ಡಾರ್ಲಿಂಗ್... ಯಾಕೀ ಈ ಮೌನ... ಏನ್ ಬೇಜಾರ್ ಆಗಿದ್ಯೋ ... ಸೆಂಚೂರಿ ಮೇಲೆ ಸೆಂಚೂರಿ ಹೊಡೆಯೋಕೆ ಆಗ್ತಾ ಇಲ್ಲ ಅಂತನಾ ... ಅದಕ್ಕೆನಂತೆ... ನಿಂಗೇ ಸೆಂಚೂರಿ ಬಾರಿಸೋದು ಅಷ್ಟೊಂದು ತ್ರಾಸ್ ಆಗೈತೆನೋ.. ಮತ್ತೆ ಅದ್ಹೆಂಗೇ 99 ಸೆಂಚೂರಿ ಹೋಡಿದಿ ನೀ...ಈಗ ಒಂದೇ ಒಂದು ಸೆಂಚೂರಿಗೆ ಹತ್ತು ಹನ್ನೊಂದು ತಿಂಗಳು ಕಾಯಿಸಿದ್ದೀ ನೋಡು... ನಂಗೂ ತುಂಬಾನೇ ಬೇಜಾರ್ ಆಗೈತೆ...
ಅಲ್ಲ ಬ್ರದರ್.. ನಿಂಗೆ ಅಷ್ಟೊಂದು ಪ್ರೆಶರ್ ಇದ್ಯೇನಾ . ಜತೆಗೆ ನರ್ವಸ್ ಬೇರೆ ಆಗ್ತಿದ್ದೀಯಾ... ಯಾಕ್ ಯಾಕೆ...ಹೀಗೆ.. ಅದನ್ನೆಲ್ಲಾ ತಡ್ಕೊಳ್ಳೋಕೆ ಆಗ್ತಾ ಇಲ್ವೇನೋ..ತುಂಬಾ ಚೆನ್ನಾಗಿ ಆಡ್ತಾ ಇರ್ತಿ... ಸಡನ್ ಆಗಿ ವಿಕೆಟ್ ಒಪ್ಪಿಸ್ತಾ ಇದ್ದೀಯಲ್ಲಾ.. ಏನಾಗೈತೆ ನಿಂಗೆ....
ಬಿಡು ಮಾಸ್ಟರ್... ನಿಂಗೆ ಇದೆಲ್ಲಾ ಹೊಸ್ದಾ . ಆರು ವರ್ಷಗಳ ಫ್ಲಾಷ್ ಬ್ಯಾಕ್ ಸ್ವಲ್ಪ ನೆನಪಿಸ್ಕೊ... ಹಿಂಗೆ ಒಂದು ಸೆಂಚೂರಿ ಹೊಡೆಯೊಕೆ ಎಷ್ಟೆಲ್ಲಾ ಕಷ್ಟ ಪಟ್ಟೆ... ಲಾಸ್ಟ್ ಗೂ ಹಠ ಬಿಟ್ಟಿಲ್ಲ ನೋಡು...ಆದ್ರೂ ನಿಂಗೆ ಸೆಂಚೂರಿ ಹೊಡೆಯೊಕೆ ಅಗಿಲ್ಲ. ಇನ್ನು ಆಗಲ್ಲ ಅಂತ ಕೊನೆಗೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿ ಗ್ರಹಚಾರಕ್ಕೆಲ್ಲಾ ಪರಿಹಾರ ಮಾಡ್ಕೊಂಡೆಯಲ್ಲ.. ಆಮೇಲೆ ಏನೂ ಗುರು.. ಸೆಂಚೂರಿ ಮೇಲೆ ಸೆಂಚುರಿ ಹೊಡಿದಿ.. ದಾಖಲೆ ಮೇಲೆ ದಾಖಲೆ ಬರೆದಿ... ಹಂಗೆ ಈ ಸಲನೂ ಒಂದು ಸಾರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡೋ..ಪ್ಲೀಸ್... ..
ನಿಂಗೆ ಯಾಕೆ ಇದನ್ನೆಲ್ಲಾ ಹೇಳ್ತಾ ಇದ್ದೀನಿ ಅಂದ್ರ ನಿನ್ನ ಬಗ್ಗೆ ಚಿಲ್ರೆಗಳೆಲ್ಲಾ ಬಾಯಿಗೆ ಬಂದಂತೆ ಮಾತಾಡ್ತಾರೆ. ಅದನ್ನೆಲ್ಲಾ ಕೇಳಿ ನನ್ ಹೃದಯಕ್ಕೆ ಚೂರಿ ಹಾಕಿದಂಗೆ ಆಗೈತೆ ಮಾಸ್ಟರ್... ಅಲ್ಲ.. ನಿನ್ನ ಸಾಮರ್ಥ್ಯದ ಬಗ್ಗೆ ಗೊತ್ತಿದ್ದು ಗೊತ್ತಿದ್ದೂ ಮಾತಡ್ತಾರೆ. ನಿಂಗೆ ವನ್ ಡೇ ಮ್ಯಾಚ್ ಆಡುವ ತಾಕತ್ತು ಈಗ ಇಲ್ಲಂತೆ.. ಇದಕ್ಕೆ ನಗಬೇಕೊ ಆಳಬೇಕೊ ಅಂತ ಗೊತ್ತಾಗ್ತಾ ಇಲ್ಲ...ಅವ್ರಿಗೇನೂ ಗೊತ್ತು.. ನೀನು ವಾಮನ ಮೂರ್ತಿಯಾದ್ರೂ ಬಲ ಭೀಮ ಅಂತ. . ಏನೋ ನಾಲ್ಕೈದು ಮ್ಯಾಚ್‌ಗಳಲ್ಲಿ ಫೆಲ್ಯೂರ್ ಅದೆ ಅಂತ ಹಿಂಗೆ ಎಲ್ಲಾ ಟೀಕೆ ಮಾಡೋದು ಸರೀನಾ ದೇವ್ರೂ...
ಇನ್ನು ಆ ಕ್ಯಾಪ್ಟನ್ ಧೋನಿಗೆ ಏನಾಗೈತೆ... ಅದೇನೋ ರೋಟೇಷನ್ ಪಾಲಿಸಿ ಅಂತೆ.. ಯಂಗ್‌ಸ್ಟಾರ್ಸ್‌ಗೆ ಚಾನ್ಸ್ ಕೋಡೋಕೆ ಅಂತ ನಿನ್ನ ಮೇಲೆನೇ ಸವಾರಿ ಮಾಡ್ತಾನಾ .. ಅವ ಕ್ಯಾಪ್ಟನ್ ಆಗೋಕೆ ನೀನೇ ಕಾರಣ ಅಂತ ಗೊತ್ತಿದ್ರೂ ಅಷ್ಟು ಬೇಗ ಮರೆತು ಬಿಟ್ನಾ... ವಸಿ ಬುದ್ದಿ ಹೇಳೋಕೆ ಆಗೊಲ್ವಾ ನಿಂಗೆ... ನೀನೇನೋ ಮೈನ್ ಟೂರ್ನಿ ಅಂತ ವನ್ ಡೇ ಮ್ಯಾಚ್ ಆಡ್ತಾ ಇದ್ದೀ...ಆದ್ರೆ ಎಲ್ರೂ ಅಂದುಕೊಂಡಿದ್ದಾರೆ ನೀ ಸೆಂಚೂರಿಗೋಸ್ಕರ ಆಡ್ತಾ ಇದ್ದೀ ಅಂತ...ಒಂದು ವೇಳೆ ಆಡಿದ್ರೂ ತಪ್ಪೇನು...
ಮತ್ತೆ ನಮ್ ಮಾಜಿ ಕ್ರಿಕೆಟಿಗರು ನೀ ವಿದಾಯ ಹೇಳಬೇಕು ಅಂತಾರೆ... ಆದ್ರೆ ಅವ್ರ ಹಿಸ್ಟ್ರಿ ನಮಗೇನೂ ಗೊತ್ತಿಲ್ವಾ . ಫಾರ್ಮ್‌ನಲ್ಲಿ ಇಲ್ಲದಿದ್ರೂ ಅವ್ರೆಲ್ಲಾ ಆಡಬೇಕು ಅಂತಿದ್ರು. ದಾಖಲೆ ಬರೆಯೋಕೆ ಅಂತ ಟೀಮ್‌ನಲ್ಲಿದ್ರು... ಅವಾಗ ಎಲ್ಲಾ ಯಂಗ್ ಸ್ಟಾರ್ಸ್‌ಗೆ ಚಾನ್ಸ್ ಕೊಡಬೇಕು ಅಂತ ನೆನಪಿಗೆ ಬಂದಿರಲಿಲ್ವಾ.. ಎಲ್ಲಾ ಎಲ್ಲ ಅಷ್ಟೇ ಮಾಸ್ಟರ್.. ಅವರವರ ಭಾವಕ್ಕೆ ಅವರವರ ತಾಳಕ್ಕೆ.. ಕುಣಿತಾರೆ..
ಬಾಸ್ ನೀ ಏನ್ ಟೆನ್ಷನ್ ಮಾಡ್ಕೊಬೇಡ... ನಿಂಗೆ ನಿನ್ನ ಮೇಲೆ ನಂಬಿಕೆ ಇದೆಯಲ್ವಾ ಅಷ್ಟು ಸಾಕು...ನೀ ಯಾರತ್ರನೂ ಕೇಳ್ಕೊಂಡು ಕ್ರಿಕೆಟ್ ಆಡೋಕೆ ಬಂದಿಲ್ಲ... ಕಷ್ಟಪಟ್ಟೆ...ಇಷ್ಟನೂ ಪಟ್ಟೇ... ದಾಖಲೆ ಮೇಲೆ ದಾಖಲೆ ಬರೆದೆ.. ಪ್ರೀತಿಯಿಂದ ಆಡ್ತಾ ಇದ್ದಿ... ಆದ್ರೆ ಅಭಿಮಾನಿಗಳು ಬೈಯ್ತಾರೆ ಅಂತ ಬೇಜಾರ್ ಮಾಡ್ಕೊಬೇಡ... ಯಾಕಂದ್ರೆ ನಿನ್ನ ಆಟಕ್ಕೆ ಮನಸೋತ ಅಭಿಮಾನಿಗಳು ನಿಂಗೆ ದೇವ್ರು ಅಂತ ಕರೆದ್ರು. ಈಗ ಅವ್ರ ನಿರೀಕ್ಷೆಗೆ ತಕ್ಕ ಆಟ ನಿನ್ನಿಂದ ಬರ್ತಿಲ್ಲ. ಅದಕ್ಕಾಗಿ ಸಿಟ್ಟು ಮಾಡ್ಕೊಂಡ್ರೂ ಅವರಿಗೂ ನಿನ್ ಮೇಲೆ ಪ್ರೀತಿ ಇದೆ ಕಣೋ...
ಸಚಿನ್ ಇವತ್ತು ನೀ ಸೆಂಚೂರಿ ಹೋಡಿತಿ ಅನ್ನೋ ನಂಬಿಕೆ, ನಿರೀಕ್ಷೆ ಇದೆ. ಮಿಸ್ ಮಾಡ್ಕೊಬೇಡ... ನನ್ನಂತೆ ಕೋಟಿ ಕೋಟಿ ಕಂಗಳು ನಿನ್ನ ಮಹಾ ಶತಕಕ್ಕಾಗಿ ಕಾಯ್ತ ಇದ್ದಾರೆ.. ಕ್ರಿಕೆಟ್ ದೇವ್ರ ಮುಕುಟಕ್ಕೆ ಶತಕಗಳ ಶತಕದ ಗರಿ ಸೇರುತ್ತೆ ಅನ್ನೋ ಆಶಾಭಾವನೆಯೊಂದಿಗೆ.... ಇಂತಿ ನಿನ್ನ ಅಭಿಮಾನಿ...
ಸನತ್ ರೈ
Saturday, February 25, 2012
Friday, February 24, 2012
ಪವರ್ ಕೀ ಬಾತ್ ಹೈ
ಇದು ಕಾಲ್ಪನಿಕ ಸ್ಟೋರಿಯಲ್ಲ.. ಬದಲಾಗಿ ನಮ್ಮ ಕಣ್ಣೆದುರೇ ನಡೆಯುತ್ತಿರುವ ಸತ್ಯ ಸಂಗತಿಗಳು... ಹೌದು, ಇದು ಪಕ್ಕಾ ಅಧಿಕಾರದ ದಾಹ... ಇದಕ್ಕಾಗಿ ಹಾವು-ಮುಂಗೂಸಿನಂತೆ ಕಚ್ಚಾಟ ನಡೆಸುತ್ತಾರೆ. ಅಷ್ಟೇ ಯಾಕೆ ಒಡನಾಡಿಗಳೇ ಶತ್ರುಗಳಾಗಿದ್ದಾರೆ. ಜತೆ ಜತೆಯಾಗಿ, ನಗು ನಗುತ್ತಾ ಸಂಭ್ರಮವನ್ನ ಹಂಚಿಕೊಂಡವರು ಇಂದು ನಾನೊಂದು ತೀರಾ ನೀನೊಂದು ತೀರಾ ಆಗಿಬಿಟ್ಟಿದ್ದಾರೆ.
