್ತಿರುವ ಯುವ ಜನತೆಗೆ ಸಮಾಜ ಹೇಗಿದ್ರೆ ಏನಂತೆ... ತಾವು ಮಾತ್ರ ಹಾಯಾಗಿರಬೇಕು ಅನ್ನೋ ಮನೋಭಾವನೆ ಬೆಳೆದುಬಿಟ್ಟಿದೆ.
ಹೀಗೆ ಅಡ್ಡ ದಾರಿ ಹಿಡಿಯುವ ಯುವ ಜನಾಂಗಕ್ಕೆ ಒಂದಲ್ಲ ಒಂದು ದಿನ ಜ್ಞಾನದೋಯವಾಗುತ್ತೆ. ಆದ್ರೆ ಆಗ ಕಾಲ ಮಿಂಚಿ ಹೋಗಿರುತ್ತೆ. ಮಾಡಿರೋದು ತಪ್ಪು... ಸಮಾಜದಲ್ಲಿ ಬದುಕೋದು ಹೇಗೆ ಅಂತ ಯೋಚನೆ ಮಾಡ್ತಾರೆ. ಜತೆಗೆ ಸಮಾಜ ಕೆಟ್ಟ ದೃಷ್ಟಿಯಿಂದ ನೋಡ್ತಾ ಇದ್ದಾಗ ಸಹಜವಾಗಿ ಖಿನ್ನತೆಗೆ ಒಳಪಡುತ್ತಾರೆ. ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟ, ಪ್ರೀತಿ- ವಿಶ್ವಾಸದ ಕೊರತೆಯಿಂದ ಹತಾಶೆಗೆ ಒಳಪಡುತ್ತಾರೆ. ತಮಗೆ ಬದುಕೇ ಬೇಡ ಅಂತ ತೀರ್ಮಾನ ಕೂಡ ಮಾಡ್ತಾರೆ. ಆಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರ್ತಾರೆ.
ಅಂದ ಹಾಗೇ, ಎಲ್ಲಾ ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ. ಎಷ್ಟೇ ತಪ್ಪು ಮಾಡಿದ್ರೂ, ಹಾದಿ ತಪ್ಪಿದ್ರೂ ಸಮಾಜದಲ್ಲಿ ಬದುಕಲು ಅವಕಾಶವಿದೆ. ಆದ್ರೆ ಇದಕ್ಕೆಲ್ಲಾ ತಾಳ್ಮೆ ಬೇಕು. ಧೈರ್ಯಬೇಕು.. ಆತ್ಮವಿಶ್ವಾಸಬೇಕು. ಸಮಾಜದಲ್ಲಿ ಬೇರೆಯವರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಅನ್ನೋ ಛಲವನ್ನ ಬೆಳೆಸಿಕೊಳ್ಳಬೇಕು. ಆದ್ರೆ, ಅದು ಕೆಲವು ದಿನಗಳಿಗೆ ಸೀಮಿತವಾಗಿರಬಹುದು. ಬದಲಾಗಿ ದಿನಚರಿಯಾಗಿ ಮುಂದುವರಿಸಿಕೊಂಡು ಹೋಗಬೇಕು. ಆಗ ಮಾತ್ರ ಯಶ ಸಾಧಿಸಬಹುದು..
ಹೌದು, ಈ ಯುವತಿಯದ್ದು ಸಿನಿಮಾ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ನೈಜ ಘಟನೆ... ಅನಾಥೆಯಾಗಿ ಜನಿಸಿದ ಈ ಹುಡುಗಿಗೆ ದತ್ತು ಪುತ್ರಿಯಾಗಿ ಅಪ್ಪ-ಅಮ್ಮನ ಪ್ರೀತಿ ಸಿಕ್ಕಿತ್ತು. ಆದ್ರೆ ಅತೀಯಾದ ಪ್ರೀತಿಯೇ ಅವಳ ಬದುಕಿನ ದಿಕ್ಕನ್ನು ತಪ್ಪಿಸಿತ್ತು. ಸ್ಮೊಕಿಂಗ್‌ , ಡ್ರಿಂಕ್ಸ್‌ ಚಟವನ್ನ ಬೆಳೆಸಿಕೊಂಡ ಈ ಹುಡುಗಿ ತನ್ನ ಅಪ್ಪನಿಂದಲೇ ಆತ್ಯಾಚಾರಕ್ಕೆ ಬಲಿಯಾದಳು. ಅಲ್ಲಿಂದ ಮುಂದಕ್ಕೆ ಅವಳ ಬದುಕು ನರಕವಾಯ್ತು.
