ಇದು ಅರ್ಥಪೂರ್ಣ ವಿದಾಯ… ಬಹುಶಃ ಇಂತಹ ಭಾಗ್ಯ ಎಲ್ಲಾ ಕ್ರಿಕೆಟಿಗರಿಗೆ ಸಿಗಲ್ಲ. 18 ವರ್ಷಗಳ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ಒಂಚೂರು ದಕ್ಕೆಯಾಗಂತೆ ಮುರಳಿ ಗುಡ್ ಬೈ ಹೇಳಿದ್ರು. ಹೌದು, ಗಾಲೆ ಟೆಸ್ಟ್‌ನಲ್ಲಿ ಮುರಳಿ ಅಂದುಕೊಂಡಿದ್ದನ್ನ ಸಾಧಿಸಿದ್ರು. ಕಟ್ಟ ಕಡೆಯ ಪಂದ್ಯದಲ್ಲಿ ಕಟ್ಟ ಕಡೆಯ ವಿಕೆಟ್ ಪಡೆದು ತನ್ನ ಮ್ಯಾಜಿಕ್ ಕೈಗಳಿಗೆ ವಿಶ್ರಾಂತಿ ನೀಡಿದ್ರು.
133ನೇ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಎಂಟು ವಿಕೆಟ್‌ಗಳನ್ನ ಕಬಳಿಸಿದ ಮುರಳಿ ತನ್ನ ವಿಕೆಟ್ ಬೇಟೆಯನ್ನು ಭರ್ತಿ 800 ಕ್ಕೇರಿಸಿಕೊಂಡ್ರು. ಮತ್ತೊಂದೆಡೆ, ಈ ಮಹನ್ನೊನ್ನತ ಕ್ರಿಕೆಟಿಗನ ಕೊನೆಯ ಪಂದ್ಯವನ್ನ ಸಂಗಕ್ಕರ ಹುಡುಗರು ಅವಿಸ್ಮರಣೀಯವಾಗಿಸಿದ್ರು. ನಂ.1 ತಂಡದ ವಿರುದ್ಧ ಗೆಲುವು ಸಾಧಿಸಿ ತನ್ನ ಹಿರಿಯಣ್ಣನಿಗೆ ಸಂಗಕ್ಕರ ಹುಡುಗರು ಅರ್ಥಪೂರ್ಣ ವಿದಾಯವನ್ನೇ ಹೇಳಿದ್ರು.
ಅಂದ ಹಾಗೇ ಈ ಸ್ಮೈಲಿಂಗ್ ಕಿಲ್ಲರ್‌ನ ಪ್ರತಿಯೊಂದು ಎಸೆತವೂ ಭಿನ್ನ ವಿಭಿನ್ನ. ಬ್ಯಾಟ್ಸ್ ಮನ್ ಸ್ವಲ್ಪ ಯಾಮಾರಿದ್ರೂ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಮುರಳಿಯ ಮ್ಯಾಜಿಕ್ ಕೈಯಿಂದ ಗಾಳಿಯಲ್ಲಿ ಬುಗುರಿಯಂತೆ ತೇಲಿ ಬರುವ ಚೆಂಡನ್ನ ಬ್ಯಾಟ್ಸ್ ಮನ್ ಅರ್ಥಮಾಡಿಕೊಳ್ಳದಿದ್ರೆ ವಿಕೆಟ್ ಕಳೆದುಕೊಳ್ಳುವುದು ಗ್ಯಾರೆಂಟಿ.
ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಮುರಳಿಯ ದಾಖಲೆ ಮುಂದೊಂದು ದಿನ ಅಳಿಸಿ ಹೋಗುತ್ತೆ ಅನ್ನೋದು ಕನಸಿನ ಮಾತೇ ಸರಿ. ಯಾಕಂದ್ರೆ ಮುರಳಿ ಯಾರು ಏರದಷ್ಟು ದೊಡ್ಡ ಬೆಟ್ಟವನ್ನ ಹತ್ತಿದ್ದಾರೆ. ಆದ್ರೆ, ಮುರಳಿ ಇಷ್ಟೆಲ್ಲಾ ಸಾಧನೆ ಮಾಡ್ತಿನಿ ಅಂತ ಕನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.