ಕ್ರಿಕೆಟ್‌ನಲ್ಲೂ ಕಿರಿಕಿರಿ... ರಾಜಕೀಯದಲ್ಲೂ ಪಿರಿಪಿರಿ
ಸಬ್ಜೆಕ್ಟ್ ಒಂದೇ... ಅಖಾಢ ಬೇರೆ ಬೇರೆ
ಅಲ್ಲಿ ಧೋನಿ - ಸೆಹ್ವಾಗ್ ಫೈಟಿಂಗ್
ಇಲ್ಲಿ ಬಿಎಸ್‌ವೈ- ಡಿವಿಎಸ್ ಕೋಲ್ಡ್ ವಾರ್
ಅಧಿಕಾರಕ್ಕಾಗಿ ನಡೆಯುತ್ತಿದೆ ಶೀತಲ ಸಮರ
ಎ ಪವರ್ ಕೀ ಬಾತ್ ಹೈ
ನೋ ಡೌಟ್.. ಇದು ಪವರ್ ಕೀ ಬಾತ್ ಹೇ ... ಹೌದು, ಸೇಮ್ ಟೂ ಸೇಮ್.. ಆದ್ರೆ, ಇಲ್ಲಿ ಸಬ್ಜೆಕ್ಟ್ ಒಂದೇ.. ಅಖಾಢ ಮಾತ್ರ ಬೇರೆ ಬೇರೆ.. ರಾಜ್ಯ ಬಿಜೆಪಿಯಲ್ಲಿ ಮತ್ತು ಟೀಮ್ ಇಂಡಿಯಾದಲ್ಲಿ ನಡೆಯುತ್ತಿರುವುದು ಅಧಿಕಾರದ ಶೀತಲ ಸಮರ.
ಆಸ್ಟ್ರೇಲಿಯಾದಲ್ಲಿ ಧೋನಿ ಮತ್ತು ಸೆಹ್ವಾಗ್ ಫೈಟಿಂಗ್ ಮಾಡುತ್ತಿದ್ರೆ, ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡರ ನಡುವಿನ ಕೋಲ್ಡ್ ವಾರ್ ಈಗ ಹಾಟ್ ಹಾಟ್ ಆಗಿದೆ.
ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ ಹಾಗೇ ಟೀಮ್ ಇಂಡಿಯಾದ ಆಂತರಿಕ ಕಲಹ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ. ಇದ್ರಿಂದ ಕಂಗೆಟ್ಟಿರುವ ಬಿಸಿಸಿಐ ಮತ್ತು ಬಿಜೆಪಿ ಹೈಕಮಾಂಡ್ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.
ಕಚ್ಚಾಡಿದ್ದು ಸಾಕು..... ಆಟ ಆಡಿ...
ಬೀದಿ ಜಗಳ ಮಾಡಬೇಡಿ... ಉತ್ತಮಆಡಳಿತ ನಡೆಸಿ
ಕಚ್ಚಾಡಿದ್ದು ಸಾಕು... ಆಟ ಆಡಿ…. ಅಂತ ಟೀಮ್ ಇಂಡಿಯಾಗೆ ಬಿಸಿಸಿಐ ಕಟ್ಟಾಜ್ಞೆ ಮಾಡಿದ್ರೆ, ಬೀದಿ ಜಗಳ ಮಾಡಬೇಡಿ... ಉತ್ತಮ ಆಡಳಿತ ನಡೆಸಿ ಅಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಜೆಪಿ ಹೈಕಮಾಂಡ್ ಆದೇಶ ಮಾಡಿದೆ. ಆದ್ರೆ ಬಿಸಿಸಿಐನ ಮಾತಿಗೆ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕ ಕಿಮ್ಮತ್ತಿನ ಬೆಲೆಯನ್ನೂ ನೀಡಲಿಲ್ಲ. ಹಾಗೇ ಬಿಜೆಪಿ ಹೈಕಮಾಂಡ್ ಆದೇಶಕ್ಕೆ ಯಡಿಯೂರಪ್ಪನವರು ಮುನಿಸಿಕೊಂಡ್ರೆ, ಸದಾನಂದ ಗೌಡರ ಮುಖದಲ್ಲಿರುವ ನಗು ಮಾಯವಾಗಿದೆ.
ಶುಕ್ರವಾರ ಮುಹೂರ್ತ ಫಿಕ್ಸ್...
ಈ ನಡುವೆ, ಟೀಮ್ ಇಂಡಿಯಾ ಕಿರಿಕಿರಿ ಮತ್ತು ರಾಜಕೀಯ ಪಿರಿಪಿರಿಗೆ ಇತಿಶ್ರೀ ಹಾಡಲು ಶುಕ್ರವಾರವೇ ಮುಹೂರ್ತ ಫಿಕ್ಸ್ ಆಗಿತ್ತು. ಅದ್ರಲ್ಲೂ ಬಿಸಿಸಿಐ ದಣಿಗಳು ಟೀಮ್ ಇಂಡಿಯಾದ ಹಿರಿಯ ಆಟಗಾರರ ಜತೆ ಮಾತುಕತೆ ನಡೆಸಿದ್ರು. ಅಲ್ಲದೆ, ಶುಕ್ರವಾರ ಧೋನಿ ಮತ್ತು ಸೆಹ್ವಾಗ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದ್ರೆ ಸೆಹ್ವಾಗ್ ಮತ್ತು ಧೋನಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ತಂಡದ ಮ್ಯಾನೇಜರ್ ಮೀಡಿಯೇಟರ್ ಆಗಿ ಕಾಣಿಸಿಕೊಂಡ್ರು.
ತಂಡದಲ್ಲಿ ಒಡಕಿಲ್ಲ.. ಭಿನ್ನಾಭಿಪ್ರಾಯವಿದೆ
ಟೀಮ್ ಇಂಡಿಯಾದಲ್ಲಿ ಒಡಕಿಲ್ಲ.. ಆದ್ರೆ ಧೋನಿ ಮತ್ತು ಸೆಹ್ವಾಗ್ ನಡುವೆ ಭಿನ್ನಾಭಿಪ್ರಾಯವಿದೆ. ಇದು ಸದ್ಯದಲ್ಲೇ ಬಗೆಹರಿಯಲಿದೆ. ತಂಡ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಅಂತ ಟೀಮ್ ಇಂಡಿಯಾದ ಟೀಮ್ ಮ್ಯಾನೇಜರ್ ಹಾರಿಕೆಯ ಉತ್ತರ ನೀಡಿ ವಿವಾದದಿಂದ ಜಾರಿಕೊಂಡ್ರು.
ಅಡ್ಡಗೋಡೆಯ ಮೇಲೆ ದೀಪ
ಇನ್ನು, ರಾಜಕೀಯ ಪಿರಿಪಿರಿಯನ್ನ ಬಗೆ ಹರಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮೆಂದ್ರ ಪ್ರಧಾನ್ ರಾಜ್ಯ ಬಿಜೆಪಿ ಶಾಸಕರ ಜತೆ ಚರ್ಚೆ ನಡೆಸಿದ್ರು. ಆದ್ರೆ ಪ್ರಯೋಜನವೇನೂ ಆಗಿಲ್ಲ. ಬಿಜೆಪಿ ವರಿಷ್ಠರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ರು. ಇದ್ರಿಂದ ಸಮಸ್ಯೆ ಈಗ ಮತ್ತಷ್ಟು ಉಲ್ಬಣಿಸಿದೆ.
ಒಗ್ಗಟ್ಟಿನ ಬಲ ಪ್ರದರ್ಶನ
ಅಷ್ಟೇ ಅಲ್ಲ, ಈ ಹಿಂದಿನ ರಾಜಕೀಯ ನಿದರ್ಶನಗಳು ಸಹ ಧೋನಿ ನಾಯಕತ್ವದ ಟೀಮ್ ಇಂಡಿಯಾಗೆ ಹೋಲುತ್ತವೆ. 2009ರಲ್ಲೂ ಧೋನಿ ನಾಯಕತ್ವದ ಮೇಲೆ ವೀರೇಂದ್ರ ಸೆಹ್ವಾಗ್ ಅಪಸ್ವರ ಎತ್ತಿದ್ರು. ಆಗ ನಾವೆಲ್ಲರೂ ಒಂದೇ.. ಏನೇ ಆದ್ರೂ ಒಗ್ಗಟ್ಟಿನಿಂದ ಇದ್ದೇವೆ ಅಂತ ಸುದ್ದಿಗೋಷ್ಠಿಯಲ್ಲಿ ಧೋನಿ ಆಟಗಾರರನ್ನ ಪರೇಡು ನಡೆಸಿದ್ರು.
ಹಾಗೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರ ಜತೆ ಸಾಕಷ್ಟು ಬಾರಿ ಹೈಕಮಾಂಡ್ ಮತ್ತು ಮಾಧ್ಯಮದ ಎದುರು ಶಕ್ತಿ ಪ್ರದರ್ಶಿಸಿದ್ರು. ಆದ್ರೆ, ಬಿಎಸ್‌ವೈ ಮತ್ತು ಡಿವಿಎಸ್ ನಡುವೆ ಇದ್ದಂತಹ ಆತ್ಮೀಯತೆ ಧೋನಿ ಮತ್ತು ಸೆಹ್ವಾಗ್ ನಡುವೆ ಇರಲಿಲ್ಲ. ಆದ್ರೂ ಮೈದಾನದಲ್ಲಿ ಮಾತ್ರ ಇದನ್ನೆಲ್ಲಾ ತೋರಿಸುತ್ತಿರಲಿಲ್ಲ.
ನಾನೊಂದು ತೀರಾ... ನೀನೊಂದು ತೀರಾ...
ಆದ್ರೆ ಸಮಯ ಹೇಗೆ ಬದಲಾಗುತ್ತೆ ನೋಡಿ... ಹಮ್ ಸಾಥ್ ಸಾಥ್ ಹೇ ಅಂತಿದ್ದ ಬಿಎಸ್‌ವೈ ಮತ್ತು ಡಿವಿಎಸ್ ಈಗ ಒಬ್ಬರ ಮುಖ ಒಬ್ರು ನೋಡ್ತಾ ಇಲ್ಲ. ಹಾಗೇ ಮೈದಾನದಲ್ಲಿ ಜತೆಯಾಗಿ ಹೋರಾಡುತ್ತಿದ್ದ ಸೆಹ್ವಾಗ್ ಮತ್ತು ಧೋನಿ ನಾನೊಂದು ತೀರಾ ನೀನೊಂದು ತೀರಾ ಆಗಿಬಿಟ್ಟಿದ್ದಾರೆ.
ಒಟ್ಟಿನಲ್ಲಿ ಇದು ಮನೆಯೊಂದು ಮೂರು ಬಾಗಿಲು ಎಂಬ ಕಥೆಯಂತಾಗಿದೆ. ಎಷ್ಟೇ ಸಮಾಧಾನಪಡಿಸಿದ್ರೂ ಒಡೆದ ಕನ್ನಡಿಯನ್ನ ಮತ್ತೆ ಜೋಡಿಸಿದ ಹಾಗಾಗುತ್ತೆ. ಒಂದು ಸಣ್ಣ ಮಾತಿನ ಇರಿತದಿಂದ ಒಗ್ಗಟ್ಟೇ ಕಾಣದಂತಾಗಿದೆ. ಅಧಿಕಾರ ಹೆಂಗೆಲ್ಲಾ ಆಟ ಆಡಿಸುತ್ತೆ ಅಲ್ವಾ...

Sunday, February 19, 2012
ಕ್ರಿಕೆಟ್ ಜಗತ್ತಿನ ಬುದ್ಧ..
ವಿಶ್ವ ಕ್ರಿಕೆಟ್‌ನ ಕಲಾತ್ಮಕ ಆಟಗಾರ... ಕ್ರಿಕೆಟ್ ಜಗತ್ತಿನ ಬುದ್ಧ.. ಟೀಮ್ ಇಂಡಿಯಾದ ಗ್ರೇಟ್ ವಾಲ್... ಹುಟ್ಟಿದ್ದು ಮಹಾರಾಷ್ಟ್ರದಲ್ಲಿ... ಬದುಕನ್ನ ರೂಪಿಸಿಕೊಂಡಿರುವುದು ಬೆಂಗಳೂರಿನಲ್ಲಿ... ಹೌದು, ನಮ್ಮೂರಿನ ಹೆಮ್ಮೆಯ ಕ್ರಿಕೆಟಿಗನಿಗೆ ಇಂದು 39ನೇ ಹುಟ್ಟು ಹಬ್ಬದ ಸಂಭ್ರಮ...