ಅಪ್ಪನ ಕಿರುಕುಳ, ದುಶ್ಚಟಗಳಿಗೆ ಬಲಿಯಾದ ಈ ಹುಡುಗಿ ಮನೆ ಹೊಸ್ತಿಲನ್ನ ದಾಟಿ ಬಂದಳು. ಹೀಗೆ ಬೀದಿಗೆ ಬಂದ ಹುಡುಗಿ ಪ್ರೀತಿಯ ಬಲೆಯೊಳಗೆ ಸಿಲುಕಿದಳು. ಪ್ರೀತಿಸಿದ ಹುಡುಗ ತನಗೆ ಬಾಳು ಕೊಡ್ತಾನೆ ಅಂತ ನಂಬಿಬಿಟ್ಟಳು. ಆದ್ರೆ ಅಲ್ಲೂ ಕೂಡ ಆಕೆ ನಿರಾಸೆಯನ್ನೇ ಅನುಭವಿಸಬೇಕಾಯ್ತು. ಹುಡುಗನ ಮನೆಯವರಿಗೆ ಬೇಡವಾದ ಈಕೆ ತುಂಬು ಗರ್ಬಿಣಿಯಾಗಿ ಬೀದಿಗೆ ಬಂದಳು.. ಆದ್ರೂ ಆತ್ಮವಿಶ್ವಾಸವನ್ನ ಕಳೆದುಕೊಳ್ಳಲಿಲ್ಲ. ತನ್ನ ಮಗುವಿಗಾಗಿ ಬದುಕು ಸಾಗಿಸಬೇಕು ಅಂತ ಅಂದುಕೊಂಡಿದ್ರೂ ದುಶ್ಚಟಗಳನ್ನ ಮಾತ್ರ ಬಿಡಲಿಲ್ಲ. ಕೊನೆಗೆ ಈಕೆ ಮಗುವಿನಿಂದಲೂ ದೂರವಾದಳು.ಕ್ರಮೇಣ ಮಗುವಿನ ಮೇಲಿರುವ ಅಮ್ಮನ ಪ್ರೀತಿಯೇ ಈಕೆಯ ಬದುಕಿನ ಗತಿಯನ್ನ ಬದಲಾಯಿಸಿಬಿಟ್ಟಿತ್ತು.
ಇನ್ನೊಬ್ಬ ಹುಡುಗನ ಸ್ಟೋರಿನೇ ಡಿಫರೆಂಟ್‌.... ಮೀಸೆ ಚಿಗುರುವ ಮುನ್ನವೇ ಡ್ರಗ್ಸ್‌ ಗೆ ಎಡಿಕ್ಟ್‌ ಆಗಿಬಿಟ್ಟಿದ್ದ. ಹೈಸ್ಕೂಲ್‌ನಲ್ಲಿರುವಾಗಲೇ ವೈಟ್ನರ್‌ ವ್ಯಸನಿಯಾದ ಈ ಹುಡುಗ ದಾರಿ ತಪ್ಪಿದ. ಒಂದೆಡೆ, ಅಜ್ಜಿ ಮತ್ತು ಅಮ್ಮನ ಅತೀಯಾದ ಪ್ರೀತಿಯ ಜತೆಗೆ ಪೊರ್ಕಿ ಗೆಳೆಯರ ಒಡನಾಟದಿಂದ ದುಶ್ಚಟಗಳ ದಾಸನಾದ. ಪರಿಣಾಮ ಮನೆ ಬಿಟ್ಟ ಈ ಹುಡುಗ ಬೀದಿಯಲ್ಲಿ ಅಲೆದಾಟ ನಡೆಸಿದ. ತಾನು ಅಂಟಿಸಿಕೊಂಡ ಚಟದ ದುಡ್ಡಿಗಾಗಿ ಕಳ್ಳತನ ಮಾಡೋಕ್ಕೆ ನಿಂತ ಈತ ಅದಕ್ಕಾಗಿ ಜನರಿಂದ ಧರ್ಮದೇಟನ್ನೂ ತಿಂದ ಉದಾಹ್ರಣೆಗಳು ಈತನ ಬೆನ್ನಿಗಿವೆ. ..
ಇದೀಗ ಇತನಿಗೆ ತನ್ನ ತಪ್ಪಿನ ಅರಿವಾಗಿದೆ. ಈಗಾಗಲೇ ಬೆಂಗಳೂರಿನ ನ್ಯೂ ಡಾನ್‌ ರಿಹಾಬಿಲಿಟೇಷನ್‌ನ ಸೆಂಟರ್‌ನಲ್ಲಿರುವ ಈ ಹುಡುಗನ ಮನ ಪರಿವರ್ತನೆಯಾಗಿದೆ. ಅಷ್ಟೇ ಅಲ್ಲ, ಕೆಲಸ ಮಾಡಿ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಆಸೆಯೂ ಚಿಗುರಿದೆ. ಜತೆಗೆ ಹೆತ್ತಮ್ಮನನ್ನ ಚೆನ್ನಾಗಿ ನೋಡ್ಕೊಬೇಕು ಅನ್ನೋ ಅರಿವು ಕೂಡ ಬಂದಿದೆ..
ಒಟ್ಟಿನಲ್ಲಿ ತಪ್ಪು ಮಾಡೋದು ಸಹಜ. ಆದ್ರೆ ಅದು ತಪ್ಪು ಅಂತ ತಿಳಿದಾಗ ತಿದ್ದಿ ಮುನ್ನೆಡೆಯೊದೆ ಜಾಣತನ. ಆ ಕೆಲಸವನ್ನ ಈತ ಮಾಡಿದ್ದಾನೆ. ಹೀಗೆ ಬೇರೆಯವರ ಹಿತವಚನಗಳನ್ನ ಕೇಳುವುದರ ಜತೆಗೆ ನಮ್ಮತನವನ್ನ ಮೈಗೂಡಿಸಿಕೊಂಡು ಮುನ್ನಡೆದ್ರೆ ಉತ್ತಮ ಸಮಾಜವನ್ನ ಕಟ್ಟಬಹುದು.
