ಇದು ಕಾಲ್ಪನಿಕ ಸ್ಟೋರಿಯಲ್ಲ.. ಬದಲಾಗಿ ನಮ್ಮ ಕಣ್ಣೆದುರೇ ನಡೆಯುತ್ತಿರುವ ಸತ್ಯ ಸಂಗತಿಗಳು... ಹೌದು, ಇದು ಪಕ್ಕಾ ಅಧಿಕಾರದ ದಾಹ... ಇದಕ್ಕಾಗಿ ಹಾವು-ಮುಂಗೂಸಿನಂತೆ ಕಚ್ಚಾಟ ನಡೆಸುತ್ತಾರೆ. ಅಷ್ಟೇ ಯಾಕೆ ಒಡನಾಡಿಗಳೇ ಶತ್ರುಗಳಾಗಿದ್ದಾರೆ. ಜತೆ ಜತೆಯಾಗಿ, ನಗು ನಗುತ್ತಾ ಸಂಭ್ರಮವನ್ನ ಹಂಚಿಕೊಂಡವರು ಇಂದು ನಾನೊಂದು ತೀರಾ ನೀನೊಂದು ತೀರಾ ಆಗಿಬಿಟ್ಟಿದ್ದಾರೆ.
ಕ್ರಿಕೆಟ್‌ನಲ್ಲೂ ಕಿರಿಕಿರಿ... ರಾಜಕೀಯದಲ್ಲೂ ಪಿರಿಪಿರಿ
ಸಬ್ಜೆಕ್ಟ್ ಒಂದೇ... ಅಖಾಢ ಬೇರೆ ಬೇರೆ
ಅಲ್ಲಿ ಧೋನಿ - ಸೆಹ್ವಾಗ್ ಫೈಟಿಂಗ್
ಇಲ್ಲಿ ಬಿಎಸ್‌ವೈ- ಡಿವಿಎಸ್ ಕೋಲ್ಡ್ ವಾರ್
ಅಧಿಕಾರಕ್ಕಾಗಿ ನಡೆಯುತ್ತಿದೆ ಶೀತಲ ಸಮರ
ಎ ಪವರ್ ಕೀ ಬಾತ್ ಹೈ
ನೋ ಡೌಟ್.. ಇದು ಪವರ್ ಕೀ ಬಾತ್ ಹೇ ... ಹೌದು, ಸೇಮ್ ಟೂ ಸೇಮ್.. ಆದ್ರೆ, ಇಲ್ಲಿ ಸಬ್ಜೆಕ್ಟ್ ಒಂದೇ.. ಅಖಾಢ ಮಾತ್ರ ಬೇರೆ ಬೇರೆ.. ರಾಜ್ಯ ಬಿಜೆಪಿಯಲ್ಲಿ ಮತ್ತು ಟೀಮ್ ಇಂಡಿಯಾದಲ್ಲಿ ನಡೆಯುತ್ತಿರುವುದು ಅಧಿಕಾರದ ಶೀತಲ ಸಮರ.
ಆಸ್ಟ್ರೇಲಿಯಾದಲ್ಲಿ ಧೋನಿ ಮತ್ತು ಸೆಹ್ವಾಗ್ ಫೈಟಿಂಗ್ ಮಾಡುತ್ತಿದ್ರೆ, ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡರ ನಡುವಿನ ಕೋಲ್ಡ್ ವಾರ್ ಈಗ ಹಾಟ್ ಹಾಟ್ ಆಗಿದೆ.
ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ ಹಾಗೇ ಟೀಮ್ ಇಂಡಿಯಾದ ಆಂತರಿಕ ಕಲಹ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ. ಇದ್ರಿಂದ ಕಂಗೆಟ್ಟಿರುವ ಬಿಸಿಸಿಐ ಮತ್ತು ಬಿಜೆಪಿ ಹೈಕಮಾಂಡ್ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.
ಕಚ್ಚಾಡಿದ್ದು ಸಾಕು..... ಆಟ ಆಡಿ...