ಸುಮಾರು 30 ವರ್ಷಗಳ ಹಿಂದೆ. ಬೆಂಗಳೂರಿನ ಇಂದಿರಾ ನಗರದ ಹುಡುಗ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾವುದೇ ಕ್ರೀಡೆಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದಿರುವ ದ್ರಾವಿಡ್ ಅದೇಗೇ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಯಿತ್ತೊ ಗೊತ್ತಿಲ್ಲ. ಮೊದ ಮೊದಲು ಹಾಕಿ ಆಡುತ್ತಿದ್ದ ದ್ರಾವಿಡ್ ಬಳಿಕ ಕ್ರಿಕೆಟ್ ಆಟವನ್ನ ಆಗಾಧವಾಗಿ ಪ್ರೀತಿಸಿದ್ರು .ಇಂದಿರಾ ನಗರದಿಂದ ಚಿನ್ನಸ್ವಾಮಿ ಕ್ರೀಡಾಂಣ, ಚಿನ್ನಸ್ವಾಮಿಯಿಂದ ಸೇಂಟ್ ಜೊಸೇಫ್ ಕಾಲೇಜ್ ಹೀಗೆ ಬಿಟಿಎಸ್ ಬಸ್‌ನಲ್ಲೇ ಓಡಾಡುತ್ತಿದ್ದ ದ್ರಾವಿಡ್ ಅದ್ಭುತ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಎಂಥವರನ್ನ ಬೆರಗುಗೊಳಿಸುತ್ತೆ.
ಹಾಗಂತ ರಾಹುಲ್ ದ್ರಾವಿಡ್‌ಗೆ ಭಾರತ ತಂಡದ ಬಾಗಿಲು ಅಷ್ಟೊಂದು ಸುಲಭವಾಗಿ ತೆರೆದಿರಲಿಲ್ಲ. ದೇಶಿ ಪಂದ್ಯಗಳಲ್ಲಿ ರನ್‌ಗಳ ಮಳೆ ಸುರಿಸಿದ್ರು. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸಪಟ್ರು. ಕೊನೆಗೂ ಜಾಮಿಯ ಬಹುದಿನಗಳ ಕನಸು ನನಸಾಯ್ತು. ಅದೂ 1996 ಜೂನ್ 20 ರಂದು. ಕ್ರಿಕೆಟ್‌ನ ಐತಿಹಾಸಿಕ ಮೈದಾನ ಲಾಡ್ರ್ಸ್ ನಲ್ಲಿ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ರು. ಮೊದಲ ಪಂದ್ಯದಲ್ಲೇ ಕೇವಲ ಐದು ರನ್‌ಗಳಿಂದ ಶತಕ ವಂಚಿತರಾದ್ರು. ನಂತ್ರ ವಿಶ್ವ ಕ್ರಿಕೆಟ್‌ನಲ್ಲಿ ಶುರುವಾಗಿದ್ದು ದ್ರಾವಿಡ್ ಪರ್ವ.
ಅಂದ ಹಾಗೇ, ಮುಳ್ಳಿನ ಹಾದಿಯಲ್ಲಿ ನಡೆದ ದ್ರಾವಿಡ್ ವಿಶ್ವ ಕ್ರಿಕೆಟ್‌ನಲ್ಲಿ ಹೂವಿನಂತೆ ಅರಳಿದ್ರು. ಆದ್ರೆ ಅದ್ರ ಹಿಂದಿನ ಪರಿಶ್ರಮ ದ್ರಾವಿಡ್‌ಗೆ ಮಾತ್ರ ಗೊತ್ತು.. ಯಾಕಂದ್ರೆ, ದ್ರಾವಿಡ್ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಮತ್ತು ಕನಸನ್ನ ಕಟ್ಟಿಕೊಂಡಿದ್ರು. ಹಾಗೇ ಅದನ್ನ ಸಾಕಾರಗೊಳಿಸಲು ಸುರಿಸಿದ ಬೆವರಿನ ಹನಿಗಳ ಜತೆಗೆ ಬದ್ಧತೆ, ಏಕಾಗ್ರತೆ, ಶಿಸ್ತು ಜ್ಯಾಮಿಯನ್ನ ಮಹಾನ್ ಗೋಡೆ ಯಂತೆ ಬಿಂಬಿಸಿದವು. ಅಷ್ಟೇ ಅಲ್ಲ, ಗ್ರೇಟ್ ಇಂಡಿಯನ್ ವಾಲ್ ಅಂತಲೂ ಕ್ರಿಕೆಟ್ ಜಗತ್ತಿನಲ್ಲೇ ಚಿರಪರಿಚಿತರಾದ್ರು.. ಫ್ಲೋ
ತಾಳ್ಮೆಯ ಪ್ರತೀಕದಂತಿದ್ದ ದ್ರಾವಿಡ್ ಬೌಲರ್‌ಗಳನ್ನ ಮನ ಬಂದಂತೆ ಕಾಡುತ್ತಿದ್ರು. ಭಾರತ ತಂಡವನ್ನ ಸೋಲಿನಿಂದಲೂ ಬಚಾವ್ ಮಾಡ್ತಾ ಇದ್ರು. ಹಾಗೇ ನಿಧಾನಗತಿಯಾಗಿ ಬ್ಯಾಟಿಂಗ್ ಮಾಡುತ್ತಿದ್ರೂ ತಂಡದ ರೋಚಕ ಗೆಲುವಿಗೂ ಕಾರಣರಾಗುತ್ತಿದ್ರು. ಅದ್ರಲ್ಲೂ 2001ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಡಿದ ಪರಿಯನ್ನ ಯಾವತ್ತೂ ಮರೆಯೋಕೆ ಆಗೋಲ್ಲ. ಲಕ್ಷ್ಮಣ್ ಜತೆಗೂಡಿ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ದ್ರಾವಿಡ್ ರ ಬ್ಯಾಟಿಂಗ್ ವೈಖರಿ ಇಂದಿಗೂ ಸವಿ ಸವಿ ನೆನಪಾಗಿಯೇ ಉಳಿದಿದೆ.
ಹೌದು, ರಾಕೆಟ್ ವೇಗದ ಎಸೆತಗಳು ದ್ರಾವಿಡ್ ಬ್ಯಾಟ್ ಮುಂದೆ ಠುಸ್ಸು ಪಟಾಕಿಗಳಾಗುತ್ತವೆ. ಜತೆಗೆ ಬುಗುರಿಯಂತೆ ತಿರುಗುವ ಎಸೆತಗಳೂ ನಿಸ್ತೇಜವಾಗುತ್ತವೆ.. ಅಂತಹ ಮಾಂತ್ರಿಕತೆ ರಾಹುಲ್ ದ್ರಾವಿಡ್‌ರ ಬ್ಯಾಟಿಂಗ್‌ನಲ್ಲಿದೆ. ದ್ರಾವಿಡ್ ದಾಖಲಿಸುವ ಪ್ರತಿ ರನ್‌ಗಳಲ್ಲೂ ಒಂದೊಂದು ರೀತಿಯ ಕಲಾತ್ಮಕತೆ ಇದೆ. ಕ್ರಿಕೆಟ್‌ನ ಎಲ್ಲಾ ತಾಂತ್ರಿಕತೆ ಗಳನ್ನ ಮೈಗೂಡಿಸಿಕೊಂಡಿರುವ ರಾಹುಲ್, ಬ್ಯಾಟಿಂಗ್ ವೈಭವವನ್ನ ವರ್ಣಿಸುವುದು ತುಸು ಕಷ್ಟ. ಅಷ್ಟೇ ಅಲ್ಲ, ದ್ರಾವಿಡ್ ಅವ್ರ ಬ್ಯಾಟಿಂಗ್ ಶೈಲಿ ಯುವ ಆಟಗಾರರಿಗೆ ಕಲಾ ಶಾಲೆಯೇ ಸರಿ.
ಈಗಾಗಲೇ ಮಿಸ್ಟರ್ ಫರ್ಫೆಕ್ಟ್, ಮಿಸ್ಟರ್ ಡಿಪೆಂಡೆಬಲ್... ಅನ್ನೋ ಬಿರುದುಗಳು ಈ ಬೆಂಗಳೂರಿನ ಹುಡುಗನ ಹೆಸರಿನ ಮುಂದೆ ಅಂಟಿಕೊಂಡಿವೆ. ತಂಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುವ ದ್ರಾವಿಡ್ ಪಕ್ಕಾ ಟೀಮ್ ಪ್ಲೇಯರ್ ಅನ್ನೋದನ್ನ ಸಾಬೀತು ಪಡಿಸಿದ್ರು. ಮೇಸ್ತ್ರಿ ಇಟ್ಟಿಗೆಗಳನ್ನ ಜೋಡಿಸಿ ಗೋಡೆ ಕಟ್ಟುವ ಹಾಗೇ ರಾಹುಲ್ ಟೀಮ್ ಇಂಡಿಯಾದ ಮೇಸ್ತ್ರಿಯಾಗಿ ಎದುರಾಳಿ ತಂಡಗಳಿಗೆ ತಡೆ ಗೋಡೆಯಾದ್ರು.
ಸರಿ ಸುಮಾರು 15 ವರ್ಷಗಳ ಹಿಂದೆ ಟೀಮ್ ಇಂಡಿಯಾದೊಳಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಎಂಟ್ರಿಕೊಟ್ಟ ಜ್ಯಾಮಿ, ಯಾವುದೇ ಕ್ರಮಾಂಕದಲ್ಲೂ ಆಡಲು ಸೈ ಎನಿಸಿಕೊಂಡಿದ್ರು.. ಇನ್ನು, ತಂಡದ ಇನಿಂಗ್ಸನ್ನೂ ಆರಂಭಿಸಿರುವ ದ್ರಾವಿಡ್, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ್ರು. ಜತೆಗೆ ಪಾರ್ಟ್ ಟೈಮ್ ಬೌಲಿಂಗ್ ಕೂಡ ಮಾಡ್ತಾ ಇದ್ರು. ಫೀಲ್ಡಿಂಗ್‌ನಲ್ಲಂತೂ ದ್ರಾವಿಡ್ ಫರ್ಫಾಮೆನ್ಸ್ ಸೂಪರ್.
ಅಂದ ಹಾಗೇ, ಆರಂಭದ ದಿನಗಳಲ್ಲಿ ದ್ರಾವಿಡ್ ಕೇವಲ ಟೆಸ್ಟ್ ಕ್ರಿಕೆಟಿಗ ಅನ್ನೋ ಹಣೆಪಟ್ಟಿಯನ್ನು ಪಡೆದಿದ್ರು. ಏಕದಿನ ಪಂದ್ಯಗಳಿಗೆ ಬಂದು ಹೋಗುತ್ತಿದ್ದ ರಾಹುಲ್ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ರು. ಆದ್ರೆ 1999ರ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದ್ರಾವಿಡ್ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನೇ ನೀಡಿದ್ರು. ನಂತ್ರ ಹಿಂತಿರುಗಿ ನೋಡಿದ್ದೇ ಇಲ್ಲ..
ಆದ್ರೆ 2007ರ ವಿಶ್ವಕಪ್ ದ್ರಾವಿಡ್ ಏಕದಿನ ಕ್ರಿಕೆಟ್ ಬದುಕಿಗೆ ಸುನಾಮಿಯಂತೆ ಅಪ್ಪಳಿಸಿತ್ತು. ಆಟಗಾರರ ನಡುವಿನ ಗೊಂದಲ ... ಕೋಚ್ ಗ್ರೆಗ್ ಚಾಪೆಲ್ ದ್ವಂದ ನೀತಿಯಿಂದ ಕೆರೆಬಿಯನ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿತ್ತು. ಇದ್ರಿಂದ ತೀರಾ ನೊಂದ ಜಾಮಿ, ತಂಡದ ನಾಯಕತ್ವವನ್ನ ತ್ಯಜಿಸಬೇಕಾಯ್ತು. ಜತೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕಳಪೆ ಫಾರ್ಮ್ ದ್ರಾವಿಡ್‌ರನ್ನ ಏಕದಿನ ಕ್ರಿಕೆಟ್‌ನಿಂದ ದೂರ ಉಳಿಯುವಂತೆ ಮಾಡಿತ್ತು. ನಂತ್ರ ಏಕದಿನ ಪಂದ್ಯಗಳಲ್ಲಿ ಯುವ ಆಟಗಾರರ ದರ್ಬಾರಿನ ಮುಂದೆ ಜಾಮಿಯ ಕಲಾತ್ಮಕ ಆಟ ಮಸುಕಾಗಿಬಿಟ್ಟಿತ್ತು. ಇದ್ರಿಂದ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯವನ್ನ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರು.
ಈಗಾಗಲೇ ರಾಹುಲ್ ದ್ರಾವಿಡ್ ಟ್ವೆಂಟಿ ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಟೆಸ್ಟ್ ಪಂದ್ಯವನ್ನ ಮಾತ್ರ ಆಡ್ತಾ ಇದ್ದಾರೆ. ಇದ್ರಿಂದ ಜಾಮಿ ತನ್ನ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಯಾವಾಗ ವಿದಾಯ ಹೇಳ್ತಾರೆ ಅಂತ ಹೇಳೋಕೆ ಆಗಲ್ಲ. ಆದ್ರೂ ರಾಹುಲ್‌ಗೆ ಆಡುವ ಸಾಮರ್ಥ್ಯ ಇನ್ನೂ ಇದೆ. ಹಾಗಂತ ಇದಕ್ಕೆ ಬಿಸಿಸಿಐ ಎಷ್ಟರ ಮಟ್ಟಿಗೆ ಸ್ಪಂದಿಸುತ್ತೆ ಅನ್ನೋದು ಮುಖ್ಯವಾಗಿರುತ್ತೆ.