ಏನೇ ಆದ್ರೂ, ಜೀವನ ಅಂದ್ರೆ ಸಮಸ್ಯೆಗಳು ಇರೋದು ಸಹಜ. ಅಲ್ಲಿ ಸಂಭ್ರಮ, ನೋವು, ನಿರಾಸೆ, ಹತಾಶೆ ಎಲ್ಲವೂ ಇರುತ್ತೆ. ಎಲ್ಲದಕ್ಕೂ ಸಾವೇ ಅಂತ್ಯವಲ್ಲ. ಎಲ್ಲದಕ್ಕೂ ಪರಿಹಾರ ಇದೆ. ಅದನ್ನ ಹುಡುಕಿಕೊಂಡು ಮುನ್ನಡೆಯಬೇಕು. ಮೊದಲು ನೀ ಬದಲಾಗು... ಬನ್ನಿ ಬದಲಾಗೋಣ...
ಸನತ್ ರೈ

Sunday, January 1, 2012

ಯಾರಿಗೆ ಭಾರತ ರತ್ನ

ಸಚಿನ್‌ ಮತ್ತು ಧ್ಯಾನ್‌ಚಾಂದ್‌ ... ಯಾರು ಶ್ರೇಷ್ಠರು ಅಂತ ಹೇಳುವುದರಲ್ಲಿ ಅರ್ಥವಿಲ್ಲ. ಕ್ರೀಡಾ ಜಗತ್ತಿನಲ್ಲಿ ಇಬ್ರೂ ಮಹಾನ್‌ ಸಾಧಕರು... ಮಾಡಿರುವ ಸಾಧನೆಗಳಿಗೆ ಬೆಲೆ ಕಟ್ಟಲಂತೂ ಸಾಧ್ಯನೇ ಇಲ್ಲ. ಆದ್ರೂ ಇಬ್ರೂ ಈಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಕ್ರೀಡಾ ಸಾಧಕರ ಲೀಸ್ಟ್‌ ನಲ್ಲಿ ಭಾರತ ರತ್ನ ಪ್ರಶಸ್ತಿ ನೀಡುವುದಾದ್ರೆ ಯಾರಿಗೆ ಮೊದಲು ನೀಡಬೇಕು ಅನ್ನೋದು ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿದೆ.

ಹೌದು, ಧ್ಯಾನ್‌ ಚಾಂದ್‌ ಆಟವನ್ನ ನೋಡುವುದೇ ಚಂದ...ಅಂಗಣದಲ್ಲಿ ಮ್ಯಾಜಿಕ್‌ ಮಾಡುತ್ತಿದ್ದ ಧ್ಯಾನ್‌ಚಾಂದ್‌ ಎದುರಾಳಿ ಆಟಗಾರರನ್ನೇ ಬೆರಗುಗೊಳಿಸುತ್ತಿದ್ರು. ಅಂತಹ ಮಾಂತ್ರಿಕ ಶಕ್ತಿ ಧ್ಯಾನ್‌ ಚಾಂದ್‌ಗಿತ್ತು... ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ ಮನ್‌ ರನ್‌ ದಾಖಲಿಸುವ ಹಾಗೇ ಧ್ಯಾನ್‌ ಚಾಂದ್‌ ಹಾಕಿಯಲ್ಲಿ ಸಲೀಸಾಗಿ ಗೋಲು ದಾಖಲಿಸುತ್ತಿದ್ರು. flow…
ಇನ್ನು, ಸಚಿನ್‌ ತೆಂಡುಲ್ಕರ್‌.. ಹೇಳಬೇಕಾದ ಅಗತ್ಯವೇ ಇಲ್ಲ.. ಎಲ್ರಿಗೂ ಗೊತ್ತಿರುವ ಚಿರಪರಿಚಿತ ಹೆಸರು.. ಸೂಜಿಗಲ್ಲಿನಂತೆ ಆಕರ್ಷಿಸುವ ಸಚಿನ್ ಬ್ಯಾಟಿಂಗ್‌ ವಿಶ್ವ ಕ್ರಿಕೆಟನ್ನ ಚಕಿತಗೊಳಿಸಿದೆ. ಸುಮಾರು 23 ವರ್ಷಗಳಿಂದ ಕ್ರಿಕೆಟ್‌ ಜಗತ್ತನ್ನ ಆಳುತ್ತಿರುವ ತೆಂಡುಲ್ಕರ್‌ ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆ... ಜಂಟಲ್‌ ಮ್ಯಾನ್‌ ಗೇಮ್‌ನ ಜಂಟಲ್‌ಮ್ಯಾನ್‌ ಆಟಗಾರನೂ ಹೌದು.

