ಡಾ. ರಾಜ್ ಕುಮಾರ್.. ನಟ ಸಾರ್ವಭೌಮ ..ಸಚಿನ್ ತೆಂಡುಲ್ಕರ್... ವಿಶ್ವ ಕ್ರಿಕೆಟ್‌ನ ಸಾಮ್ರಾಟ.. ಡಾ. ರಾಜ್‌ಗೆ ನಟನೆಯೇ ಆರಾಧ್ಯದೈವ... ಸಚಿನ್‌ಗೆ ಮೈದಾನವೇ ಸಾಧನೆಯ ಸ್ವರ್ಗ... ತನ್ನನ್ನು ಆರಾಧಿಸುವ ಅಭಿಮಾನಿಗಳನ್ನ ಡಾ. ರಾಜ್ ದೇವರೆಂದು ತಿಳಿದ್ರೆ, ಸಚಿನ್‌ಗೆ ಅಭಿಮಾನಿಗಳೇ ಕ್ರಿಕೆಟ್ ದೇವ್ರ ಅಂತ ಕರೆದಿದ್ದಾರೆ..
ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆ ಮಾಡಿ ನಮ್ಮನ್ನಗಲಿರುವ ಡಾ. ರಾಜ್ ಕುಮಾರ್ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅನಭಿಷಕ್ತ ದೊರೆಯಾಗಿ ಮಿಂಚುತ್ತಿರುವ ಸಚಿನ್ ತೆಂಡುಲ್ಕರ್ ಅವ್ರ ಜನುಮ ದಿನ ಏಪ್ರಿಲ್ 24.
ಚಲನ ಚಿತ್ರ ರಂಗದಲ್ಲಿ ಮಹಾನ್ ಸಾಧನೆ ಮಾಡಿದ ರಾಜ್ ಕುಮಾರ್ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಸಚಿನ್ ತೆಂಡುಲ್ಕರ್ ಎಲ್ರಿಗೂ ಆದರ್ಶ ಪ್ರಾಯರಾಗಿದ್ದಾರೆ. ಸಾಧನೆ, ಪರಿಶ್ರಮ, ಬದ್ಧತೆಯಿಂದ ಯಶಸ್ಸು ಸಾಧಿಸಬಹುದು ಅನ್ನೋದನ್ನ ಸಾಧಿಸಿದ ಧೀಮಂತರು.
ಪ್ರತಿಭೆ ಯಾರ ಸ್ವತ್ತಲ್ಲ.. ಕದಿಯೋದಕ್ಕಾಗ್ಲಿ, ನಾಶಮಾಡೋದಾಕ್ಕಾಗ್ಲಿ ಸಾಧ್ಯವಿಲ್ಲ. ಹಾಗಂತ ಸುಮ್ಮನೆ ಕೂತ್ರೆ ಪ್ರತಿಭೆ ಅನಾವರಣಗೊಳ್ಳುವುದಿಲ್ಲ. ಸಿಕ್ಕ ಅವಕಾಶಗಳನ್ನು ಕೈಚಾಚಿ ಬಾಚಿಕೊಳ್ಳಬೇಕು ಅನ್ನೋ ತತ್ವವನ್ನು ಪಾಲಿಸಿದವರು ಇವರು. ಇದನ್ನೇ ಸಾಬೀತು ಪಡಿಸಿದ ಧೀಮಂತರು ಸಚಿನ್ ಮತ್ತು ಡಾ. ರಾಜ್. ಯಶಸ್ಸಿನ ಮೆಟ್ಟಿಲುಗಳು ಎಷ್ಟು ಎಂದು ಕೇಳಿದ್ರೇ ಅದಕ್ಕೆ ಮಿತಿಯೇ ಇಲ್ಲ ಎಂದು ತೋರಿಸಿಕೊಟ್ಟವರಿವರು.
ಗಾಡ್ ಫಾದರ್ ಗಳಿಲ್ಲದೆ ಯಾವುದೇ ಹಿನ್ನಲೆ ಇಲ್ಲದೆ ಸ್ವ ಪ್ರತಿಭೆ, ಪ್ರಯತ್ನದಿಂದ ತಮ್ಮ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ತೆಂಡುಲ್ಕರ್ ಮತ್ತು ರಾಜ್ ಅವ್ರ ವ್ಯಕ್ತಿತ್ವದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಪ್ರಚಾರದಿಂದ ಬಲುದೂರದಲ್ಲಿದ್ರೂ ಜನಪ್ರಿಯತೆಯ ಉತ್ತುಂಗಕ್ಕೇರಿದ್ರು. ಆದ್ರೂ ತಮ್ಮ ಹಳೆಯ ದಿನಗಳನ್ನ ಮರೆಯದೆ, ಮುಂದಿನ ಗುರಿಯನ್ನ ನೆನೆಯದೆ ಅಡಿಯಿಟ್ಟವರಲ್ಲ..
