ಕ್ರಿಕೆಟ್ ಪಿಚ್ ಒಂದೇ... ಗರ್ಲ್ ಫ್ರೆಂಡ್ ಒಂದೇ... ಯಾಕಂದ್ರೆ ಪ್ರೇಯಸಿಯ ವರ್ತನೆ ಮತ್ತು ಕ್ರಿಕೆಟ್ ಪಿಚ್ ನ ಮರ್ಮವನ್ನ ತಿಳಿದುಕೊಳ್ಳುವುದು ತುಂಬಾನೇ ಕಷ್ಟ. ಯಾವಾಗ ಹೆಂಗೆ ತಿರುಗಿ ಬೀಳುತ್ತೆ ಅನ್ನೋದು ಅನುಭವಿಸಿದವರಿಗೆ ಮಾತ್ರ ಗೊತ್ತು. (change over ಆಗಿದೆ)
ಇದೀಗ ಇಂತಹುದೇ ಅನುಭವ ಟೀಮ್ ಇಂಡಿಯಾ ಆಟಗಾರರಿಗೆ ಆಗಿದೆ. ನ್ಯೂಜಿಲೆಂಡ್ ವಿರುದ್ಧ ಅಹಮದಾಬಾದ್ ಮತ್ತು ಹೈದ್ರಬಾದ್ ಟೆಸ್ಟ್ ಪಂದ್ಯಗಳಲ್ಲಿ ಧೋನಿ ಹುಡುಗರಿಗೆ ತವರಿನ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ವೆಟ್ಟೋರಿ ಪಡೆಯನ್ನ ಕಟ್ಟಿಹಾಕಲು ಟೀಮ್ ಇಂಡಿಯಾ ಬೌಲರ್‌ಗಳು ಹರಸಾಹಸ ಮಾಡಿದ್ರೂ ಪ್ರಯೋಜನವೇನೂ ಆಗಲಿಲ್ಲ.
ಅದ್ರಲ್ಲೂ ಟೀಮ್ ಇಂಡಿಯಾಗೆ ತವರಿನಲ್ಲಿ ಸ್ಪಿನ್ನರ್ ಗಳೇ ಟ್ರಂಪ್ ಕಾರ್ಡ್. ಆದ್ರೆ ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜ್ಹಾ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕಬಳಿಸಲು ವಿಫಲರಾದ್ರು. ಪ್ರಮುಖ ಆಫ್ ಸ್ಪಿನ್ನರ್ ಹರ್ಭಜನ್ 305 ರನ್ ನೀಡಿ ಆರು ವಿಕೆಟ್‌ಪಡೆದ್ರೆ, ಪ್ರಗ್ಯಾನ್ ಓಜ್ಹಾ 324 ರನ್ ನೀಡಿ ಕಬಳಿಸಿದ್ದು ಕೇವಲ ಏಳು ವಿಕೆಟ್ ಮಾತ್ರ.
ಆದ್ರೆ ಈ ಹಿಂದೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧ ಕಾನ್ಪುರ, ನಾಗ್ಪುರ ಮತ್ತು ಮುಂಬೈ ಟೆಸ್ಟ್ ಪಂದ್ಯಗಳ ಗೆಲುವಿನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಿದ್ರು. ಮುಖ್ಯವಾಗಿ ಹರ್ಭಜನ್ ಸಿಂಗ್ ಎದುರಾಳಿ ತಂಡಗಳಿಗೆ ಕಂಟಕವಾಗಿ ಪರಿಣಮಿಸಿದ್ರು. (change over ಆಗಿದೆ)
ಹಾಗಾದ್ರೆ, ನ್ಯೂಜಿಲೆಂಡ್ ವಿರುದ್ಧ ಆಗಿದ್ದಾದ್ರೂ ಏನು ? . ಕೆಲವು ದಿನಗಳ ಹಿಂದೆಯಷ್ಟೇ ಬಲಿಷ್ಠ ಆಸ್ಟ್ರೇಲಿಯನ್ನರಿಗೆ ಮುಖಭಂಗ ಮಾಡಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಯಾಕೆ ಸಾಧ್ಯವಾಗಲಿಲ್ಲ. ಆಗೀನ ಪಿಚ್‌ಗೂ ಈಗೀನ ಪಿಚ್‌ಗೂ ವ್ಯತ್ಯಾಸವಿದೆಯೇ.. ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತವೆ.