ನಿಜ, ಸಚಿನ್‌ ಸಾಧನೆಗೆ ಬಹುತೇಕ ಪ್ರಶಸ್ತಿಗಳು ಅವ್ರ ಹೆಸರಿನಲ್ಲಿ ಅಂಟಿಕೊಂಡಿವೆ. ಆದ್ರೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಗರಿ ಮಾತ್ರ ಇನ್ನೂ ಸೇರಿಕೊಂಡಿಲ್ಲ. ಇದಕ್ಕಾಗಿ ಕೆಲವೊಂದು ಅಡಚಣೆಗಳಿದ್ದವು. ಅದು ಈಗ ನಿವಾರಣೆಯಾಗಿದೆ. ಅಲ್ಲದೆ, ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಅನ್ನೊ ಕೂಗು ಜೋರಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯ ನೀತಿ ನಿಯಮಗಳನ್ನ ಬದಲಾವಣೆ ಮಾಡಲು ಸಮ್ಮತಿ ಕೂಡ ನೀಡಿದೆ.

ಇದ್ರ ಬೆನ್ನಲ್ಲೇ ಸಚಿನ್‌ ಗೆ ಭಾರತ ರತ್ನ ಪ್ರಶಸ್ತಿ ಇಷ್ಟು ಬೇಗ ನೀಡಬಾರದು ಅಂತ ಅಪಸ್ವರದ ಮಾತುಗಳು ಕೇಳಿಬರ್ತಿವೆ. ಸಚಿನ್‌ಗಿಂತ ಮೊದಲು ಧ್ಯಾನ್‌ ಚಾಂದ್‌ಗೆ ಭಾರತ ರತ್ನ ನೀಡಬೇಕು.. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತ್ರದ ದಿನಗಳಲ್ಲಿ ಧ್ಯಾನ್‌ ಚಾಂದ್‌‌ ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್‌ ಪ್ರತಿಭೆ ಇಂದು ನಮ್ಮ ಜತೆ ಇಲ್ಲದಿದ್ರೂ ಅವ್ರ ಆಟದ ನೆನಪು, ಮಾಡಿರುವ ಸಾಧನೆಗಳನ್ನ ಇತಿಹಾಸ ಪುಟಗಳು ಸಾರಿ ಸಾರಿ ಹೇಳ್ತಾವೆ.
ಹಾಗಂತ ಸಚಿನ್‌ಗಿಂತ ಧ್ಯಾನ್‌ಚಾಂದ್‌ ಶ್ರೇಷ್ಠ,.. ಧ್ಯಾನ್‌ಚಾಂದ್‌ಗಿಂತ ಸಚಿನ್‌ ಶ್ರೇಷ್ಠ ಅನ್ನೋದು ಚರ್ಚೆಯ ವಿಷ್ಯವಲ್ಲ. ಸಚಿನ್‌ಗೆ ಇನ್ನೂ 38ರ ಹರೆಯ... ಕ್ರಿಕೆಟ್‌ನಲ್ಲಿ ಸಚಿನ್‌ ಸಾಧಿಸಲು ಇನ್ನೂ ಬೇಕಾದಷ್ಟಿದೆ. ಈ ನಿಟ್ಟಿನಲ್ಲಿ ಧ್ಯಾನ್‌ಚಾಂದ್‌ ನಂತ್ರ ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬಹುದು ಎಂಬುದು ಕೆಲವು ಕ್ರೀಡಾಭಿಮಾನಿಗಳ ವಾದ.. ಆದ್ರೂ ಮತ್ತೆ ಕೆಲವರು ಸಚಿನ್‌ಗೆ ಭಾರತ ರತ್ನನೀಡಬೇಕು ಅನ್ನೋ ಮಾತನ್ನ ಹೇಳುತ್ತಾರೆ.

ಇನ್ನೊಂದೆಡೆ, ಭಾರತದಲ್ಲಿ ಸಚಿನ್‌ಗೆ ಇರುವಷ್ಟು ನೇಮ್‌ - ಫೇಮ್‌ ಧ್ಯಾನ್‌ಚಾಂದ್‌ಗೆ ಖಂಡಿತಾ ಇಲ್ಲ.. ಇದು ನಮ್ಮ ದುರಂತವೋ ಏನೋ.. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ... ಎಂಟು ಬಾರಿ ಒಲಿಂಪಿಕ್‌ ಗೆದ್ದಿರುವ ಹೆಗ್ಗಳಿಕೆ.. ವಿಪರ್ಯಾಸ ಅಂದ್ರೆ ಇಂತಹ ಕ್ರೀಡೆ ಭಾರತದಲ್ಲಿ ಇಂದು ನಶಿಸಿ ಹೋಗ್ತಾ ಇದೆ. ಕಿಂಗ್ ಆಗಿದ್ದ ಭಾರತೀಯ ಹಾಕಿ ಇದೀಗ ಒಲಿಂಪಿಕ್ಸ್‌ ನಲ್ಲಿ ಅರ್ಹತೆ ಪಡೆಯಲು ಪರದಾಡುತ್ತಿದೆ.