ಬೀದಿ ಜಗಳ ಮಾಡಬೇಡಿ... ಉತ್ತಮಆಡಳಿತ ನಡೆಸಿ
ಕಚ್ಚಾಡಿದ್ದು ಸಾಕು... ಆಟ ಆಡಿ…. ಅಂತ ಟೀಮ್ ಇಂಡಿಯಾಗೆ ಬಿಸಿಸಿಐ ಕಟ್ಟಾಜ್ಞೆ ಮಾಡಿದ್ರೆ, ಬೀದಿ ಜಗಳ ಮಾಡಬೇಡಿ... ಉತ್ತಮ ಆಡಳಿತ ನಡೆಸಿ ಅಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಜೆಪಿ ಹೈಕಮಾಂಡ್ ಆದೇಶ ಮಾಡಿದೆ. ಆದ್ರೆ ಬಿಸಿಸಿಐನ ಮಾತಿಗೆ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕ ಕಿಮ್ಮತ್ತಿನ ಬೆಲೆಯನ್ನೂ ನೀಡಲಿಲ್ಲ. ಹಾಗೇ ಬಿಜೆಪಿ ಹೈಕಮಾಂಡ್ ಆದೇಶಕ್ಕೆ ಯಡಿಯೂರಪ್ಪನವರು ಮುನಿಸಿಕೊಂಡ್ರೆ, ಸದಾನಂದ ಗೌಡರ ಮುಖದಲ್ಲಿರುವ ನಗು ಮಾಯವಾಗಿದೆ.
ಶುಕ್ರವಾರ ಮುಹೂರ್ತ ಫಿಕ್ಸ್...
ಈ ನಡುವೆ, ಟೀಮ್ ಇಂಡಿಯಾ ಕಿರಿಕಿರಿ ಮತ್ತು ರಾಜಕೀಯ ಪಿರಿಪಿರಿಗೆ ಇತಿಶ್ರೀ ಹಾಡಲು ಶುಕ್ರವಾರವೇ ಮುಹೂರ್ತ ಫಿಕ್ಸ್ ಆಗಿತ್ತು. ಅದ್ರಲ್ಲೂ ಬಿಸಿಸಿಐ ದಣಿಗಳು ಟೀಮ್ ಇಂಡಿಯಾದ ಹಿರಿಯ ಆಟಗಾರರ ಜತೆ ಮಾತುಕತೆ ನಡೆಸಿದ್ರು. ಅಲ್ಲದೆ, ಶುಕ್ರವಾರ ಧೋನಿ ಮತ್ತು ಸೆಹ್ವಾಗ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದ್ರೆ ಸೆಹ್ವಾಗ್ ಮತ್ತು ಧೋನಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ತಂಡದ ಮ್ಯಾನೇಜರ್ ಮೀಡಿಯೇಟರ್ ಆಗಿ ಕಾಣಿಸಿಕೊಂಡ್ರು.
ತಂಡದಲ್ಲಿ ಒಡಕಿಲ್ಲ.. ಭಿನ್ನಾಭಿಪ್ರಾಯವಿದೆ
ಟೀಮ್ ಇಂಡಿಯಾದಲ್ಲಿ ಒಡಕಿಲ್ಲ.. ಆದ್ರೆ ಧೋನಿ ಮತ್ತು ಸೆಹ್ವಾಗ್ ನಡುವೆ ಭಿನ್ನಾಭಿಪ್ರಾಯವಿದೆ. ಇದು ಸದ್ಯದಲ್ಲೇ ಬಗೆಹರಿಯಲಿದೆ. ತಂಡ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಅಂತ ಟೀಮ್ ಇಂಡಿಯಾದ ಟೀಮ್ ಮ್ಯಾನೇಜರ್ ಹಾರಿಕೆಯ ಉತ್ತರ ನೀಡಿ ವಿವಾದದಿಂದ ಜಾರಿಕೊಂಡ್ರು.
ಅಡ್ಡಗೋಡೆಯ ಮೇಲೆ ದೀಪ
ಇನ್ನು, ರಾಜಕೀಯ ಪಿರಿಪಿರಿಯನ್ನ ಬಗೆ ಹರಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮೆಂದ್ರ ಪ್ರಧಾನ್ ರಾಜ್ಯ ಬಿಜೆಪಿ ಶಾಸಕರ ಜತೆ ಚರ್ಚೆ ನಡೆಸಿದ್ರು. ಆದ್ರೆ ಪ್ರಯೋಜನವೇನೂ ಆಗಿಲ್ಲ. ಬಿಜೆಪಿ ವರಿಷ್ಠರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ರು. ಇದ್ರಿಂದ ಸಮಸ್ಯೆ ಈಗ ಮತ್ತಷ್ಟು ಉಲ್ಬಣಿಸಿದೆ.