ನಿಜ, ರಾಹುಲ್ ದ್ರಾವಿಡ್ ರದ್ದು ವರ್ಣರಂಜಿತ ಕ್ರಿಕೆಟ್ ಬದುಕು. ಕ್ರಿಕೆಟ್ ಮೇಲಿನ ಆಗಾಧವಾದ ಪ್ರೀತಿ ಜಾಮಿಯನ್ನು ಉತ್ತುಂಗಕ್ಕೇರಿಸಿದೆ. ಕಲ್ಮಶವಿಲ್ಲದ ವ್ಯಕ್ತಿತ್ವ ದ್ರಾವಿಡ್ ಹೆಸರನ್ನ ಇನ್ನಷ್ಟು ಮೆರಗುಗೊಳಿಸಿದೆ. ಆದ್ರೆ ದ್ರಾವಿಡ್, ಎಷ್ಟೇ ಸಾಧನೆ, ಯಶಸ್ಸು, ದಾಖಲೆ ಮಾಡಿದ್ರೂ ಟೀಮ್ ಇಂಡಿಯಾದ ಸವಿ ಸವಿ ನೆನಪಿನ ಸಂಭ್ರಮದಲ್ಲಿರಲಿಲ್ಲ. 15 ವರ್ಷ ಟೀಮ್ ಇಂಡಿಯಾದಲ್ಲಿ ಆಡಿದ್ರೂ 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ತಾನಿಲ್ಲ ಅನ್ನೋ ಬೇಸರ, ನಿರಾಸೆ, ನೋವು ದ್ರಾವಿಡ್‌ರನ್ನ ಸದಾ ಕಾಡುತ್ತಲೇ ಇರುತ್ತೆ.
ಇನ್ನು, ಕ್ಲಾಸ್... ಕಮೀಟ್‌ಮೆಂಟ್ ಆಂಡ್ ಕನ್ಷಿಸ್ಟೆನ್ಸಿ ಈ ಮೂರು ಪದಗಳು ದ್ರಾವಿಡ್ ಗೆ ಅನ್ವರ್ಥನಾಮ.. ಯಾಕಂದ್ರೆ ಕ್ರಿಕೆಟ್‌ನ ಎಲ್ಲಾ ಪಾಠಗಳನ್ನ ರಾಹುಲ್ ದ್ರಾವಿಡ್ ಅವ್ರ ಬ್ಯಾಟಿಂಗ್ ಮತ್ತು ವ್ಯಕ್ತಿತ್ವದಲ್ಲಿ ಕಾಣಬಹುದು. ದ್ರಾವಿಡ್ ಬ್ಯಾಟ್‌ನಿಂದ ಚಿಮ್ಮುವ ಚೆಂಡು ನೂಲಿನಿಂದ ಗೆರೆ ಎಳೆಯುವಂತೆ ಬೌಂಡರಿ ಗೆರೆ ದಾಟುತ್ತೆ. ಆಗ ಎದುರಾಳಿ ತಂಡದ ಆಟಗಾರರಿಗೆ ದ್ರಾವಿಡ್ ರ ಬ್ಯಾಟಿಂಗ್ ಕಲಾತ್ಮಕತೆಯನ್ನ ಕಣ್ಣುತುಂಬಿಕೊಳ್ಳುವ ಬಯಕೆ ಬಂದ್ರೂ ಅಚ್ಚರಿ ಏನಿಲ್ಲ.
ಈ ನಡುವೆ, ದ್ರಾವಿಡ್ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಯುವಕರ ಆಟ ಅಂತ ದೂರ ಸರಿದ್ರು. ಆದ್ರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚು ಹರಿಸಿದ ದ್ರಾವಿಡ್ ಟ್ವೆಂಟಿ ಟ್ವೆಂಟಿ ಪಂದ್ಯ ಕೇವಲ ಹೊಡಿ ಬಡಿ ಆಟವಲ್ಲ. ಅನುಭವ ಮತ್ತು ತಾಂತ್ರಿಕತೆಯೂ ಬೇಕಾಗುತ್ತೆ ಎಂಬುದನ್ನ ಸಾಬೀತುಪಡಿಸಿದ್ರು. ಅಷ್ಟೇ ಅಲ್ಲ, ಕಳೆದ ವರ್ಷ, ಇಂಗ್ಲೆಂಡ್ ವಿರುದ್ಧ ಚೊಚ್ಚಲ ಹಾಗೂ ಕೊನೆಯ ಟ್ವೆಂಟಿ ಟ್ವೆಂಟಿ ಪಂದ್ಯವನ್ನೂ ಆಡಿ ಚುಟುಕು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರು. ಸದ್ಯ ಐಪಿಎಲ್ ಆಡುತ್ತಿರುವ ರಾಹುಲ್ ರಾಜಸ್ಥಾನರಾಯಲ್ಸ್ ತಂಡದ ನಾಯಕನಾಗಿದ್ದಾರೆ.
ಏನೇ ಆದ್ರೂ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ಇವತ್ತಿಗೂ ಅಪತ್ಭಾಂದವ. ಈಗಾಗಲೇ ಕ್ರಿಕೆಟ್ ಬದುಕಿನ ಮುಸ್ಸಂಜೆಯಲ್ಲಿರುವಾಗಲೂ ದ್ರಾವಿಡ್‌ರ ರನ್ ದಾಹ ಬತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ದಿ ಗ್ರೇಟ್ ವಾಲ್. ಹಾಗೇ ವಿಂಡೀಸ್ ವಿರುದ್ಧ ಗಮನ ಸೆಳೆಯುವಂತಹಪ್ರದರ್ಶನ ನೀಡಿದ್ರು. ಆದ್ರೆ ಯಾಕೋ ಆಸ್ಟ್ರೇಲಿಯಾ ಸರಣಿಯಲ್ಲಿ ಮಾತ್ರ ದ್ರಾವಿಡ್ ಆಟ ಅಂದುಕೊಂಡಂತೆ ನಡೆಯುತ್ತಿಲ್ಲ. ಆದ್ರೂ ದ್ರಾವಿಡ್ ತಪ್ಪುಗಳನ್ನ ಸರಿಪಡಿಸಿಕೊಂಡು ರನ್ ದಾಖಲಿಸುವುದರಲ್ಲಿ ಅನುಮಾನನೇ ಇಲ್ಲ.
ಮತ್ತೊಂದೆಡೆ, ದ್ರಾವಿಡ್ ಅನೇಕ ದಾಖಲೆಗಳನ್ನ ಸೃಷ್ಠಿಸಿದ್ದಾರೆ. ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್ ಪೂರೈಸಿದ ಹೆಗ್ಗಳಿಕೆ ದ್ರಾವಿಡ್ ಅವ್ರದ್ದು. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ವಿಶ್ವದ ನಾಲ್ಕನೇ ಆಟಗಾರ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ವಿಶ್ವದ ಎರಡನೇ ಆಟಗಾರನೂ ಹೌದು. ಜತೆಗೆ ಗರಿಷ್ಠ ಕ್ಯಾಚ್ ಹಿಡಿದ ಹಿರಿಮೆ ಸಹ ದ್ರಾವಿಡ್‌ಗೆ ಸಲ್ಲುತ್ತೆ.
ಏನೇ ಆದ್ರೂ. ಕಳೆದ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ದ್ರಾವಿಡ್ ಹೆಸರಿಗೆ ಎಲ್ಲೂ ಕಪ್ಪುಚುಕ್ಕೆ ಅಂಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ರಾಹುಲ್ ದ್ರಾವಿಡ್ ಫರ್ಪೆಕ್ಟ್. ತನ್ನ 39ರ ಹರೆಯದಲ್ಲೂ ಕ್ಲಾಸ್‌ಗೂ ಸೈ, ಮಾಸ್‌ಗೂ ಜೈ ಅನ್ನೋ ದ್ರಾವಿಡ್ ರಂತಹ ಆಟಗಾರನನ್ನು ವಿಶ್ವ ಕ್ರಿಕೆಟ್‌ಗೆ ಕೊಡುಗೆಯಾಗಿ ನೀಡಿದ ಹೆಮ್ಮೆ ಕರ್ನಾಟಕದ್ದು. ಎನಿ ವೇ ಹ್ಯಾಪಿ ಬರ್ತ್ ಡೇ ಜಾಮಿ.

ಸ್ಟೈಲ್ಲೇ ಬೇರೆ.. ಲುಕ್ಕೇ ಬೇರೆ...
ಮಹೇಂದ್ರ ಸಿಂಗ್ ಧೋನಿ...ರಾಂಚಿ ರಾಂಬೋ.. ಹೆಸರಿಗೆ ತಕ್ಕಂತೆ ಧೋನಿ ವಿಭಿನ್ನ ಹವ್ಯಾಸವನ್ನ ಹೊಂದಿದ್ದಾರೆ. ಹೌದು, ಧೋನಿಯ ಸ್ಟೈಲ್ಲೇ ಬೇರೆ.. ಲುಕ್ಕೇ ಬೇರೆ... ಎಲ್ಲವೂ ಡಿಫರೆಂಟ್.. ಅದಕ್ಕಾಗಿಯೇ ಎಮ್. ಎಸ್. ಧೋನಿ ಎಲ್ರಿಗೂ ಇಷ್ಟ..
ಧೋನಿಗೆ ಬೈಕ್ ಅಂದ್ರೆ ಪಂಚ ಪ್ರಾಣ.. ಹೊಸ ಬೈಕ್ ಗಳ ಮೇಲೆ ಜಾಲಿ ರೈಡ್ ಮಾಡೋದು ಅಂದ್ರೆ ಏನೋ ಒಂಥರಾ ಖುಷಿ. ಹಾಗೇ, ಬೈಕ್ ಗಳ ಸಂಗ್ರಹದಲ್ಲೂ ಮಾಹಿ ಒಂದು ಹೆಜ್ಜೆ ಮುಂದು. ಈಗಾಗಲೇ ಈ ಕೂಲ್ ಕ್ಯಾಪ್ಟನ್ ಮನೆಯಲ್ಲಿ 40 ಕ್ಕೂ ಹೆಚ್ಚು ಬೈಕ್ ಗಳು ಸಾಲಾಗಿ ನಿಂತಿವೆ. ಇದ್ರಲ್ಲಿ ಯಮಹಾ, ಟಿವಿಎಸ್, ಹಾರ್ಲಿ ಡೇವಿಡ್ಸ್ನ್ ಬೈಕ್‌ಗಳು ಕೂಡ ಸೇರಿಕೊಂಡಿವೆ.
ಬಿಡುವಿನ ವೇಳೆಯಲ್ಲಿ ಬೈಕ್ ಏರಿ ನೂರಾರು ಕಿಲೋ ಮೀಟರ್ ಸವಾರಿ ನಡೆಸುವುದು ಧೋನಿಯ ಹಾಬಿ. ವಿದೇಶಿ ಪ್ರವಾಸದ ವೇಳೆ ಬೈಕ್‌ಗಳ ಬಿಡಿ ಭಾಗಗಳನ್ನ ಪರ್ಚೆಸ್ ಮಾಡಿ ತನ್ನ ಬೈಕ್‌ಗಳನ್ನ ಶೃಂಗಾರ ಕೂಡ ಮಾಡ್ತಾರೆ. ಅಷ್ಟೇ ಅಲ್ಲ, ಪಂದ್ಯಗಳಲ್ಲಿ ಬಹುಮಾನವಾಗಿ ಯಾರೇ ಬೈಕ್ ಗೆದ್ರೂ ಅದನ್ನು ಮೊದಲು ಓಡಿಸುವುದು ಧೋನಿಯೇ...
ಇನ್ನು, ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಹೆಚ್ಚು ಗಮನ ಸೆಳೆದದ್ದು ತನ್ನ ಉದ್ದನೆಯ ಕೂದಲಿನಿಂದ. ಧೋನಿಯ ಹೇರ್ ಸ್ಟೈಲ್‌ಗೆ ಯುವತಿಯರು ಕ್ಲೀನ್ ಬೌಲ್ಡಾದ್ರೆ, ಯುವಕರು ಧೋನಿಯ ಹೇರ್ ಸ್ಟೈಲ್ ಅನ್ನೇ ಅನುಕರಣೆ ಮಾಡಿದ್ರು. ಅಷ್ಟೇ ಯಾಕೆ, ಪಾಕ್‌ನ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರರಫ್ ಕೂಡ ಧೋನಿಯ ಹೇರ್ ಸ್ಟೈಲ್‌ಗೆ ಕಾಂಪ್ಲಿಮೆಂಟರಿ ನೀಡಿದ್ರು.
ಆದ್ರೆ ಧೋನಿಗೆ ಈ ಉದ್ದ ಕೂದಲು ಯಾಕೋ ಬೋರ್ ಹೊಡಿಸಿತ್ತು ಅನ್ಸುತ್ತೆ. ಅದ್ರಲ್ಲೂ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ನಂತ್ರ ಧೋನಿ ತನ್ನ ಕೂದಲಿಗೆ ಕತ್ತರಿ ಹಾಕಿದ್ರು. ಟ್ರಿಮ್ ಮಾಡ್ಕೊಂಡ ಧೋನಿ ಮದುವೆಯ ಸಮಯದಲ್ಲೂ ಕೂದಲಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೂ ಆಗಾಗ ಮಾಹಿ ತನ್ನ ಹೇರ್ ಸ್ಟೈಲ್ ಅನ್ನು ಚೆಂಚ್ ಮಾಡ್ತಾನೇ ಇರ್ತಾರೆ.