ಅಂದ ಹಾಗೇ, ಧ್ಯಾನ್‌ಚಾಂದ್‌ ನಮಗೆಲ್ಲಾ ನೆನಪಾಗೊದು ಆಗಸ್ಟ್‌ 29 ರಂದು ಮಾತ್ರ. ಯಾಕಂದ್ರೆ ಅವತ್ತು ಧ್ಯಾನ್ ಚಾಂದ್‌ ಅವ್ರ ಹುಟ್ಟುಹಬ್ಬ.. ಆ ದಿನವನ್ನ ರಾಷ್ಟ್ರೀಯ ಕ್ರೀಡಾ ದಿನ ಅಂತ ಭಾರತದಲ್ಲಿ ಆಚರಿಸಲಾಗುತ್ತೆ.. ಆದ್ರೆ ಹೆಚ್ಚಿನವರಿಗೆ ಧ್ಯಾನ್‌ಚಾಂದ್‌ ಯಾರು ಅಂತಲೇ ಗೊತ್ತಿಲ್ಲ.. ಕೇವಲ ಹಾಕಿ ಆಡುವವರಿಗೆ ಮಾತ್ರ ಧ್ಯಾನ್‌ಚಾಂದ್‌ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಇದಕ್ಕಾಗಿ ನಾವು ಇಲ್ಲಿ ಯಾರನ್ನ ದೂಷಣೆ ಮಾಡುವಂತಿಲ್ಲ..ಯಾಕಂದ್ರೆ ನಮ್ಮ ವ್ಯವಸ್ಥೆಯೇ ಅಂತಹ ಮಟ್ಟದಲ್ಲಿದೆ. ಆದ್ರೂ ಒಂದು ದಿನವಾದ್ರೂ ಭಾರತೀಯ ಹಾಕಿ ದೇವ್ರನ್ನ ನೆನಪಿಸಿಕೊಳ್ಳುತ್ತೇವೆ ಅನ್ನೋದಷ್ಟೇ ಸಮಾಧಾನ..

ಆದ್ರೆ ಕ್ರಿಕೆಟ್‌ ದೇವ್ರು ಹಾಗಲ್ಲ.. ಪ್ರತಿಯೊಬ್ಬರಿಗೂ ಗೊತ್ತು... ಯಾಕಂದ್ರೆ ಸಚಿನ್‌ ಮಾಡಿರುವ ಮೋಡಿಯೇ ಅಂತಹುದ್ದು. ಜತೆಗೆ ಸಚಿನ್‌ ಸಾಧನೆಗೆ ಕಮರ್ಷಿಯಲ್‌ ಟಚ್‌ ಕೂಡ ಸಿಕ್ತ್‌.. ಗ್ಲಾಮರ್‌ - ಸೆಲೆಬ್ರಿಟಿ, ಕಮರ್ಷಿಯಲ್‌, ಹೀಗೆ ಎಲ್ಲವೂ ಸಚಿನ್ ಆಟಕ್ಕೆ ಮೆರಗನ್ನ ನೀಡಿತ್ತು. ಆದ್ರೆ ಧ್ಯಾನ್‌ಚಾಂದ್‌ ಈ ಎಲ್ಲ ಅವಕಾಶಗಳಿಂದಲೂ ಮರಿಚೀಕೆಯಾಗಿಬಿಟ್ರು...

ಒಟ್ಟಿನಲ್ಲಿ ಭಾರತ ರತ್ನ ಯಾರಿಗೆ ನೀಡಬೇಕು ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸಚಿನ್‌ಗೆ ಮೊದಲು ನೀಡಿದ್ರೆ, ಧ್ಯಾನ್‌ಚಾಂದ್‌ಗೆ ಅವಮಾನ ಮಾಡಿದಂತಾಗುತ್ತೆ.. ಅದೇ ಧ್ಯಾನ್‌ಚಾಂದ್‌ಗೆ ನೀಡಿದ್ರೆ ಸಚಿನ್‌ ಅಭಿಮಾನಿಗಳಿಗೆ ಬೇಸರವಾಗುತ್ತೆ. ಇದ್ರಿಂದ ಪ್ರಶಸ್ತಿಗೆ ಆಯ್ಕೆಮಾಡುವಾಗ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತೆ.
ಅದೇನೇ ಇರಲಿ...ಧ್ಯಾನ್‌ಚಾಂದ್‌ ಮತ್ತು ಸಚಿನ್ ತೆಂಡುಲ್ಕರ್‌ ಭಾರತೀಯ ಕ್ರೀಡಾಲೋಕದ ಅನರ್ಘ್ಯ ರತ್ನಗಳು... ಕ್ರೀಡಾ ಜಗತ್ತಿನಲ್ಲಿ ಇವರಿಬ್ರು ಎಲ್ಲವನ್ನೂ ಪ್ರೂವ್‌ ಮಾಡಿದ್ದಾರೆ... ಇನ್ನೂ ಯಾರಿಗೂ ಪ್ರೂವ್‌ ಮಾಡುವಂತಹ ಅಗತ್ಯವೂ ಇಲ್ಲ...ಭಾರತ ರತ್ನ ಪ್ರಶಸ್ತಿ ಇವ್ರ ಸಾಧನೆಗೆ ಹೆಮ್ಮೆ ಗೌರವ ಮೂಡಿಸುತ್ತೆ..
ಸನತ್ ರೈ

ಸಾಕಾರಗೊಂಡ ಕನಸು... 2011..