ಡಾ. ರಾಜ್ ಬೆಳ್ಳಿ ಪರದೆಯ ಮೇಲೆ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡಿದ್ರು. ತಮ್ಮ ಸಿನಿಮಾ ಬಿಡುಗಡೆಯಾಗುವ ದಿನ ಮೈಲು ಗಟ್ಟಲೇ ಕ್ಯೂನಿಂತು ಟಿಕೆಟ್ ಖರೀದಿ ಮಾಡುವಂತೆ ಮಾಡುವ ಶಕ್ತಿ ಡಾ. ರಾಜ್ ಅಭಿನಯಕ್ಕಿತ್ತು. ಅಭಿನಯ ಕಲೆಯನ್ನ ಒಲಿಸಿಕೊಂಡು ಧ್ರುವತಾರೆಯಾಗಿ ಮೆರೆದ ರಾಜಣ್ಣ ಅವರನ್ನ ಕಾಣುವುದೇ ಅಭಿಮಾನಿ ಬಳಗಕ್ಕೆ ದೊಡ್ಡ ಸಂಭ್ರಮ.
ಇನ್ನು ಸಚಿನ್ ತೆಂಡುಲ್ಕರ್ ಆಟಕ್ಕೆ ಕೊನೆ ಮೊದಲಿಲ್ಲ.. ಸಚಿನ್ ಗೆ ಸಚಿನ್ನೇ ಸಾಟಿ ಅನ್ನೋ ಹಾಗೆ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ನಕ್ಷತ್ರ. ಬ್ಯಾಟ್ ಅನ್ನೋ ದಂಡ ಹಿಡಿದು ಪ್ರೇಕ್ಷಕರನ್ನ ಮಂತ್ರಮುಗ್ದಗೊಳಿಸಬಲ್ಲ ಮಾಂತ್ರಿಕ ಈ ಲಿಟ್ಲ್ ಮಾಸ್ಟರ್.
ಹೊಸ ಪ್ರತಿಭೆಗಳಿಗೆ ನೀರೆರೆದು ಪೋಷಿಸಿ, ತಪ್ಪಿದವರನ್ನ ತಿದ್ದಿ ನಡೆಸೋದು ಸಚಿನ್ ಹಾಗೂ ಡಾ. ರಾಜ್ ಅವರ ದೊಡ್ಡ ಗುಣ.. ಅಹಂಭಾವನ್ನ ಮೆಟ್ಟಿನಿಂತು ವೃತ್ತಿ ರಂಗವನ್ನು ಮನಸಾರೆ ಪ್ರೀತಿಸಿ ಮಾದರಿ ಎನಿಸಿದವರಿವರು.
ವೃತ್ತಿ ಬದುಕಿನಲ್ಲಿ ಮೇರು ಪರ್ವತಗಳೆನಿಸಿದ ಈ ಇಬ್ಬರು ಯಾವತ್ತೂ ಪ್ರಶಸ್ತಿ ಪುರಸ್ಕಾರಗಳ ಬೆನ್ನತ್ತಿ ಹೋದವರಲ್ಲ. ಬದಲಾಗಿ ಕೀರ್ತಿ, ಹೆಸರು – ಯಶಸ್ಸುಗಳೆಲ್ಲಾ ಇವರಿಬ್ಬರಿಗಾಗಿ ಕಾದು ನಿಲ್ಲುತ್ತಿತ್ತು. ಸಜ್ಜನಿಕೆ, ಸೌಜನ್ಯತೆ ಇವರಿಬ್ಬರಿಗೂ ಭೂಷಣ.. ಸಮಾಜ ಸೇವೆ, ನೊಂದವರ ಕಣ್ಣೋರಿಸುವುದು ಇವರ ಕರ್ತವ್ಯ.. ಹೀಗಾಗಿ ಸಚಿನ್ ಹಾಗೂ ಡಾ.ರಾಜ್ ಕೋಟಿ ಕೋಟಿ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
ಸನತ್ ರೈ,
Thursday, November 17, 2011
Subscribe to:
Post Comments (Atom)
No comments:
Post a Comment