ಇನ್ನು, ಮುರಳಿ ಭಾವುಕ ಜೀವಿ. ವಿದಾಯದ ನೋವು ಅವ್ರಲ್ಲಿದ್ರೂ ಅದನ್ನ ತೋರಿಸಿಕೊಳ್ತಿಲ್ಲ. ನಗು ನಗುತ್ತಲೇ ಮಾತನಾಡುವುದು ಮುರಳಿಯ ಸ್ವಭಾವ. ಬಹುಶಃ ಇದೇ ನಗು ಅವ್ರ ಯಶಸ್ವಿನ ಗುಟ್ಟು ಕೂಡ ಹೌದು. ಕ್ರಿಕೆಟ್ ಬದುಕಿನಲ್ಲಿ ಅದೆಷ್ಟೋ ಯಶಸ್ಸು ಸಾಧಿಸಿದ್ರೂ, ವಿವಾದ, ಅವಮಾನ ಮುರಳಿಯ ಬದುಕನ್ನ ಸಾಕಷ್ಟು ಘಾಸಿಗೊಳಿಸಿದೆ. ಆದ್ರೂ ನಗು ನಗುತ್ತಲೇ ಎಲ್ಲದಕ್ಕೂಉತ್ತರ ಕೊಟ್ರು ಮುರಳೀಧರನ್. ಕೊನೆಗೆ ಟೀಕೆ, ಅವಮಾನ ಮಾಡಿದವ್ರೆ ಮುರಳೀಯ ಸಾಧನೆಗೆ ದಂಗಾಬಿಟ್ರು.
ಇನ್ನು, ಮುರಳಿಯ ಸಾಧನೆಯ ಬಗ್ಗೆ ಸಿಂಹಳಿಯರಿಗೆ ಹೆಮ್ಮೆ ಇದೆ. ಅದಕ್ಕೆ ಕೊನೆಯ ಪಂದ್ಯವೇ ಸಾಕ್ಷಿ. ಗಾಲೆ ಮೈದಾನದಲ್ಲಿ ಎಲ್ಲೂ ನೋಡಿದ್ರೂ ಅಲ್ಲಿ ಬರೀ ಮುರಳಿಯ ಕಟೌಟ್‌ಗಳು ರಾರಾಜಿಸ್ತಾ ಇದ್ದವು.
ಮ್ಯಾಜಿಶಿಯನ್ ಮುರಳಿ, ವನ್ ಆಂಡ್ ಒನ್ಲಿ ಮುರಳಿ, ಗ್ರೇಟೆಸ್ಟ್ ಬೌಲರ್.. ಸ್ಪಿನ್ ಜಾದೂಗಾರ... ಥ್ಯಾಂಕ್ ಯು ಮುರಳಿ, ಗುಡ್ ಬೈ ಮುರಳಿ ಹೀಗೆ ಅಂಗಣದ ಮೂಲೆ ಮೂಲೆಯಲ್ಲೂ ಬರೀ ಮುರಳಿಯದ್ದೇ ಧ್ಯಾನ.
ಇಷ್ಟೆಲ್ಲಾ ಯಶಸ್ಸು, ಜನಪ್ರಿಯತೆ, ಸಾಧನೆ ಮಾಡಿದ್ರೂ ಮುರಳಿಗೆ ಅಹಂವಿಲ್ಲ. ಎಲ್ಲರ ಜತೆ ನಗುನಗುತ್ತಲೇ ಬೆರೆಯುತ್ತಾರೆ. ಡ್ರೇಸಿಂಗ್ ರೂಮ್‌ನಲ್ಲಂತೂ ಕಾಮಿಡಿ ಮಾಡ್ಕೊಂಡು ಎಂಜಾಯ್ ಮಾಡ್ತಾರೆ. ಇಂತಹ ಮುರಳಿ ಈಗ ಲಂಕಾ ಡ್ರೆಸಿಂಗ್ ರೂಮ್‌ನಿಂದ ಹೊರಬಂದಿದ್ದಾರೆ.
ಇನ್ನು, ಮುರಳಿ ದೇವ್ರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಮುರಳಿಗೆ ದೇವ್ರು ಎಲ್ಲವನ್ನೂ ಕೊಟ್ಟಿದ್ದಾನಂತೆ. ಆದ್ದರಿಂದ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿರುವುದು ಸ್ವಲ್ಪನೂ ಬೇಜಾರಿಲ್ಲ. ಯಾಕಂದ್ರೆ ಅವ್ರು ಏನು ಸಾಧಿಸಬೇಕು ಅದನ್ನು ಸಾಧಿಸಿದ್ದಾರೆ..
ಮತ್ತೊಂದೆಡೆ, ಅಭಿಮಾನಿಗಳು ಮುರಳಿ ವಿದಾಯಹೇಳಬೇಕು ಅಂತ ಹೇಳ್ತಾ ಇಲ್ಲ. ಮುರಳಿ ಇನ್ನೂ ಆಡಬೇಕು ಅಂತಿದ್ದಾರೆ. ಆದ್ರೂ ಮುರಳಿ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಥ್ಯಾಂಕ್ ಯೂ ಮುರಳಿ... ಯು ಆರ್ ಜೀನಿಯಸ್....
ಸನತ್ ರೈ
Thursday, August 19, 2010
Subscribe to:
Post Comments (Atom)
No comments:
Post a Comment