ಇದು ಚಂದಮಾಮ ಕಥೆಯಲ್ಲ. ಬದುಕಿನಲ್ಲಿ ಅಂದುಕೊಂಡಿರುವುದನ್ನ ಸಾಧಿಸಿದವನ ಕಥೆ.
ಎಲ್ಲಾ ಸಾಧನೆಗಳನ್ನ ಒಂದು ಕ್ಷಣ ನೆನಪಿಸಿಕೊಂಡಾಗ ಅಬ್ಬಾ ಅನ್ಸುತ್ತೆ... ಆದ್ರೂ ಸಮಾಧಾನವಿಲ್ಲ. ತೃಪ್ತಿನೂ ಇಲ್ಲ. ಯಾಕಂದ್ರೆ ಇನ್ನೂ ಸಾಧಿಸಬೇಕು ಅನ್ನೋ ದಾಹ. ಜತೆಗೆ ತಾನು ಏನೋ ಮಿಸ್ ಮಾಡ್ಕೊಂಡಿದ್ದೇನೆ ಅನ್ನೋ ವೇದನೆ...ಹೀಗೆ ಬಹು ದಿನಗಳಿಂದ ಯೋಚನಾ ಲಯರಿಯಲ್ಲಿ ಮುಳುಗಿದ್ದ ಮಹಾನ್‌ ಸಾಧಕ
ಸಚಿನ್ ರಮೇಶ್‌ ತೆಂಡುಲ್ಕರ್‌.
ಕಳೆದ 22 ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಸಾಮ್ರಾಟನಾಗಿ ಮೆರೆಯುತ್ತಿರುವ ಈ ವಾಮನ ಮೂರ್ತಿಯ ಕಿರೀಟದಲ್ಲಿ ವಿಶ್ವಕಪ್‌ ಗರಿಯೊಂದು ಇರಲಿಲ್ಲ. ಐದು ಬಾರಿ ವಿಶ್ವಕಪ್‌ ಅಶ್ವಮೇಧದಲ್ಲಿ ಹೋರಾಟ ನಡೆಸಿದ್ರೂ ಪ್ರತಿಫಲ ಮಾತ್ರ ಸಿಗಲಿಲ್ಲ. ಅದ್ರಲ್ಲೂ ಮೂರು ಬಾರಿ ವಿಶ್ವಕಪ್‌ ಹೋರಾಟವಂತೂ ಬಲು ದೂರದ ಬಾ ನೀಲಿಯ ಚೆಲುವೆಯಾಗಿ ಮರೆಯಾಗಿಬಿಟ್ಟಿತ್ತು. ಇನ್ನೂ ಎರಡು ಬಾರಿಯಂತೂ ಮಿನುಗುವ ವಿಶ್ವಕಪ್‌ ಟ್ರೋಫಿ ಕಣ್ಣಂಚಿನಲ್ಲೇ ಹೊಳೆದು ಮಾಯವಾಗಿತ್ತು.
ಆದ್ರೂ ಸಚಿನ್‌ ಧೃತಿಗೆಡಲಿಲ್ಲ. ವಿಶ್ವಕಪ್‌ ಮರೀಚಿಕೆಯೂ ಅಲ್ಲ.. ಗಗನ ಕುಸುಮವೂ ಅಲ್ಲ. ಗೆಲ್ಲಬೇಕು ಅಷ್ಟೆ.. 2011ರಲ್ಲಿ ತನ್ನ ವರ್ಣ ರಂಜಿತ ಕ್ರಿಕೆಟ್‌ ಬದುಕನ್ನ ಅರ್ಥಪೂರ್ಣವಾಗಿಸಿಕೊಳ್ಳಬೇಕು. ಒಂದು ವೇಳೆ ಈ ಅವಕಾಶವನ್ನ ಕೈಚೆಲ್ಲಿಕೊಂಡ್ರೆ ತನ್ನ ಸಾಧನೆ, ದಾಖಲೆ, ಯಶಸ್ಸಿಗೆ ಅರ್ಥನೇ ಇರೋಲ್ಲ ಅಂತ ಸಚಿನ್‌ ಕೂಡ ಭಾವಿಸಿದ್ರು. ಏನೇ ಆದ್ರೂ 2011ರ ವಿಶ್ವಕಪ್‌ ಗೆಲ್ಲೋದು ತೆಂಡುಲ್ಕರ್‌ ಅವ್ರ ಸಿಂಗಲ್‌ ಲೈನ್‌ ಅಜೆಂಡವಾಗಿತ್ತು.