ಇನ್ನೊಂದೆಡೆ, ಧೋನಿಗೆ ದೇವ್ರ ಮೇಲೆ ಅಪಾರ ಭಕ್ತಿ. ಹಾಗೇ ದೇವಿಯ ಆರಾಧಕರು ಹೌದು. ಬಿಡುವಿನ ವೇಳೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗೆಲ್ಲಾ ಎಲ್ಲಾ ಭೇಟಿ ನೀಡ್ತಾರೆ.
ಆಟದಿಂದಲೇ ಜನಪ್ರಿಯತೆಯ ಉತ್ತುಂಗಕ್ಕೇರಿದ ಎಮ್. ಎಸ್.ಧೋನಿ ಜಾಹಿರಾತು ಪ್ರಪಂಚದ ಕಣ್ಮಣಿ. ಪೆಪ್ಸಿ, ಏರ್ ಸೆಲ್, ರಿಲಯಾನ್ಸ್, ಬೂಸ್ಟ್ , ವಿಡಿಯೋಕಾನ್, ಟಿವಿಎಸ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳಿಗೆ ಈ ಕೂಲ್ ಕ್ಯಾಪ್ಟನ್ ಬ್ರಾಂಡ್ ಅಂಬಾಸಿಡರ್. ಹಾಗೇ ಟಿವಿಎಸ್ ಜಾಹಿರಾತಿನಲ್ಲಿ ಧೋನಿ ಪತ್ನಿ ಸಾಕ್ಷಿ ಜತೆ ಕೂಡ ಕಾಣಿಸಿಕೊಂಡ್ರು. .
ಹೀಗೆ ಬಿಂದಾಸ್ ಆಗಿರುವ ಧೋನಿ ನಟನೆಯಲ್ಲೂ ಮುಂದಿದ್ದಾರೆ. ಹಾಗೇ ಸ್ಟೇಜ್‌ನಲ್ಲಿ ಡಾನ್ಸ್ ಮಾಡಿ ಮಿಂಚು ಹರಿಸ್ತಾರೆ. ಮುಖ್ಯವಾಗಿ ಕಿಂಗ್ ಖಾನ್ ಶಾರೂಕ್ ಖಾನ್ ಜತೆ ಧೋನಿ ಹೆಜ್ಜೆ ಹಾಕಿರೋದನ್ನ ಯಾವತ್ತಾದ್ರೂ ಮರೆಯೋಕೆ ಆಗುತ್ತಾ...
ಮತ್ತೊಂದೆಡೆ, ಧೋನಿ ಸಾಹಸ ಕ್ರೀಡೆಗಳನ್ನ ಇಷ್ಟಪಡುತ್ತಾರೆ. ಕುದುರೆ ಸವಾರಿ ಮಾಡ್ತಾರೆ. ಮಿಲಿಟರಿ ಕ್ಯಾಂಪ್‌ಗೆ ಭೇಟಿ ನೀಡ್ತಾರೆ. ಸೈನಿಕರನ್ನ ಭೇಟಿ ಮಾಡಿ ಅವ್ರ ಜತೆ ಕಾಲ ಕಳೆಯುತ್ತಾರೆ. ಜತೆಗೆ ತನ್ನ ನೆಚ್ಚಿನ ಅಭಿಮಾನಿಯ ಮನೆಗೆ ಹೋಗಿ ಅಡುಗೆ ಮಾಡಿ, ಗಲ್ಲಿ ಕ್ರಿಕೆಟ್ ಕೂಡ ಆಡ್ತಾರೆ.
ಇನ್ನು, ಧೋನಿಯ ಲೈಫೇ ಕಲರ್‌ಫುಲ್.. ಸೆಲೆಬ್ರಿಟಿ ಹಾಗೂ ಟೀಮ್ ಇಂಡಿಯಾದ ನಾಯಕನಾಗಿರುವುದರಿಂದ ಸಹಜವಾಗಿಯೇ ಚಿತ್ರರಂಗದ ನಂಟು ಇದ್ದೇ ಇರುತ್ತೆ. ಇದ್ರಿಂದ ಧೋನಿಯ ಹೆಸ್ರು ಹಲವು ನಟಿಯರ ಜತೆ ಕೇಳಿಬಂತು. ದೀಪಿಕಾ ಪಡುಕೋಣೆ, ಲಕ್ಷ್ಮಿ ರೈ, ಆಸಿನ್ ಮೊದಲಾದವರ ಹೆಸರುಗಳು ರಾಂಚಿ ರಾಂಬೋನ ಹೆಸರಿನ ಮುಂದೆ ಅಂಟಿಕೊಂಡಿದ್ದವು. ಅಷ್ಟರಲ್ಲೇ ಧೋನಿ ಸಾಕ್ಷಿಯ ಕೈ ಹಿಡಿದು ಎಲ್ಲಾ ಗಾಸಿಪ್‌ಗಳಿಗೂ ತೆರೆ ಎಳೆದ್ರು.
ಸಾಕ್ಷಿ ಜೊತೆ ಸಪ್ತಪದಿ ತುಳಿದ ಬಳಿಕ ಧೋನಿಯ ಬದುಕು ಇನ್ನಷ್ಟು ಹಸನಾಯ್ತು. ಐಪಿಎಲ್, ಚಾಂಪಿಯನ್ಸ್ ಲೀಗ್, ವಿಶ್ವಕಪ್ ಗೆಲುವಿನ ಖುಷಿಯಲ್ಲಿ ತೇಲಾಡಿದ್ರು. ಜತೆಗೆ ಹೊಸ ಬಂಗಲೆ , ಹೊಸ ಕಾರು, , ಫಾರ್ಮ್ ಹೌಸ್.. ಪ್ರೀತಿಯ ಮಡದಿ.. ಕುಟುಂಬ ದವರ ಪ್ರೇರಣೆ... ಅಭಿಮಾನಿಗಳ ಸ್ಪೂರ್ತಿ ಇನ್ನೇನೂ ಬೇಕು. ಹಾಗಂತ ಧೋನಿಯ ಲೈಫ್ ಸ್ಟೈಲ್ ಇಷ್ಟೇನಾ ಅಂತ ಹೇಳುವ ಹಾಗಿಲ್ಲ.
ಭವ್ಯ ಎನ್

ಡಾಕ್ಟರ್ ಮಹೇಂದ್ರ ಸಿಂಗ್ ಧೋನಿ...
ಡಾಕ್ಟರ್ ಮಹೇಂದ್ರ ಸಿಂಗ್ ಧೋನಿ... ಹಾಗಂತ ಅಚ್ಚರಿಪಡಬೇಡಿ.. ಯಾಕಂದ್ರೆ ಧೋನಿ ವೈದ್ಯನಲ್ಲ...ಹಾಗೇ ಸಂಶೋಧನೆ ಮಾಡಿ ಪದವಿ ಸಹ ಪಡ್ಕೊಂಡಿಲ್ಲ ಅಷ್ಟೇ ಯಾಕೆ ಡಿಗ್ರಿ ಕೂಡ ಕಂಪ್ಲೀಟ್ ಮಾಡಿಲ್ಲ. ಹೀಗಿದ್ರೂ ಧೋನಿ ಹೆಸರಿನ ಹಿಂದೆ ಡಾಕ್ಟರ್ ಅನ್ನೋ ಬಿರುದು ಕಂಗೋಳಿಸುತ್ತಿದೆ.
ಹೌದು, ಇಂಗ್ಲೆಂಡ್‌ನ ಡಿ ಮೊಂಟ್ ಫೋರ್ಟ್ ಯೂನಿವರ್ಸಿಟಿ ಧೋನಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಆದ್ರೆ ಇದು ಪಬ್ಲಿಸಿಟಿ ಸ್ಟಂಟ್ ಅಲ್ಲ. ಬದಲಾಗಿ ಧೋನಿಯ ಕ್ಯಾಪ್ಟನ್ಸಿ ಮತ್ತು ಎಬಿಲಿಟಿಗೆ ಸಂದ ಗೌರವ.
ಅಂದ ಹಾಗೇ, ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ತನ್ನದೇ ಅದ ಚಾರ್ಮ್ ಅನ್ನು ಬೆಳೆಸಿಕೊಂಡಿದ್ದಾರೆ. ಪಂದ್ಯ ಸೋಲಲಿ.. ಗೆಲ್ಲಲಿ... ತಾಳ್ಮೆಯನ್ನ ಕಳೆದುಕೊಳ್ಳುವುದಿಲ್ಲ. ಇದಕ್ಕಾಗಿಯೇ ಕೂಲ್ ಕ್ಯಾಪ್ಟನ್ ಅಂತಲೂ ಬಿಂಬಿತವಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುವುದಿಲ್ಲ. ಅದ್ರಲ್ಲೂ ಎದುರಾಳಿ ತಂಡದ ವೀಕ್‌ನೆಸ್‌ಗಳನ್ನ ಬಲು ಬೇಗನೇ ಅರ್ಥಮಾಡಿಕೊಳ್ಳುವ ಮಾಹಿ, ಗ್ಯಾಂಬಲ್ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಕೂಡ ಹೌದು.
ಧೋನಿ ತಂಡವನ್ನ ಮುನ್ನಡೆಸುವ ಪರಿಯೇ ಡಿಫರೆಂಟ್.. ವಿಕೆಟ್ ಕೀಪಿಂಗ್ ಜವಾಬ್ದಾರಿಯ ಜತೆಗೆ ಅಂಗಣದಲ್ಲಿ ಪ್ರಯೋಗ ಕೂಡ ನಡೆಸ್ತಾರೆ. ಇದ್ರಿಂದ ಎದುರಾಳಿ ತಂಡಕ್ಕೆ ಮಾಹಿಯ ಗೇಮ್ ಪ್ಲಾನ್‌ಗಳನ್ನ ಅರ್ಥ ಮಾಡ್ಕೊಳ್ಳುವುದು ತುಸು ಕಷ್ಟ. ಹಾಗೇ, ಧೋನಿ ಸಹ ಆಟಗಾರರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಳ್ಳುತ್ತಾರೆ. ಇದ್ರಿಂದ ಆಟಗಾರರು ಕೂಡ ನಾಯಕನ ನಂಬಿಕೆಯನ್ನ ಹುಸಿಗೊಳಿಸಬಾರದು ಅನ್ನೋ ರೀತಿಯಲ್ಲೇ ಹೋರಾಟ ನಡೆಸ್ತಾರೆ. ಇದುವೇ ಧೋನಿಯ ಗೆಲುವಿನ ಸೂತ್ರ.
ಇನ್ನು, 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನಂತೂ ಮರೆಯೋಕೆ ಸಾಧ್ಯವಿಲ್ಲ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ನಾಯಕನ ಆಟವನ್ನಾಡಿದ ಧೋನಿಯ ಬ್ಯಾಟಿಂಗ್ ವೈಖರಿಗೆ ಸಲಾಂ ಅನ್ನಲೇಬೇಕು. ಸೋಲಿನ ಆತಂಕಕ್ಕೆ ಸಿಲುಕಿದ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಲ್ಲದೆ ಗೆಲುವಿನ ರನ್‌ಗಾಗಿ ಸಿಕ್ಸರ್ ಬಾರಿಸಿ ಚೆಂಡನ್ನ ದಿಟ್ಟಿಸಿ ನೋಡುತ್ತಿದ್ದ ಧೋನಿಯ ಆ ಕಣ್ಣುಗಳು... ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಸಂಭ್ರಮಿಸಿದ ರೀತಿ.
ಅಬ್ಬಾ...ಎಂಥ ಅದ್ಭುತ ಆಟ... ಎಂಥ ಬ್ಯಾಟಿಂಗ್ ವೈಖರಿ... ನಾಯಕ ಅಂದ್ರೆ ಹಿಂಗಿರಬೇಕು ಅಂತ ಕ್ರಿಕೆಟ್ ಪಂಡಿತರ ಜತೆ ಅಭಿಮಾನಿಗಳು ಉದ್ಗರಿಸಿದ್ರು.
ನಿಜ, ಧೋನಿ ನಾಯಕನಾದ ಮೇಲೆ ತುಂಬಾನೇ ಬದಲಾದ್ರು. ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಸಾಧಿಸಿದ್ರು. ಜತೆಗೆ ಮೈದಾನ ಮತ್ತು ಮೈದಾನದ ಹೊರಗಡೆ ನಾಯಕನ ಘನತೆಯನ್ನ ಕಾಯ್ದುಕೊಂಡ್ರು. ಕಿರಿಯ ಆಟಗಾರರ ಮೇಲಿನ ಪ್ರೀತಿ ಮತ್ತು ಹಿರಿಯ ಆಟಗಾರರಿಗೆ ನೀಡುವ ಗೌರವದಿಂದ ಟೀಮ್ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿದ್ರು.