ಒಗ್ಗಟ್ಟಿನ ಬಲ ಪ್ರದರ್ಶನ
ಅಷ್ಟೇ ಅಲ್ಲ, ಈ ಹಿಂದಿನ ರಾಜಕೀಯ ನಿದರ್ಶನಗಳು ಸಹ ಧೋನಿ ನಾಯಕತ್ವದ ಟೀಮ್ ಇಂಡಿಯಾಗೆ ಹೋಲುತ್ತವೆ. 2009ರಲ್ಲೂ ಧೋನಿ ನಾಯಕತ್ವದ ಮೇಲೆ ವೀರೇಂದ್ರ ಸೆಹ್ವಾಗ್ ಅಪಸ್ವರ ಎತ್ತಿದ್ರು. ಆಗ ನಾವೆಲ್ಲರೂ ಒಂದೇ.. ಏನೇ ಆದ್ರೂ ಒಗ್ಗಟ್ಟಿನಿಂದ ಇದ್ದೇವೆ ಅಂತ ಸುದ್ದಿಗೋಷ್ಠಿಯಲ್ಲಿ ಧೋನಿ ಆಟಗಾರರನ್ನ ಪರೇಡು ನಡೆಸಿದ್ರು.
ಹಾಗೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರ ಜತೆ ಸಾಕಷ್ಟು ಬಾರಿ ಹೈಕಮಾಂಡ್ ಮತ್ತು ಮಾಧ್ಯಮದ ಎದುರು ಶಕ್ತಿ ಪ್ರದರ್ಶಿಸಿದ್ರು. ಆದ್ರೆ, ಬಿಎಸ್‌ವೈ ಮತ್ತು ಡಿವಿಎಸ್ ನಡುವೆ ಇದ್ದಂತಹ ಆತ್ಮೀಯತೆ ಧೋನಿ ಮತ್ತು ಸೆಹ್ವಾಗ್ ನಡುವೆ ಇರಲಿಲ್ಲ. ಆದ್ರೂ ಮೈದಾನದಲ್ಲಿ ಮಾತ್ರ ಇದನ್ನೆಲ್ಲಾ ತೋರಿಸುತ್ತಿರಲಿಲ್ಲ.
ನಾನೊಂದು ತೀರಾ... ನೀನೊಂದು ತೀರಾ...
ಆದ್ರೆ ಸಮಯ ಹೇಗೆ ಬದಲಾಗುತ್ತೆ ನೋಡಿ... ಹಮ್ ಸಾಥ್ ಸಾಥ್ ಹೇ ಅಂತಿದ್ದ ಬಿಎಸ್‌ವೈ ಮತ್ತು ಡಿವಿಎಸ್ ಈಗ ಒಬ್ಬರ ಮುಖ ಒಬ್ರು ನೋಡ್ತಾ ಇಲ್ಲ. ಹಾಗೇ ಮೈದಾನದಲ್ಲಿ ಜತೆಯಾಗಿ ಹೋರಾಡುತ್ತಿದ್ದ ಸೆಹ್ವಾಗ್ ಮತ್ತು ಧೋನಿ ನಾನೊಂದು ತೀರಾ ನೀನೊಂದು ತೀರಾ ಆಗಿಬಿಟ್ಟಿದ್ದಾರೆ.
ಒಟ್ಟಿನಲ್ಲಿ ಇದು ಮನೆಯೊಂದು ಮೂರು ಬಾಗಿಲು ಎಂಬ ಕಥೆಯಂತಾಗಿದೆ. ಎಷ್ಟೇ ಸಮಾಧಾನಪಡಿಸಿದ್ರೂ ಒಡೆದ ಕನ್ನಡಿಯನ್ನ ಮತ್ತೆ ಜೋಡಿಸಿದ ಹಾಗಾಗುತ್ತೆ. ಒಂದು ಸಣ್ಣ ಮಾತಿನ ಇರಿತದಿಂದ ಒಗ್ಗಟ್ಟೇ ಕಾಣದಂತಾಗಿದೆ. ಅಧಿಕಾರ ಹೆಂಗೆಲ್ಲಾ ಆಟ ಆಡಿಸುತ್ತೆ ಅಲ್ವಾ...
ಸನತ್ ರೈ
Friday, February 24, 2012
Subscribe to:
Post Comments (Atom)
No comments:
Post a Comment