ಹಾಗಂತ ವಿಶ್ವಕಪ್‌ ಗೆಲ್ಲುವುದು ಟೀಮ್ ಇಂಡಿಯಾಗೆ ಸುಲಭವೇನೂ ಇರಲಿಲ್ಲ. ಟೂರ್ನಿಯಲ್ಲಿ ಫೆವರೀಟ್‌ ಆಗಿದ್ರೂ ಕ್ರಿಕೆಟ್‌ ಆಟದಲ್ಲಿ ಏನೂ ಬೇಕಾದ್ರೂ ಆಗಬಹುದು. ಇದನ್ನೆಲ್ಲಾ ಅರಿತುಕೊಂಡಿರುವ ಮಾಸ್ಟರ್‌ ವಿಶ್ವಕಪ್‌ಗಾಗಿ ಮಾಸ್ಟರ್‌ ಪ್ಲಾನ್‌ ಮಾಡ್ಕೊಂಡಿದ್ರು. ಕಠಿಣ ಅಭ್ಯಾಸ ನಡೆಸಿದ್ರು. ವಿಶ್ರಾಂತಿ ಪಡೆದ್ರು. ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ರೆಡಿಯಾದ್ರು. ಆದ್ರೂ ಸಿಕ್ಕಾಪಟ್ಟೇ ಟೆನ್ಷನ್‌ ಇತ್ತು. ಯಾಕಂದ್ರೆ ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲ್ಲಬೇಕು ಅನ್ನೋದು ದೇಶದ ಹೃದಯಬಡಿತವಾಗಿತ್ತು.
ಇನ್ನು, ಟೀಮ್ ಇಂಡಿಯಾದ ವಿಶ್ವಕಪ್‌ ಅಭಿಯಾನಕ್ಕೆ ಎಮ್‌. ಎಸ್‌. ಧೋನಿ ದಂಡನಾಯಕನಾದ್ರು. ತಂಡದ ಸಾರಥಿಯಾಗಿ, ಸೂತ್ರಧಾರಿಯಾದ ಸಚಿನ್ ಆರನೇ ವಿಶ್ವಕಪ್‌ ಅಶ್ವಮೇಧದಲ್ಲೂ ರನ್‌ ಮಳೆಯನ್ನೇ ಸುರಿಸಿದ್ರು. ಆದ್ರೆ ಫೈನಲ್‌ ಪಂದ್ಯದಲ್ಲಿ ಸಚಿನ್‌ ಬ್ಯಾಟ್‌ನಿಂದ ರನ್‌ಗಳು ಹರಿದು ಬರಲಿಲ್ಲ. ತವರು ಅಭಿಮಾನಿಗಳ ಎದುರು ನಿರಾಸೆಯಿಂದಲೇ ಪೆವಿಲಿಯನತ್ತ ಹೆಜ್ಜೆ ಹಾಕಿದ ಸಚಿನ್‌ ಮುಖದಲ್ಲಿ ಬೇಸರವಿತ್ತು. ಮತ್ತೆ ವಿಶ್ವಕಪ್‌ ಟ್ರೋಫಿ ಹೊಳೆಯುತ್ತಿರುವ ಗಿರಿವಜ್ರವಾಗುತ್ತಾ ಅನ್ನೋ ಭಾವನೆ ಮೂಡಿತ್ತು..
ಈ ನಡುವೆ, ಸಚಿನ್‌ ಆಸೆಯನ್ನು ಈಡೇರಿಸಲು ಧೋನಿ ಪಡೆಯ ಯುವಕರು ಟೊಂಕ ಕಟ್ಟಿನಿಂತಿದ್ರು. ಅದ್ರಲ್ಲೂ ಗಂಭೀರ್‌ ಮತ್ತು ಧೋನಿ ಕ್ರೀಸ್‌ಗೆ ಅಂಟಿಕೊಂಡು ಆಡ್ತಾ ಇದ್ರು. ಜತೆಗೆ ತಂಡವನ್ನ ಗೆಲುವಿನತ್ತಲೂ ಕೊಂಡೊಯ್ದರು. ಆದ್ರೂ ಇವ್ರ ಆಟವನ್ನ ನೋಡುವ ಮನಸ್ಸು ಸಚಿನ್‌ಗಿರಲಿಲ್ಲ. ಅಷ್ಟೇ ಯಾಕೆ ಗೆಲುವಿನ ರನ್‌ಗಾಗಿ ಸಿಕ್ಸ್‌ ಬಾರಿಸಿದಾಗಲೇ ಧೋನಿ ಕಣ್ಣಲ್ಲಿ ವಿಶ್ವಕಪ್ ಟ್ರೋಫಿ ಮಿನುಗಿತ್ತು. ವಿಜಯದ ಬಳಿಕ ಧೋನಿ ಬ್ಯಾಟ್‌ ಅನ್ನು ಗದೆಯಂತೆ ತಿರುಗಿಸುತ್ತಿದ್ರೆ, ಕ್ರಿಕೆಟ್‌ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ರು. ಅಂಗಣದಲ್ಲಿ ಟೀಮ್ ಇಂಡಿಯಾ ಆಟಗಾರರು ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿದ್ರು.
ಆದ್ರೂ ಸಚಿನ್‌ಗೆ ಇದ್ರ ಪರಿವೇ ಇರಲಿಲ್ಲ. ಯಾಕಂದ್ರೆ ಸಚಿನ್ ಡ್ರೆಸಿಂಗ್‌ ರೂಮ್‌ನ ಮೂಲೆಯೊಂದರಲ್ಲಿ ಧ್ಯಾನಕ್ಕೆ ಕುಳಿತಿದ್ರು. ನಂತ್ರ ಎಚ್ಚೆತ್ತುಕೊಂಡ ಮಾಸ್ಟರ್‌, ಪುಟ್ಟ ಮಗುವಿನಂತೆ ಓಡೋಡಿ ಅಂಗಣಕ್ಕೆ ಬಂದ್ರು. ತನ್ನ ಒಡನಾಡಿಗಳನ್ನ ಬಿಗಿದಪ್ಪಿಕೊಂಡ ಮಾಸ್ಟರ್‌ನ ಕಣ್ಣಲ್ಲಿ ಆನಂದಬಾಸ್ಪ ಸುರಿಯುತ್ತಿತ್ತು. ಹಿರಿಯಣ್ಣನನ್ನು ಹೆಗಲ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದ ಟೀಮ್ ಇಂಡಿಯಾ ಹುಡುಗರ ಆ ಸಂತಸದ ಕ್ಷಣವನ್ನ ಬಣ್ಣಿಸಲು ಸಾಧ್ಯವಿಲ್ಲ.
