ಡಾರ್ಲಿಂಗ್... ಯಾಕೀ ಈ ಮೌನ... ಏನ್ ಬೇಜಾರ್ ಆಗಿದ್ಯೋ ... ಸೆಂಚೂರಿ ಮೇಲೆ ಸೆಂಚೂರಿ ಹೊಡೆಯೋಕೆ ಆಗ್ತಾ ಇಲ್ಲ ಅಂತನಾ ... ಅದಕ್ಕೆನಂತೆ... ನಿಂಗೇ ಸೆಂಚೂರಿ ಬಾರಿಸೋದು ಅಷ್ಟೊಂದು ತ್ರಾಸ್ ಆಗೈತೆನೋ.. ಮತ್ತೆ ಅದ್ಹೆಂಗೇ 99 ಸೆಂಚೂರಿ ಹೋಡಿದಿ ನೀ...ಈಗ ಒಂದೇ ಒಂದು ಸೆಂಚೂರಿಗೆ ಹತ್ತು ಹನ್ನೊಂದು ತಿಂಗಳು ಕಾಯಿಸಿದ್ದೀ ನೋಡು... ನಂಗೂ ತುಂಬಾನೇ ಬೇಜಾರ್ ಆಗೈತೆ...
ಅಲ್ಲ ಬ್ರದರ್.. ನಿಂಗೆ ಅಷ್ಟೊಂದು ಪ್ರೆಶರ್ ಇದ್ಯೇನಾ . ಜತೆಗೆ ನರ್ವಸ್ ಬೇರೆ ಆಗ್ತಿದ್ದೀಯಾ... ಯಾಕ್ ಯಾಕೆ...ಹೀಗೆ.. ಅದನ್ನೆಲ್ಲಾ ತಡ್ಕೊಳ್ಳೋಕೆ ಆಗ್ತಾ ಇಲ್ವೇನೋ..ತುಂಬಾ ಚೆನ್ನಾಗಿ ಆಡ್ತಾ ಇರ್ತಿ... ಸಡನ್ ಆಗಿ ವಿಕೆಟ್ ಒಪ್ಪಿಸ್ತಾ ಇದ್ದೀಯಲ್ಲಾ.. ಏನಾಗೈತೆ ನಿಂಗೆ....
ಬಿಡು ಮಾಸ್ಟರ್... ನಿಂಗೆ ಇದೆಲ್ಲಾ ಹೊಸ್ದಾ . ಆರು ವರ್ಷಗಳ ಫ್ಲಾಷ್ ಬ್ಯಾಕ್ ಸ್ವಲ್ಪ ನೆನಪಿಸ್ಕೊ... ಹಿಂಗೆ ಒಂದು ಸೆಂಚೂರಿ ಹೊಡೆಯೊಕೆ ಎಷ್ಟೆಲ್ಲಾ ಕಷ್ಟ ಪಟ್ಟೆ... ಲಾಸ್ಟ್ ಗೂ ಹಠ ಬಿಟ್ಟಿಲ್ಲ ನೋಡು...ಆದ್ರೂ ನಿಂಗೆ ಸೆಂಚೂರಿ ಹೊಡೆಯೊಕೆ ಅಗಿಲ್ಲ. ಇನ್ನು ಆಗಲ್ಲ ಅಂತ ಕೊನೆಗೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿ ಗ್ರಹಚಾರಕ್ಕೆಲ್ಲಾ ಪರಿಹಾರ ಮಾಡ್ಕೊಂಡೆಯಲ್ಲ.. ಆಮೇಲೆ ಏನೂ ಗುರು.. ಸೆಂಚೂರಿ ಮೇಲೆ ಸೆಂಚುರಿ ಹೊಡಿದಿ.. ದಾಖಲೆ ಮೇಲೆ ದಾಖಲೆ ಬರೆದಿ... ಹಂಗೆ ಈ ಸಲನೂ ಒಂದು ಸಾರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡೋ..ಪ್ಲೀಸ್... ..