ಇನ್ನೊಂದೆಡೆ, ತನ್ನ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆ ಇಲ್ಲದಿದ್ರೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ರು. ಅದ್ರಲ್ಲೂ ಧೋನಿಯ ಹೆಲಿಕಾಪ್ಟರ್ ಶಾಟ್ ಕ್ರಿಕೆಟ್ ಪ್ರಿಯರ ಮನ ಗೆದ್ದಿತ್ತು.
ಈ ನಡುವೆ, ಧೋನಿಯ ನಾಯಕತ್ವದ ಬಗ್ಗೆ ಸಂಶೋಧನೆ ಕೂಡ ನಡೆಯಿತ್ತು. ಮುಖ್ಯವಾಗಿ ಧೋನಿಯ ಬ್ರೈನ್ ಹೇಗೆಲ್ಲಾ ವರ್ಕ್ ಆಗುತ್ತೆ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸಲು ಮುಂದಾದ್ರು. ಅಷ್ಟರ ಮಟ್ಟಿಗೆ ಧೋನಿಯ ಲೀಡರ್‌ಶಿಪ್ ಕ್ವಾಲಿಟಿ ಫೇಮಸ್ .
ಆದ್ರೆ ಈಗ ಧೋನಿಗೆ ಏನಾಗಿದೆ. ಮಾಹಿಯ ಮಹಿಮೆ ಯಾಕೆ ಮಂಕಾಗಿದೆ. ಕೂಲ್ ಕ್ಯಾಪ್ಟನ್‌ಗೆ ಅದೃಷ್ಟ ಕೈಕೊಟ್ಟಿತ್ತಾ.. ಧೋನಿಯ ಅದೃಷ್ಟದಿಂದಲೇ ಟೀಮ್ ಇಂಡಿಯಾ ಶ್ರೇಷ್ಠ ತಂಡವಾಗಿ ಹೊರಹೊಮ್ಮಿರುವುದಾ... ಈ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರವಿಲ್ಲ.
ಯಾಕಂದ್ರೆ ಕಾಲಚಕ್ರ... ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಜಗದ ನಿಯಮ ಕೂಡ ಹೌದು. ಯಶಸ್ಸಿನ ಉತ್ತುಂಗಕ್ಕೇರಿದ ಧೋನಿ ಸದ್ಯ ಹಿನ್ನಡೆ ಅನುಭವಿಸಿರಬಹುದು. ಹಾಗಂತ ಈಗ ಧೋನಿಯ ನಾಯಕತ್ವವನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಜಸ್ಟ್ ಬ್ಯಾಡ್ ಟೈಮ್ ಅಷ್ಟೇ. ಏನೇ ಆದ್ರೂ, ಧೋನಿ ಮುಂದಿನ ದಿನಗಳಲ್ಲಿ ಮತ್ತೆ ತಂಡವನ್ನ ಗೆಲುವಿನತ್ತ ಕೊಂಡೋಯ್ಯುತ್ತಾರೆ ಅನ್ನೋ ನಂಬಿಕೆ ಇದೆ. ಆಲ್ ದಿ ಬೆಸ್ಟ್ ಮಾಹಿ..

Saturday, February 18, 2012
ಮೈ ಡಿಯರ್ ಸಿಸ್ಟರ್ಸ್ ಅಂಡ್ ಬ್ರದರ್ಸ್
ಸೆಪ್ಟೆಂಬರ್ 11, 1893..
ಚಿಕಾಗೋದಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಮಟ್ಟದ ಸಭೆ.. ಗದ್ದಲ ತುಂಬಿದ್ದ ಆವರಣದಲ್ಲಿ ಇದ್ದಕ್ಕಿದ್ದಂತೆ ಕಂಚಿನ ಕಂಠವೊಂದರ ಪ್ರತಿಧ್ವನಿ. ಇದ್ದಕ್ಕಿದ್ದಂತೆ ಇಡೀ ಸಭಾಂಗಣವೇ ನಿಶ್ಯಬ್ದ.
ವೇದಿಕೆ ಮೇಲೆ ನಿಂತಿದ್ರು ಆ ಆಜಾನುಬಾಹು, ಮೈ ಡಿಯರ್ ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ ಅಂತ ತನ್ನ ಭಾಷಣ ಶುರುಮಾಡಿದ್ದೇ ತಡ ನೆರೆದಿದ್ದ 7 ಸಾವಿರ ಮಂದಿ ಶಿಲೆಗಳಂತೆ ನಿಂತುಬಿಟ್ರು.. ಹಾಗಿತ್ತು ಆ ಆಜಾನುಬಾಹು ಆಡಿದ ಶೈಲಿ.. ಇಡೀ ಜಗತ್ತನ್ನೇ ಮೋಡಿ ಮಾಡಿದ್ದ 3 ನಿಮಿಷಗಳ ಭಾಷಣ ಇತಿಹಾಸವಾಗಿ ಬದಲಾಗಿತ್ತು.
ಆ ಮಹಾನ್ ಮಾನವನೇ ಸ್ವಾಮಿ ವಿವೇಕಾನಂದರು... ಈ ದೈವೀಪುರುಷ ಬದುಕಿದ್ದು ಕೆಲವೇ ವರ್ಷಗಳಾಗಿದ್ರೂ, ತಮ್ಮ ಆದರ್ಶಗಳಿಂದಲೇ ವಿಶ್ವಮಾನವಾಗಿ ಪ್ರಜ್ವಲಿಸಿದ್ರು. ಜನವರಿ 12, 1863ರಲ್ಲಿ ಕೊಲ್ಕತ್ತಾದಲ್ಲಿ ಹುಟ್ಟಿದ್ದ ನರೇಂದ್ರ ನಂತ್ರ ವಿವೇಕಾನಂದರಾಗಿ ಬದಲಾಗಿದ್ದು ಒಂದು ರೋಚಕ ಅಧ್ಯಾಯ.
ವಿವೇಕಾನಂದರು ಅಂದ್ರೆ ಯುವಕರಿಗೆ ಏನೋ ಒಂದು ರೀತಿ ಸ್ಫೂರ್ತಿ.. ಯಾಕಂದ್ರೆ ಅವರ ದೇಶಪ್ರೇಮ, ತಾಯ್ನಾಡ ಮೇಲಿನ ಮಮತೆ, ಸಾಮಾಜಿಕ ಕಾಳಜಿ ಎಲ್ಲವೂ ಅನುಕರಣೀಯ. ಒಬ್ಬ ಮಹಾಮಾನವಾಗಿ, ಭಾರತಾಂಬೆಯ ಸುಪುತ್ರನಾಗಿರುವ ವಿವೇಕಾನಂದರ ಜನ್ಮದಿನವನ್ನ ರಾಷ್ಟ್ರೀಯ ಯುವ ದಿನವನ್ನಾಗಿ ಭಾರತ ಸರ್ಕಾರ 1984ರಲ್ಲಿ ಘೋಷಿಸಿತು. ಹೀಗಾಗಿ ಜನವರಿ 12 ಯುವಕರಿಗೆ ಮಹತ್ವದ ದಿನ.
ಮಾನವತಾವಾದ, ಶಿಕ್ಷಣಕ್ಕೆ ಹೊಸ ಅರ್ಥಕೊಟ್ಟಿದ್ದು ವಿವೇಕಾನಂದರು. ಧರ್ಮ ಅನ್ನೋದು ಕೇವಲ ತಾಯ್ನಾಡಿನ ಪ್ರತಿನಿಧಿಯಾಗಿರಬೇಕು. ನವ ಭಾರತದ ಜ್ಯೋತಿ ಪ್ರಜ್ವಲಿಸಬೇಕಾದ್ರೆ ಯುವಶಕ್ತಿಯ ಬೆವರಿನ ಎಣ್ಣೆ ಹರಿಯಲೇ ಬೇಕು ಅನ್ನೋದನ್ನ ಸಾರಿದ ಮಹಾತ್ಮ ವಿವೇಕಾನಂದರು.
ಯುವಶಕ್ತಿ ಮೇಲೇ ವಿವೇಕಾನಂದರಿಗೆ ಅಪಾರ ನಂಬಿಕೆ. ದೇಶ ಬದಲಾಗಬೇಕು ಅಂದ್ರೆ ಯುವಶಕ್ತಿ ವ್ಯರ್ಥವಾಗದೆ ಒಂದಾಗಿ ದುಡಿಬೇಕು. ಇದ್ರಿಂದಲೇ ಸಾಮಾಜಿಕ ಕ್ರಾಂತಿ ಸಾಧ್ಯ ಅಂತ ವಿವೇಕರು ಹೇಳಿದ್ರು. ಯುವ ರಕ್ತದ ಮೇಲೆ ಅದೆಷ್ಟು ನಂಬಿಕೆ ಅಂದ್ರೆ, ನನಗೆ ಮಹತ್ವಾಂಕ್ಷೆ ಇರುವ 100 ಯುವಕರನ್ನು ಕೊಡಿ, ಹೊಸ ಭಾರತ ಕಟ್ಟುತ್ತೇನೆ ಅಂತ ವಿವೇಕರು ಎದೆಯುಬ್ಬಿಸಿ ಹೇಳಿದ್ರು.
ಆದ್ರೆ ವಿವೇಕಾನಂದರು ಕಂಡಿದ್ದ ನವ್ಯಭಾರತದ ಕನಸು ನನಸಾಗಬಹುದಾ.. ಈ ಪ್ರಶ್ನೆ ಎದುರಾದ್ರೆ ಲೆಕ್ಕವಿಲ್ಲದಷ್ಟು ಜಿಜ್ಞಾಸೆಗಳು ಎದುರಾಗುತ್ತವೆ.. ಆ ಮಹಾಪುರುಷನ ಆಶಯವೇನು..ಹೇಗಿದೆ ಈಗಿನ ಸಮಾಜ.. ಹೇಗಿದ್ದೇವೆ ನಾವು ನೀವುಗಳು.. ಎಲ್ಲಿ ಹೋಯ್ತು ವಿವೇಕಾನಂದರ ಕಲ್ಪನೆಯ ಯುವ ಸಮಾಜ.. ವಿವೇಕಾನಂದರ ಕಲ್ಪನೆಯ ನೇತಾರರಾದ ನಾವು ನೀವುಗಳೇ ಇದಕ್ಕೆ ಉತ್ತರಿಸಬೇಕು..
ಪ್ರಶಾಂತ್‌ಬಿ.ಆರ್.

ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು...-1
(ಸ್ವಗತ
ಅಮ್ಮಂಗೆ ಆ ಡಾಕ್ಟ್ರು ಹೇಳಿದ್ ಮಾತ್ರೆ ತಗೊಂಡ್ಬೇಕು.. ಮನೆಗೆ ಸ್ಪಲ್ಪ ಸಾಮಾನ್ ತೊಗೋಂಡು ಹೋಗ್ಬೇಕು.. ಆದ್ರೆ .. ಛೇ.. ಏನ್ಮಾಡ್ಲಿ.. ( ಬಾಟಲಿ ಒದೆಯೋ ಶಾಟ್ )
ನಾನೂ ಆಗ್ಲೇ ಚೆನ್ನಾಗಿ ಓದಿದ್ರೆ.. ಒಂದು ಗೌರ್ಮೆಂಟ್ ಕೆಲ್ನಾ ಸಿಕ್ತಿದ್ರೆ.. ಕೈ ತುಂಬಾ ಸಂಬ್ಳ, ತಿರುಗೋಕೆ ಕಾರು, ಮಜ್ವಾಗಿರ್ತಿತ್ತು. ಆದ್ರೆ ಏನ್ಮಾಡೋದು ಅಣೆಬರನೇ ಸರಿ ಇಲ್ಲಾ ಅನ್ಸುತ್ತೆ..
ಇಲ್ಲ.. ಈ ಥರ ಸುಮ್ನೆ ಕೂತ್ರೆ ಅಮ್ಮಂಗೆ ಔಷ್ದಿ ಬರಲ್ಲ. . ಮನೆಗೆ ಅಕ್ಕಿ ಬೇಳೆ ಬರಲ್ಲ.. ಇಲ್ಲ ನಾನು ಏನಾದ್ರೂ ಮಾಡ್ಬೇಕು.. ಏನಾದ್ರೂ ಕೆಲ್ಸ ಮಾಡಬೇಕು.. ಚೆನ್ನಾಗಿ ದುಡಿಬೇಕು.. ಹಾ...////
ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು
ಹೆತ್ತೊಡಲಿಗೆ ನೆರವಾಗಬೇಕು, ಹಸಿದ ಹೊಟ್ಟೆ ಹೊರೆಯಬೇಕು.. ಖಾಯಿಲೆ ಕಸಾಲೆಗಳನ್ನು ನಿಭಾಯಿಸುತ್ತಾ ನಂಬಿದವರಿಗೆ ಆಸರೆಯಾಗಬೇಕು.. ಆದ್ರೆ ಇದಕ್ಕೊಂದು ಕೆಲಸ ಬೇಕು. . ಆದ್ರೆ ಇದಕ್ಕೆ ಬೇಕಾದ ವಿದ್ಯೆಯೂ ಇಲ್ಲ, ನಮ್ಮನ್ನ ಹೇಳುವವರು ಕೇಳುವವರಿಲ್ಲ.. ಇದು ಈಗಿನ ಅದೆಷ್ಟೋ ಯುವ ಮನಸ್ಸುಗಳ ಕೊರಗು..