ಇನ್ನೊಂದೆಡೆ, ಟೀಮ್ ಇಂಡಿಯಾ ನಾಯಕ ಎಮ್.ಎಸ್. ಧೋನಿ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತವರಿನ ತಂಡಕ್ಕೆ ನೆರವಾಗುವ ಪಿಚ್ ಅನ್ನು ತಯಾರಿಸಿಲ್ಲ ಅಂತ ಖಡಕ್ ಆಗಿ ಹೇಳಿದ್ದಾರೆ. ಇಂತಹ ಪಿಚ್‌ಗಳಲ್ಲಿ ಫಲಿತಾಂಶವನ್ನ ಐದು ದಿನಗಳಲ್ಲಿ ನಿರೀಕ್ಷೆ ಮಾಡುವಂತಿಲ್ಲ. ಕನಿಷ್ಠ ಹತ್ತು ದಿನಗಳಾದ್ರೂ ಬೇಕು ಅನ್ನೋದು ಧೋನಿಯ ನೇರ ಆರೋಪವಾಗಿತ್ತು. ಇದು ನಿಜ ಕೂಡ.ಸತ್ವವೇ ಇಲ್ಲದಪಿಚ್‌ನಲ್ಲಿ ಬೌಲರ್‌ಗಳು ಬಳಲಿ ಬೆಂಡಾದ್ರೆ, ಬ್ಯಾಟ್ಸ್ ಮನ್‌ಗಳು ಮಾತ್ರ ರನ್‌ಮಳೆಯನ್ನೇ ಸುರಿಸಿದ್ರು.
ಹಾಗಾದ್ರೆ, ಬಿಸಿಸಿಐ ಏನು ಮಾಡುತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆ ಪಡೆದಿರುವ ಬಿಸಿಸಿಐ ಗುಣಮಟ್ಟದ ಪಿಚ್‌ಗಳನ್ನ ಯಾಕೆ ನಿರ್ಮಾಣ ಮಾಡುತ್ತಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ಬಹುತೇಕ ಕ್ರಿಕೆಟ್ ಮಂಡಳಿಗಳು ತಮಗೆ ಬೇಕಾದ ಹಾಗೇ ಪಿಚ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿವೆ.ಆದ್ರೆ ಬಿಸಿಸಿಐ ಮಾತ್ರ ಇದ್ರ ಬಗ್ಗೆ ಅಷ್ಟೊಂದು ಗಮನ ಹರಿಸಿಲ್ಲ.
ಕೇವಲ ದುಡ್ಡು ಮತ್ತು ಪ್ರತಿಷ್ಟೆಗೋಸ್ಕರ ಒದ್ದಾಟ ಮಾಡುತ್ತಿರುವ ಬಿಸಿಸಿಐ ದಣಿಗಳು ಟೀಮ್ ಇಂಡಿಯಾ ಆಟಗಾರರ ಬಗ್ಗೆ ಮಾತ್ರ ತಲೆನೇ ಕೆಡಿಸಿಕೊಂಡಿಲ್ಲ. ಯಾಕಂದ್ರೆ ಬಿಸಿಸಿಐಗೆಆಟಗಾರರ ಹಿತಕ್ಕಿಂತ ದುಡ್ಡೇ ಮುಖ್ಯವಾಗಿದೆ.
ಸನತ್ ರೈ
Wednesday, November 17, 2010
Subscribe to:
Post Comments (Atom)
No comments:
Post a Comment