ವಿಶ್ವಕಪ್‌ ಟ್ರೋಫಿಗೆ ಮನಬಂದಂತೆ ಚುಂಬಿಸಿದ ತೆಂಡುಲ್ಕರ್‌ ತನ್ನ ಕನಸನ್ನ ಸಾಕಾರಗೊಳಿಸಿಕೊಂಡ್ರು. ಹಾಗೇ ಕನಸಿನ ಮನೆಯ ಗೃಹ ಪ್ರವೇಶವನ್ನ ಈ ವರ್ಷವೇ ಮಾಡ್ಕೊಂಡ್ರು. ಮತ್ತೊಂದೆಡೆ ಐಪಿಎಲ್‌ನಲ್ಲಿ ನಿರಾಸೆ ಅನುಭವಿಸಿದ್ರೂ ಚಾಂಪಿಯನ್ಸ್‌ ಲೀಗ್‌ ಟಿ -ಟ್ವೆಂಟಿಯಲ್ಲಿ ಸಂಭ್ರಮಿಸಿದ್ರು. ಟೂರ್ನಿಯಲ್ಲಿ ಆಡದಿದ್ರೂ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ರು.
ಆದ್ರೆ ವಿಶ್ವಕಪ್‌ ನಂತ್ರ ಸಚಿನ್‌ ಶತಕ ದಾಖಲಿಸಲು ಒದ್ದಾಟ ನಡೆಸ್ತಾ ಇದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ರೂ ಶತಕದ ಸನೀಹದಲ್ಲಿ ಜಾರಿಬೀಳ್ತಾ ಇದ್ದಾರೆ. ಐತಿಹಾಸಿಕ ನೂರನೇ ಶತಕ ದಾಖಲಿಸುವ ಕ್ಷಣವನ್ನ ಅಭಿಮಾನಿಗಳು ಕಳೆದ ಎಂಟು ತಿಂಗಳಿನಿಂದ ಎದುರು ನೋಡ್ತಾ ಇದ್ದಾರೆ. ಇದೀಗ ವರ್ಷಾಂತ್ಯದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ಮಹಾ ಶತಕ ಸಿಡಿಸಿದ್ರೆ ಅದಕ್ಕಿಂತ ಮಿಗಿಲಾದ ಸಾಧನೆ ಮತ್ತೊಂದಿಲ್ಲ.
ಒಟ್ಟಿನಲ್ಲಿ ಸಚಿನ್‌ಗೆ ಸರಿಸಾಟಿ ಯಾರು ಇಲ್ಲ. ಆದ್ರೂ ಸಚಿನ್‌ ಕೇವಲ ಪಾತ್ರಧಾರಿಯಷ್ಟೇ. ಅಣ್ಣ ಅಜಿತ್‌ ತೆಂಡುಲ್ಕರ್‌ ಈ ಕನಸುಗಾರನ ಸೂತ್ರಧಾರಿಯಾದ್ರು. ಗುರು ರಮಕಾಂತ್‌ ಆಚ್ರೇಕರ್‌ ಮಾರ್ಗದರ್ಶನದಿಂದ ತೆಂಡುಲ್ಕರ್‌ ಕ್ರಿಕೆಟ್‌ ಜಗತ್ತಿನ ಕಲಾವಿದರಾದ್ರು. ಅಪ್ಪ ರಮೇಶ್‌ ತೆಂಡುಲ್ಕರ್‌ ಲೇಖನಿಯಿಂದ ಬರೆದ ಅಕ್ಷರಮಾಲೆಗಳಂತೆ ಸಚಿನ್ ವಿಶ್ವ ಕ್ರಿಕೆಟ್‌ನಲ್ಲಿ ರನ್‌ಗಳ ಸುರಿಮಳೆಗೈದ್ರು. ಅಮ್ಮನ ಪ್ರೀತಿ ದೇಶ ಪ್ರೇಮಕ್ಕೆ ಸ್ಪೂರ್ತಿಯಾಯ್ತು. ಪತ್ನಿ ಅಂಜಲಿ ಯಶಸ್ಸಿಗೆ ಪ್ರೇರಣೆಯಾದ್ರು. ಇನ್ನು ಕೋಟಿ ಕೋಟಿ ಅಭಿಮಾನಿಗಳ ಅಭಿಮಾನದಿಂದ ವಿಶ್ವಕ್ರಿಕೆಟ್‌ನ ದೇವ್ರುರಾದ್ರು.
ಸನತ್ ರೈ