ನಿಂಗೆ ಯಾಕೆ ಇದನ್ನೆಲ್ಲಾ ಹೇಳ್ತಾ ಇದ್ದೀನಿ ಅಂದ್ರ ನಿನ್ನ ಬಗ್ಗೆ ಚಿಲ್ರೆಗಳೆಲ್ಲಾ ಬಾಯಿಗೆ ಬಂದಂತೆ ಮಾತಾಡ್ತಾರೆ. ಅದನ್ನೆಲ್ಲಾ ಕೇಳಿ ನನ್ ಹೃದಯಕ್ಕೆ ಚೂರಿ ಹಾಕಿದಂಗೆ ಆಗೈತೆ ಮಾಸ್ಟರ್... ಅಲ್ಲ.. ನಿನ್ನ ಸಾಮರ್ಥ್ಯದ ಬಗ್ಗೆ ಗೊತ್ತಿದ್ದು ಗೊತ್ತಿದ್ದೂ ಮಾತಡ್ತಾರೆ. ನಿಂಗೆ ವನ್ ಡೇ ಮ್ಯಾಚ್ ಆಡುವ ತಾಕತ್ತು ಈಗ ಇಲ್ಲಂತೆ.. ಇದಕ್ಕೆ ನಗಬೇಕೊ ಆಳಬೇಕೊ ಅಂತ ಗೊತ್ತಾಗ್ತಾ ಇಲ್ಲ...ಅವ್ರಿಗೇನೂ ಗೊತ್ತು.. ನೀನು ವಾಮನ ಮೂರ್ತಿಯಾದ್ರೂ ಬಲ ಭೀಮ ಅಂತ. . ಏನೋ ನಾಲ್ಕೈದು ಮ್ಯಾಚ್‌ಗಳಲ್ಲಿ ಫೆಲ್ಯೂರ್ ಅದೆ ಅಂತ ಹಿಂಗೆ ಎಲ್ಲಾ ಟೀಕೆ ಮಾಡೋದು ಸರೀನಾ ದೇವ್ರೂ...
ಇನ್ನು ಆ ಕ್ಯಾಪ್ಟನ್ ಧೋನಿಗೆ ಏನಾಗೈತೆ... ಅದೇನೋ ರೋಟೇಷನ್ ಪಾಲಿಸಿ ಅಂತೆ.. ಯಂಗ್‌ಸ್ಟಾರ್ಸ್‌ಗೆ ಚಾನ್ಸ್ ಕೋಡೋಕೆ ಅಂತ ನಿನ್ನ ಮೇಲೆನೇ ಸವಾರಿ ಮಾಡ್ತಾನಾ .. ಅವ ಕ್ಯಾಪ್ಟನ್ ಆಗೋಕೆ ನೀನೇ ಕಾರಣ ಅಂತ ಗೊತ್ತಿದ್ರೂ ಅಷ್ಟು ಬೇಗ ಮರೆತು ಬಿಟ್ನಾ... ವಸಿ ಬುದ್ದಿ ಹೇಳೋಕೆ ಆಗೊಲ್ವಾ ನಿಂಗೆ... ನೀನೇನೋ ಮೈನ್ ಟೂರ್ನಿ ಅಂತ ವನ್ ಡೇ ಮ್ಯಾಚ್ ಆಡ್ತಾ ಇದ್ದೀ...ಆದ್ರೆ ಎಲ್ರೂ ಅಂದುಕೊಂಡಿದ್ದಾರೆ ನೀ ಸೆಂಚೂರಿಗೋಸ್ಕರ ಆಡ್ತಾ ಇದ್ದೀ ಅಂತ...ಒಂದು ವೇಳೆ ಆಡಿದ್ರೂ ತಪ್ಪೇನು...