ಯಾವುದೋ ಕಾರಣಕ್ಕೆ ಓದೋದಿಕ್ಕೆ ಸಾಧ್ಯವಾಗೋದಿಲ್ಲ. . ಉತ್ತಮ ಬದುಕು ಕಾಣಲು ಮನೆಯಲ್ಲಿ ಪೂರಕ ವಾತಾವರಣವಿಲ್ಲ. ಇದಿಷ್ಟಕ್ಕೆ ಅರಳಬೇಕಾದ ಮನಸ್ಸುಗಳು ಮುದುಡುತ್ತವೆ.. ತಾನು ಯಾವುದಕ್ಕೂ ಸುಖವಿಲ್ಲ, ತಾನು ಯಾರಿಗೂ ಬೇಕಾಗಿಲ್ಲ. ತಾನಿಂದ ಏನೂ ಆಗಬೇಕಿಲ್ಲ ಅನ್ನೋ ಮನೋಭಾವನೆಯಲ್ಲೇ ತಮ್ಮ ಯವ್ವನವನ್ನ ಕಳೆದವರು ಅದೆಷ್ಟೋ ಮಂದಿ.. ಇನ್ನು ಕೆಲವರಿಗೆ ತಾವು ಓದಿಲ್ಲ, ಒಳ್ಳೇ ಕೆಲಸ ಸಿಕ್ಕೋದಿಲ್ಲ ಅಂತ ಬೇಸರ. ಮತ್ತೆ ಕೆಲವರು ನಾನು ಹಾಗಾಗಿದ್ರೆ, ಹೀಗಾಗಿದ್ರೆ ಅನ್ನೋ ಕಲ್ಪನೆಗಳಲ್ಲೇ ಮುಳುಗಿ ರಸ್ತೆಗಳಲ್ಲಿ, ಪಾರ್ಕ್ ಗಳಲ್ಲಿ ಅಂಡಲೆದಾಡಿ ಕೊನೆಗೆ ನಿದ್ದೆಯಲ್ಲೇ ತಮ್ಮ ಆಯಸ್ಸು ಮುಗಿಸುವವರಿಗೇನೂ ಕಮ್ಮಿ ಇಲ್ಲ..
ಹೌದು, ಭವಿಷ್ಯವನ್ನ ಬದಲಾಯಿಸಲು ಸಾಧ್ಯವಿಲ್ಲ. ಆದ್ರೆ ಹವ್ಯಾಸವನ್ನ ಬದಲಾಯಿಸಬಹುದು.. ಹವ್ಯಾಸ ಬದಲಾದ್ರೆ ಭವಿಷ್ಯ ಕೂಡ ಬದಲಾಗುತ್ತೆ. ಇದಕ್ಕೆ ಅನ್ನೋದು ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಅಂತ. ಆದ್ರೆ ಇಂದಿನ ಯುವ ಜನಾಂಗ ಇದ್ರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೇಗೋ ಜೀವನ ಸಾಗಿಸಿದ್ರೆ ಸಾಕು.. ಬೇರೆಯವರ ಸಮಸ್ಯೆಗಳನ್ನ ಕಟ್ಟಿಕೊಂಡು ನಮಗೆ ಏನಾಗಬೇಕು ಅನ್ನೋ ಸ್ವಾರ್ಥ ಬುದ್ದಿಯೇ ಜಾಸ್ತಿಯಾಗುತ್ತಿದೆ.
ಒಂದಂತೂ ನಿಜ, ಇಂದಿನ ಯುವ ಸಮುದಾಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡ್ತಾ ಇದೆ. ಯಾರು ಯಾರಿಗೂ ಬುದ್ಧಿ ಹೇಳುವ ಹಾಗಿಲ್ಲ. ಎಲ್ರೂ ತಪ್ಪಿತಸ್ಥರೇ. ಇದ್ರಿಂದ ಸಮಾಜ ಉದ್ದಾರವಾಗುತ್ತೆ ಅನ್ನೋದು ಮುರ್ಖತನವೇ ಸರಿ. ಸ್ವಾಮಿ ವಿವೇಕಾನಂದ – ಗಾಂಧೀಜಿಯವರ ತತ್ವ ಸಿದ್ಧಾಂತಗಳು ನಮ್ಮ ಯುವ ಜನತೆಗೆ ಬೇಕಾಗಿಲ್ಲ. ಬದಲಾಗಿ ಸಿನಿಮಾ ತಾರೆಯರು, ಕ್ರಿಕೆಟಿಗರು ಯುವ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ಹಾಗಂತ ಇದು ತಪ್ಪು ಅಂತಲೂ ಹೇಳುವ ಹಾಗಿಲ್ಲ. ಆದ್ರೆ ಅತೀಯಾದ ಅಭಿಮಾನ ಕೊನೆಗೆ ಮುಳುವಾಗುತ್ತೆ. ಸ್ವಾರ್ಥ ಸಮಾಜದಲ್ಲಿ ನಮ್ಮನ್ನು ನಾವೇ ಮರೆತುಬಿಡುತ್ತೇವೆ.
ಅಂದ ಹಾಗೇ, ಸಮಾಜ ನಂಬಿಕೆ ಮೇಲೆ ನಿಂತಿದೆ ಆದ್ರೆ ಅಲ್ಲಿ ನಂಬಿಕೆಯೇ ಇಲ್ಲ ಅಂದ ಮೇಲೆ ಯಾವುದನ್ನ ನಿರೀಕ್ಷೆ ಮಾಡುವಂತಿಲ್ಲ. ವೈರಾಗ್ಯ, ಮತ್ಸರ, ಕಲಹದಿಂದಾಗಿ ಸಮಾಜದಲ್ಲಿ ವಿದ್ವಂಸಕ ಘಟನೆಗಳು ನಡೀತಾ ಇರ್ತಾವೆ. ಇನ್ನೊಂದೆಡೆ ರಾಜಕೀಯ ಮತ್ತು ರಾಜಕಾರಣಿಗಳ ಸ್ವಾರ್ಥದಿಂದಲೂ ಯುವ ಜನಾಂಗ ಅಲ್ಲೋಲಕಲ್ಲೋಲವಾಗುತ್ತಿದೆ.
ಇನ್ನು, ಸ್ವತಂತ್ರವಾಗಿ ಬದುಕುವ ಹಕ್ಕು ನಮ್ಮಗಿದ್ರೂ ನೆಮ್ಮದಿ ಇಲ್ಲ.. ಭದ್ರತೆನೂ ಇಲ್ಲ. ನೆರಳು ಕೂಡ ಇಲ್ಲ. ಒಗ್ಗಟ್ಟಂತೂ ಇಲ್ಲವೇ ಇಲ್ಲ. ಕೆಲಸ ಮುಗಿದ ಮೇಲೆ ಅವನ್ಯಾರೋ, ನಾನ್ಯಾರೋ ಅನ್ನೋ ಪರಿಸ್ಥಿತಿ ಇದೆ. ಪರಸ್ಪರ ಅಪನಂಬಿಕೆಯಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಇದ್ರಿಂದ ನಾವು ಹೊರಬ ರಬೇಕು... ಸಮಾಜಕ್ಕೆ ಬೇಲಿಯ ಹಾಗೇ ಭದ್ರತೆ ನೀಡಬೇಕು.. ಮರಗಳ ಹಾಗೇ ನೆರಳು ನೀಡಬೇಕು..ಸಾಲಕ್ಕಿಗಳಂತೆ ಒಗ್ಗಟ್ಟಿನಿಂದಿರಬೇಕು..ಆಗ ಸಮೃದ್ಧ ಸಮಾಜವನ್ನ ಕಟ್ಟಬಹುದು. ಆದ್ರೆ ಇದಕ್ಕೆಲ್ಲಾ ನಾವು ಮನಸ್ಸು ಮಾಡಬೇಕು ಅಷ್ಟೇ..
ನಿಜ, ಕಾಲೇಜು ಶಿಕ್ಷಣದ ಜೊತೆ ಜೀವನ ಶಿಕ್ಷಣ ನೀಡಬೇಕು..ಕಾಲೇಜಿನಲ್ಲಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮಾದರಿಗಳಾಗಬೇಕು..ಸಿರಿವಂತ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಕೂಡ ಬಡ ರೈತನ ಮಕ್ಕಳ ಜೊತೆ ಮುಕ್ತವಾಗಿ ಬೆರೆಯುವಂತಾಗಬೇಕು.ಸಮಾಜದ ಮೇಲು ಕೀಳು ಹೊಡೆದಟ್ಟಿ ಸಾಮರಸ್ಯದ ಬೀಜ ನೆಡಬೇಕು. ಆಗ ಮಾತ್ರ ಯುವಕ ಯುವತಿಯರ ಕಣ್ಣಲ್ಲಿ ಸ್ಪಷ್ಟ ಗುರಿ ಮೂಡುತ್ತೆ.
ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಮೈಗೂಡಿಸಿಕೊಂಡಾಗ ವಿವೇಕಾನಂದರು ಯುವಕರ ಮೇಲಿಟ್ಟ ವಿಶ್ವಾಸಕ್ಕೆ ಅರ್ಥ ಬರುತ್ತೆ. ಗಾಂಧೀಜಿಯ ರಾಮ ರಾಜ್ಯದ ಕನಸು ನನಸಾಗುತ್ತೆ. ಆದ್ರೂ ಇವೆಲ್ಲಾ ಆಗುತ್ತಾ.. ಆಗುತ್ತೆ. ಬದಲಾಗುವುದಾದ್ರೆ ಈ ಲೋಕ, ನೀ ಬದಲಾದ್ರೆ, ಸರಿಯಾಗೋದು ಈ ಸಮಾಜ, ನೀ ಮೊದಲಾದ್ರೆ...ಬನ್ನಿ ಬದಲಾಗೋಣ..
ಕೆಟ್ಟದ್ದನ್ನು ಕೇಳಬೇಡ.. ಕೆಟ್ಟದ್ದನ್ನ ನೋಡಬೇಡ... ಕೆಟ್ಟದ್ದನ್ನ ನುಡಿಯಬೇಡ....

ಬದಲಾಗಲಿ.... ಈ ಸಮಾಜ... ನೀ ಮೊದಲು ಬದಲಾಗು...
ಬದುಕಿನ ಬಗ್ಗೆ ನಿಖರವಾದ ಗುರಿಯನ್ನ ಹೊಂದಿರಬೇಕು. ಜೀವನದಲ್ಲಿ ನಾನು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇನೆ ಅನ್ನೋ ಪರಿಜ್ಞಾನವನ್ನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತೆ. ದೇಶ ಪ್ರೇಮವೂ ಬೆಳೆಯುತ್ತೆ..
ಆದ್ರೆ, ಎತ್ತ ಸಾಗುತ್ತಿದೆ ನಮ್ಮ ಯುವ ಸಮುದಾಯ. ಈ ಪ್ರಶ್ನೆಗೆ ನಿರ್ಧಿಷ್ಟವಾದ ಉತ್ತರ ಮಾತ್ರ ಸಿಗಲ್ಲ. ಯಾಕಂದ್ರೆ ಇವತ್ತಿನ ಯುವ ಜನತೆಗೆ ಬದುಕು ಅನ್ನೋದು ದಿಕ್ಸೂಚಿ ಇಲ್ಲದ ಹಡಗಿನಂತಾಗಿದೆ. ಜಸ್ಟ್ ಲೈಫ್ ಅನ್ನು ಎಂಜಾಯ್ ಮಾಡಬೇಕು ಅಷ್ಟೇ.ಮೋಜು, ಮಸ್ತಿ ಅಂತ ಬಿಂದಾಸ್ ಲೈಫ್‌ಗೆ ಒಗ್ಗಿಕೊಂಡಿರುವ ಯುವ ಸಮುದಾಯ ಹಾದಿ ತಪ್ಪುತ್ತಿದೆ.
ಹೌದು, ಸಿರಿತನದ ಆಮಲಿನಲ್ಲಿ ಎಲ್ಲವನ್ನ ಮರೆಯುತ್ತಾರೆ. ದುಡ್ಡಿಗಾಗಿ ಕೊಲೆ ಮಾಡುವುದಕ್ಕೂ ಹೇಸುವುದಿಲ್ಲ. ಅಣ್ಣ –ತಮ್ಮ, ಅಕ್ಕ- ತಂಗಿ, ಅಪ್ಪ-ಅಮ್ಮ, ಸ್ನೇಹ ಅನ್ನೋ ಸಂಬಂಧಗಳು ಕಿಮ್ಮತ್ತು ಕಳೆದುಕೊಳ್ತಾ ಇವೆ. ಹೆಸರು, ಪ್ರತಿಷ್ಠೆ, ದುಡ್ಡಿಗೋಸ್ಕರ ರಕ್ತ ಹರಿಸುತ್ತಾರೆ . ಪರಿಣಾಮ ಪ್ರತಿ ದಿನ ನೂರಾರು ಯುವಕ, ಯುವತಿಯರು ಅಪರಾಧಿಗಳಾಗುತ್ತಿದ್ದಾರೆ. ಬದುಕಿನಲ್ಲಿ ಕಟ್ಟಿಕೊಂಡ ಸುಂದರ ಕನಸುಗಳಿಗೆ ತಾವಾಗಿಯೇ ಕೊಳ್ಳಿ ಇಟ್ಟುಕೊಳ್ಳುತ್ತಾರೆ.
ಅಷ್ಟೇ ಅಲ್ಲ, ಗೊತ್ತು ಗೊತ್ತಿದ್ರೂ ನಮ್ಮ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದು ಎಷ್ಟರ ಮಟ್ಟಿಗೆ ಅಂದ್ರೆ ಶಾಲಾ - ಕಾಲೇಜ್ ಮಟ್ಟದಲ್ಲೇ ಡ್ರಗ್ ಮಾಫಿಯಾದ ಸುಳಿಯಲ್ಲಿ ಸಿಲುಕಿಕೊಳ್ತಾರೆ. ಸಿಗರೇಟ್, ಗುಟ್ಕಾ, ಆಫೀಮ್, ಗಾಂಜಾ, ಬ್ರೌನ್ ಶುಗರ್ ಮೊದಲಾದ ಚಟಕ್ಕೆ ಬಿದ್ದು ನರಳಾಡ್ತಾರೆ. ಹಾಗೇ ಡ್ರಿಂಗ್ಸ್, ರೇವಾ ಪಾರ್ಟಿ, ರೈನ್ ಡಾನ್ಸ್ ಅಂತ ಕುಣಿದು ಕುಪ್ಪಳಿಸುತ್ತಾರೆ. ಅಂಬಿಗನಿಲ್ಲದ ದೋಣಿಯಂತೆ ಜೀವನ ಸಾಗಿಸುತ್ತಿರುವ ಯುವ ಜನತೆಗೆ ಸಮಾಜ ಹೇಗಿದ್ರೆ ಏನಂತೆ... ತಾವು ಮಾತ್ರ ಹಾಯಾಗಿರಬೇಕು ಅನ್ನೋ ಮನೋಭಾವನೆ ಬೆಳೆದುಬಿಟ್ಟಿದೆ.
ಹೀಗೆ ಅಡ್ಡ ದಾರಿ ಹಿಡಿಯುವ ಯುವ ಜನಾಂಗಕ್ಕೆ ಒಂದಲ್ಲ ಒಂದು ದಿನ ಜ್ಞಾನದೋಯವಾಗುತ್ತೆ. ಆದ್ರೆ ಆಗ ಕಾಲ ಮಿಂಚಿ ಹೋಗಿರುತ್ತೆ. ಮಾಡಿರೋದು ತಪ್ಪು... ಸಮಾಜದಲ್ಲಿ ಬದುಕೋದು ಹೇಗೆ ಅಂತ ಯೋಚನೆ ಮಾಡ್ತಾರೆ. ಜತೆಗೆ ಸಮಾಜ ಕೆಟ್ಟ ದೃಷ್ಟಿಯಿಂದ ನೋಡ್ತಾ ಇದ್ದಾಗ ಸಹಜವಾಗಿ ಖಿನ್ನತೆಗೆ ಒಳಪಡುತ್ತಾರೆ. ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟ, ಪ್ರೀತಿ- ವಿಶ್ವಾಸದ ಕೊರತೆಯಿಂದ ಹತಾಶೆಗೆ ಒಳಪಡುತ್ತಾರೆ. ತಮಗೆ ಬದುಕೇ ಬೇಡ ಅಂತ ತೀರ್ಮಾನ ಕೂಡ ಮಾಡ್ತಾರೆ. ಆಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರ್ತಾರೆ.
ಅಂದ ಹಾಗೇ, ಎಲ್ಲಾ ಸಮಸ್ಯೆಗಳಿಗೆ ಸಾವೇ ಪರಿಹಾರವಲ್ಲ. ಎಷ್ಟೇ ತಪ್ಪು ಮಾಡಿದ್ರೂ, ಹಾದಿ ತಪ್ಪಿದ್ರೂ ಸಮಾಜದಲ್ಲಿ ಬದುಕಲು ಅವಕಾಶವಿದೆ. ಆದ್ರೆ ಇದಕ್ಕೆಲ್ಲಾ ತಾಳ್ಮೆ ಬೇಕು. ಧೈರ್ಯಬೇಕು.. ಆತ್ಮವಿಶ್ವಾಸಬೇಕು. ಸಮಾಜದಲ್ಲಿ ಬೇರೆಯವರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಅನ್ನೋ ಛಲವನ್ನ ಬೆಳೆಸಿಕೊಳ್ಳಬೇಕು. ಆದ್ರೆ, ಅದು ಕೆಲವು ದಿನಗಳಿಗೆ ಸೀಮಿತವಾಗಿರಬಹುದು. ಬದಲಾಗಿ ದಿನಚರಿಯಾಗಿ ಮುಂದುವರಿಸಿಕೊಂಡು ಹೋಗಬೇಕು. ಆಗ ಮಾತ್ರ ಯಶ ಸಾಧಿಸಬಹುದು..
ಹೌದು, ಈ ಯುವತಿಯದ್ದು ಸಿನಿಮಾ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ನೈಜ ಘಟನೆ... ಅನಾಥೆಯಾಗಿ ಜನಿಸಿದ ಈ ಹುಡುಗಿಗೆ ದತ್ತು ಪುತ್ರಿಯಾಗಿ ಅಪ್ಪ-ಅಮ್ಮನ ಪ್ರೀತಿ ಸಿಕ್ಕಿತ್ತು. ಆದ್ರೆ ಅತೀಯಾದ ಪ್ರೀತಿಯೇ ಅವಳ ಬದುಕಿನ ದಿಕ್ಕನ್ನು ತಪ್ಪಿಸಿತ್ತು. ಸ್ಮೊಕಿಂಗ್ , ಡ್ರಿಂಕ್ಸ್ ಚಟವನ್ನ ಬೆಳೆಸಿಕೊಂಡ ಈ ಹುಡುಗಿ ತನ್ನ ಅಪ್ಪನಿಂದಲೇ ಆತ್ಯಾಚಾರಕ್ಕೆ ಬಲಿಯಾದಳು. ಅಲ್ಲಿಂದ ಮುಂದಕ್ಕೆ ಅವಳ ಬದುಕು ನರಕವಾಯ್ತು.
ಅಪ್ಪನ ಕಿರುಕುಳ, ದುಶ್ಚಟಗಳಿಗೆ ಬಲಿಯಾದ ಈ ಹುಡುಗಿ ಮನೆ ಹೊಸ್ತಿಲನ್ನ ದಾಟಿ ಬಂದಳು. ಹೀಗೆ ಬೀದಿಗೆ ಬಂದ ಹುಡುಗಿ ಪ್ರೀತಿಯ ಬಲೆಯೊಳಗೆ ಸಿಲುಕಿದಳು. ಪ್ರೀತಿಸಿದ ಹುಡುಗ ತನಗೆ ಬಾಳು ಕೊಡ್ತಾನೆ ಅಂತ ನಂಬಿಬಿಟ್ಟಳು. ಆದ್ರೆ ಅಲ್ಲೂ ಕೂಡ ಆಕೆ ನಿರಾಸೆಯನ್ನೇ ಅನುಭವಿಸಬೇಕಾಯ್ತು. ಹುಡುಗನ ಮನೆಯವರಿಗೆ ಬೇಡವಾದ ಈಕೆ ತುಂಬು ಗರ್ಬಿಣಿಯಾಗಿ ಬೀದಿಗೆ ಬಂದಳು.. ಆದ್ರೂ ಆತ್ಮವಿಶ್ವಾಸವನ್ನ ಕಳೆದುಕೊಳ್ಳಲಿಲ್ಲ. ತನ್ನ ಮಗುವಿಗಾಗಿ ಬದುಕು ಸಾಗಿಸಬೇಕು ಅಂತ ಅಂದುಕೊಂಡಿದ್ರೂ ದುಶ್ಚಟಗಳನ್ನ ಮಾತ್ರ ಬಿಡಲಿಲ್ಲ. ಕೊನೆಗೆ ಈಕೆ ಮಗುವಿನಿಂದಲೂ ದೂರವಾದಳು.ಕ್ರಮೇಣ ಮಗುವಿನ ಮೇಲಿರುವ ಅಮ್ಮನ ಪ್ರೀತಿಯೇ ಈಕೆಯ ಬದುಕಿನ ಗತಿಯನ್ನ ಬದಲಾಯಿಸಿಬಿಟ್ಟಿತ್ತು.
ಇನ್ನೊಬ್ಬ ಹುಡುಗನ ಸ್ಟೋರಿನೇ ಡಿಫರೆಂಟ್.... ಮೀಸೆ ಚಿಗುರುವ ಮುನ್ನವೇ ಡ್ರಗ್ಸ್ ಗೆ ಎಡಿಕ್ಟ್ ಆಗಿಬಿಟ್ಟಿದ್ದ. ಹೈಸ್ಕೂಲ್‌ನಲ್ಲಿರುವಾಗಲೇ ವೈಟ್ನರ್ ವ್ಯಸನಿಯಾದ ಈ ಹುಡುಗ ದಾರಿ ತಪ್ಪಿದ. ಒಂದೆಡೆ, ಅಜ್ಜಿ ಮತ್ತು ಅಮ್ಮನ ಅತೀಯಾದ ಪ್ರೀತಿಯ ಜತೆಗೆ ಪೊರ್ಕಿ ಗೆಳೆಯರ ಒಡನಾಟದಿಂದ ದುಶ್ಚಟಗಳ ದಾಸನಾದ. ಪರಿಣಾಮ ಮನೆ ಬಿಟ್ಟ ಈ ಹುಡುಗ ಬೀದಿಯಲ್ಲಿ ಅಲೆದಾಟ ನಡೆಸಿದ. ತಾನು ಅಂಟಿಸಿಕೊಂಡ ಚಟದ ದುಡ್ಡಿಗಾಗಿ ಕಳ್ಳತನ ಮಾಡೋಕ್ಕೆ ನಿಂತ ಈತ ಅದಕ್ಕಾಗಿ ಜನರಿಂದ ಧರ್ಮದೇಟನ್ನೂ ತಿಂದ ಉದಾಹ್ರಣೆಗಳು ಈತನ ಬೆನ್ನಿಗಿವೆ. ..
ಇದೀಗ ಇತನಿಗೆ ತನ್ನ ತಪ್ಪಿನ ಅರಿವಾಗಿದೆ. ಈಗಾಗಲೇ ಬೆಂಗಳೂರಿನ ನ್ಯೂ ಡಾನ್ ರಿಹಾಬಿಲಿಟೇಷನ್‌ನ ಸೆಂಟರ್‌ನಲ್ಲಿರುವ ಈ ಹುಡುಗನ ಮನ ಪರಿವರ್ತನೆಯಾಗಿದೆ. ಅಷ್ಟೇ ಅಲ್ಲ, ಕೆಲಸ ಮಾಡಿ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಆಸೆಯೂ ಚಿಗುರಿದೆ. ಜತೆಗೆ ಹೆತ್ತಮ್ಮನನ್ನ ಚೆನ್ನಾಗಿ ನೋಡ್ಕೊಬೇಕು ಅನ್ನೋ ಅರಿವು ಕೂಡ ಬಂದಿದೆ..
ಒಟ್ಟಿನಲ್ಲಿ ತಪ್ಪು ಮಾಡೋದು ಸಹಜ. ಆದ್ರೆ ಅದು ತಪ್ಪು ಅಂತ ತಿಳಿದಾಗ ತಿದ್ದಿ ಮುನ್ನೆಡೆಯೊದೆ ಜಾಣತನ. ಆ ಕೆಲಸವನ್ನ ಈತ ಮಾಡಿದ್ದಾನೆ. ಹೀಗೆ ಬೇರೆಯವರ ಹಿತವಚನಗಳನ್ನ ಕೇಳುವುದರ ಜತೆಗೆ ನಮ್ಮತನವನ್ನ ಮೈಗೂಡಿಸಿಕೊಂಡು ಮುನ್ನಡೆದ್ರೆ ಉತ್ತಮ ಸಮಾಜವನ್ನ ಕಟ್ಟಬಹುದು.
ಏನೇ ಆದ್ರೂ, ಜೀವನ ಅಂದ್ರೆ ಸಮಸ್ಯೆಗಳು ಇರೋದು ಸಹಜ. ಅಲ್ಲಿ ಸಂಭ್ರಮ, ನೋವು, ನಿರಾಸೆ, ಹತಾಶೆ ಎಲ್ಲವೂ ಇರುತ್ತೆ. ಎಲ್ಲದಕ್ಕೂ ಸಾವೇ ಅಂತ್ಯವಲ್ಲ. ಎಲ್ಲದಕ್ಕೂ ಪರಿಹಾರ ಇದೆ. ಅದನ್ನ ಹುಡುಕಿಕೊಂಡು ಮುನ್ನಡೆಯಬೇಕು. ಮೊದಲು ನೀ ಬದಲಾಗು... ಬನ್ನಿ ಬದಲಾಗೋಣ...

Subscribe to:
Posts (Atom)