ಮತ್ತೆ ನಮ್ ಮಾಜಿ ಕ್ರಿಕೆಟಿಗರು ನೀ ವಿದಾಯ ಹೇಳಬೇಕು ಅಂತಾರೆ... ಆದ್ರೆ ಅವ್ರ ಹಿಸ್ಟ್ರಿ ನಮಗೇನೂ ಗೊತ್ತಿಲ್ವಾ . ಫಾರ್ಮ್‌ನಲ್ಲಿ ಇಲ್ಲದಿದ್ರೂ ಅವ್ರೆಲ್ಲಾ ಆಡಬೇಕು ಅಂತಿದ್ರು. ದಾಖಲೆ ಬರೆಯೋಕೆ ಅಂತ ಟೀಮ್‌ನಲ್ಲಿದ್ರು... ಅವಾಗ ಎಲ್ಲಾ ಯಂಗ್ ಸ್ಟಾರ್ಸ್‌ಗೆ ಚಾನ್ಸ್ ಕೊಡಬೇಕು ಅಂತ ನೆನಪಿಗೆ ಬಂದಿರಲಿಲ್ವಾ.. ಎಲ್ಲಾ ಎಲ್ಲ ಅಷ್ಟೇ ಮಾಸ್ಟರ್.. ಅವರವರ ಭಾವಕ್ಕೆ ಅವರವರ ತಾಳಕ್ಕೆ.. ಕುಣಿತಾರೆ..
ಬಾಸ್ ನೀ ಏನ್ ಟೆನ್ಷನ್ ಮಾಡ್ಕೊಬೇಡ... ನಿಂಗೆ ನಿನ್ನ ಮೇಲೆ ನಂಬಿಕೆ ಇದೆಯಲ್ವಾ ಅಷ್ಟು ಸಾಕು...ನೀ ಯಾರತ್ರನೂ ಕೇಳ್ಕೊಂಡು ಕ್ರಿಕೆಟ್ ಆಡೋಕೆ ಬಂದಿಲ್ಲ... ಕಷ್ಟಪಟ್ಟೆ...ಇಷ್ಟನೂ ಪಟ್ಟೇ... ದಾಖಲೆ ಮೇಲೆ ದಾಖಲೆ ಬರೆದೆ.. ಪ್ರೀತಿಯಿಂದ ಆಡ್ತಾ ಇದ್ದಿ... ಆದ್ರೆ ಅಭಿಮಾನಿಗಳು ಬೈಯ್ತಾರೆ ಅಂತ ಬೇಜಾರ್ ಮಾಡ್ಕೊಬೇಡ... ಯಾಕಂದ್ರೆ ನಿನ್ನ ಆಟಕ್ಕೆ ಮನಸೋತ ಅಭಿಮಾನಿಗಳು ನಿಂಗೆ ದೇವ್ರು ಅಂತ ಕರೆದ್ರು. ಈಗ ಅವ್ರ ನಿರೀಕ್ಷೆಗೆ ತಕ್ಕ ಆಟ ನಿನ್ನಿಂದ ಬರ್ತಿಲ್ಲ. ಅದಕ್ಕಾಗಿ ಸಿಟ್ಟು ಮಾಡ್ಕೊಂಡ್ರೂ ಅವರಿಗೂ ನಿನ್ ಮೇಲೆ ಪ್ರೀತಿ ಇದೆ ಕಣೋ...
ಸಚಿನ್ ಇವತ್ತು ನೀ ಸೆಂಚೂರಿ ಹೋಡಿತಿ ಅನ್ನೋ ನಂಬಿಕೆ, ನಿರೀಕ್ಷೆ ಇದೆ. ಮಿಸ್ ಮಾಡ್ಕೊಬೇಡ... ನನ್ನಂತೆ ಕೋಟಿ ಕೋಟಿ ಕಂಗಳು ನಿನ್ನ ಮಹಾ ಶತಕಕ್ಕಾಗಿ ಕಾಯ್ತ ಇದ್ದಾರೆ.. ಕ್ರಿಕೆಟ್ ದೇವ್ರ ಮುಕುಟಕ್ಕೆ ಶತಕಗಳ ಶತಕದ ಗರಿ ಸೇರುತ್ತೆ ಅನ್ನೋ ಆಶಾಭಾವನೆಯೊಂದಿಗೆ.... ಇಂತಿ ನಿನ್ನ ಅಭಿಮಾನಿ...
ಸನತ್ ರೈ
Saturday, February 25, 2012
Subscribe to:
Post Comments (Atom)
No comments:
Post a Comment